Dharmasthala, BJP MLA S.R. Vishwanath: ಸೌಜನ್ಯ ಪ್ರಕರಣದ ಬಗ್ಗೆ ತನಿಖೆ ಮಾಡಲಿ, ಅದಕ್ಕೆ ನಮ್ಮ ಆಕ್ಷೇಪ ಇಲ್ಲ ; ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲ್ಸ ಬೇಡ, ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ಆಕ್ರೋಶ 

16-08-25 09:19 pm       Mangalore Correspondent   ಕರಾವಳಿ

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಯಲಹಂಕದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆದಿದೆ.

ಮಂಗಳೂರು, ಆ 16 : ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಯಲಹಂಕದ ಬಿಜೆಪಿ ಶಾಸಕ ಎಸ್‌ಆರ್ ವಿಶ್ವನಾಥ್ ನೇತೃತ್ವದಲ್ಲಿ ಧರ್ಮಸ್ಥಳ ಚಲೋ ನಡೆದಿದೆ.

400ಕ್ಕೂ ಹೆಚ್ಚು ಕಾರುಗಳಲ್ಲಿ ಬಂದ ವಿಶ್ವನಾಥ್‌ ಅವರಿಗೆ ಧರ್ಮಸ್ಥಳದ ದ್ವಾರಬಾಗಿಲಿನಲ್ಲಿ ಬಿಜೆಪಿ ಕಾರ್ಯಕರ್ತರು ಪುಷ್ಪವೃಷ್ಟಿ ಮಾಡುವ ಮೂಲಕ ಸ್ವಾಗತಿಸಿದರು. ಸುಳ್ಳಿಗೆ ಸೋಲು,ಧರ್ಮಕ್ಕೆ ಜಯ ಘೋಷಣೆ ಕೂಗುತ್ತಾ ಬಿಜೆಪಿಗರು ಘೋಷಣೆ ಮೊಳಗಿಸಿದರು.

ವಿಶ್ವನಾಥ್ ಮಾತನಾಡಿ, ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಅವರಿಗೆ ಶಿಕ್ಷೆಯನ್ನು ಮಂಜುನಾಥ ಕೊಡಲಿ ಎಂದು ಪ್ರಾರ್ಥಿಸಿದರು.

ಸೌಜನ್ಯ ಪ್ರಕರಣದ ಬಗ್ಗೆ ತನಿಖೆ ಮಾಡಲಿ. ಅದಕ್ಕೆ ನಮ್ಮ ಅಡ್ಡಿ ಇಲ್ಲ, ಸ್ವಾಗತ ಮಾಡಿದ್ದೇವೆ, ಧರ್ಮಸ್ಥಳದ ಬುಡಕ್ಕೆ ಕೈ ಹಾಕುವ ಕೆಲಸ ಮಾಡುತ್ತಿದ್ದಾರೆ, ಮಂಜುನಾಥ ಸ್ವಾಮಿ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಮಂಜುನಾಥಸ್ವಾಮಿ ಶಕ್ತಿವಂತ ದೇವರು, ಯಾರು ಇಂತಹ ಅಪಪ್ರಚಾರ ಮಾಡಿದ್ದಾರೆ ಅವರಿಗೆ ಶಿಕ್ಷೆಯನ್ನು ಕೊಡಲಿ, ಸರ್ಕಾರ ಕೊಡುವ ಶಿಕ್ಷೆ ಬೇರೆ, ದೇವರು ಕೊಡುವ ಶಿಕ್ಷೆ ಬೇರೆ, ರಾಜ್ಯ, ದೇಶದಲ್ಲಿರುವ ಮಂಜುನಾಥಸ್ವಾಮಿ ಭಕ್ತರಿಗೆ ಘಾಸಿ ಆಗುವ ಕೆಲಸವನ್ನು ವಿಚಾರವಾದಿಗಳು, ಧರ್ಮ ವಿರೋಧಿಗಳು ಮಾಡಿಕೊಂಡು ಬರುತ್ತಿದ್ದಾರೆ ಎಂದು ದೂರಿದರು.

Condemning the alleged defamation campaign against Dharmasthala, BJP MLA from Yelahanka, S.R. Vishwanath, led a massive "Dharmasthala Chalo" rally on Friday. The rally saw participation from hundreds of BJP workers, with over 400 vehicles arriving at the temple town’s entrance.