ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತಿದೆ ; ಜೀವನಶೈಲಿ ಬದಲಿಸದಿದ್ದರೆ ಆತಂಕಕಾರಿ, ಡಿಎಚ್ಓ ತಿಮ್ಮಯ್ಯ, ಇಂಡಿಯಾನ ಆಸ್ಪತ್ರೆಯಲ್ಲಿ ಟಿಎವಿಆರ್ ವಾರ್ಷಿಕೋತ್ಸವ 

27-09-25 07:35 pm       Mangalore Correspondent   ಕರಾವಳಿ

ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತಿದೆ ; ಜೀವನಶೈಲಿ ಬದಲಿಸದಿದ್ದರೆ ಆತಂಕಕಾರಿ, ಡಿಎಚ್ಓ ತಿಮ್ಮಯ್ಯ, ಇಂಡಿಯಾನ ಆಸ್ಪತ್ರೆಯಲ್ಲಿ ಟಿಎವಿಆರ್ ವಾರ್ಷಿಕೋತ್ಸವ 

ಮಂಗಳೂರು, ಸೆ.27 : ಯುವಜನರಲ್ಲಿ ಹೃದಯದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚುತ್ತಿದೆ ; ಜೀವನಶೈಲಿ ಬದಲಿಸದಿದ್ದರೆ ಆತಂಕಕಾರಿ, ಡಿಎಚ್ಓ ತಿಮ್ಮಯ್ಯ, ಇಂಡಿಯಾನ ಆಸ್ಪತ್ರೆಯಲ್ಲಿ ಟಿಎವಿಆರ್ ವಾರ್ಷಿಕೋತ್ಸವ 

ಶನಿವಾರ ನಗರದ ಇಂಡಿಯಾನ ಹಾಸ್ಪಿಟಲ್ ಆ್ಯಂಡ್ ಹಾರ್ಟ್ ಇನ್ಸ್ಸ್ಟಿಟ್ಯೂಟ್‌ನಲ್ಲಿ ವಿಶ್ವ ಹೃದಯ ದಿನದ ಅಂಗವಾಗಿ ಟ್ರಾನ್ಸ್ಕಾಥೆಟರ್ ಅವೊರ್ಟಿಕ್ ವಾಲ್ವ್ ರಿಪ್ಲೇಸ್‌ಮೆಂಟ್‌ನ 6ನೇ ವಾರ್ಷಿಕೋತ್ಸವ ಕಾರ‍್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದರು. ಇಂದಿನ ಯುವಜನತೆ ಹೊರಗಡೆಯಲ್ಲಿ ಹೆಚ್ಚು ತಿನ್ನುವುದು ಆರೋಗ್ಯಕ್ಕೆ ಮಾರಕ ಪರಿಣಾಮ ಬೀರುತ್ತಿದೆ. ಪೌಷ್ಟಿಕಾಂಶಕ್ಕಿಂತ ಬಾಯಿ ರುಚಿಗೆ ತಿನ್ನುವುದು ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಲು ಕಾರಣ. ಇದರಿಂದ ಹೃದಯ ಸಮಸ್ಯೆಗೆ ದಾರಿಯಾಗುತ್ತಿದೆ ಎಂದರು. ಆಹಾರದಲ್ಲಿ ಉಪ್ಪು, ಸಕ್ಕರೆಯನ್ನು ಜಾಸ್ತಿಯಾಗಿ ಬಳಸಬೇಡಿ. ದೈಹಿಕ ಚಟುವಟಿಕೆ ಇಲ್ಲದೇ ಹೆಚ್ಚು ಹೊತ್ತು ಕೂರುವುದು ಒಳ್ಳೆಯದಲ್ಲ. ನಿರಂತರ ಮೊಬೈಲ್, ಟಿವಿ ವೀಕ್ಷಣೆಯಿಂದಲೂ ತೊಂದರೆ ಇದೆ, ಧೂಮಪಾನ, ತಂಬಾಕು ಉತ್ಪನ್ನಗಳನ್ನು ಬಳಸದೆ ದಿನಕ್ಕೆ 6ರಿಂದ 8 ಗಂಟೆಗಳ ಕಾಲ ನಿದ್ರೆ ಬಹಳ ಮುಖ್ಯ ಎಂದು ಡಿಎಚ್ಓ ಕಿವಿಮಾತು ಹೇಳಿದರು. 

ಇಂಡಿಯಾನ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಇಂಟರ್‌ ವೆನ್‌ಕ್ಷನಲ್ ಕಾರ್ಡಿಯೋಲಾಜಿಸ್ಟ್ ಡಾ. ಯೂಸುಫ್ ಕುಂಬ್ಳೆ ಮಾತನಾಡಿ,  ಹೃದಯ ರಕ್ತನಾಳದ ಕಾಯಿಲೆಗಳು ಮತ್ತು ತಡೆಗಟ್ಟುವ ತಂತ್ರಗಳ ಬಗ್ಗೆ ಜಾಗೃತಿ ಮೂಡಿಸುವ  ವಿಚಾರದಲ್ಲಿ ಇಂಡಿಯಾನಾ ಆಸ್ಪತ್ರೆ 15 ವರ್ಷಗಳಿಂದ ಮುಂಚೂಣಿಯಲ್ಲಿದೆ. ಹೃದಯ ಕವಾಟದ ಕಾಯಿಲೆಗಳಿಗೆ ಚಿಕಿತ್ಸೆ ನೀಡುವ ಹೊಸ ಅತ್ಯಾಧುನಿಕ ತಂತ್ರಜ್ಞಾನವು 5 ವರ್ಷಗಳ ಹಿಂದೆ ಮಂಗಳೂರಿನಲ್ಲಿ ಮೊದಲ ಬಾರಿಗೆ ಪ್ರಾರಂಭವಾಯಿತು. ರಚನಾತ್ಮಕ ಹೃದಯ ಕಾಯಿಲೆ ಚಿಕಿತ್ಸೆಯಲ್ಲಿ ಮುಖ್ಯ ಪಾತ್ರ ವಹಿಸಿದ್ದು ಇಂಡಿಯಾನಾ ಆಸ್ಪತ್ರೆಯಾಗಿದೆ ಎಂದರು.

ಈ ಸಂದರ್ಭ ಕಳೆದ ಐದು ವರ್ಷಗಳಿಂದ ಆಸ್ಪತ್ರೆಯಲ್ಲಿ ಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಒಳಗಾದ ಹಿರಿಯರನ್ನು ಸನ್ಮಾನಿಸಲಾಯಿತು. ಬೇರೆ ಬೇರೆ ಕಡೆಯಿಂದ ಬಂದಿದ್ದ ಈ ರೋಗಿಗಳು ಆಸ್ಪತ್ರೆಗೆ ಬಂದ ಬಳಿಕ ಸಮಸ್ಯೆ ಪರಿಹಾರವಾದ ಕುರಿತು ಮಾತನಾಡಿದರು. ಈ ಸಂದರ್ಭ ಆಸ್ಪತ್ರೆಯ ಚೇರ್‌ಮನ್ ಡಾ. ಆಲಿ ಕುಂಬ್ಳೆ, ಆಸ್ಪತ್ರೆಯ ಗ್ರೂಪ್ ಚೀಪ್ ಎಕ್ಸಿಕ್ಯೂಟಿವ್ ಆಫೀಸರ್ ಡಾ.ಆದಿತ್ಯ ಭಾರದ್ವಾಜ್,  ಮೆಡಿಕಲ್ ಡೈರೆಕ್ಟರ್ ಡಾ. ಅಪೂರ್ವ ಶ್ರೀಜಯದೇವ, ಸಿಇಒ ಇ.ವಿಜಯಚಂದ್ರ ಮೊದಲಾದವರು ಉಪಸ್ಥಿತರಿದ್ದರು. ಜಗದೀಶ ಯಡಪಡಿತ್ತಾಯ ಕಾರ‍್ಯಕ್ರಮ ನಿರೂಪಿಸಿದರು.

Cholesterol levels are rising alarmingly among the youth, posing serious risks to heart health if lifestyle changes are not adopted, warned Dakshina Kannada District Health Officer Dr. H.R. Thimmaiah.