Mangalore Safest City; ಕಡಿಮೆ ಕ್ರೈಮ್ ರೇಟ್, ಮಹಿಳೆಯರ ಸುರಕ್ಷತೆ ; ದೇಶದಲ್ಲಿ ಮಂಗಳೂರಿಗೆ ನಂಬರ್ ವನ್, ನಂಬಿಯೋ ಸಮೀಕ್ಷೆಯಲ್ಲಿ ಜಗತ್ತಿನಲ್ಲಿ 49ನೇ ನಗರ, ಅಬುಧಾಬಿಗೆ ಮೊದಲ ಸ್ಥಾನ

08-08-25 05:54 pm       HK News Desk   ಕರಾವಳಿ

ಜಗತ್ತಿನಲ್ಲಿ ಸುರಕ್ಷಿತ ನಗರಗಳು, ಸುರಕ್ಷಿತ ದೇಶಗಳು ಎನ್ನುವ ಮಾನದಂಡ ಆಧರಿಸಿ ಸಮೀಕ್ಷೆ ನಡೆಸಲಾಗಿದ್ದು, ಕೋಮು ವೈಷಮ್ಯದ ವಿಚಾರಕ್ಕೆ ಕೆಲವೊಮ್ಮೆ ಸುದ್ದಿಯಾಗುವ ಮಂಗಳೂರು ನಗರ ಭಾರತದಲ್ಲಿ ಅತ್ಯಂತ ಸುರಕ್ಷಿತ ನಗರಗಳಲ್ಲಿ ಮೊದಲ ಸ್ಥಾನ ಪಡೆದಿದೆ. ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಕ್ರೈಮ್ ರೇಟ್ ಕಡಿಮೆ ಇರುವ ಕಾರಣಕ್ಕೆ ಸುರಕ್ಷಿತ ನಗರದ ಹಿರಿಮೆ ನೀಡಲಾಗಿದೆ.

ಮಂಗಳೂರು, ಆಗಸ್ಟ್ 8: ಜಗತ್ತಿನಲ್ಲಿ ಸುರಕ್ಷಿತ ನಗರಗಳು, ಸುರಕ್ಷಿತ ದೇಶಗಳು ಎನ್ನುವ ಮಾನದಂಡ ಆಧರಿಸಿ ಸಮೀಕ್ಷೆ ನಡೆಸಲಾಗಿದ್ದು, ಕೋಮು ವೈಷಮ್ಯದ ವಿಚಾರಕ್ಕೆ ಕೆಲವೊಮ್ಮೆ ಸುದ್ದಿಯಾಗುವ ಮಂಗಳೂರು ನಗರ ಭಾರತದಲ್ಲಿ ಅತ್ಯಂತ ಸುರಕ್ಷಿತ ನಗರಗಳಲ್ಲಿ ಮೊದಲ ಸ್ಥಾನ ಪಡೆದಿದೆ. ದೇಶದ ಬೇರೆ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಕ್ರೈಮ್ ರೇಟ್ ಕಡಿಮೆ ಇರುವ ಕಾರಣಕ್ಕೆ ಸುರಕ್ಷಿತ ನಗರದ ಹಿರಿಮೆ ನೀಡಲಾಗಿದೆ.

Numbeo Safest Index ಪ್ರಕಾರ, ಮಂಗಳೂರಿಗೆ ಇಡೀ ಜಗತ್ತಿನಲ್ಲಿ ಸುರಕ್ಷಿತ ನಗರಗಳ ಪೈಕಿ 49ನೇ ಸ್ಥಾನ ನೀಡಲಾಗಿದೆ. ದೇಶಗಳ ಪೈಕಿ ಭಾರತಕ್ಕೆ 67ನೇ ಸ್ಥಾನ ದೊರಕಿದೆ. ಕಡಿಮೆ ಕ್ರೈಮ್ ರೇಟ್ ಮತ್ತು ಉತ್ತಮ ಮೂಲಸೌಕರ್ಯ ನೆಲೆಯಲ್ಲಿ ಮಂಗಳೂರಿಗೆ 74.2 ಶೇಕಡಾ ಅಂಕ ನೀಡಲಾಗಿದ್ದು, ದೇಶದಲ್ಲಿ ಗುಜರಾತಿನ ವಡೋದರಾ(69.2), ಅಹ್ಮದಾಬಾದ್(68.2), ಸೂರತ್ (66.6) ನಂತರದ ಸ್ಥಾನ ಪಡೆದಿದೆ. ಆಬಳಿಕ ರಾಜಸ್ಥಾನದ ಜೈಪುರ, ನವಿ ಮುಂಬೈ, ತಿರುವನಂತಪುರಂ, ಚೆನ್ನೈ, ಪುಣೆ, ಚಂಡೀಗಢ ಇದೆ.

ರಾಜಧಾನಿ ದೆಹಲಿ, ನೋಯ್ಡಾ, ಗಾಜಿಯಾಬಾದ್ ಪಟ್ಟಿಯಲ್ಲಿ ಕೆಳಗಿನ ಸ್ಥಾನ ಪಡೆದಿದ್ದು ಅಸುರಕ್ಷಿತ ನಗರಗಳೆಂದು ಪಟ್ಟಿಯಲ್ಲಿ ಸೇರಿಸಲಾಗಿದೆ. ಕ್ರೈಮ್ ರೇಟ್ ಆಧರಿಸಿ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಆತಂಕ ಎದುರಿಸುತ್ತಿರುವ ನಗರಗಳನ್ನು ಈ ಪಟ್ಟಿಯಲ್ಲಿ ಕೆಳಗಡೆ ತೋರಿಸಲಾಗಿದೆ. ದೆಹಲಿಯಲ್ಲಿ ಕ್ರೈಮ್ ಇಂಡೆಕ್ಸ್ 59.03 ಇದ್ದರೆ, ಗಾಜಿಯಾಬಾದ್ 58.44 ಎಂದು ತೋರಿಸಲಾಗಿದೆ. ನೋಯ್ಡಾ ನಗರಕ್ಕೆ 55.1 ಅಂಕ ನೀಡಲಾಗಿದೆ.

ನಂಬಿಯೋ ಸಂಸ್ಥೆ ನಗರ ಪ್ರದೇಶದಲ್ಲಿ ವಾಸಿಸುತ್ತಿರುವ ಸಾರ್ವಜನಿಕರ ಅಭಿಪ್ರಾಯಗಳನ್ನು ಆಧರಿಸಿ ಈ ಪಟ್ಟಿ ಮಾಡಿದೆ. ರಾತ್ರಿ ಅಥವಾ ಹಗಲಿನಲ್ಲಿ ಜನರು ಅನುಭವಿಸುವ ತೊಂದರೆಗಳು, ದರೋಡೆ, ಕಾರು ಅಡ್ಡಗಟ್ಟಿ ಸುಲಿಗೆ, ಅಪರಿಚಿತರಿಂದ ದೈಹಿಕ ಹಲ್ಲೆಗಳು, ಸಾರ್ವಜನಿಕ ಪ್ರದೇಶದಲ್ಲಿ ಕಿರುಕುಳ, ವರ್ಗ-ಜಾತಿ- ಬಣ್ಣ- ಧರ್ಮದ ಆಧಾರದಲ್ಲಿ ತಾರತಮ್ಯ ಇತ್ಯಾದಿ ಅಂಶಗಳ ಬಗ್ಗೆ ಸಮೀಕ್ಷೆ ಒಳಗೊಂಡಿತ್ತು. ಇದಲ್ಲದೆ, ಅಪರಾಧ ಕೃತ್ಯಗಳಿಂದಾಗಿ ಆಸ್ತಿ ಕಳಕೊಳ್ಳುವುದು, ದಾಂಧಲೆ ನಡೆಸುವುದು ವಿಚಾರವೂ ಒಳಪಟ್ಟಿತ್ತು. ಜಗತ್ತಿನಲ್ಲಿ ಅತಿ ಹೆಚ್ಚು ಸಂಪತ್ತು ಗಳಿಕೆಯ ನಗರಗಳೆಂದು ಗುರುತಿಸಲ್ಪಟ್ಟ ಮಧ್ಯಪ್ರಾಚ್ಯದ ಅಬುಧಾಬಿ ನಗರ ಮತ್ತು ದೇಶಗಳಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ 88.8 ಅಂಕಗಳೊಂದಿಗೆ ಸುರಕ್ಷಿತ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ.

In a recent global survey on the world’s safest cities and countries, Mangaluru has emerged as the safest city in India, securing the top spot nationally and ranking 49th worldwide according to the Numbeo Safest Index.