ಬ್ರೇಕಿಂಗ್ ನ್ಯೂಸ್
02-08-25 03:51 pm Mangaluru Correspondent ಕರಾವಳಿ
ಉಳ್ಳಾಲ, ಆ.2: ಬೀದಿ ಬದಿ ವ್ಯಾಪಾರಿಗಳ ರಗಳೆಯಿಂದ ರಾ.ಹೆ. 66ರ ಕಲ್ಲಾಪುವಿನಲ್ಲಿ ನಿತ್ಯವೂ ವಾಹನಗಳ ಸಂಚಾರಕ್ಕೆ ತೊಡಕುಂಟಾಗುತ್ತಿದೆ. ಮೀನು ಖರೀದಿಗಾಗಿ ಗ್ರಾಹಕರು ರಸ್ತೆಯಲ್ಲೇ ವಾಹನಗಳನ್ನ ಎರ್ರಾಬಿರ್ರಿ ಪಾರ್ಕಿಂಗ್ ಮಾಡುವುದರಿಂದ ಹೆದ್ದಾರಿಯಲ್ಲಿ ಸಾಗುವ ವಾಹನ ಸವಾರರು, ಪಾದಚಾರಿಗಳಿಗೆ ಪ್ರಾಣಭೀತಿ ಕಾಡುತ್ತಿದೆ. ಅವ್ಯವಸ್ಥೆಗಳಿಗೆ ಕಡಿವಾಣ ಹಾಕಬೇಕಿದ್ದ ಹೆದ್ದಾರಿ ಅಧಿಕಾರಿಗಳು, ಪೊಲೀಸರು ತಮಗೂ ಅದಕ್ಕೂ ಸಂಬಂಧ ಇಲ್ಲ ಎನ್ನುವಂತಿದ್ದಾರೆ.
ಕಲ್ಲಾಪು ಯುನಿಟಿ ಸಭಾಂಗಣದ ಬಳಿಯ ಹೆದ್ದಾರಿ ಅಂಚಿನಲ್ಲೇ ಕೆಲವು ವರುಷಗಳಿಂದ ದಿನಕ್ಕೆ ಟನ್ ಗಟ್ಟಲೆ ಮೀನು ಮಾರಾಟ ನಡೆಸುವ ಸ್ಟಾಲ್ ಇದ್ದು ಮೀನು ಖರೀದಿಗೆಂದು ಬರುವ ಗ್ರಾಹಕರು ತಮ್ಮ ಕಾರು, ಸ್ಕೂಟರ್ ಗಳನ್ನ ಹೆದ್ದಾರಿಯಲ್ಲೇ ನಿಲ್ಲಿಸುತ್ತಿದ್ದಾರೆ. ಮೀನಿನ ಸ್ಟಾಲ್ ನಿಂದ ಆಗುತ್ತಿರುವ ರಗಳೆ ಸಾಲದ್ದಕ್ಕೆ ಅದಕ್ಕೆ ತಾಗಿಕೊಂಡೇ ಊಟದ ಕ್ಯಾಂಟೀನ್, ಬೇಕರಿ ಸ್ಟಾಲ್ ಗಳೂ ತಲೆ ಎತ್ತಿದ್ದು ಮತ್ತಷ್ಟು ಗ್ರಾಹಕರು ಹೆದ್ದಾರಿ ಅಂಚಿನಲ್ಲೇ ವಾಹನಗಳನ್ನ ಪಾರ್ಕ್ ಮಾಡುತ್ತಿದ್ದಾರೆ.



ಹೆದ್ದಾರಿ ಅಂಚಿನ ನಲ್ವತ್ತು ಫೀಟ್ ವ್ಯಾಪ್ತಿಯ ಅನಧಿಕೃತ ಅಂಗಡಿಗಳ ತೆರವಿಗೆ ಸುಪ್ರೀಂ ಕೋರ್ಟ್ ಆದೇಶವಿದೆ. ಇದೇ ನೀತಿಯಡಿ ವರ್ಷದ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಕಣ್ಣು ಕಟ್ಟಿಗೆ ಎಂಬಂತೆ ತಲಪಾಡಿ ಪ್ರದೇಶದ ಬಡಪಾಯಿ ಗೂಡಂಗಡಿಗಳನ್ನ ಎತ್ತಂಗಡಿ ಮಾಡಿದ್ದರು. ಹೆದ್ದಾರಿ ಅತಿಕ್ರಮಿಸಿ ಲಕ್ಷಗಟ್ಟಲೆ ಕಮಾಯಿ ಮಾಡುತ್ತಿರುವವರ ಸೂಚನೆಯಂತೆ ಅಧಿಕಾರಿಗಳು ನೆಪ ಮಾತ್ರಕ್ಕೆ ಕಾರ್ಯಾಚರಣೆ ನಡೆಸಿರುವ ಬಗ್ಗೆ ಆರೋಪಗಳಿದ್ದವು. ಇದೀಗ ಕಲ್ಲಾಪು ಹೆದ್ದಾರಿ ಬದಿ ಅಣಬೆಗಳಂತೆ ತಲೆ ಎತ್ತಿರುವ ಅನಧಿಕೃತ ಅಂಗಡಿಗಳ ಬಗ್ಗೆ ಹೆದ್ದಾರಿ ಇಲಾಖೆ ಮೃದು ಧೋರಣೆ ತಾಳಿದೆ. ಬೀದಿ ವ್ಯಾಪಾರಿಗಳ ರಗಳೆಯ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ವರದಿ ನೀಡಬೇಕಿದ್ದ ಸ್ಥಳೀಯ ಉಳ್ಳಾಲ ನಗರಸಭೆಯ ಅಧಿಕಾರಿಗಳು ಮತ್ತು ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಕೆಲವು ಪೊಲೀಸ್ ಅಧಿಕಾರಿಗಳು ಭರ್ಜರಿ ಕಮಾಯಿಯಲ್ಲಿ ಪಾಲು ಪಡೆಯುತ್ತಿರುವ ಬಗ್ಗೆ ಆರೋಪಗಳಿವೆ.
ಕಲ್ಲಾಪುವಿನ ಹೆದ್ದಾರಿ ಅಂಚಿನ ಒಳರಸ್ತೆಗಳ ತಿರುವುಗಳಲ್ಲೇ ವಾಹನಗಳನ್ನ ಅಡ್ಡಲಾಗಿ ನಿಲ್ಲಿಸುವ ಪರಿಣಾಮ ಒಳರಸ್ತೆಗಳಿಂದ ಹೆದ್ದಾರಿಗೆ ಸೇರುವ ವಾಹನ ಸವಾರರಿಗೆ ರಸ್ತೆ ಕಾಣದಂತಾಗಿದೆ. ಮಂಗಳೂರು ದಕ್ಷಿಣ ಉಪ ವಿಭಾಗದ ಎಸಿಪಿ ಕಚೇರಿಯೂ ಕಲ್ಲಾಪು ಬಳಿಯ ಒಳ ರಸ್ತೆಯಲ್ಲಿದ್ದು, ಎಸಿಪಿ ಇಲಾಖಾ ವಾಹನವೂ ಸಹ ಹೆದ್ದಾರಿ ಸೇರಲು ನಿತ್ಯವೂ ಹರಸಾಹಸ ಪಡಬೇಕಿದೆ. ಈ ಪ್ರದೇಶದಲ್ಲಿ ಸರ್ವಿಸ್ ರಸ್ತೆ ಇಲ್ಲದ ಕಾರಣ ಸಾಕಷ್ಟು ವಾಹನಗಳು ವಿರುದ್ಧ ದಿಕ್ಕಿನಲ್ಲಿ ಸಂಚರಿಸುತ್ತಿದ್ದು ಪಾದಚಾರಿಗಳು ಪ್ರಾಣ ಭಯದಿಂದಲೇ ಸಂಚರಿಸುವಂತಾಗಿದೆ.
ಕಲ್ಲಾಪು ಹೆದ್ದಾರಿ ಬದಿಯ ಮೀನಿನ ಸ್ಟಾಲ್ ಮುಂಭಾಗದಲ್ಲಿ ವಾಹನಗಳನ್ನ ನಿಲುಗಡೆ ನಡೆಸದಂತೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಮಂಗಳೂರು ದಕ್ಷಿಣ ಸಂಚಾರಿ ಠಾಣೆಯ ಪೊಲೀಸರಿಗೆ ನಿರ್ದೇಶನ ಕೊಟ್ಟು ವಾಹನ ಮತ್ತು ಪಾದಚಾರಿಗಳ ಸುಗಮ ಸಂಚಾರಕ್ಕೆ ಅನುವು ಮಾಡಲಾಗುವುದೆಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಕೆ.ರವಿಶಂಕರ್ ಅವರು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ.

Daily traffic disruption has become the norm on National Highway 66 at Kallapu, thanks to the unchecked encroachment by roadside fish vendors and eateries. The situation has worsened as customers park their vehicles haphazardly along the highway, posing a serious threat to motorists and pedestrians.
02-11-25 11:09 pm
HK News Desk
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
'ನವೆಂಬರ್ ಕ್ರಾಂತಿ' ಮುನ್ಸೂಚನೆ ನೀಡಿದ್ದ ರಾಜಣ್ಣ ಅಖ...
31-10-25 06:02 pm
ಧರ್ಮಸ್ಥಳ ಕೇಸ್ ; ಮಹೇಶ್ ಶೆಟ್ಟಿ ತಿಮರೋಡಿ ತಂಡದ ಮೇಲ...
30-10-25 11:00 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
03-11-25 12:37 pm
Mangalore Correspondent
ಧರ್ಮಸ್ಥಳ ಪ್ರಕರಣ ; ಗುರುತು ಪತ್ತೆಯಾಗದ 38 ಪ್ರಕರಣಗ...
02-11-25 10:23 pm
ಮಂಗಳೂರು ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಕೂಟಕ್ಕೆ ತೆ...
02-11-25 06:57 pm
ವೆನ್ಲಾಕ್, ಲೇಡಿಗೋಷನ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ...
02-11-25 06:51 pm
ಪುತ್ತೂರಿನಲ್ಲಿ ಆಟೋ - ಕಾರು ಮುಖಾಮುಖಿ ಡಿಕ್ಕಿ ; ಆಟ...
01-11-25 11:05 pm
03-11-25 12:33 pm
Mangalore Correspondent
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm
ಸುಹಾಸ್ ಶೆಟ್ಟಿ ಕೊಲೆ ಪ್ರಕರಣ ; 11 ಆರೋಪಿಗಳ ವಿರುದ್...
31-10-25 10:57 pm