Mangalore, Esyasoft, AI, Bajpe: ಬಜ್ಪೆ ; ಎಸ್ಯಾಸಾಫ್ಟ್ ಟೆಕ್ನಾಲಜೀಸ್ ನಿಂದ ಅತ್ಯಾಧುನಿಕ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರ ಸ್ಥಾಪನೆ, ಎಐ ತಂತ್ರಜ್ಞಾನ, ನೂರಾರು ಜನರಿಗೆ ಉದ್ಯೋಗ 

25-08-25 10:44 pm       Mangalore Correspondent   ಕರಾವಳಿ

ಇಂಧನ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಯಾಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ತನ್ನ ಅತ್ಯಾಧುನಿಕ ಕಲಿಕೆ ಮತ್ತು ಸಾಮರ್ಥ್ಯ ಅಭಿವೃದ್ಧಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಿದೆ. ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಎಸ್ಯಾಸಾಫ್ಟ್ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರವನ್ನು ಬಜ್ಪೆಯಲ್ಲಿ ಉದ್ಘಾಟಿಸಿದರು. 

ಮಂಗಳೂರು, ಆ.25 : ಇಂಧನ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರುವ ಎಸ್ಯಾಸಾಫ್ಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ತನ್ನ ಅತ್ಯಾಧುನಿಕ ಕಲಿಕೆ ಮತ್ತು ಸಾಮರ್ಥ್ಯ ಅಭಿವೃದ್ಧಿ ಕೇಂದ್ರವನ್ನು ಮಂಗಳೂರಿನಲ್ಲಿ ಆರಂಭಿಸಿದೆ. ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್ ಎಸ್ಯಾಸಾಫ್ಟ್ ಕಲಿಕೆ ಮತ್ತು ಅಭಿವೃದ್ಧಿ ಸಾಮರ್ಥ್ಯ ಕೇಂದ್ರವನ್ನು ಬಜ್ಪೆಯಲ್ಲಿ ಉದ್ಘಾಟಿಸಿದರು. 

ಕಂಪನಿಯ ಸ್ಥಾಪಕ ಮತ್ತು ಸಿಇಒ ಬಿಪಿನ್ ಚಂದ್ರ ಅಧ್ಯಕ್ಷತೆ ವಹಿಸಿದ್ದರು. ಈ ಸೌಲಭ್ಯವು ಎಐ, ಐಒಟಿ, ಸ್ಮಾರ್ಟ್ ಗ್ರಿಡ್‍ಗಳು, ಇವಿ, ಹವಾಮಾನ ಮೂಲಸೌಕರ್ಯ ಮತ್ತು ಇಂಧನ ನಿರ್ವಹಣಾ ವ್ಯವಸ್ಥೆಗಳನ್ನು ಸಂಯೋಜಿಸುವುದರೊಂದಿಗೆ ನವೀಕರಿಸಬಹುದಾದ, ಉಪಯುಕ್ತ ಡಿಜಿಟಲೀಕರಣ ಮತ್ತು ಇಂಧನ ಮೂಲಸೌಕರ್ಯದಲ್ಲಿ ಅಸ್ತಿತ್ವದಲ್ಲಿರುವ ಜಾಗತಿಕ ಯೋಜನೆಗಳಿಗೆ ಪ್ರಾಯೋಗಿಕವಾಗಿ ಒತ್ತು ನೀಡಿದೆ ಎಂದು ಬಿಪಿನ್‍ಚಂದ್ರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ಭಾರತದ ಇಂಧನ ಮತ್ತು ಬಳಕೆ ವಲಯದಲ್ಲಿ ಭವಿಷ್ಯಕ್ಕೆ ಸಿದ್ಧವಾಗಿರುವ ಪ್ರತಿಭೆಗಳನ್ನು ಹೊರತರುವುದು ಸೇರಿದಂತೆ ಜಾಗತಿಕ ಶ್ರೇಷ್ಠ ಕೇಂದ್ರವಾಗಿ ಕಾರ್ಯ ನಿರ್ವಹಿಸುವುದು ಕೇಂದ್ರದ ಮುಖ್ಯ ಉದ್ದೇಶವಾಗಿದೆ. 50 ಸಾವಿರ ಚದರ ಅಡಿ ಪ್ರದೇಶದಲ್ಲಿ ಅಭಿವೃದ್ಧಿಪಡಿಸಿರುವ ಈ ಕೇಂದ್ರವು ಪ್ರಾಯೋಗಿಕ ಕಲಿಕೆ, ಉದ್ಯಮ ಸಹಯೋಗ ಮತ್ತು ವೃತ್ತಿಪರ ಬೆಳವಣಿಗೆಗಾಗಿ ಉತ್ತಮ ಪರಿಸರ ಹೊಂದಿದೆ. ಅತ್ಯಾಧುನಿಕ ತಂತ್ರಜ್ಞಾನಗಳು ಯುವ ವೃತ್ತಿಪರರಿಗೆ ತರಬೇತಿ ಮತ್ತು ಉದ್ಯೋಗಾವಕಾಶಗಳನ್ನು ಒದಗಿಸಲಿದ್ದು, ವಿಶ್ವದರ್ಜೆಯ ಕೇಂದ್ರವು ಭಾರತದ ಶುದ್ಧ ಇಂಧನ ಯೋಜನೆಗಳಿಗೆ ಶಕ್ತಿ ತುಂಬಲು ಮತ್ತು ರಾಷ್ಟ್ರೀಯ ವಿದ್ಯುತ್ ಚಲನಶೀಲತೆ ಮಿಷನ್ ಮತ್ತು ರಾಷ್ಟ್ರೀಯ ಸೌರ ಮಿಷನ್ ಅಡಿಯಲ್ಲಿ ಒಳಗೊಂಡಿರುವ ದೇಶದ ನವೀಕರಿಸಬಹುದಾದ ಇಂಧನ ಮತ್ತು ಇಂಗಾಲ ಶೂನ್ಯಗೊಳಿಸುವ ಗುರಿಗಳನ್ನು ಈಡೇರಿಸುವಲ್ಲಿ ಮಹತ್ವದ ಹೆಜ್ಜೆಯಾಗಲಿದೆ ಎಂದರು.

ಕೇಂದ್ರವು ವಿಶೇಷ ತರಬೇತಿ ತರಗತಿ ಕೊಠಡಿಗಳು, ಸಂಪೂರ್ಣವಾಗಿ ಸುಸಜ್ಜಿತ ಪ್ರಯೋಗಾಲಯಗಳು ಮತ್ತು ಕಾರ್ಯಾಗಾರಗಳನ್ನು ಒಳಗೊಂಡಿರುತ್ತದೆ. ನಿಜವಾದ ಸಮಗ್ರ ಕಲಿಕಾ ವಾತಾವರಣವನ್ನು ಸೃಷ್ಟಿಸಲು, ಕೇಂದ್ರವು ಆಧುನಿಕ ವಸತಿ ಸೌಲಭ್ಯ ಸೇರಿದಂತೆ ತಾಂತ್ರಿಕ ತರಬೇತಿಯನ್ನು ಮೀರಿದ ಸಮಗ್ರ ಸೌಲಭ್ಯಗಳನ್ನು ಹೊಂದಿದೆ.

"2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಸಾಮರ್ಥ್ಯವನ್ನು ಸಾಧಿಸುವ ಭಾರತದ ಗುರಿಗೆ ಕೌಶಲಪೂರ್ಣ ನಾಯಕರ ಅಗತ್ಯವಿದೆ. ನಮ್ಮ ಸಾಮರ್ಥ್ಯ ಕೇಂದ್ರವು ನಾಳಿನ ತಂತ್ರಜ್ಞಾನಗಳನ್ನು ತಯಾರು ಮಾಡಲು, ಕಾರ್ಯಗತಗೊಳಿಸಲು ಮತ್ತು ನಿರ್ವಹಿಸಲು ಪ್ರತಿ ವರ್ಷ ನೂರಾರು ವೃತ್ತಿಪರರ ಪ್ರತಿಭಾ ವಲಯವನ್ನು ಅಭಿವೃದ್ಧಿ ಪಡಿಸಲಿದೆ ಎಂದು ಹೇಳಿದರು.

ಈ ಕೇಂದ್ರವು ಒಂದೇ ಬಾರಿಗೆ ನೂರಾರು ವೃತ್ತಿಪರರಿಗೆ ತರಬೇತಿ ನೀಡಬಹುದು ಮತ್ತು ತರಬೇತಿ 3-4 ತಿಂಗಳ ಅವಧಿಯದ್ದಾಗಿರುತ್ತದೆ ಮತ್ತು ಗುಂಪಿಗೆ ಕೃತಕ ಬುದ್ಧಿಮತ್ತೆ ಜಾಗತಿಕ ವಿತರಣಾ ಕೇಂದ್ರವಾಗಿಯೂ ಕಾರ್ಯ ನಿರ್ವಹಿಸುತ್ತದೆ. ಈ ಕೇಂದ್ರವು ಮೂಲಭೂತ ತಂತ್ರಜ್ಞಾನ ತರಬೇತಿ, ಡೊಮೇನ್ ಮತ್ತು ಉತ್ಪನ್ನ ತರಬೇತಿ, ಕಂಪನಿಯ ದೃಷ್ಟಿಕೋನ ಸಂಸ್ಕøತಿ ಮತ್ತು ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಾದ್ಯಂತ ನಿರ್ಣಾಯಕ ಇಂಧನ ಪರಿವರ್ತನೆ ಮೂಲಸೌಕರ್ಯದಲ್ಲಿ ಪರಿಣಾಮಕಾರಿ ಪಾತ್ರಗಳಿಗೆ ಅವರನ್ನು ಸಿದ್ಧಪಡಿಸುವ ಅಗತ್ಯ ಮೃದು ಕೌಶಲ್ಯಗಳನ್ನು ಒಳಗೊಂಡಿದೆ.

ಐಐಟಿ ಬಾಂಬೆ, ದೆಹಲಿ, ಗುವಾಹಟಿ, ಹೈದರಾಬಾದ್, ಇಂದೋರ್, ಕಾನ್ಪುರ, ರೂರ್ಕಿ, ಮತ್ತು ಎನ್‍ಐಟಿಗಳಾದ ಕ್ಯಾಲಿಕಟ್, ದುರ್ಗಾಪುರ, ಸುರತ್ಕಲ್, ಜಮ್‍ಶೆಡ್‍ಪುರ  ಸೇರಿದಂತೆ ಟೈಯರ್ 1 ಸಂಸ್ಥೆಗಳಿಂದ ಕ್ಯಾಂಪಸ್ ನಿಯೋಜನೆಗಳ ಮೂಲಕ ತರಬೇತಿ ಪಡೆದವರನ್ನು  ಆಯ್ಕೆ ಮಾಡಲಾಗುತ್ತದೆ ಎಂದು ತಿಳಿಸಿದರು. ಕಂಪನಿಯ ಜಾಗತಿಕ ಎಚ್‍ಆರ್ ಮುಖ್ಯಸ್ಥೆ ಮರಿಸಾ ತಲಮೋಂತಿ ಉಪಸ್ಥಿತರಿದ್ದರು.

Esyasoft Technologies Pvt. Ltd., a leading company in energy transition technologies, has launched its state-of-the-art Learning and Capability Development Center in Bajpe, Mangaluru. The new center was inaugurated by Moodbidri MLA Umanath Kotian. Bipin Chandra, Founder and CEO of Esyasoft Technologies, presided over the event. Speaking at the press conference, he explained that the center will provide hands-on training in cutting-edge technologies such as Artificial Intelligence (AI), Internet of Things (IoT), smart grids, electric vehicles (EVs), climate infrastructure, and energy management systems.