ಬ್ರೇಕಿಂಗ್ ನ್ಯೂಸ್
24-09-25 08:46 pm Mangalore Correspondent ಕರಾವಳಿ
ಮಂಗಳೂರು, ಸೆ.24 : ಖಾಸಗಿ ಜಮೀನಿನಲ್ಲಿ ಲೋಕೋಪಯೋಗಿ ಇಲಾಖೆಯಿಂದ ರಸ್ತೆ ನಿರ್ಮಿಸಿರುವ ಪಿಡಬ್ಲ್ಯೂಡಿ ಅಧಿಕಾರಿಗಳ ವಿರುದ್ಧ ನ್ಯಾಯಾಲಯ ತೀರ್ಪು ನೀಡಿದ್ದರೂ ಅಧಿಕಾರಿಗಳು ಕ್ರಮ ವಹಿಸಿಲ್ಲ ಎಂದು ಆರೋಪಿಸಿ ಜಮೀನು ಮಾಲಕರು ರಸ್ತೆಗೆ ತಂತಿಬೇಲಿ ಹಾಕಲು ಮುಂದಾದ ಘಟನೆ ಬುಧವಾರ ನಡೆದಿದೆ.
ಕಿನ್ನಿಗೋಳಿ- ನಿಡ್ಡೋಡಿ- ಗಂಜಿಮಠ - ಮಂಗಳೂರು ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ 2008ರಲ್ಲಿ ಮಂಜನಕಟ್ಟೆ ಎಂಬಲ್ಲಿ ಖಾಸಗಿ ಜಮೀನಿನಲ್ಲಿ ರಸ್ತೆ ನಿರ್ಮಿಸಲಾಗಿತ್ತು. ಅಲ್ಲಿನ ನಿವಾಸಿ ಸಿಸಿಲಿಯಾ ಅವರು ಹೊರ ದೇಶದಲ್ಲಿದ್ದ ಸಂದರ್ಭ ಅವರ ಖಾಸಗಿ ಜಮೀನಿನಲ್ಲಿ ಪಿಡ್ಲ್ಯೂಡಿ ಇಲಾಖೆ ರಸ್ತೆ ನಿರ್ಮಾಣ ಮಾಡಿತ್ತು. ಸಿಸಿಲಿಯಾ ಅವರು 2014ರಲ್ಲಿ ತಹಶೀಲ್ದಾರ್ ಮತ್ತು ಪಿಡ್ಲ್ಯೂಡಿ ಇಲಾಖೆಯ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದರು. ವಾದ ಆಲಿಸಿದ ನ್ಯಾಯಾಲಯ ಸಿಸಿಲಿಯಾ ಅವರ ಹತ್ತು ಸೆಂಟ್ ನಿವೇಶನಕ್ಕೆ ಸಮನಾಗಿರುವ ಬೇರೊಂದು ಜಾಗ ನೀಡಬೇಕು ಅಥವಾ ರಸ್ತೆ ತೆರವು ಮಾಡಿ ಅವರ ಸ್ವಂತ ನಿವೇಶನ ಬಿಟ್ಟು ಕೊಡಬೇಕೆಂದು 2017ರಲ್ಲಿ ತೀರ್ಪು ನೀಡಿತ್ತು.



ಆದರೆ, ನ್ಯಾಯಾಲಯದ ತೀರ್ಪನ್ನು ಗಂಭೀರ ಪರಿಗಣಿಸದೆ ಪಿಡ್ಲ್ಯೂಡಿ ಇಲಾಖೆ ನಿರ್ಲಕ್ಷ್ಯ ವಹಿಸಿತ್ತು. ನ್ಯಾಯಾಲಯದ ಆದೇಶದಂತೆ 2025ರ ಸೆ.24ರ ಬುಧವಾರ ನ್ಯಾಯಾಲಯದ ಅಮೀನರಾದ ಶಿವರಾಮ ರೈ ಮತ್ತು ದೀಪಕ್ ಅವರ ಸಮ್ಮುಖದಲ್ಲಿ ತಮ್ಮ ನಿವೇಶನದ ಗಡಿ ಗುರುತಿಸಿ ರಸ್ತೆ ಅಗೆಯುವ ಕಾರ್ಯಕ್ಕೆ ಮುಂದಾಗಿದ್ದರು.
ಈ ವೇಳೆ ನೂರಾರು ವಾಹನಗಳು ಸಾಲುಗಟ್ಟಿ ರಾಜ್ಯ ಹೆದ್ದಾರಿಯಲ್ಲಿ ನಿಂತಿದ್ದು, ಸಾರ್ವಜನಿಕರು ಕಂದಾಯ ಇಲಾಖೆ, ತಹಶೀಲ್ದಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸ್ಥಳಕ್ಕೆ ಬಂದ ಕಂದಾಯ ನಿರೀಕ್ಷಕ ಪೂರ್ಣಚಂದ್ರ ಹಾಗೂ ಉಪ ತಹಶೀಲ್ದಾರ್ ಸ್ಟೀಫನ್ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರಸ್ತೆಯಲ್ಲೇ ವಾಹನ ನಿಲ್ಲುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಜಮೀನು ಮಾಲಕರೊಂದಿಗೆ ಶೀಘ್ರ ಒಪ್ಪಂದಕ್ಕೆ ಬರಬೇಕು. ಈ ಭಾಗದಲ್ಲಿ ಒಂದೇ ರಸ್ತೆ ಇದ್ದು ಪರ್ಯಾಯ ರಸ್ತೆ ಇಲ್ಲದಿರುವ ಕಾರಣ ರಸ್ತೆ ಅಗೆಯಲು ಅವಕಾಶ ನೀಡಬಾರದು ಎಂದು ಅಧಿಕಾರಿಗಳನ್ನು ಆಗ್ರಹಿಸಿದರು.
ಜಿಲ್ಲಾಧಿಕಾರಿ ಸೂಚನೆಯಂತೆ ಸ್ಥಳಕ್ಕೆ ಬಂದ ಪಿಡ್ಲ್ಯೂಡಿ ಇಂಜಿನಿಯರ್ ಹೇಮಂತ್ ಅವರು ಸಂತ್ರಸ್ತ ಸಿಸಿಲಿಯಾ ಅವರ ಅಳಿಯ ಆಂಡ್ರಿ ಡಿ ಆಲ್ಮೆಡಾ, ನ್ಯಾಯಾಲಯದ ಅಮೀನರು ಹಾಗೂ ಸಂತ್ರಸ್ತರ ಪರ ವಕೀಲರೊಂದಿಗೆ ಮಾತುಕತೆ ನಡೆಸಿದರು. ಸದ್ಯಕ್ಕೆ ರಸ್ತೆ ಸಂಚಾರಕ್ಕೆ ಅವಕಾಶ ನೀಡುವಂತೆ ಕೇಳಿಕೊಂಡರು. ಬದಲಿ ನಿವೇಶನ ನೀಡುವ ಬಗ್ಗೆ ಬರೆದು ಕೊಡುವಂತೆ ಸಂತ್ರಸ್ತರು ಒತ್ತಾಯಿಸಿದರು. ರಾಜ್ಯ ಹೆದ್ದಾರಿ ಬಂದ್ ನಡೆದ ಪರಿಣಾಮ, ಕಿನ್ನಿಗೋಳಿ - ನಿಡ್ಡೋಡಿ- ಗಂಜಿಮಠ- ಮಂಗಳೂರು ಸಂಚರಿಸುವ ವಾಹನಗಳು, ಬಸ್ ಗಳು, ಶಾಲೆ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಯಿತು. ಸ್ಥಳದಲ್ಲಿ ಬಜ್ಪೆ ಪೊಲೀಸರು ಭದ್ರತೆ ಕೈಗೊಂಡಿದ್ದರು.
2008ರಲ್ಲಿ ರಸ್ತೆ ಮಾಡುವ ಉದ್ದೇಶದಿಂದ ನಮ್ಮ ಜಮೀನು, ಶೆಡ್ ಮತ್ತು ತೆಂಗಿನಮರಗಳನ್ನು ಕಡಿದುಹಾಕಿ ನಮಗೆ ಯಾವುದೇ ಮಾಹಿತಿ ನೀಡದೆ ರಾಜ್ಯ ಹೆದ್ದಾರಿ ಮಾಡಿದ್ದಾರೆ. ಈ ಕುರಿತು ನ್ಯಾಯಾಲಯಕ್ಕೆ ದೂರು ನೀಡಿದ್ದೆ. ನ್ಯಾಯಾಲಯ ನಮಗೆ ಸೂಕ್ತ ವ್ಯವಸ್ಥೆ ನೀಡಬೇಕೆಂದು 2017ರಲ್ಲಿ ತೀರ್ಪು ನೀಡಿತ್ತು. ಆದರೂ, ಅಧಿಕಾರಿಗಳು ಅವರ ನಿರ್ಲಕ್ಷ್ಯದಿಂದಾಗಿ 10 ವರ್ಷಗಳಿಂದಲೂ ನನ್ನನ್ನು ಕಚೇರಿಗಳಿಂದ ಕಚೇರಿಗಳಿಗೆ ಅಲೆದಾಡಿಸುತ್ತಿದ್ದಾರೆ. ನಾನು ಹೃದ್ರೋಗದ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇನ್ನು ನನ್ನಿಂದ ಓಡಾಡಲು ಸಾಧ್ಯವಿಲ್ಲ. ನಮ್ಮ ಜಮೀನನ್ನು ಅಗೆದು ಬೇಲಿ ಹಾಕಲು ನಿರ್ಧರಿಸಿದ್ದೇವೆ ಎಂದು ಸಿಸಿಲಿಯಾ ಅವರ ಪರವಾಗಿ ಅಳಿಯ ಆಂಡ್ರಿ ಡಿ ಆಲ್ಮೆಡಾ ಹೇಳಿದ್ದಾರೆ.
Tension prevailed on Wednesday at Manjanakatte near Kinnigoli after landowners attempted to fence off a stretch of the Kinnigoli–Niddodi–Ganjimath–Mangaluru state highway, alleging that the Public Works Department (PWD) had illegally built the road on private property.
09-11-25 06:53 pm
Bangalore Correspondent
ಇಪಿಎಫ್ ಸೊಸೈಟಿಯಲ್ಲಿ 70 ಕೋಟಿ ದುರ್ಬಳಕೆ ; ಅಕೌಂಟೆಂ...
09-11-25 03:47 pm
ISIS Terrorists, Umesh Reddy, Parappana Agrah...
08-11-25 10:29 pm
High Court Directs Kalaburagi: ಚಿತ್ತಾಪುರ ಆರೆಸ...
08-11-25 12:38 pm
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
09-11-25 07:49 pm
HK News Desk
ಮುಸ್ಲಿಂ ವ್ಯಕ್ತಿಯ ಎರಡನೇ ಮದುವೆ ನೋಂದಣಿಗೆ ನಿರಾಕರಣ...
07-11-25 05:21 pm
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
09-11-25 03:50 pm
Mangalore Correspondent
ಕೋಮುದ್ವೇಷದ ಕೊಲೆ ; ಪ್ರತೀಕಾರಕ್ಕೆ ಪ್ರಚೋದಿಸಿ ಇನ್...
08-11-25 11:15 pm
Digital Arrest Scam, Mangalore Online Fraud:...
08-11-25 04:08 pm
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm