ಬ್ರೇಕಿಂಗ್ ನ್ಯೂಸ್
09-08-25 02:16 pm Mangalore Correspondent ಕರಾವಳಿ
ಮಂಗಳೂರು, ಆ 09 : ಧರ್ಮಸ್ಥಳದ ಬಾಹುಬಲಿ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ನಡೆಯುತ್ತಿರುವ ಉತ್ಖನನ ಕಾರ್ಯವು ರಾಜ್ಯದಾದ್ಯಂತ ಭಾರೀ ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದಲ್ಲಿ, ಅನಾಮಿಕ ದೂರುದಾರನೊಬ್ಬನ ಸಾಕ್ಷ್ಯದ ಆಧಾರದ ಮೇಲೆ ವಿಶೇಷ ತನಿಖಾ ತಂಡ (SIT) ನಿರಂತರ ಕಾರ್ಯಾಚರಣೆ ನಡೆಯುತ್ತಿದೆ. ಈ ಮೊದಲು ಮೊದಲ ಹಂತದಲ್ಲಿ 13 ಸ್ಥಳಗಳನ್ನು ಗುರುತಿಸಿದ್ದ. ಆದರೆ ಇದೀಗ ಮತ್ತೆ ಮತ್ತೆ ಹೊಸ ಜಾಗವನ್ನು ಗುರುತಿಸಿದ್ದಾನೆ.
ಧರ್ಮಸ್ಥಳದಲ್ಲಿ ಶೋಧ ಕಾರ್ಯಕ್ಕೆ ಕರೆದೊಯ್ದಿದ್ದಾಗ ಇದೀಗ ಅನಾಮಿಕ 16ನೇ ಪಾಯಿಂಟ್ ಗುರುತಿಸಿದ್ದಾನೆ. ನೇತ್ರಾವತಿ ನದಿಯ ತೀರದ ಬಾಹುಬಲಿ ಬೆಟ್ಟದ ಸಮೀಪದ ದಟ್ಟ ಕಾಡಿನಲ್ಲಿ ಶವಗಳನ್ನು ಹೂತಿಡಲಾಗಿದೆ ಎನ್ನಲಾದ 16ನೇ ಪಾಯಿಂಟ್ ಗುರುತಿಸಿದ್ದಾನೆ.
ಹೊಸದಾಗಿ 16ನೇ ಪಾಯಿಂಟ್ ಗುರುತಿಸಿದ ಅನಾಮಿಕ!
ಇದೀಗ ಅನಾಮಿಕ ಗುರುತಿಸಿದ 16 ನೇ ಪಾಯಿಂಟ್ ಸ್ಥಳದಲ್ಲಿ ಉತ್ಖನನ ಕಾರ್ಯವನ್ನು ತೀವ್ರಗೊಳಿಸಿದೆ. ಈ ಕಾರ್ಯಾಚರಣೆಯು ಗೌಪ್ಯತೆಯಿಂದ ಕೂಡಿದ್ದು, ಕ್ರೈಂ ಸೀನ್‌ನ ಸಂಪೂರ್ಣ ವಶವನ್ನು ಎಸ್‌ಐಟಿ ಪಡೆದುಕೊಂಡಿದೆ. ದೂರುದಾರನಿಂದ ಗುರತಿಸಲಾದ ಸ್ಥಳಗಳ ಪೈಕಿ ಈಗಾಗಲೇ ಎಲ್ಲಾ ಕಡೆ ಶೋಧ ನಡೆದಿದೆ. 13 ನೇ ಪಾಯಿಂಟ್ ಹೊರತುಪಡೆಸಿ ಇನ್ನುಳಿದ ಎಲ್ಲಾ ಜಾಗಗಳಲ್ಲಿ ಉತ್ಖನನ ಕಾರ್ಯ ನಡೆದಿದೆ.
ಬಾಹುಬಲಿ ಬೆಟ್ಟದಲ್ಲಿ 16 ನೇ ಪಾಯಿಂಟ್!
ಇಂದು ಬಾಹುಬಲಿ ಬೆಟ್ಟದ ಸುತ್ತಲಿನ 16ನೇ ಸ್ಪಾಟ್‌ನಲ್ಲಿ ಉತ್ಖನನ ಕಾರ್ಯವು ತೀವ್ರಗೊಂಡಿದೆ. ಸ್ಥಳದಲ್ಲಿ ಬೆಳೆದಿರುವ ಗಿಡಮರಗಳನ್ನು ಕಡಿಯಲು ಸ್ವಚ್ಛಗೊಳಿಸುವ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಮಣ್ಣು ತೆಗೆಯುವ ಕಾರ್ಯವನ್ನು ಕಾರ್ಮಿಕರ ಮೂಲಕ ಆರಂಭಿಸಲಾಗಿದೆ. ಕೆಲವು ಸ್ಥಳಗಳಲ್ಲಿ ಹಿಟಾಚಿ ಯಂತ್ರಗಳನ್ನು ಬಳಸಿ ಆಳವಾದ ಉತ್ಖನನವನ್ನು ನಡೆಸಲಾಗುತ್ತಿದೆ. ಈ ಕಾರ್ಯಾಚರಣೆಯ ಸಂಪೂರ್ಣ ಚಿತ್ರೀಕರಣವನ್ನು ಹ್ಯಾಂಡಿ ಕ್ಯಾಮ್ ಮೂಲಕ ದಾಖಲಿಸಲಾಗುತ್ತಿದ್ದು, ಗೌಪ್ಯತೆ ಕಾಪಾಡಲು ಸ್ಥಳದ ಸುತ್ತಲೂ ಟೇಪ್‌ಗಳನ್ನು ಹಾಕಿ, ಪರದೆಗಳನ್ನು ಅಳವಡಿಸಲಾಗಿದೆ.
ಎಸ್‌ಐಟಿ ತಂಡವು ದೂರುದಾರನಿಂದ ಇಂಚಿಂಚೂ ಮಾಹಿತಿಯನ್ನು ಸಂಗ್ರಹಿಸುತ್ತಿದೆ. ಮೃತದೇಹಗಳನ್ನು ಎಲ್ಲಿಂದ ತರಲಾಗಿತ್ತು, ಹೇಗೆ ತರಲಾಯಿತು, ಮತ್ತು ಎಲ್ಲಿ ಹೂತಿಡಲಾಗಿತ್ತು ಎಂಬ ವಿವರಗಳನ್ನು ದಾಖಲಿಸಲಾಗುತ್ತಿದೆ. ದೂರುದಾರನ ಹೇಳಿಕೆಯನ್ನು ವೀಡಿಯೋ ಚಿತ್ರೀಕರಣದ ಮೂಲಕ ದಾಖಲಿಸಲಾಗುತ್ತಿದ್ದು, ಈ ಮಾಹಿತಿಯ ಆಧಾರದ ಮೇಲೆ ತನಿಖೆಯನ್ನು ಮುಂದುವರಿಸಲಾಗುತ್ತಿದೆ. ಈಗಾಗಲೇ 12 ಸ್ಥಳಗಳಲ್ಲಿ ಉತ್ಖನನ ನಡೆಸಲಾಗಿದ್ದು, ಕೆಲವು ಕಡೆ ಅಸ್ಥಿಪಂಜರಗಳು, ಸೀರೆ, ಮತ್ತು ಇತರ ವಸ್ತುಗಳು ಪತ್ತೆಯಾಗಿವೆ.
ದೂರುದಾರನ ಸಾಕ್ಷ್ಯದ ಆಧಾರದ ಮೇಲೆ, ಗ್ರೌಂಡ್ ಪೆನೆಟ್ರೇಟಿಂಗ್ ರೇಡಾರ್ (GPR) ತಂತ್ರಜ್ಞಾನವನ್ನು ಬಳಸುವಂತೆ ವಕೀಲ ಮಂಜುನಾಥ್ ಎಸ್‌ಐಟಿಗೆ ಮನವಿ ಮಾಡಿದ್ದಾರೆ. ಇದು ಮಾನವ ಅವಶೇಷಗಳನ್ನು ಗುರುತಿಸಲು ಸಹಾಯಕವಾಗಿದೆ, ವಿಶೇಷವಾಗಿ 11 ವರ್ಷಗಳ ಭಾರೀ ಮಳೆಯಿಂದ ಮಣ್ಣಿನ ಸ್ಥಳಾಂತರವಾಗಿರುವ ಸಾಧ್ಯತೆ ಇದೆ.
ತೀವ್ರ ತನಿಖೆಯಲ್ಲಿ ಎಸ್‌ಐಟಿ!
ಎಸ್‌ಐಟಿ ತಂಡವು ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ಸಹಾಯವಾಣಿ ಕಚೇರಿಯನ್ನು ಸ್ಥಾಪಿಸಿದ್ದು, ಸಾರ್ವಜನಿಕರು ಮಾಹಿತಿಯನ್ನು ಒದಗಿಸಲು 0824-2005301 ಅಥವಾ 8277986369 ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು. 1995ರಿಂದ 2014ರವರೆಗಿನ ಮರಣ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ತನಿಖೆಯ ಗೌಪ್ಯತೆಗಾಗಿ ಮೊಬೈಲ್ ಫೋನ್ ಬಳಕೆಗೆ ನಿರ್ಬಂಧವಿದೆ.
The ongoing excavation near Dharmasthala’s Bahubali Hill has captured statewide attention, with new twists emerging in the high-profile “buried remains” case. Acting on the testimony of an anonymous informant, the Special Investigation Team (SIT) has intensified its search operations.
01-09-25 10:53 pm
Bangalore Correspondent
Karnataka Police, Warning to Social Media Use...
01-09-25 06:59 pm
ಎಸ್.ಐ.ಟಿ ರಚನೆ ಮಾಡಿದಾಗಲೇ ಬಿಜೆಪಿ ಯಾಕೆ ವಿರೋಧ ಮಾಡ...
01-09-25 05:03 pm
Yadagiri, Raid, Heart Attack: ಯಾದಗಿರಿ ; ಇಸ್ಪೀ...
01-09-25 04:55 pm
Sujatha Bhat, Latest News, Dharmasthala: ಚಿನ್...
01-09-25 01:25 pm
01-09-25 01:06 pm
HK News Desk
ಮೋದಿ ಜಪಾನ್ ಪ್ರವಾಸದಲ್ಲಿ 13 ಒಪ್ಪಂದಗಳಿಗೆ ಸಹಿ ; ರ...
31-08-25 01:32 pm
Kannur Blast ; ಕಣ್ಣೂರಿನ ಮನೆಯಲ್ಲಿ ಭಾರೀ ಸ್ಫೋಟ ;...
31-08-25 01:04 pm
ಟ್ರಂಪ್ ಸುಂಕ ನೀತಿ ಕಾನೂನುಬಾಹಿರ ; ಅಮೆರಿಕದ ಫೆಡರಲ್...
31-08-25 12:00 pm
ಹಿಮಂತ ಬಿಸ್ವ ಶರ್ಮಗೆ ಟಿಕೆಟ್ ಕೊಡಬೇಡಿ ಎಂದು ಸೋನಿಯಾ...
30-08-25 06:44 pm
01-09-25 10:01 pm
Mangalore Correspondent
ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಸೌ...
01-09-25 05:05 pm
Mangalore Pothole, Accident, Video Viral: ಕೆಪ...
31-08-25 10:34 pm
Ullal, Mangalore, UT Khader: ಹಡಿಲು ಬಿದ್ದ ಗದ್ದ...
31-08-25 08:20 pm
“Mangaluru’s Biggest Heart Care Offer: Indian...
31-08-25 01:56 pm
01-09-25 09:21 pm
Udupi Correspondent
ಹೌಸಿಂಗ್ ಫೈನಾನ್ಸ್ ಹೆಸರಲ್ಲಿ ಬ್ಯಾಂಕ್ ಸಿಬಂದಿಯಿಂದಲ...
01-09-25 03:07 pm
Mangalore Crime, Konaje Police, Raid, Liquor:...
01-09-25 01:58 pm
Mangalore Crime, Falnir Attack: ಪೊಲೀಸರಿಗೆ ಭಾರ...
31-08-25 10:55 pm
Mangalore Court, Sexual Abuse: ಮೂರೂವರೆ ವರ್ಷದ...
30-08-25 03:22 pm