ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ ಮಲವಂತಿಗೆ ಗ್ರಾಮದ ಯುವಕ ತಮಿಳುನಾಡಿನಲ್ಲಿ ಬಂಧನ 

19-09-25 04:58 pm       Mangalore Correspondent   ಕರಾವಳಿ

ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ Karavali_tigers ಎಂಬ Instagram ಪೇಜ್ ಅಡ್ಮಿನ್ ಮಹಮ್ಮದ್ ಕೈಫ್(22) ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಿಲ್ಲೂರು ಮನೆ ನಿವಾಸಿ ಮಹಮ್ಮದ್ ಕೈಫ್(22) ಬಂಧಿತ ಯುವಕ. 

ಮಂಗಳೂರು, ಸೆ.19 : ಸಾಮಾಜಿಕ ಜಾಲತಾಣ ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ ಆರೋಪದಲ್ಲಿ Karavali_tigers ಎಂಬ Instagram ಪೇಜ್ ಅಡ್ಮಿನ್ ಮಹಮ್ಮದ್ ಕೈಫ್(22) ಎಂಬಾತನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಿಲ್ಲೂರು ಮನೆ ನಿವಾಸಿ ಮಹಮ್ಮದ್ ಕೈಫ್(22) ಬಂಧಿತ ಯುವಕ. 

Karavali_tigers ಎಂಬ ಹೆಸರಿನ ಪೇಜ್ ಮುಖಾಂತರ ಈತ ಕಳೆದ ಜೂನ್, ಜುಲೈ ತಿಂಗಳಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡಿದ್ದ. ಈ ಬಗ್ಗೆ ಮಂಗಳೂರು ನಗರ ಸಿ.ಇ.ಎನ್ ಅಪರಾಧ ಠಾಣೆಯಲ್ಲಿ ಜುಲೈ 19ರಂದು ಪ್ರಕರಣ ದಾಖಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳ ಮುಖಾಂತರ ತಪಾಸಣೆ ನಡೆಸಿದಾಗ, ಆರೋಪಿ ತಮಿಳುನಾಡಿನಲ್ಲಿರುವ ಬಗ್ಗೆ ಮಾಹಿತಿ ತಿಳಿದು ಮಂಗಳೂರು ಪೊಲೀಸರು ಅಲ್ಲಿಗೆ ತೆರಳಿ ಬಂಧಿಸಿದ್ದಾರೆ. 

ಬಂಧಿತ ಆರೋಪಿಯನ್ನು ಮಂಗಳೂರಿನಲ್ಲಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ. Karavali_tigers ಎಂಬ ಪೇಜ್ ವಿರುದ್ಧ ಬಜ್ಪೆ ಪೊಲೀಸ್ ಠಾಣೆಯಲ್ಲೂ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

A 22-year-old youth from Karnataka’s Dakshina Kannada district has been arrested in Tamil Nadu for allegedly posting provocative content on social media. The accused, identified as Mohammed Kaif, a resident of Killuru house in Malavantiye village, Belthangady taluk, was taken into custody by the Mangaluru City Cyber Economic and Narcotics (CEN) Crime Police.