Priyank Kharge, Dharmasthala SIT: ಅಕ್ರಮ ಎಷ್ಟೇ ದೊಡ್ಡ ವ್ಯಕ್ತಿ ಮಾಡಿದ್ರೂ ಅಕ್ರಮವೇ, ಸರ್ಕಾರ ಕ್ರಮ ಕೈಗೊಳ್ಳಲಿದೆ ; ಧರ್ಮಸ್ಥಳ ಭೂಕಬಳಿಕೆ ಆರೋಪಕ್ಕೆ ಸಚಿವ ಪ್ರಿಯಾಂಕ ಖರ್ಗೆ ಪ್ರತಿಕ್ರಿಯೆ 

24-09-25 07:38 pm       Mangalore Correspondent   ಕರಾವಳಿ

ಧರ್ಮಸ್ಥಳ ಭೂಕಬಳಿಕೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಅಕ್ರಮ ಯಾರೇ ಮಾಡಿದರೂ ಸರಕಾರ ಕ್ರಮ ಕೈಗೊಳ್ಳಲಿದೆ.

ಮಂಗಳೂರು, ಸೆ.24: ಧರ್ಮಸ್ಥಳ ಭೂಕಬಳಿಕೆ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ, ಅಕ್ರಮ ಯಾರೇ ಮಾಡಿದರೂ ಸರಕಾರ ಕ್ರಮ ಕೈಗೊಳ್ಳಲಿದೆ. ಎಷ್ಟೇ ದೊಡ್ಡ ವ್ಯಕ್ತಿ ಮಾಡಿದರೂ ಅಕ್ರಮ ಅಕ್ರಮವೇ ಎಂದು ಹೇಳಿದ್ದಾರೆ. 

ಮಹೇಶ್ ಶೆಟ್ಟಿ ತಿಮರೋಡಿಯವರ ಗಡಿಪಾರು ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ, ಸರಕಾರದ ಮನಸ್ಸಿಗೆ ಬಂದಂತೆ ಯಾರನ್ನೇ ಆದರೂ ಗಡಿಪಾರು ಮಾಡಲಾಗುವುದಿಲ್ಲ. ಅದಕ್ಕೊಂದು ನಿಯಮವಿದೆ. ಕೋರ್ಟ್ ಇದನ್ನು ನಿರ್ಧರಿಸುತ್ತದೆ ಎಂದರು.

Special Investigation Team conducts raids in Uttarakhand scholarship scam

ಧರ್ಮಸ್ಥಳ ಪ್ರಕರಣದಲ್ಲಿ ದೂರುದಾರನ 164 ಹೇಳಿಕೆಯಂತೆ ತನಿಖೆಗೆ ಎಸ್ಐಟಿ ಮಾಡಿರುವುದು ನಮ್ಮ ಸರಕಾರ. ಹಿಂದಿನ ಸರಕಾರ ಇತ್ತಲ್ಲಾ ಅವರಿಗೆ ಮಾಡಬಹುದಿತ್ತಲ್ಲಾ. ನಾವು ಯಾರ ಪರವೂ ಇಲ್ಲ. ಸರಕಾರ ಸತ್ಯದ ಪರವಾಗಿದೆ. ಬಿಜೆಪಿಯವರು ಧರ್ಮಸ್ಥಳ ಚಲೋ ಯಾರಿಗೋಸ್ಕರ ಮಾಡಿದ್ದು, ಧರ್ಮಾಧಿಕಾರಿಯವರ ಮರ್ಯಾದೆ ಉಳಿಸಲಿಕ್ಕಾಗಿ ಅಲ್ವಾ.. ವೇದಿಕೆಯಲ್ಲಿ ಧರ್ಮಾಧಿಕಾರಿಗಳ ಪರವಾಗಿದ್ದವರು, ವೇದಿಕೆ ಇಳಿದ ತಕ್ಷಣ ಸೌಜನ್ಯಾ ಮನೆಗೆ ಹೋಗಿದ್ದಾರಲ್ಲ. ಹಾಗಾದರೆ ಬಿಜೆಪಿ ಯಾರ ಪರವಾಗಿದೆ. ಅಲ್ಲಿ ಸೌಜನ್ಯಾ ಸಂಬಂಧಿಕರು ಯಾರ ಹೆಸರು ಉಲ್ಲೇಖಿಸಿದ್ದರು. ಅದೇ ಬಿಜೆಪಿ ನಾಯಕರು ಸೌಜನ್ಯಾ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ಗೆ ಹೋಗುವಾಗ ಆಕೆಯ ಮನೆಯವರ ಬೆನ್ನೆಲುಬಾಗಿ ನಿಲ್ಲುತ್ತೇವೆ ಎನ್ನುತ್ತಾರೆ. ವೇದಿಕೆ ಇಳಿದಾಗ ವಿರುದ್ಧ, ವೇದಿಕೆ ಹತ್ತಿದಾಗ ಪರ. ಏನು ನಾಟಕವಾಡುತ್ತಿದ್ದಾರೆ ಬಿಜೆಪಿಗರು. ಅವರು ಎರಡೆರಡು ದೋಣಿಯಲ್ಲಿ ಕಾಲಿಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಕರಣವನ್ನು ಎಸ್ಐಟಿಗೆ ಒಪ್ಪಿಸಿದ ನಮ್ಮ ಮೇಲೆಯೇ ಅನುಮಾನ ಪಟ್ಟಲ್ಲಿ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

ಧರ್ಮಸ್ಥಳ ಶವ ಹೂತಿಟ್ಟ ಪ್ರಕರಣ: ಎಸ್ಐಟಿಗೆ ಶರಣಾದ ಆರೋಪಿಯಿಂದ ಗಿರೀಶ್ ಮಟ್ಟಣ್ಣ ವಿರುದ್ಧ  ಸ್ಫೋಟಕ ಮಾಹಿತಿ - Rajya Dharma News Portal

ತಿಮರೋಡಿ, ಗಿರೀಶ್ ಮಟ್ಟಣ್ಣನವರ್ ಯಾರ ಗರಡಿಯಲ್ಲಿ ಪಳಗಿದವರು‌. ಅವರು ಕಾಂಗ್ರೆಸ್‌ನವರಲ್ಲ. ಬಿಜೆಪಿಯವರು, ಸಂಘ ಪರಿವಾರದವರು. ಗಿರೀಶ್ ಮಟ್ಟಣ್ಣನವರ್ ಬಿಜೆಪಿ ಅಧಿಕೃತ ಚುನಾವಣಾ ಅಭ್ಯರ್ಥಿಯಾಗಿ ಬಿ ಫಾರ್ಮ್ ತೆಗೆದುಕೊಂಡವರು. ಅವರು ವಿಧಾನಸೌಧಕ್ಕೆ ಬಾಂಬ್ ಇಟ್ಟ ತಕ್ಷಣ ಭಗತ್ ಸಿಂಗ್‌ಗೆ ಹೋಲಿಕೆ ಮಾಡಿ ಯುವಮೋರ್ಚಾ ಮಾಡಿದವರು ಬಿಜೆಪಿಯವರೇ‌. ಆದ್ದರಿಂದ ಇದು ಆರ್‌ಎಸ್ಎಸ್ V/S ಆರ್‌ಎಸ್ಎಸ್. ದಯವಿಟ್ಟು ಆರ್‌ಎಸ್ಎಸ್ ಜಗಳವನ್ನು ಸರಕಾರಕ್ಕೆ ತಂದು ಕಟ್ಟಬೇಡಿ ಎಂದು ಹೇಳಿದರು.

ಎಸ್ಐಟಿ ತನಿಖೆ ನಡೆಯುತ್ತಿದೆ. ಅದರಲ್ಲಿ ಏನಾಗಿದೆ ಎಂದು ಇನ್ನೂ ಗೊತ್ತಿಲ್ಲ. ಮಾಹಿತಿ ಇದ್ದರೆ ಹೇಳಲಿ. ನಾನು ಹೋಗಿ ತಿಳಿಸುತ್ತೇನೆ. ಬಿಜೆಪಿಯವರಿಗೆ ಗೊತ್ತಿದ್ದರೆ ಸಂತೋಷ. ಷಡ್ಯಂತರ ಅಂದರೆ ಏನು‌ ಹೇಳಲಿ. ಏನಾದರೂ ಕಾರಣ ಕೊಡಬೇಕಲ್ಲ. ಅವರು ಯಾರ ಪರವಾಗಿದ್ದಾರೆ. ಸೌಜನ್ಯಾ ಹೋರಾಟಕ್ಕೂ ಎಸ್ ಅನ್ನುತ್ತಾರೆ. ಬಿಜೆಪಿ ಚಲೋ ಕೂಡಾ ಅವರೇ ಮಾಡುತ್ತಾರೆ. ಅವರು ಆರ್‌ಎಸ್ಎಸ್ V/S ಆರ್‌ಎಸ್ಎಸ್. ಡಿಬೇಟ್ ನಲ್ಲಿ ಸಿಕ್ಕಿಹಾಕಿಕೊಂಡು ಬಿಟ್ಟಿದ್ದಾರೆ ಎಂದು ಟಾಂಗ್ ನೀಡಿದರು.

Rural Development and Panchayat Raj Minister Priyank Kharge has reacted to the allegations of land encroachment in Dharmasthala, asserting that the government will take action regardless of the stature of the person involved. “Illegal activity is illegal, no matter who commits it. The government will act,” he said.