ಬ್ರೇಕಿಂಗ್ ನ್ಯೂಸ್
10-08-25 01:01 pm Mangalore Correspondent ಕರಾವಳಿ
ಉಳ್ಳಾಲ, ಆ.10 : ಮನುಷ್ಯ ಸತ್ತ ಮೇಲೆ ದೇವಸ್ಥಾನದ ವಠಾರದಲ್ಲಿ ಹೂಳುವ ಕ್ರಮವು ಭಾರತೀಯ ಸಂಸ್ಕೃತಿಯಾಗಿದೆ. ಧರ್ಮಸ್ಥಳದ ಹೆಸರು ಹಾಳಾಗುತ್ತಿದ್ದರೂ ಪ್ರಧಾನಿ ಮೋದಿಯವರೇ ನೀವು ಏನು ಮಾಡುತ್ತಿದ್ದೀರಿ. ಮೋದಿಯವರೇ ಧೈರ್ಯ ತಾಕತ್ತಿದ್ದರೆ ಧರ್ಮಸ್ಥಳಕ್ಕೆ ಹೋಗಿ ನಿಂತು ಭಾಷಣ ಮಾಡಿ. ಶವ ಹೂಳುವುದು ದೇವಸ್ಥಾನಗಳಲ್ಲಿ ಮಾತ್ರವೇ.. ಮಸೀದಿ, ಚರ್ಚ್ ಗಳಲ್ಲೂ ಶವಗಳನ್ನ ಹೂತಿಲ್ಲವೇ ಎಂದು ಕೇಳಿ ಎಂದು ಮಾಜಿ ಕೇಂದ್ರ ಸಚಿವರೂ ಹಿರಿಯ ಕಾಂಗ್ರೆಸ್ ಮುಖಂಡರೂ ಆದ ಬಿ.ಜನಾರ್ಧನ ಪೂಜಾರಿ ಗುಡುಗಿದ್ದಾರೆ.
ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ತೊಕ್ಕೊಟ್ಟಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ತೊಕ್ಕೊಟ್ಟು ಒಳಪೇಟೆಯ ಅಂಬೇಡ್ಕರ್ ಮೈದಾನದಲ್ಲಿ ಭಾನುವಾರ ನಡೆದ "ಮುದ್ದುಕೃಷ್ಣ -2025" ಕೃಷ್ಣ ವೇಷ ಸ್ಪರ್ಧೆಯನ್ನ ಉದ್ಘಾಟಿಸಿ ಅವರು ಮಾತನಾಡಿದರು.







ಧರ್ಮಸ್ಥಳ ಕ್ಷೇತ್ರಕ್ಕೆ ಅವಹೇಳನ ಆಗುತ್ತಿದ್ದರೂ ಪೂಜಾರಿ ಯಾಕೆ ಸುಮ್ಮನಿದ್ದಾರೆಂದು ಇಡೀ ದೇಶ, ಜಗತ್ತು ಕೇಳುತ್ತಾ ಇದೆ. ಹೆಗ್ಗಡೆಯವರೇ ಧರ್ಮಸ್ಥಳದ ಒಟ್ಟಿಗೆ ಇಡೀ ದೇಶ ಅಲ್ಲ, ಜಗತ್ತೇ ಇದೆ. ಕುದ್ರೋಳಿ ದೇವಸ್ಥಾನ ನಿರ್ಮಿಸುವಾಗ ಎಷ್ಟು ಕಷ್ಟ ಆಗಿದೆ. ದೇವಸ್ಥಾನವನ್ನ ನಡೆಸಲು ಎಷ್ಟೊಂದು ಕಷ್ಟ ಇದೆ ಅನ್ನೋದು ನನಗೆ ತಿಳಿದಿದೆ. ಹೆಗ್ಗಡೆಯವರೇ ನಿಮ್ಮ ಜೊತೆ ಪೂಜಾರಿ ಇದ್ದಾರೆ. ನಾನು ಕೂಡಾ ಧರ್ಮಸ್ಥಳದ ಭಕ್ತನಾಗಿದ್ದೇನೆ. ಧರ್ಮಸ್ಥಳವು ಧರ್ಮದ ಸ್ಥಳವಾಗಿದೆ. ಅದು ಜೈನರಿಗೆ ಮಾತ್ರ ಸೇರಿಲ್ಲ, ಜಗತ್ತಿಗೆ ಅದು ಹೆಮ್ಮೆಯ ಸ್ಥಳವಾಗಿದೆ. ಧರ್ಮಸ್ಥಳವನ್ನ ಹಾಳು ಮಾಡಲು ಯಮನಿಂದಲೂ ಸಾಧ್ಯವಿಲ್ಲ.
ಹಿಂದೂಗಳು ಮಾತ್ರವಲ್ಲ ಮುಸ್ಲಿಂ, ಕ್ರಿಶ್ಚಿಯನ್ನರು ಸತ್ತಾಗಲೂ ಶವಗಳನ್ನ ಮಸೀದಿ, ಚರ್ಚ್ ಗಳ ವಠಾರದಲ್ಲಿ ಹೂಳುವುದು ಅದು ಭಾರತೀಯ ಸಂಸ್ಕೃತಿಯಾಗಿದೆ.
ಶವಗಳನ್ನ ಹೂತಿಟ್ಟ ಆರೋಪದಲ್ಲಿ ಧರ್ಮಸ್ಥಳ ವಠಾರವನ್ನ ಎಸ್ ಐಟಿ ಯವರು ಅಗೆಯುತ್ತಿದ್ದಾರೆ. ಎಸ್ ಐಟಿಯವರು ಹುಡುಕಿದರೂ ಏನೂ ಸಿಕ್ಕಿಲ್ಲ, ಸಿಗೋದಿಲ್ಲ. ನೀವು ಎಷ್ಟು ಹುಡುಕಿದರೂ ಸಿಗುವುದಿಲ್ಲ. ಎಸ್ ಐಟಿಯವರೇ, ಮುಖ್ಯಮಂತ್ರಿಯವರೇ ಏನು ಮಾಡುತ್ತಿದ್ದೀರಿ ನೀವು. ಧರ್ಮಸ್ಥಳದ ಹೆಸರು ಹಾಳಾಗುತ್ತಿದ್ದರೂ ಯಾಕೆ ನೀವು ಬಾಯಿ ಬಿಡುವುದಿಲ್ಲ, ನಾಚಿಗೆ ಆಗುತ್ತಿದೆ ನನಗೆ. ದೇವಸ್ಥಾನವನ್ನು ಹಾಳು ಮಾಡುವಾಗ ಮಾತನಾಡುವ ಧೈರ್ಯ ನಿಮಗಿಲ್ಲ. ಆದರೆ ನಾನು ಮಾತನಾಡುತ್ತಿದ್ದೇನೆ. ಪೂಜಾರಿಯನ್ನ ಜೈಲಿಗೆ ಹಾಕಿದರೂ ಧರ್ಮಸ್ಥಳದ ಹೆಸರು ಹಾಳು ಮಾಡಲು ಬಿಡೋದಿಲ್ಲ ಎಂದು ಗುಡುಗಿದರು.
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಸುರೇಶ್ ಭಟ್ನಗರ, ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಅಧ್ಯಕ್ಷರಾದ ಚಂದ್ರಕಾಂತ್ ಕ್ಲಿಕ್ ತೊಕ್ಕೊಟ್ಟು, ಉಪಾಧ್ಯಕ್ಷರಾದ ಸತೀಶ್ ದೀಪಂ, ಪ್ರಧಾನ ಕಾರ್ಯದರ್ಶಿ ಭವಿತ್ ಬಂಗೇರ, ಕಾರ್ಯಕ್ರಮ ಸಂಯೋಜಕ ಅಶೋಕ್ ಕ್ಲಿಕ್ ಮೊದಲಾದವರು ಉಪಸ್ಥಿತರಿದ್ದರು.
Former Union Minister and senior Congress leader B. Janardhan Poojary has strongly criticised the ongoing SIT investigation into allegations of human remains being buried in the Dharmasthala temple premises, calling it an insult to the sacred site.
31-03-26 10:13 am
HK News Staffer
ತಮಿಳುನಾಡಿನಲ್ಲಿ ಬಿಜೆಪಿ ಸೀಟು ಹಂಚಿಕೆಯಲ್ಲಿ ಲೋಪ ;...
29-03-26 10:19 am
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
31-03-26 11:00 pm
HK News Staffer
ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಸೋದರ ತಾಹಿ...
31-03-26 03:30 pm
ಸಂಧಾನ ಮಾತುಕತೆ ಒಪ್ಪದಿದ್ದರೆ ಇರಾನ್ ಸರ್ವನಾಶ ; ಭೂದ...
31-03-26 10:43 am
ಗಲ್ಫ್ ಯುದ್ಧ ಎಫೆಕ್ಟ್ ; ಡಾಲರ್ ಮುಂದೆ ರುಪಾಯಿ ಮಹಾಪ...
30-03-26 10:31 pm
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
31-03-26 10:06 pm
HK News Desk
Moodbidri Accident: ಮೂಡುಬಿದ್ರೆ ; ರಸ್ತೆ ಬದಿ ನಿ...
31-03-26 09:02 pm
ಅವಳೇ ಮಗನನ್ನು ವಿಷ ಕೊಟ್ಟು ಕೊಂದಿದ್ದಾಳೆ, ವಿಷಯ ಮುಚ...
31-03-26 06:27 pm
ಚಲಿಸುತ್ತಿದ್ದ ಕೆಎಸ್ಆರ್ಟಿಸಿ ಬಸ್ಸಿನಿಂದ ಹೊರಬಿದ್...
31-03-26 03:01 pm
ಮಂಗಳೂರು ಬಂದರಿಗೆ ಬರಲಿದೆ ಮತ್ತೆರಡು ಎಲ್ಪಿಜಿ ಹೊತ್ತ...
30-03-26 11:13 pm
31-03-26 11:11 am
HK News Staffer
ಮದುವೆ ಆಗಿದ್ರೂ ಲವರ್ ನಂಟು ; ಹಣಕ್ಕಾಗಿ ಪೀಡಿಸಿ ಬ್ಲ...
30-03-26 07:35 pm
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm