ಬ್ರೇಕಿಂಗ್ ನ್ಯೂಸ್
04-08-25 01:58 pm Mangalore Correspondent ಕರಾವಳಿ
ಮಂಗಳೂರು, ಆ 04 : ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ಆರೋಪಿಸಿ ಅನಾಮಿಕ ವ್ಯಕ್ತಿಯೊಬ್ಬ ದೂರು ನೀಡಿದ ಪ್ರಕರಣ ರಾಜ್ಯದಾದ್ಯಂತ ತೀವ್ರ ಕುತೂಹಲವನ್ನುಂಟು ಮಾಡಿದೆ. ಈ ಗಂಭೀರ ಆರೋಪದ ತನಿಖೆಗಾಗಿ ಎಸ್‌ಐಟಿ ತಂಡ ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದೆ. ಇದೀಗ ಅನಾಮಿಕ ಗುರುತಿಸಿದ್ದ 13 ಸ್ಥಳಗಳ ಪಕಿ 11ನೇ ಪಾಯಿಂಟ್ನಲ್ಲಿ ಕಾರ್ಯಾಚರಣೆ ಮಾಡಲಾಗ್ತಿದೆ. ಆದರೆ ಇದೀಗ 11 ನೇ ಪಾಯಿಂಟ್ನಲ್ಲಿ ಮೇಜರ್ ಟ್ವಿಸ್ಟ್ ಸಿಕ್ಕಿದೆ.
ರಾಜ್ಯ ಸರ್ಕಾರ ರಚಿಸಿರುವ ವಿಶೇಷ ತನಿಖಾ ತಂಡ ತೀವ್ರ ಕಾರ್ಯಾಚರಣೆಯಲ್ಲಿ ತೊಡಗಿದೆ. ಆದರೆ, ಈ ಪ್ರಕರಣದಲ್ಲಿ ಇದೀಗ ಪಾಯಿಂಟ್ ನಂಬರ್ 11ರ ಸ್ಥಳದಲ್ಲಿ ಅನಾಮಿಕ ದೂರದಾರನಿಂದ ಉಂಟಾದ ಟ್ವಿಸ್ಟ್ ಎಸ್‌ಐಟಿಗೆ ಗೊಂದಲವನ್ನುಂಟುಮಾಡಿದೆ.
ಅನಾಮಿಕ ವ್ಯಕ್ತಿ ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಸುತ್ತಮುತ್ತಲಿನ ದಟ್ಟ ಕಾಡಿನಲ್ಲಿ ಸದ್ಯಕ್ಕೆ 13 ಸ್ಥಳಗಳನ್ನು ಶವಗಳನ್ನು ಹೂತಿಟ್ಟಿರುವ ಜಾಗಗಳೆಂದು ಗುರುತಿಸಿದ್ದಾನೆ. ಇದರಲ್ಲಿ ಇದೀಗ ಕಾರ್ಯಾಚರಣೆ ನಡೆಯುತ್ತಿದ್ದು, 11 ನೇ ಪಾಯಿಂಟ್ನಿಂದ ಇಂದು ಕಾರ್ಯಾಚರಣೆ ನಡೆಯುತ್ತಿದೆ. ಈ ವೇಳೆ ದೂರುದಾರ 11ನೇ ಸ್ಥಳದ ತನಿಖೆಯ ಸಂದರ್ಭದಲ್ಲಿ ಅನಿರೀಕ್ಷಿತ ತಿರುವು ನೀಡಿದ್ದಾನೆ. 11ನೇ ಪಾಯಿಂಟ್ ಅಗೆಯದೆ ಮೇಲ್ಭಾಗಕ್ಕೆ ಕರೆದುಕೊಂಡು ಹೋಗಿದ್ದಾನೆ.
ಗುಡ್ಡದ ಮೇಲ್ಭಾಗಕ್ಕೆ ಕರೆದೊಯ್ದ ದೂರುದಾರ!
ಪಾಯಿಂಟ್ ನಂಬರ್ 11 ಮೊದಲು ಅನಾಮಿಕ ಗುರುತಸಿದ್ದ. ಇದೀಗ ಈ ಸ್ಥಳದಲ್ಲಿ ಉತ್ಖನನ ಆರಂಭಿಸುವ ಮೊದಲು, ದೂರದಾರನು ಎಸ್‌ಐಟಿ ತಂಡವನ್ನು ಗುಡ್ಡದ ಕೆಳಗಿನಿಂದ ಮೇಲಕ್ಕೆ ಕರೆದೊಯ್ದು, ಸ್ಥಳವನ್ನು ಗುರುತಿಸುವ ಬದಲು, ಗುಡ್ಡದ ಮೇಲಿರುವ ಒಂದು ನಿರ್ದಿಷ್ಟ ಪ್ರದೇಶವನ್ನು ತೋರಿಸಿದ್ದಾನೆ. ಈ ಅನಾಮಿಕ ವ್ಯಕ್ತಿಯು ಗುಡ್ಡದ ಮೇಲ್ಭಾಗಕ್ಕೆ ಇಡೀ ತಂಡವನ್ನು ಕರೆದೊಯ್ದು, ಅಗೆಯುವಿಕೆಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ನೀಡದೇ, ಗೊಂದಲದಿಂದಿರುವಂತೆ ವರ್ತಿಸಿದ್ದಾನೆ. ಇದೀಗ ಇದು ಎಸ್‌ಐಟಿಗೆ ಹಲವು ಅನುಮಾನಕ್ಕೆ ಕಾರಣವಾಗಿದೆ.
ಎಸ್‌ಐಟಿಯು ಈಗ ಈ ಸ್ಥಳದಲ್ಲಿ ಉತ್ಖನನವನ್ನು ಮುಂದುವರಿಸಲು ತಯಾರಿ ನಡೆಸಿದೆ. ಆದರೆ, ದೂರದಾರನ ಹೇಳಿಕೆಯ ವಿಶ್ವಾಸಾರ್ಹತೆಯ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈಗಾಗಲೇ 13 ಸ್ಥಳಗಳ ಪೈಕಿ ಒಂದರಲ್ಲಿ ಮಾತ್ರ ಮೂಳೆಗಳ ಕುರುಹು ಸಿಕ್ಕಿರುವುದು, ಆತನ ಆರೋಪಗಳ ಸತ್ಯಾಸತ್ಯತೆಯನ್ನು ಪರೀಕ್ಷಿಸುವಂತೆ ಮಾಡಿದೆ. ಎಸ್‌ಐಟಿಯು ಈ ಸ್ಥಳದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿಯೊಂದಿಗೆ ಭದ್ರತೆಯನ್ನು ಕಾಪಾಡಿಕೊಂಡು, ವಿಡಿಯೋ ರೆಕಾರ್ಡಿಂಗ್ ಮೂಲಕ ತನಿಖೆಯನ್ನು ದಾಖಲಿಸುತ್ತಿದೆ.
04-08-25 01:00 pm
Bangalore Correspondent
Veerappa Moily, Kharge: 1980ರಲ್ಲೇ ನಾನು ಸಿಎಂ ಆ...
03-08-25 09:30 pm
Ravi Poojary Aide Kaviraj Arrested, Kolar Pol...
03-08-25 10:52 am
Dharmasthala News, High Court; ಧರ್ಮಸ್ಥಳ ಸುದ್ದ...
01-08-25 11:34 pm
‘Comedy Kiladigalu’, Chandrashekhar Siddi Sui...
01-08-25 10:45 pm
04-08-25 05:11 pm
HK News Desk
ಗೆಳೆಯನೊಂದಿಗೆ ಪತ್ನಿಯ ಸರಸ ; ಪರಿ ಪರಿ ಬೇಡಿಕೊಂಡರೂ...
04-08-25 02:16 pm
ವಿಮಾನದಲ್ಲಿ ಸಹ ಪ್ರಯಾಣಿಕನಿಗೆ ಕಪಾಳಮೋಕ್ಷ ; ಅಶಿಸ್ತ...
03-08-25 05:44 pm
ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ನರೇಂದ್ರ ಮೋದಿ, ಭಾಗ...
03-08-25 04:25 pm
ಮಾಲೆಗಾಂವ್ ಪ್ರಕರಣದಲ್ಲಿ ಮೋಹನ್ ಭಾಗವತ್ ಬಂಧಿಸುವುದಕ...
01-08-25 10:48 pm
04-08-25 04:48 pm
VK Mangalore
Dharmasthala Skeleton Mystery: ಧರ್ಮಸ್ಥಳ ಅಸ್ತಿ...
04-08-25 01:58 pm
Dharmasthala Case: ಧರ್ಮಸ್ಥಳ ಪ್ರಕರಣ ; ಆರನೇ ಪಾಯ...
04-08-25 01:24 pm
MCC Bank Inaugurates 20th Branch in Byndoor,...
04-08-25 12:40 pm
New Witness, Dharmasthala Case, Jayan: ನನ್ನ ಕ...
02-08-25 10:51 pm
03-08-25 10:11 pm
Mangalore Correspondent
ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್ ಟ...
03-08-25 08:16 pm
Mangalore Massive Lucky Scheme Fraud: ಸುರತ್ಕಲ...
02-08-25 10:04 pm
ಪ್ರಜ್ವಲ್ ರೇವಣ್ಣ ಅಪರಾಧಿ ; 14 ವರ್ಷ ಅಲ್ಲ, ಜೀವನಪರ...
02-08-25 07:20 pm
Suhas Shetty Murder, NIA Raid Mangalore: ಸುಹಾ...
02-08-25 04:43 pm