ಬ್ರೇಕಿಂಗ್ ನ್ಯೂಸ್
08-08-25 08:05 pm Mangalore Correspondent ಕರಾವಳಿ
ಮಂಗಳೂರು, ಆ.8 : ಯಾರೋ ಅನಾಮಿಕ ಬಂದು ಧರ್ಮಸ್ಥಳದಲ್ಲಿ ಶವ ಹೂತಿದ್ದೇನೆ ಎಂದು ಹೇಳಿದ್ದಕ್ಕೆ ಎಸ್ಐಟಿ ರಚಿಸಿ ತನಿಖೆ ಮಾಡಿಸಲಾಗುತ್ತಿದೆ. ಆದರೆ ಈ ವ್ಯಕ್ತಿ ಯಾರು, ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದಾನೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಎಡಪಂಥೀಯರು ಇದೇ ವಿಚಾರ ಮುಂದಿಟ್ಟು ಪವಿತ್ರ ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರುವ ಯತ್ನ ಮಾಡುತ್ತಿದ್ದಾರೆ. ಇದನ್ನು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಧರ್ಮಸ್ಥಳ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರವಾಗಿದ್ದು ಕ್ಷೇತ್ರವನ್ನು ಗುರಿಯಾಗಿಸಿ ತೇಜೋವಧೆ, ಅಪಪ್ರಚಾರ ಮುಂದುವರಿಸಿದರೆ ಹಿಂದು ಸಮಾಜದ ಜೊತೆಗೆ ಬಿಜೆಪಿ ನಿಲ್ಲುತ್ತದೆ. ಹೋರಾಟಕ್ಕೂ ಕೈಜೋಡಿಸಲಿದೆ ಎಂದು ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾಮಿಕ ವ್ಯಕ್ತಿಯ ದೂರಿನ ಮೇರೆಗೆ ನಡೆಯುತ್ತಿರುವ ಎಸ್ಐಟಿ ತನಿಖೆಗೆ ಬಿಜೆಪಿ ಬೆಂಬಲಿಸುತ್ತದೆ. ಆದರೆ ಧರ್ಮಸ್ಥಳ ಕ್ಷೇತ್ರದ ಬಗ್ಗೆ ಎಡಪಂಥೀಯರ ಸಹಿತ ಸಾಮಾಜಿಕ ಜಾಲತಾಣಗಳಲ್ಲಿ ತೇಜೋವಧೆ ನಡೆಸುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಎಸ್ಐಟಿ ತನಿಖೆ ವೇಳೆ ಹೊರಗಿನ ಶಕ್ತಿಗಳು ಕ್ಷೇತ್ರದ ಬಗ್ಗೆ ಅವಹೇಳನ ಮಾಡುತ್ತಿದ್ದಾರೆ. ಇದರ ಹಿಂದಿರುವ ಶಕ್ತಿಗಳು, ತೇಜೋವಧೆ ನಡೆಸುವವರ ವಿರುದ್ಧ ಕಠಿಣ
ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆಯನ್ನು ಆಗ್ರಹಿಸುವುದಾಗಿ ಅವರು ಹೇಳಿದರು.
ಅನಾಮಿಕನ ಮಂಪರು ಪರೀಕ್ಷೆ ಮಾಡಿಸಿ
ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂತಿದ್ದೇನೆ ಎಂದು ಒಂದು ತಿಂಗಳ ಹಿಂದೆ ಅನಾಮಿಕ ಆರೋಪ ಮಾಡಿದ್ದಾನೆ. ಎರಡು ವಾರಗಳಿಂದ ಉತ್ಖನನ ನಡೆಸುತ್ತಿದ್ದು ಆತನ ಆರೋಪದಲ್ಲಿ ಹುರುಳಿದ್ದಂತೆ ಕಾಣುತ್ತಿಲ್ಲ. ಆತ ಇನ್ನೂ 25 ಕಡೆ ಶವ ಹೂತಿದ್ದೇನೆ ಎಂದರೂ ತನಿಖೆ ನಡೆಸಲಿ. ಆದರೆ ಯಾವ ಆಧಾರದಲ್ಲಿ ಆರೋಪ ಮಾಡುತ್ತಿದ್ದಾನೆ ಎಂಬುದು ಸ್ಪಷ್ಟವಾಗಬೇಕು. ಹೀಗಾಗಿ ಈ ತನಿಖೆಯ ಮೊದಲು ಆತನನ್ನು ಮಂಪರು ಪರೀಕ್ಷೆ ನಡೆಸಬೇಕು ಎಂದು ಸತೀಶ್ ಕುಂಪಲ ಆಗ್ರಹಿಸಿದರು.
ಎಡಪಂಥೀಯರ ಒತ್ತಾಯದ ಮೇರೆಗೆ ಧರ್ಮಸ್ಥಳ ಗ್ರಾಮದ ಕೇಸನ್ನು ಎಸ್ಐಟಿಗೆ ಹಸ್ತಾಂತರಿಸಿದ್ದಾಗಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿಕೆ ನೀಡಿದ್ದಾರೆ. ಎಸ್ಐಟಿ ತನಿಖೆಗಾಗಿ ತಮಿಳುನಾಡಿನ ಕಾಂಗ್ರೆಸ್ ಸಂಸದರೊಬ್ಬರು ತಮ್ಮ ಪಕ್ಷದ ವರಿಷ್ಠರ ಮೂಲಕ ಒತ್ತಡ ಹಾಕಿರುವ ಸಂಗತಿಗಳು ಕೇಳಿಬರುತ್ತಿವೆ. ಇವೆಲ್ಲ ಹಿಂದುಗಳ ಶ್ರದ್ಧಾಕೇಂದ್ರಗಳನ್ನು ದಮನಿಸುವ ಷಡ್ಯಂತ್ರದ ಭಾಗವೇ ಆಗಿದೆ. ಇಂತಹ ಷಡ್ಯಂತ್ರಗಳನ್ನು ಮಟ್ಟ ಹಾಕಲು ಕೇಂದ್ರ ಸರ್ಕಾರ ಉನ್ನತ ಮಟ್ಟದ ತನಿಖೆ ನಡೆಸುವ ಅಗತ್ಯವಿದೆ ಎಂದವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ರಾಜೇಶ್ ನಾಯ್ಕ್, ಡಾ.ಭರತ್ ಶೆಟ್ಟಿ, ಪ್ರತಾಪ್ಸಿಂಹ ನಾಯಕ್, ಕಿಶೋರ್ ಕುಮಾರ್, ಮುಖಂಡರಾದ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ಮಹೇಶ್, ಅರುಣ್ ಶೇಟ್ ಮತ್ತಿತರರಿದ್ದರು.
The Bharatiya Janata Party (BJP) has strongly condemned what it calls a deliberate attempt by left-wing groups to malign the sanctity of the Dharmasthala temple, one of South India’s most revered pilgrimage sites. Speaking at a press conference in Mangaluru, Dakshina Kannada BJP District President Satish Kumpala warned that continued defamation of the holy site would force the party and Hindu community to launch an agitation.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm