ಬ್ರೇಕಿಂಗ್ ನ್ಯೂಸ್
28-07-25 09:40 pm Mangalore Correspondent ಕರಾವಳಿ
ಮಂಗಳೂರು, ಜುಲೈ 28 : ಇದು ಅಂತಿಂಥ ಸಾಧನೆಯಲ್ಲ, ಸುದೀರ್ಘ 170 ಗಂಟೆಗಳ ಪರ್ಯಂತ ನೃತ್ಯ. ವಿಶ್ವಕ್ಕೆ ಅತ್ಯುನ್ನತ ಭಾರತೀಯ ಸಂಸ್ಕೃತಿಯನ್ನು ಸಾರುವ ಭರತನಾಟ್ಯ ಶೈಲಿಯ ನೃತ್ಯವನ್ನು ಏಳು ದಿನಗಳಲ್ಲಿ 10,200 ನಿಮಿಷಗಳ ಉದ್ದಕ್ಕೂ ಪ್ರದರ್ಶಿಸಿ ತನ್ನ ಹೆಸರನ್ನು ವಿಶ್ವದಾಖಲೆಗೆ ಸೇರಿಸಿದ ಅಪ್ರತಿಮ ಸಾಧನೆ. ರೆಮೋನಾ ಎವೆಟ್ಟೆ ಪಿರೇರಾ ಎಂಬ 20ರ ಹರೆಯದ ಹುಡುಗಿಯ ಈ ಸಾಧನೆ ಮಂಗಳೂರಿನ ಪ್ರತಿಷ್ಠಿತ ಅಲೋಶಿಯಸ್ ಕಾಲೇಜು (ಡೀಮ್ಡ್ ಯುನಿವರ್ಸಿಟಿ) ಹೆಸರನ್ನು ವಿಶ್ವ ದಾಖಲೆಗೆ ಸೇರಿಸಿದೆ.
ಅಲೋಶಿಯಸ್ ಕಾಲೇಜಿನಲ್ಲಿ ಜುಲೈ 21ರಿಂದ 28ರ ಸೋಮವಾರ ಮಧ್ಯಾಹ್ನ 12 ಗಂಟೆ ವರೆಗೆ ನಡೆದ ಮ್ಯಾರಥಾನ್ ಇಂಡಿಯನ್ ಕ್ಲಾಸಿಕಲ್ ಡ್ಯಾನ್ಸ್ ಸದ್ಯಕ್ಕೆ ಅಮೆರಿಕದ ಕಂಪನಿ ನಿರ್ವಹಿಸುವ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ ಪಟ್ಟಿಗೆ ಸೇರಿದೆ. ಗಿನ್ನೆಸ್ ವಿಶ್ವದಾಖಲೆಯೂ ಆಗಲಿದ್ದು, ಸದ್ಯಕ್ಕೆ ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ತಂಡದವರು ಸರ್ಟಿಫಿಕೇಟ್ ನೀಡಿದ್ದಾರೆ. ಗಿನ್ನೆಸ್ ಕಂಪನಿಯವರು ನೃತ್ಯ ಪ್ರದರ್ಶನದ ಬಗ್ಗೆ ಪರಿಶೀಲನೆ ನಡೆಸಿ, ಕೆಲವೇ ದಿನಗಳಲ್ಲಿ ಘೋಷಣೆ ಮಾಡಲಿದ್ದಾರೆ.



ಮಂಗಳೂರಿನ ಫಳ್ನೀರಿನ ನಿವಾಸಿ ಗ್ಲಾಡಿಸ್ ಪಿರೇರಾ ಅವರ ಪುತ್ರಿ ರೆಮೋನಾ ತನ್ನ ಮೂರು ವರ್ಷ ಪ್ರಾಯದಲ್ಲೇ ಭರತನಾಟ್ಯ ಕಲಿಯತೊಡಗಿದ್ದು, ದೇಶದ ಹಲವು ಕಡೆಗಳಲ್ಲಿ ನೃತ್ಯ ಪ್ರದರ್ಶನ ನೀಡಿದ್ದಾರೆ. 2019ರಲ್ಲಿ ಭರತನಾಟ್ಯ ರಂಗಪ್ರವೇಶ ಮಾಡಿದ್ದು, ಅಲೋಶಿಯಸ್ ಕಾಲೇಜಿನಲ್ಲಿ ಸದ್ಯ ತೃತೀಯ ಬಿಎ ವಿದ್ಯಾರ್ಥಿನಿ ಓದುತ್ತಿದ್ದಾಳೆ. ಈಕೆಯ ಸಾಧನೆ ಮಾಡುವ ಉತ್ಸಾಹಕ್ಕೆ ಬೆಂಬಲವಾಗಿ ನಿಂತಿದ್ದು ತಾಯಿ ಗ್ಲಾಡಿಸ್ ಪಿರೇರಾ, ಭರತನಾಟ್ಯ ಗುರು ಶ್ರೀದೇವಿ ಮುರಲೀಧರ್ ಹಾಗೂ ಅಲೋಶಿಯಸ್ ಕಾಲೇಜಿನ ಆಡಳಿತ. ನಿರಂತರ ನೃತ್ಯ ಮಾಡುವುದು ಸಾಧಾರಣ ವ್ಯಕ್ತಿಗಳಿಗೆ ಸಾಧ್ಯವಿಲ್ಲ. ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು ಬೆನ್ನೆಲುಬಾಗಿ ನಿಂತು ವಿಶ್ವ ದಾಖಲೆ ಮಾಡಲು ನೀಡಿದ ಪ್ರೋತ್ಸಾಹವೇ ಸಾಧನೆಗೆ ಹಾದಿಯಾಗಿದೆ.





ನೃತ್ಯದ ನಡುವೆ ಪ್ರತಿ ಮೂರು ಗಂಟೆಗೊಮ್ಮೆ ಕೇವಲ 15 ನಿಮಿಷ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ರೆಮೋನಾ, ಆಮೂಲಕ 24 ಗಂಟೆಯಲ್ಲಿ ಉಳಿಯುತ್ತಿದ್ದ ಎರಡು ಗಂಟೆ ಅವಧಿಯನ್ನು ರಾತ್ರಿ ವೇಳೆ ನಿದ್ದೆಗೆ ವ್ಯಯಿಸುತ್ತಿದ್ದರು. ಉಳಿದಂತೆ, ಪೂರ್ತಿ 170 ಗಂಟೆಗಳ ಉದ್ದಕ್ಕೂ ನಿರಂತರ ನಾಟ್ಯ ಪ್ರದರ್ಶನ. ಕುಳಿತುಕೊಂಡ ಭಂಗಿ, ಕೈಕಾಲುಗಳನ್ನು ವಿವಿಧ ಭಂಗಿಗಳಿಗೆ ಹೊರಳಿಸುತ್ತಾ ಸರಳವಾಗಿ ನಾಟ್ಯವನ್ನು ಮಾಡುತ್ತ ಗಂಟೆಗಳನ್ನು ಕಳೆದಿದ್ದು ವಿಶೇಷ. ಕೆಲವೊಮ್ಮೆ ಕೈಕಾಲು ನೋಯುವಾಗ ಅಳು ಬರುತ್ತಿದ್ದರೂ, ಅದನ್ನು ತೋರಗೊಡದೆ ಸಾಧನೆಯತ್ತ ಗಮನ ನೆಟ್ಟು ಪ್ರದರ್ಶನ ತೋರಿದ್ದಾಳೆ. ದಣಿವಿನಿಂದ ಕಂಗಾಲು ಆದ ಸಂದರ್ಭದಲ್ಲಿ ಎದುರಲ್ಲಿದ್ದ ಸಹಪಾಠಿ ವಿದ್ಯಾರ್ಥಿಗಳು, ನೃತ್ಯಾಸಕ್ತರು ಚಪ್ಪಾಳೆ ತಟ್ಟುತ್ತ, ರೇಮೋ, ರೇಮೋ ಎನ್ನುತ್ತ ರಾತ್ರಿ ಹಗಲೆನ್ನದೆ ಪ್ರೋತ್ಸಾಹ ನೀಡುತ್ತಿದ್ದರು.



ಸಾಮಾನ್ಯವಾಗಿ ಭರತನಾಟ್ಯದಂತಹ ಅಪ್ಪಟ ದೇಸೀ ಕಲೆಯನ್ನು ಕ್ರಿಶ್ಚಿಯನ್ನರು ಕಲಿಯೋದು, ಪ್ರದರ್ಶನ ಮಾಡೋದು ಕಡಿಮೆ. ಆದರೆ ಮಂಗಳೂರಿನ ಈ ಹುಡುಗಿ ಅತೀವ ಕಾಳಜಿ ಇಟ್ಟುಕೊಂಡು ಹಿಂದು ದೇವರ ಸ್ತುತಿಗಳಿಗೆ ಹೆಜ್ಜೆ ಹಾಕಿದ್ದಾರೆ. ಓಂ ನಮಃ ಶಿವಾಯ, ಶಂಭೋ ಶಿವಶಂಕರ ಪಾಹಿಮಾಮ್ ಎನ್ನುತ್ತ ಶುರುವಾಗುವ ಶಿವತಾಂಡವ ಹಾಡಿಗೆ ಅಮೋಘ ಪ್ರದರ್ಶನ ನೀಡಿದ್ದಾರೆ. ಸೋಮವಾರ ಮಧ್ಯಾಹ್ನ ನಡೆದ ಸಮಾರೋಪ ಕಾರ್ಯಕ್ರಮದಲ್ಲಿಯೂ ಇದೇ ಹಾಡನ್ನು ಅದ್ಭುತವಾಗಿ ಪ್ರದರ್ಶಿಸಿ ಸೇರಿದವರ ಮನಸೂರೆಗೊಂಡಿದ್ದಾರೆ. ಜೊತೆಗೆ, ವಂದೇ ಮಾತರಂ ಹಾಡಿಗೂ ಅಷ್ಟೇ ಸುಂದರವಾಗಿ ಹೆಜ್ಜೆ ಹಾಕಿದ್ದಾರೆ.
ದೈವೀ ಶಕ್ತಿಯಿಂದಲೇ ಸಾಧನೆ
ಗೋಲ್ಡನ್ ಬುಕ್ ಆಫ್ ರೆಕಾರ್ಡ್ಸ್ ಪರವಾಗಿ ಬಂದಿದ್ದ ಅಧಿಕಾರಿ ಡಾ.ಮನೀಶ್ ಸಮಾರೋಪದಲ್ಲಿ ಮಾತನಾಡುತ್ತ, ಭರತನಾಟ್ಯ ಅಪ್ಪಟ ಶಾಸ್ತ್ರೀಯ ಕಲೆಯಾಗಿದ್ದು, ಅಷ್ಟೇ ಕಷ್ಟದ ನೃತ್ಯವೂ ಹೌದು. ರೆಮೋನಾ ಮಾತ್ರ ಈ ಪ್ರಕಾರವನ್ನು ಸರಾಗವಾಗಿ ಮಾಡಿದ್ದಾರೆ. ಇದು ಕೇವಲ ಇಚ್ಛಾಶಕ್ತಿಯಿಂದ ಮಾತ್ರ ಸಾಧ್ಯವಿಲ್ಲ. ದೈವೀ ಶಕ್ತಿಯಿಂದಲೇ ಈ ಸಾಧನೆ ಸಾಧ್ಯವಾಗಿದೆ. ನಾವೆಲ್ಲ ಅಸಾಧ್ಯ ಎಂದುಕೊಂಡಿದ್ದನ್ನು ಸಾಧಿಸಿ ತೋರಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಅಲೋಶಿಯಸ್ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಫಾ. ಪ್ರವೀಣ್ ಮಾರ್ಟಿಸ್ ಮಾತನಾಡಿ, ದಾಖಲೆ ಸೇರುವುದಕ್ಕೆ ಐದು ದಿನಗಳ ನೃತ್ಯ ಸಾಕಾಗಿತ್ತು. ಆದರೆ ರೆಮೋನಾ 170 ಗಂಟೆಗಳ ಸಾಧನೆ ಮಾಡಬೇಕೆಂದು ಏಳು ದಿನಗಳ ನೃತ್ಯಕ್ಕೆ ಇಚ್ಛೆ ತೋರಿದ್ದಳು. ಇಷ್ಟೊಂದು ಶಕ್ತಿ ಈಕೆಗೆಲ್ಲಿಂದ ಬಂತು ಅನ್ನೋದು ತಿಳಿಯುತ್ತಿಲ್ಲ. ದೇವರ ಶಕ್ತಿಯೇ ಈಕೆಯಲ್ಲಿ ಸಾಧನೆ ಮಾಡಿಸಿದೆ. ರೆಮೋನಾ ನಮ್ಮ ಅಲೋಶಿಯಸ್ ಸಂಸ್ಥೆಯ ಹೆಮ್ಮೆ. ಮಂಗಳೂರಿನ ಜನತೆಗೆ, ಇಡೀ ಭಾರತೀಯರಿಗೆ ಹೆಮ್ಮೆ ತಂದಿದ್ದಾಳೆ. ಆಕೆಯೀಗ ಗೋಲ್ಡನ್ ಹುಡುಗಿ ಎಂದು ಹೇಳಿದರು. ಈ ವೇಳೆ ಉಪಸ್ಥಿತರಿದ್ದ ಎಂಎಲ್ಸಿ ಐವಾನ್ ಡಿಸೋಜ, ಇದು ಕೇವಲ ಪ್ರದರ್ಶನ ಅಲ್ಲ. ನಿರಂತರ ತಪಸ್ಸಿನಿಂದ ಈ ಸಾಧನೆ ಸಾಧ್ಯವಾಗಿದೆ. ಈ ದಾಖಲೆಯನ್ನು ಈಕೆಯೇ ಮುರಿಯಬೇಕೇ ಹೊರತು ಬೇರೆಯವರಿಂದ ಸಾಧ್ಯವಿಲ್ಲ. ನಾವೆಲ್ಲ ಆಕೆಯ ಜೊತೆಗಿದ್ದೇವೆ ಎಂದರು. ರೆಕ್ಟರ್ ಮೆಲ್ವಿನ್ ಡಿಕುನ್ನಾ, ರೆಮೋನಾ ತಾಯಿ ಗ್ಲಾಡಿಸ್ ಪಿರೇರಾ, ನೃತ್ಯ ಗುರು ಶ್ರೀದೇವಿ ಮುರಲೀಧರ್ ಇದ್ದರು.
127 ಗಂಟೆ ದಾಖಲೆ ಮುರಿದ ರೆಮೋನಾ
ಈ ಹಿಂದೆ 2023ರಲ್ಲಿ ಮಹಾರಾಷ್ಟ್ರದ ಲಾತೂರಿನ ದಯಾನಂದ್ ಕಾಲೇಜಿನಲ್ಲಿ ಸೃಷ್ಟಿ ಸುಧೀರ್ ಜಗತಾಪ್ ಎನ್ನುವ 16 ವರ್ಷದ ಹುಡುಗಿ 127 ಗಂಟೆಗಳ ಕಾಲ ನೃತ್ಯ ಪ್ರದರ್ಶನ ಮಾಡಿದ್ದು ಗಿನ್ನೆಸ್ ವಿಶ್ವ ದಾಖಲೆಯಾಗಿತ್ತು. 2023ರ ಮೇ 23ರಿಂದ ಜೂನ್ 3ರ ವರೆಗೆ ಕಥಕ್ ಶೈಲಿಯಲ್ಲಿ ನೃತ್ಯ ಸಾಧನೆ ಮಾಡಿದ್ದರು. ಈಗ ಮಂಗಳೂರಿನ ರೆಮೋನಾ 170 ಗಂಟೆಗಳ ನೃತ್ಯದ ಮೂಲಕ ಸಾಧಾರಣ ಮಂದಿ ಮುರಿಯದ ಇತಿಹಾಸ ಸೃಷ್ಟಿಸಿದ್ದಾರೆ.
In a feat that transcends the ordinary, 20-year-old Remona Evette Pereira from Mangaluru has etched her name in history by performing Bharatanatyam continuously for a staggering 170 hours – a marathon dance session that lasted seven days and totaled 10,200 minutes. Her record-breaking achievement has secured a place in the Golden Book of World Records, and is also under review by the Guinness World Records team for official recognition.
03-11-25 05:17 pm
Bangalore Correspondent
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 05:20 pm
Mangalore Correspondent
ಸಸಿಹಿತ್ಲು ಬೀಚ್ ನಲ್ಲಿ ನೀರಾಟಕ್ಕಿಳಿದು ಬೆಂಗಳೂರಿನ...
03-11-25 12:37 pm
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm