ಬ್ರೇಕಿಂಗ್ ನ್ಯೂಸ್
11-08-25 07:39 pm Mangalore Correspondent ಕರಾವಳಿ
ಮಂಗಳೂರು, ಆ.11 : ಧರ್ಮಸ್ಥಳ ಹೆಣ ಹೂತ ಪ್ರಕರಣದಲ್ಲಿ ಭೂಮಿಯ ಆಳದಲ್ಲಿ ಅಡಗಿರುವ ಸಾಕ್ಷ್ಯಗಳನ್ನು ಪತ್ತೆ ಮಾಡಲು ನೆಲವನ್ನು ಅಗೆದು ಸಮಯ ವ್ಯರ್ಥ ಮಾಡುವ ಬದಲು ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ (ಜಿಪಿಆರ್) ತಂತ್ರಜ್ಞಾನ ಬಳಸಲು ನಿರ್ಧರಿಸಲಾಗಿದೆ. ಇದರಂತೆ, ಸೋಮವಾರ ದೂರುದಾರ ಗುರುತಿಸಿರುವ ಧರ್ಮಸ್ಥಳ ಸ್ನಾನಘಟ್ಟ ಬಳಿಯ 13ನೇ ಪಾಯಿಂಟ್ ನಲ್ಲಿ ಶೋಧಕ್ಕಾಗಿ ಜಿಪಿಆರ್ ಯಂತ್ರವನ್ನು ತರಲಾಗಿದ್ದು ಡ್ರೋಣ್ ಮೂಲಕ ಪ್ರಾತ್ಯಕ್ಷಿಕೆ ನೀಡಲಾಗಿದೆ. ಮಂಗಳವಾರ ಎಸ್ಐಟಿ ಮುಖ್ಯಸ್ಥ ಪ್ರಣವ್ ಮೊಹಂತಿ ಸ್ಥಳಕ್ಕೆ ಬರಲಿದ್ದು ಅವರ ಉಪಸ್ಥಿತಿಯಲ್ಲೇ ಜಿಪಿಆರ್ ಯಂತ್ರದಿಂದ ಶೋಧ ನಡೆಸುವ ನಿರೀಕ್ಷೆಯಿದೆ.
ಜಿಪಿಆರ್ ಯಂತ್ರವನ್ನು ಪ್ರಬಲ ಡ್ರೋಣ್ ಗೆ ಕಟ್ಟಿ ಆ ಪ್ರದೇಶವನ್ನು ಉದ್ದಕ್ಕೂ ಸ್ಕ್ಯಾನ್ ಮಾಡುವ ಸಾಧ್ಯತೆಯಿದೆ. ಸೋಮವಾರ ಸಂಜೆ ಯಂತ್ರವನ್ನು ಸ್ಥಳಕ್ಕೆ ತಂದಿದ್ದು, ಒಂದು ಬಾರಿ ಪ್ರಾಯೋಗಿಕವಾಗಿ ಡ್ರೋಣ್ ಮೂಲಕ ಸ್ಕ್ಯಾನ್ ಮಾಡಿದ್ದಾರೆ. ಮಿಲಿಟರಿಯಲ್ಲಿ ಭೂಮಿಯಡಿ ಬಾಂಬ್ ಅಥವಾ ಗಡಿಭಾಗದಲ್ಲಿ ಉಗ್ರರು ನೆಲದಡಿಯ ಸುರಂಗದಲ್ಲಿ ಅಡಗಿದ್ದಾರೆಯೇ ಎಂದು ತಿಳಿಯಲು ಇಂತಹ ತಂತ್ರಜ್ಞಾನ ಬಳಸಲಾಗುತ್ತದೆ. ನಕ್ಸಲ್ ಪೀಡಿತ ಪ್ರದೇಶದಲ್ಲಿ ಮಿಲಿಟರಿ ವಾಹನ ಚಲಿಸುವುದಕ್ಕೂ ಮುನ್ನ ನೆಲ ಬಾಂಬ್ ಇಟ್ಟಿದ್ದಾರೆಯೇ ಎಂದು ತಿಳಿಯಲು ಇದೇ ಮಾದರಿ ಸ್ಕ್ಯಾನ್ ಮಾಡುತ್ತಾರೆ. ಭೂಗರ್ಭ ಶಾಸ್ತ್ರಜ್ಞರು ಕೂಡ ಖನಿಜ ಸಂಪತ್ತು ಅಥವಾ ಕಾಡಿನಲ್ಲಿ ಏನಾದರೂ ದುರಂತ ಆಗಿದ್ದರೆ ನೆಲದಡಿಯ ವಸ್ತುಸ್ಥಿತಿ ತಿಳಿಯಲು ಇದೇ ತಂತ್ರಜ್ಞಾನ ಬಳಕೆ ಮಾಡುತ್ತಾರೆ.
ಜಿಪಿಆರ್ ಯಂತ್ರದಲ್ಲಿ ಸಾಮಾನ್ಯವಾಗಿ ಇಲೆಕ್ಟ್ರಿಕಲ್ ಸಿಗ್ನಲ್ ಮತ್ತು ರೇಡಿಯೋ ವಿಕಿರಣಗಳನ್ನು ಬಳಸಿ ನೆಲದಲ್ಲಿ ಏನಿದೆ ಎಂದು ಶೋಧನೆ ಮಾಡುತ್ತಾರೆ. ಧರ್ಮಸ್ಥಳದಲ್ಲಿ ಯಾವ ರೀತಿಯ ಇಂಜಿನ್ ಮತ್ತು ಸಿಗ್ನಲ್ ಬಳಸಲಾಗುತ್ತದೆ ಎಂದು ತಿಳಿದಿಲ್ಲ. ಆದರೆ ಎಸ್ಐಟಿ ಅಧಿಕಾರಿಗಳು ಜಿಪಿಆರ್ ತಜ್ಞರನ್ನು ಸಂಪರ್ಕಿಸಿ, ಆಧುನಿಕ ಮಾದರಿಯ ಜಿಪಿಆರ್ ಯಂತ್ರವನ್ನು ತಂದಿದ್ದಾರೆ ಎನ್ನಲಾಗುತ್ತಿದೆ. ಈ ಸಾಧನವು ಅಧಿಕ ಆವರ್ತನದ ರೇಡಿಯೋ ತರಂಗಗಳನ್ನು ನೆಲದಾಳಕ್ಕೆ ಕಳುಹಿಸುತ್ತದೆ. ಇದರ ಹಾದಿಯಲ್ಲಿ ಯಾವುದೇ ಪದರ, ಅಸಹಜ ವಸ್ತುಗಳು ಸಿಕ್ಕರೆ ಅವನ್ನು ಗ್ರಹಿಸಿ ಸಿಗ್ನಲ್ ನೀಡುತ್ತದೆ. ಈ ಜಾಗವನ್ನು ಸಂಪೂರ್ಣ ಸ್ಕ್ಯಾನ್ ಮಾಡಿದ ಬಳಿಕ ಸಿಗ್ನಲನ್ನು ಕಂಪ್ಯೂಟರ್ ಪರದೆಗೆ ಹಾಕಿ ವಿಶ್ಲೇಷಿಸಿದರೆ ಗರ್ಭಿಣಿಯರನ್ನು ಆಲ್ಟ್ರಾಸೌಂಡ್ ಸ್ಕ್ಯಾನ್ ಮಾಡಿದ ರೀತಿ ಚಿತ್ರಣ ಕಂಡುಬರುತ್ತದೆ ಎನ್ನುತ್ತಾರೆ ತಜ್ಞರು.
ತನಿಖಾಧಿಕಾರಿಗಳು ಈ ಸಾಧನವನ್ನು ಒಂದು ಪ್ರದೇಶದ ಮೇಲೆ ಕ್ರಮಬದ್ಧವಾಗಿ ಚಲಿಸುವ ಮೂಲಕ ಭೂಗರ್ಭದ 2ಡಿ ಅಥವಾ 3ಡಿ ನಕ್ಷೆಯನ್ನೇ ಸಿದ್ಧಪಡಿಸಬಹುದಂತೆ. ಇಲ್ಲಿ ಜಿಪಿಆರ್ ನೇರವಾಗಿ ಶವ, ಅಸ್ಥಿಪಂಜರ ಗುರುತಿಸುವುದಕ್ಕಿಂತ ಸಮಾಧಿ ಮಾಡಿದ ಜಾಗದಲ್ಲಿ ಆಗಿರುವ ಭೂವೈಜ್ಞಾನಿಕ ಬದಲಾವಣೆಗಳನ್ನು ಗುರುತಿಸುತ್ತದೆ. ಸಮಾಧಿ ಮಾಡಲು ತೋಡಿದ ಗುಂಡಿಯನ್ನು ಮತ್ತೆ ಮುಚ್ಚಿದಾಗ, ಆ ಜಾಗದ ಮಣ್ಣಿನ ಸಾಂದ್ರತೆ ಮತ್ತು ರಚನೆ ಅಕ್ಕಪಕ್ಕದ ಪ್ರದೇಶಕ್ಕಿಂತ ಭಿನ್ನವಾಗಿರುತ್ತದೆ. ಈ ವ್ಯತ್ಯಾಸವನ್ನು ಜಿಪಿಆರ್ ಸುಲಭವಾಗಿ ಗುರುತಿಸುತ್ತದೆ. ಮಾನವ ದೇಹದ ಮೂಳೆಗಳು, ಪೆಟ್ಟಿಗೆಯನ್ನು ಇರಿಸಲಾಗಿದ್ದರೆ ಭಿನ್ನವಾದ ಸಾಂದ್ರತೆಯನ್ನು ತೋರಿಸಲಿದ್ದು ಭೂಮಿಯೊಳಗಿನ ಅಸಹಜತೆಯನ್ನು ಆಧರಿಸಿ ತನಿಖಾಧಿಕಾರಿಗಳು ಅಗೆಯುವ ಸ್ಥಳವನ್ನು ನಿರ್ಧರಿಸಬಹುದು. ಮೃತರ ಬಟ್ಟೆಯಲ್ಲಿದ್ದ ಗುಂಡಿ, ಬೆಲ್ಟ್ ಅಥವಾ ಇನ್ಯಾವುದೇ ಲೋಹದ ವಸ್ತುಗಳು ಪ್ರಬಲ ಸಂಕೇತವನ್ನು ನೀಡಲಿದ್ದು ಅವೂ ಸ್ಥಳ ಗುರುತಿಗೆ ಸಹಾಯವಾಗಲಿದೆ.
ಸಾಂಪ್ರದಾಯಿಕವಾಗಿ ಶಂಕಿತ ಪ್ರದೇಶವನ್ನು ಅಗೆಯುವುದೊಂದೇ ದಾರಿಯಾಗಿತ್ತು. ಇದರಿಂದ ಅಪಾರ ಸಮಯ ಮತ್ತು ಶ್ರಮ ವ್ಯಯವಾಗುತ್ತಿತ್ತು. ಇದರಿಂದ ಸಾಕ್ಷ್ಯಗಳು ನಾಶವಾಗುವ ಅಪಾಯವೂ ಇರುತ್ತದೆ. ಆದರೆ ಜಿಪಿಆರ್ ತಂತ್ರಜ್ಞಾನವು ಶೋಧನಾ ಸ್ಥಳವನ್ನು ನಿಖರವಾಗಿ ಗುರುತಿಸುತ್ತದೆ ಎಂದು ನಿವೃತ್ತ ಭೂವಿಜ್ಞಾನಿ ಎಚ್.ಎಸ್.ಎಂ. ಪ್ರಕಾಶ್ ಹೇಳುತ್ತಾರೆ. ಆದಾಗ್ಯೂ ಈ ತಂತ್ರಜ್ಞಾನಕ್ಕೆ ಮಿತಿಗಳಿದ್ದು ಜೇಡಿ ಮಣ್ಣು ಅಥವಾ ಹೆಚ್ಚು ತೇವಾಂಶವಿರುವ ಮಣ್ಣಿನಲ್ಲಿ ಇದರ ನಿಖರತೆ ಇರುವುದಿಲ್ಲ ಎನ್ನುತ್ತಾರೆ. ಧರ್ಮಸ್ಥಳದ ಸ್ನಾನಘಟ್ಟದ ಬಳಿ ಗುರುತಿಸಿರುವ 13ನೇ ಪಾಯಿಂಟ್ ಮೇಲ್ಭಾಗದಿಂದ ನೋಡಿದರೆ ಹೆಚ್ಚು ತೇವಾಂಶ ಇದ್ದಂತಿಲ್ಲ. ಮೇಲ್ಮೈಯಲ್ಲಿ ಹುಲ್ಲು ತುಂಬಿಕೊಂಡಿದ್ದು, ಅವನ್ನು ತೆರವು ಮಾಡಿ ಸ್ಕ್ಯಾನ್ ಮಾಡುವ ಸಾಧ್ಯತೆಯಿದೆ. ಇದರ ಮಾಹಿತಿ ಆಧರಿಸಿ ಇನ್ನೆರಡು ದಿನದಲ್ಲಿ ನಿರ್ದಿಷ್ಟ ಜಾಗವನ್ನು ಅಗೆಯುವ ಸಾಧ್ಯತೆಯಿದೆ. ದೂರುದಾರನ ಪರ ವಕೀಲರು ಕೂಡ ಜಿಪಿಆರ್ ತಂತ್ರಜ್ಞಾನ ಬಳಕೆಗೆ ಒತ್ತಾಯಿಸಿದ್ದರು.
In the ongoing Dharmasthala human remains investigation, the Special Investigation Team (SIT) has deployed advanced Ground Penetrating Radar (GPR) technology to search for possible buried evidence without disturbing the site through excavation.
11-08-25 10:26 pm
Bangalore Correspondent
KN Rajanna resigns: ಸಹಕಾರ ಸಚಿವ ಕೆ.ಎನ್ ರಾಜಣ್ಣ...
11-08-25 03:29 pm
Forced Marriage, Chitradurga: ನನಗಿನ್ನೂ ಹದಿನಾರ...
11-08-25 11:18 am
ಮುಸ್ಲಿಂ ಯುವತಿಯರನ್ನ ಮದುವೆಯಾದ್ರೆ 5 ಲಕ್ಷ ರೂ. ಕೊಡ...
10-08-25 09:12 pm
ಗುಜರಾತ್, ಮಹಾರಾಷ್ಟ್ರದಂತೆ ನಮಗೂ ಆದ್ಯತೆ ಕೊಡಿ, ಮೆಟ...
10-08-25 06:27 pm
11-08-25 08:55 pm
HK News Desk
Rabies Death, Supreme Court: ರಾಜಧಾನಿಯಲ್ಲಿ ರೇಬ...
11-08-25 02:48 pm
ಭಾರತದ ವಿರುದ್ಧ ಟ್ರಂಪ್ ಸುಂಕಾಸ್ತ್ರಕ್ಕೆ ಅಮೆರಿಕದ ತ...
09-08-25 11:09 pm
ಯಾರ ಮುಂದೆಯೂ ಭಾರತ ತಲೆ ಬಾಗದು ; ಸಾವಿರ ಬಾರಿ ಯತ್ನಿ...
09-08-25 07:38 pm
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
11-08-25 07:39 pm
Mangalore Correspondent
Padmalatha Murder Case, Dharmasthala, SIT: 19...
11-08-25 03:33 pm
Ground Penetrating Radar, Dharmasthala: ಧರ್ಮಸ...
11-08-25 11:49 am
Kudla Rampage YouTuber, Ajay Anchan Case: ಬೈಕ...
11-08-25 11:38 am
ಹೊಸ್ತಿಲು ಬರೆದು, ಪಾತ್ರೆ ತೊಳೆದು, ದೇವರ ಸ್ತೋತ್ರ ಹ...
10-08-25 04:32 pm
11-08-25 12:37 pm
Mangalore Correspondent
ಸ್ನೇಹಿತನಿಗೆ ಬೆತ್ತಲೆ ವೀಡಿಯೋ ಶೇರ್ ಮಾಡಿದ್ಲು ಯುವತ...
08-08-25 10:07 pm
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm