ಬ್ರೇಕಿಂಗ್ ನ್ಯೂಸ್
02-08-25 01:46 pm Mangaluru Correspondent ಕರಾವಳಿ
ಮಂಗಳೂರು, ಆ.2: ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಹೆಣ ಹೂತ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡ ಚುರುಕುಗೊಳಿಸಿದೆ. ಇದರ ನಡುವಲ್ಲೇ 2000 ಇಸವಿಯಿಂದ 2014ರ ನಡುವೆ ದಾಖಲಾದ ಅಸಹಜ ಸಾವಿನ ಪ್ರಕರಣಗಳ ದಾಖಲೆಗಳನ್ನು ಬೆಳ್ತಂಗಡಿ ಪೊಲೀಸರಿಂದ ಆರ್ಟಿಐ ಅರ್ಜಿಯಲ್ಲಿ ಕೇಳಲಾಗಿದ್ದು ಹಳೆ ದಾಖಲೆಗಳು ತಮ್ಮಲ್ಲಿ ಇಲ್ಲವೆಂಬ ಉತ್ತರ ನೀಡಿದ್ದಾರೆ. ಇದರ ಬಗ್ಗೆ ತೀವ್ರ ಟೀಕೆಗೆ ಗುರಿಯಾಗಿದ್ದು ಹಳೆ ದಾಖಲೆ ನಾಶಪಡಿಸಿದ್ದು ಯಾಕೆಂಬ ಪ್ರಶ್ನೆ ಎದುರಾಗಿದೆ.
ಇದೇ ಅವಧಿಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ದೂರುದಾರ ಆರೋಪಿಸಿದ್ದರಿಂದ ಪೊಲೀಸರಲ್ಲಿ ದಾಖಲೆ ಇಲ್ಲ ಎಂದಿರುವುದು ಸಂಶಯಕ್ಕೆ ಕಾರಣವಾಗಿದೆ. 1998 ಮತ್ತು 2014ರ ನಡುವೆ ಲೈಂಗಿಕ ಅತ್ಯಾಚಾರಕ್ಕೊಳಗಾದ ಮಹಿಳೆಯರು, ಅಪ್ರಾಪ್ತ ಬಾಲಕಿಯರು ಸೇರಿದಂತೆ ಹಲವು ಶವಗಳನ್ನು ನನ್ನಲ್ಲಿ ಹೂಳಿಸಲಾಗಿತ್ತು ಎಂದು ದೂರುದಾರ ಹೇಳಿದ್ದಾನೆ. ಆದರೆ ಪೊಲೀಸರು ಆ ಸಮಯದಲ್ಲಿ ದಾಖಲಾದ ಪ್ರಕರಣಗಳ ದಾಖಲೆಗಳ ನಾಶಪಡಿಸಿದ್ದು ಕಳವಳಕ್ಕೆ ಕಾರಣವಾಗಿದೆ.
ಮರಣೋತ್ತರ ಪರೀಕ್ಷೆಯ ವರದಿಗಳು, ನೋಟಿಸ್‌ಗಳು ಮತ್ತು ಮೃತ ವ್ಯಕ್ತಿಗಳ ಗುರುತನ್ನು ಪತ್ತೆಹಚ್ಚುವ ಪ್ರಯತ್ನಗಳಲ್ಲಿ ಬಳಸಲಾದ ಫೋಟೋಗಳನ್ನು ಆಡಳಿತಾತ್ಮಕ ಆದೇಶಗಳಿಗೆ ಅನುಗುಣವಾಗಿ ನಾಶಪಡಿಸಲಾಗಿದೆ ಎಂದು ಬೆಳ್ತಂಗಡಿ ಪೊಲೀಸರು ಆರ್ ಟಿಐ ಅರ್ಜಿಗೆ ಪ್ರತಿಕ್ರಿಯಿಸಿದ್ದಾರೆ.
ನಿರ್ದಿಷ್ಟವಾಗಿ ಕ್ರಿಮಿನಲ್ ಪ್ರೊಸೀಜರ್ ಕೋಡ್‌ನ (ಸಿಆರ್‌ಪಿಸಿ) ಸೆಕ್ಷನ್ 174(ಎ) ಅಡಿಯಲ್ಲಿ 15 ವರ್ಷಗಳ ಅವಧಿಯಲ್ಲಿ ದಾಖಲಾದ ಯುಡಿಆರ್ ವಿವರಗಳನ್ನು ಆರ್ ಟಿಐನಡಿ ಕೇಳಲಾಗಿತ್ತು. ಆರ್ ಟಿಐನಡಿ ಕೇಳಲಾದ ದಾಖಲೆಗಳು ಲಭ್ಯವಿಲ್ಲ, ವಿವಿಧ ಸುತ್ತೋಲೆಗಳು ಮತ್ತು ಕಾರ್ಯ ವಿಧಾನಗಳ ಅಡಿಯಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಬೆಳ್ತಂಗಡಿ ಪೊಲೀಸ್ ಠಾಣೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಿಸಿದ್ದಾರೆ.
ಈ ಸಂಬಂಧ ಕರ್ನಾಟಕ ಸರ್ಕಾರ ಜೂನ್ 26, 2013 ರ ಅಧಿಸೂಚನೆ ಮತ್ತು ನವೆಂಬರ್ 23, 2023 ರಂದು ಪೊಲೀಸ್ ಅಧೀಕ್ಷಕರು ಹೊರಡಿಸಿದ ಇತ್ತೀಚಿನ ಆದೇಶವನ್ನು ಉಲ್ಲೇಖಿಸಿದ್ದು ಉಳಿದ ಪ್ರಕರಣಗಳ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಸಂಶಯಕ್ಕೆ ಕಾರಣವಾದ ಪ್ರಕರಣದಲ್ಲಿ ಯುಡಿಆರ್ ಡಿಲೀಟ್ ಮಾಡಿರುವುದರ ಕಾನೂನುಬದ್ಧತೆ ಮತ್ತು ನೈತಿಕತೆಯ ಬಗ್ಗೆ ಕಾನೂನು ತಜ್ಞರು ಮತ್ತು ನಾಗರಿಕ ಸಂಘಟನೆಗಳು ಕಳವಳ ವ್ಯಕ್ತಪಡಿಸಿದ್ದಾರೆ. ಕ್ರಿಮಿನಲ್ ಪ್ರಕರಣದ ದಾಖಲೆಗಳನ್ನು ನಾಶಪಡಿಸಲು ಪೊಲೀಸ್ ಠಾಣೆಗಳಿಗೆ ಅಧಿಕಾರವಿಲ್ಲ ಎಂದು ಅವರು ವಾದಿಸಿದ್ದಾರೆ. ದಾಖಲೆಗಳನ್ನು ಡಿಲೀಟ್ ಮಾಡುವ ಮೊದಲು ಏಕೆ ಡಿಜಿಟಲೀಕರಣ ಮಾಡಲಿಲ್ಲ ಎಂದು ಪ್ರಶ್ನಿಸಿದ್ದಾರೆ.
The investigation into the alleged human remains burial case in Dharmasthala has intensified under the Special Investigation Team (SIT). In a surprising development, it has come to light that crucial Unnatural Death Reports (UDRs) filed between 2000 and 2014 at the Belthangady Police Station have been deleted, drawing serious public criticism and raising legal and ethical concerns.
01-08-25 11:34 pm
Mangaluru Correspondent
‘Comedy Kiladigalu’, Chandrashekhar Siddi Sui...
01-08-25 10:45 pm
Kannada Producer Ganesh, Film Dharmasthala Fi...
01-08-25 09:09 pm
Rape Case, Prajwal Revanna Verdict : ಮೈಸೂರಿನ...
01-08-25 02:55 pm
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
01-08-25 10:48 pm
HK News Desk
ಭಾರತ, ರಷ್ಯಾದ್ದು ಸತ್ತ ಆರ್ಥಿಕತೆ, ಒಟ್ಟಿಗೇ ನಾಶವಾಗ...
01-08-25 11:44 am
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
02-08-25 03:51 pm
Mangaluru Correspondent
Inspector Manjunath Gowda, SIT, Dharmasthala:...
02-08-25 02:31 pm
Dharmasthala Case, UDR, SIT Police News; ಧರ್ಮ...
02-08-25 01:46 pm
Kerala Comes to Mangalore: Feast at Coral, Th...
02-08-25 01:40 pm
Forensic Expert Dr Mahabala Shetty, Dharmasth...
01-08-25 10:02 pm
02-08-25 04:43 pm
Mangaluru Correspondent
Mangalore CCB Police, Drugs: ಆಂಧ್ರಪ್ರದೇಶದಿಂದ...
01-08-25 05:05 pm
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm