No Evidence, Dharmasthala Burial, SIT: ಹೆಣ ಹೂತ ಜಾಗದಲ್ಲಿ ಸಮಾಧಿ ಅಗೆತ ; ಒಂದು ಕೇಸಿನಲ್ಲಿ ಎಂಟಡಿ ಅಗೆದರೂ ಸಿಗದ ಸಾಕ್ಷ್ಯ, ಕಾರ್ಮಿಕರನ್ನು ಬಿಟ್ಟು ಹಿಟಾಚಿ ತರಿಸಿ ಅಗೆಸಿದ ಅಧಿಕಾರಿಗಳು, ಪೊಲೀಸ್ ಶ್ವಾನವನ್ನೂ ತರಿಸಿಕೊಂಡ ಎಸ್ಐಟಿ 

29-07-25 09:56 pm       Mangalore Correspondent   ಕರಾವಳಿ

ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ಪೊಲೀಸರು ಸಮಾಧಿ ಅಗೆತ ಆರಂಭಿಸಿದ್ದಾರೆ. ಜುಲೈ 29ರ ಮೊದಲ ದಿನ ಧರ್ಮಸ್ಥಳ ಸ್ನಾನಘಟ್ಟ ಬಳಿಯಿಂದ ನೂರು ಮೀಟರ್ ದೂರದಲ್ಲಿ ನದಿಯ ಬಳಿಯಲ್ಲೇ ಅಗೆತ ಮಾಡಲಾಗಿದ್ದು, ಎಂಟು ಅಡಿ ಆಳಕ್ಕೆ ಕೊರೆದರೂ ಯಾವುದೇ ಅವಶೇಷ ಪತ್ತೆಯಾಗಿಲ್ಲ.

ಬೆಳ್ತಂಗಡಿ, ಜುಲೈ 29 : ಭಾರೀ ಕುತೂಹಲ ಕೆರಳಿಸಿರುವ ಧರ್ಮಸ್ಥಳದಲ್ಲಿ ಹೆಣ ಹೂತ ಪ್ರಕರಣ ಸಂಬಂಧಿಸಿ ಎಸ್ಐಟಿ ಪೊಲೀಸರು ಸಮಾಧಿ ಅಗೆತ ಆರಂಭಿಸಿದ್ದಾರೆ. ಜುಲೈ 29ರ ಮೊದಲ ದಿನ ಧರ್ಮಸ್ಥಳ ಸ್ನಾನಘಟ್ಟ ಬಳಿಯಿಂದ ನೂರು ಮೀಟರ್ ದೂರದಲ್ಲಿ ನದಿಯ ಬಳಿಯಲ್ಲೇ ಅಗೆತ ಮಾಡಲಾಗಿದ್ದು, ಎಂಟು ಅಡಿ ಆಳಕ್ಕೆ ಕೊರೆದರೂ ಯಾವುದೇ ಅವಶೇಷ ಪತ್ತೆಯಾಗಿಲ್ಲ.

ನದಿಯಿಂದ ಹತ್ತು ಅಡಿ ಅಂತರದಲ್ಲಿ ದೂರುದಾರ ವ್ಯಕ್ತಿಯ ಸೂಚನೆಯಂತೆ ಗುರುತು ಹಾಕಲಾಗಿತ್ತು. ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ 12 ಮಂದಿಯಿದ್ದ ಕಾರ್ಮಿಕರು ಸ್ಥಳದಲ್ಲಿ ಅಗೆಯಲು ಪ್ರಾರಂಭಿಸಿದ್ದರು. ದೂರುದಾರ ವ್ಯಕ್ತಿ ಎರಡೂವರೆಯಿಂದ ಮೂರು ಅಡಿ ಆಳದಲ್ಲಿ ಶವ ಹೂತಿದ್ದೆ ಎಂದು ಹೇಳಿದ್ದರಿಂದ ಅದೇ ಪ್ರಕಾರದಲ್ಲಿ ಅಗೆಯಲಾಗಿತ್ತು. ಆದರೆ ಶವದ ಕುರಿತು ಯಾವುದೇ ಕುರುಹು ಸ್ಥಳದಲ್ಲಿ ಲಭ್ಯವಾಗಿಲ್ಲ.

ಆನಂತರ, ಘಟನೆಯಾಗಿ 20 ವರ್ಷ ಕಳೆದಿರುವುದರಿಂದ ಮಣ್ಣು ಬಿದ್ದಿರುವ ಸಾಧ್ಯತೆಯಿದೆ ಎಂಬ ಶಂಕೆಯಿಂದ ಹಿಟಾಚಿ ತರಿಸಿ ಅಗೆಯಲು ಆರಂಭಿಸಲಾಗಿತ್ತು. ಮಧ್ಯಾಹ್ನ ನಂತರ ಹಿಟಾಚಿಯಲ್ಲಿ 15 ಅಡಿ ಉದ್ದಕ್ಕೆ ಮತ್ತು 10 ಅಡಿ ಅಗಲಕ್ಕೆ ಅಗೆಯಲಾಗಿದೆ. ಎಂಟು ಅಡಿ ಆಳಕ್ಕೆ ಕೊರೆದರೂ ಯಾವುದೇ ಸಾಕ್ಷ್ಯ ಲಭಿಸಿಲ್ಲ. ಗುರುತು ಹಾಕಿದ ಜಾಗ ಬದಲಾಗಿದೆಯೋ ಎನ್ನುವ ಶಂಕೆ ಮೂಡಿತ್ತಾದರೂ, ದೂರುದಾರ ಹೇಳಿದ ರೀತಿಯಲ್ಲೇ ಪೊಲೀಸರು ಅನುಸರಿಸಿದ್ದರು. ಸಂಜೆಯ ವೇಳೆಗೆ ಪೊಲೀಸ್ ಶ್ವಾನವನ್ನೂ ಸ್ಥಳಕ್ಕೆ ಕರೆಸಲಾಗಿದ್ದು, ತನಿಖೆಗೆ ಬಳಸಿಕೊಳ್ಳಲಾಗಿದೆ.

ಗುರುತು ಹಾಕಿದ ಪಾಯಿಂಟ್ ನಂಬರ್ ಒಂದರಲ್ಲಿ ಬಹುತೇಕ ಅಗೆತ ಪೂರ್ತಿಗೊಳಿಸಲಾಗಿದ್ದು ಎರಡನೇ ದಿನ ಜುಲೈ 30ರಂದು 2 ಮತ್ತು 3ರ ಸಮಾಧಿಯನ್ನು ಅಗೆಯುವ ಸಾಧ್ಯತೆಯಿದೆ. ಸ್ಥಳಕ್ಕೆ ಎಸ್ಐಟಿ ತಂಡದ ಡಿಐಜಿ ಅನುಚೇತ್ ಕೂಡ ಆಗಮಿಸಿದ್ದು, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಒಟ್ಟು ಕಾರ್ಯಾಚರಣೆಗೆ ಎಸ್ಐಟಿ ತಂಡದ ಎಸ್ಪಿ ಜಿತೇಂದ್ರ ದಯಾಮ ನೇತೃತ್ವ ನೀಡಿದ್ದಾರೆ. ಅವರೇ ತನಿಖಾಧಿಕಾರಿಯಾಗಿದ್ದು, ದಯಾಮ ಸೂಚನೆಯಂತೆ ಇತರ ಪೊಲೀಸರು ನಡೆದುಕೊಳ್ಳುತ್ತಿದ್ದರು. ಪುತ್ತೂರು ವಿಭಾಗಾಧಿಕಾರಿ ಸ್ಟೆಲ್ಲಾ ಮೇರಿಸ್ ಮತ್ತು ಬೆಳ್ತಂಗಡಿ ತಹಸೀಲ್ದಾರ್ ಪೃಥ್ವಿ ಸಾನಿಕಂ ಸ್ಥಳದಲ್ಲಿ ಹಾಜರಿದ್ದರು. ದೂರುದಾರ ವ್ಯಕ್ತಿ ಸ್ನಾನಘಟ್ಟ ಬಳಿಯ ನೇತ್ರಾವತಿ ತಡದಲ್ಲಿರುವ ಕಾಡಿನಲ್ಲಿ 13 ಕಡೆ ಶವ ಹೂತಿದ್ದಾಗಿ ಗುರುತು ಹಾಕಿದ್ದಾನೆ. ಇದರಂತೆ, ಈ ಜಾಗವನ್ನು ಪೊಲೀಸ್ ಭದ್ರತೆಯಲ್ಲಿ ಇರಿಸಲಾಗಿದ್ದು ಒಂದೊಂದನ್ನೇ ಅಗೆದು ಸಾಕ್ಷ್ಯ ಪತ್ತೆಗೆ ಮುಂದಾಗಿದ್ದಾರೆ.

The Special Investigation Team (SIT) has intensified its probe into the alleged human burial case near Dharmasthala, which has stirred widespread curiosity and speculation. On July 29, SIT officials began digging operations near the Netravathi bathing ghat, focusing on a site around 100 meters from the riverbank, based on information provided by the complainant.