Mangalore Rain, School College Holiday: ಭಾರೀ ಮಳೆ ಹಿನ್ನೆಲೆ ; ದಕ್ಷಿಣ ಕನ್ನಡ ಜಿಲ್ಲೆಗೆ ಎರಡನೇ ದಿನವೂ ರಜೆ ಘೋಷಣೆ, ಗಣೇಶೋತ್ಸವ ಸಂಭ್ರಮಕ್ಕೆ ಮಳೆ ಅಡ್ಡಿ 

28-08-25 10:07 pm       Mangalore Correspondent   ಕರಾವಳಿ

ನಿರಂತರ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ದಿನವೂ ಶಾಲೆ, ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಜಿಲ್ಲೆಯಾದ್ಯಂತ ಆ.29ರ ಶುಕ್ರವಾರವೂ ರಜೆ ಘೋಷಿಸಿ ಆದೇಶ ಮಾಡಿದ್ದಾರೆ. 

ಮಂಗಳೂರು, ಆ.28 : ನಿರಂತರ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡನೇ ದಿನವೂ ಶಾಲೆ, ಪಿಯು ಕಾಲೇಜುಗಳಿಗೆ ರಜೆ ನೀಡಲಾಗಿದೆ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಜಿಲ್ಲೆಯಾದ್ಯಂತ ಆ.29ರ ಶುಕ್ರವಾರವೂ ರಜೆ ಘೋಷಿಸಿ ಆದೇಶ ಮಾಡಿದ್ದಾರೆ. 

ಗುರುವಾರ ಭಾರೀ ಮಳೆ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಹುತೇಕ ಎಲ್ಲ ಕಡೆ ರಜೆ ನೀಡಲಾಗಿತ್ತು. ಬುಧವಾರ ರಾತ್ರಿಯಿಂದೀಚೆಗೆ ಭಾರೀ ಮಳೆಯಾಗುತ್ತಿದ್ದು ಗುರುವಾರ ಬೆಳ್ಳಂಬೆಳಗ್ಗೆ ಆಯಾ ತಾಲೂಕುಗಳಲ್ಲಿ ತಹಸೀಲ್ದಾರ್ ರಜೆ ನೀಡಿದ್ದರು. ಗುರುವಾರ ಇಡೀ ದಿನ ಬಹುತೇಕ ಮಳೆಯಾಗಿದ್ದು ಜನರು ಮತ್ತೆ ಮಳೆಗಾಲದ ಅನುಭವ ಪಡೆದಿದ್ದಾರೆ. 

ಆಗಸ್ಟ್ ಕೊನೆಯಲ್ಲಿ ಸಾಮಾನ್ಯವಾಗಿ ಮಳೆ ಕುಂಠಿತವಾಗುತ್ತದೆ. ಈ ಬಾರಿ ಮಾತ್ರ ಮತ್ತೆ ಮಳೆಯ ವಿಕೋಪ ಹೆಚ್ಚುವಂತೆ ಕಂಡುಬರುತ್ತಿದೆ. ಕರಾವಳಿಯಲ್ಲಿ ಗಣೇಶೋತ್ಸವದ ಸಡಗರ ಇದ್ದು ಮಳೆಯಿಂದಾಗಿ ಜನರ ಸಂಭ್ರಮಕ್ಕೆ ಸ್ವಲ್ಪ ಅಡ್ಡಿಯಾಗಿದೆ.

ಕರಾವಳಿ ಜಿಲ್ಲೆಗಳಿಗೆ ಆ.30ರ ವರೆಗೂ ಹವಾಮಾನ ಇಲಾಖೆ ರೆಡ್ ಅಲರ್ಟ್ ಸೂಚನೆ ಇದೆ. ಹೀಗಾಗಿ ಶಾಲೆಗಳ ರಜೆಯನ್ನು ಎರಡನೇ ದಿನವೂ ಮುಂದುವರಿಸಲಾಗಿದೆ.

Owing to continuous heavy rainfall, schools and pre-university colleges in Dakshina Kannada district will remain closed for a second consecutive day on Friday, August 29. The order was issued by Deputy Commissioner Darshan H.V.