Forensic Expert Dr Mahabala Shetty, Dharmasthala case: ಧರ್ಮಸ್ಥಳ ಸ್ನಾನಘಟ್ಟ ಬಳಿ 20ಕ್ಕೂ ಹೆಚ್ಚು ಕೊಳೆತ ಶವಗಳನ್ನು ಪೋಸ್ಟ್ ಮಾರ್ಟಂ ಮಾಡಿದ್ದೆ, ಅವನ್ನು ಅಲ್ಲಿಯೇ ಹೂಳಲಾಗಿತ್ತು ; ಪ್ರಕರಣಕ್ಕೆ ಸ್ಫೋಟಕ ತಿರುವು ಕೊಟ್ಟ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ

01-08-25 10:02 pm       Mangalore Correspondent   ಕರಾವಳಿ

ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟದ ಬಳಿ ಹೆಣಗಳನ್ನು ಹೂತಿದ್ದೇನೆ ಎಂಬ ವಿಚಾರದ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆಗೆ ಇಳಿದಿರುವಾಗಲೇ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ ಸ್ಫೋಟಕ ವಿಚಾರ ಬಾಯಿಬಿಟ್ಟಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಬಳಿ 20ಕ್ಕೂ ಹೆಚ್ಚು ಅನಾಥ ಶವಗಳನ್ನು ಅಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿ ಹೂತು ಹಾಕಿದ್ದೇವೆ ಎಂದು ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮಂಗಳೂರು, ಆ.1 : ಧರ್ಮಸ್ಥಳ ಬಳಿಯ ನೇತ್ರಾವತಿ ಸ್ನಾನಘಟ್ಟದ ಬಳಿ ಹೆಣಗಳನ್ನು ಹೂತಿದ್ದೇನೆ ಎಂಬ ವಿಚಾರದ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆಗೆ ಇಳಿದಿರುವಾಗಲೇ ಫಾರೆನ್ಸಿಕ್ ತಜ್ಞ ಡಾ.ಮಹಾಬಲ ಶೆಟ್ಟಿ ಸ್ಫೋಟಕ ವಿಚಾರ ಬಾಯಿಬಿಟ್ಟಿದ್ದಾರೆ. ನೇತ್ರಾವತಿ ಸ್ನಾನಘಟ್ಟದ ಬಳಿ 20ಕ್ಕೂ ಹೆಚ್ಚು ಅನಾಥ ಶವಗಳನ್ನು ಅಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿ ಹೂತು ಹಾಕಿದ್ದೇವೆ ಎಂದು ಸುದ್ದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಸ್ನಾನಘಟ್ಟದ ಬಳಿಯೇ ಪೊಲೀಸರು ಸಮಾಧಿ ಅಗೆತದಲ್ಲಿ ತೊಡಗಿರುವಾಗಲೇ ಡಾ.ಮಹಾಬಲ ಶೆಟ್ಟಿ ಈ ಮಾತುಗಳನ್ನು ಹೇಳಿದ್ದು, ಅಲ್ಲಿ ಹಲವಾರು ಅನಾಥ ಶವಗಳನ್ನು ಹೂಳಲಾಗಿದೆ. ನೇತ್ರಾವತಿ ಪಕ್ಕದ ಕಾಡುಗಳಲ್ಲಿ ಆತ್ಮಹತ್ಯೆ ಮಾಡಿಕೊಂಡವರು, ಅನಾಥ ಶವಗಳಾಗಿ 10-12 ದಿನಗಳ ಬಳಿಕ ಸಿಕ್ಕವುಗಳನ್ನು ಬೇರೆಡೆ ಒಯ್ಯುವುದಕ್ಕೆ ಸಾಧ್ಯವಾಗದೆ ಪೊಲೀಸರಿಗೆ ವಿಷಯ ತಿಳಿಸಿ ಅಲ್ಲಿಯೇ ಪೋಸ್ಟ್ ಮಾರ್ಟಂ ಮಾಡಿ ಹೂಳಲಾಗಿತ್ತು. ಈಗ ಅಗೆಯುತ್ತಿರುವ ಜಾಗದ ಬಳಿಯೇ ಸುತ್ತಮುತ್ತ ಹೂಳಲಾಗಿತ್ತು. ಹಂದಿ, ಹದ್ದುಗಳು ಇನ್ನಿತರ ಪ್ರಾಣಿಗಳು ತಿಂದು ಹಾಕಿದ್ದ ಶವಗಳೂ ಇದ್ದವು. ಅವನ್ನು ಬೇರೆಡೆಗೆ ಒಯ್ಯುವುದಕ್ಕಾಗದೇ ಅಲ್ಲಿಯೇ ಹೂತಿದ್ದೆವು ಎಂದು ಹೇಳಿದ್ದಾರೆ.

ಕೊಳೆತು ಹೋಗಿರುವ ಅನಾಥ ಶವಗಳು ಬಹಳಷ್ಟು ಸಿಕ್ಕಿದ್ದವು ಎಂದು ಹೇಳಿರುವ ಮಹಾಬಲ ಶೆಟ್ಟಿ, ಸ್ನಾನಘಟ್ಟದ ಬಳಿ ಶವ ಸಿಕ್ಕಿದೆ ಎನ್ನುವ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದಾರೆ. ಈಗಾಗಲೇ ಧರ್ಮಸ್ಥಳದ ಸ್ಥಳೀಯರು ಕೂಡ ಇದೇ ಮಾತುಗಳನ್ನು ಆಡತೊಡಗಿದ್ದಾರೆ. ಅಲ್ಲಿ ಶವದ ಅಸ್ಥಿಪಂಜರ ಸಿಕ್ಕರೆ ಅದು ದೊಡ್ಡ ವಿಷಯ ಅಲ್ಲ. ಅಲ್ಲಿ ಸಿಗಲೇಬೇಕು ಮತ್ತು ಆ ಶವಗಳನ್ನು ಈಗ ದೂರು ನೀಡಿರುವ ವ್ಯಕ್ತಿಯೇ ಹಿಂದೆ ಹೂತು ಹಾಕುತ್ತಿದ್ದ ಎಂದು ಧರ್ಮಸ್ಥಳ ಗ್ರಾಪಂ ಮಾಜಿ ಉಪಾಧ್ಯಕ್ಷ ಕೇಶವ ಗೌಡ ಎಂಬವರು ಮಾಧ್ಯಮಕ್ಕೆ ಹೇಳಿದ್ದರು. ಇದೀಗ ಮಂಗಳೂರಿನ ಖ್ಯಾತ ಫಾರೆನ್ಸಿಕ್ ವೈದ್ಯ ಮಹಾಬಲ ಶೆಟ್ಟಿ ಅವರೂ ಅದೇ ಮಾತು ಹೇಳಿದ್ದಾರೆ.

ಇದಲ್ಲದೆ, ಅಲ್ಲಿ ಮೂಳೆಗಳು ಸಿಕ್ಕಿದರೂ, ಅದನ್ನು ಯಾರದ್ದೆಂದು ಗುರುತು ಹಚ್ಚಲು ಯಾರಾದ್ರೂ ನಮ್ಮವರು ನಾಪತ್ತೆಯಾಗಿದ್ದಾರೆಂದು ದೂರು ನೀಡಲು ಮುಂದೆ ಬರಬೇಕು. ಆನಂತರವೇ ಡಿಎನ್ಎ ಟೆಸ್ಟ್ ಮಾಡಿ, ಅದು ಖಾತ್ರಿಯಾದರೆ ಮಾತ್ರ ಗುರುತು ಹಚ್ಚಬಹುದು. ಇಲ್ಲದಿದ್ದರೆ ಯಾರದ್ದೋ ಮೂಳೆ ಸಿಕ್ಕಿದ ಮಾತ್ರಕ್ಕೆ ಗುರುತು ಹಚ್ಚಲು ಸಾಧ್ಯವಿಲ್ಲ. ಈಗ ಸಿಕ್ಕಿರುವ ಎಲುಬಿನ ತುಂಡು, ತಲೆಬುರುಡೆಯನ್ನು ಗಮನಿಸಿ ಅದು ಪುರುಷನದ್ದೋ, ಮಹಿಳೆಯದ್ದೋ ಎಂದು ಹೇಳಬಹುದು. ಎಷ್ಟು ಪ್ರಾಯದ ವ್ಯಕ್ತಿ ಅಂತಲೂ ಹೇಳಬಹುದು. ಆದರೆ ಎಷ್ಟು ವರ್ಷಗಳ ಹಿಂದೆ ಸತ್ತಿದೆ ಎಂದು ನಿಖರವಾಗಿ ಹೇಳುವುದಕ್ಕೆ ಸಾಧ್ಯವಿಲ್ಲ.

ಕೆಲವರು ಕಾರ್ಬನ್ ಡೇಟಿಂಗ್ ಬಗ್ಗೆ ಹೇಳುತ್ತಿದ್ದುದನ್ನು ಟಿವಿಯಲ್ಲಿ ನೋಡಿದ್ದೇನೆ. ಕಾರ್ಬನ್ ಡೇಟಿಂಗ್ ತಂತ್ರಜ್ಞಾನ ಸಾವಿರ ವರ್ಷಗಳ ಹಿಂದಿನದ್ದನ್ನು ಪತ್ತೆ ಮಾಡಬಹುದು. ಯಾಕಂದ್ರೆ, ಕಾರ್ಬನ್ ಡೇಟಿಂಗ್ ಪ್ರಕಾರದಲ್ಲಿ ನಿಖರವಾಗಿ ಹೇಳಲಾಗದು. 25-50 ವರ್ಷಗಳಷ್ಟು ಅಂದಾಜು ವ್ಯತ್ಯಾಸದಲ್ಲಿ ಹೇಳುವುದಷ್ಟೇ. ಇಲ್ಲಿರುವ 20 ವರ್ಷಗಳ ಹಿಂದಿನದ್ದನ್ನು ಪತ್ತೆ ಮಾಡಲು ಕಾರ್ಬನ್ ಡೇಟಿಂಗ್ ಬಳಸುವುದು ಸಾಧ್ಯವಿಲ್ಲ ಎಂದು ಮಹಾಬಲ ಶೆಟ್ಟಿ ಹೇಳಿದ್ದಾರೆ.

In a dramatic twist to the ongoing SIT investigation near Dharmasthala, renowned forensic expert Dr. Mahabala Shetty has made a startling revelation. Speaking to media, Dr. Shetty confirmed that more than 20 unclaimed and decomposed bodies had been autopsied and buried near the Nethravathi riverbank close to the public bathing ghat in Dharmasthala.