Muslim Terrorist, Mangalore, Jayakrishnan Kerala: ಓಲಾದಲ್ಲಿ ಟ್ಯಾಕ್ಸಿ ಬುಕ್ ಮಾಡಿ ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಹೇಳಿ ನಿಂದನೆ ; ಮಲಯಾಳಂ ಸಿನಿಮಾ ನಟರಿಂದ ಕೃತ್ಯ ಆರೋಪ, ಉರ್ವಾದಲ್ಲಿ ಮೂವರ ವಿರುದ್ಧ ಎಫ್ಐಆರ್

11-10-25 11:11 am       Mangalore Correspondent   ಕರಾವಳಿ

ಓಲಾ ಮತ್ತು ರಾಪಿಡೋ ಏಪ್ ನಲ್ಲಿ ಟ್ಯಾಕ್ಸಿ ಬುಕ್ ಮಾಡಿಸಿ, ಕರೆ ಮಾಡಿದ ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ಮಾಡಿರುವ ಘಟನೆ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಅ.11: ಓಲಾ ಮತ್ತು ರಾಪಿಡೋ ಏಪ್ ನಲ್ಲಿ ಟ್ಯಾಕ್ಸಿ ಬುಕ್ ಮಾಡಿಸಿ, ಕರೆ ಮಾಡಿದ ಚಾಲಕನಿಗೆ ಮುಸ್ಲಿಂ ಟೆರರಿಸ್ಟ್ ಎಂದು ಹೇಳಿ ನಿಂದನೆ ಮಾಡಿರುವ ಘಟನೆ ಬಗ್ಗೆ ಉರ್ವಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅ.9ರಂದು ರಾತ್ರಿ 10 ರಿಂದ 12 ಗಂಟೆಯ ನಡುವೆ ಘಟನೆ ನಡೆದಿದ್ದು, ಮಲಯಾಳಂ ಸೀರಿಯಲ್ ಮತ್ತು ಸಿನಿಮಾ ನಟರು ಈ ರೀತಿ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಓಲಾ ಮತ್ತು ರಾಪಿಡೋದಲ್ಲಿ ಟ್ಯಾಕ್ಸಿ ಬುಕ್ ಮಾಡಿ, ಆಬಳಿಕ ಲೊಕೇಶನ್ ಹಾಕಿದ್ದರು. ಎಲ್ಲಿದ್ದೀರಿ ಎಂದು ಚಾಲಕ ಕರೆ ಮಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೆ, ಕರೆ ಮಾಡಿದ ವ್ಯಕ್ತಿಯನ್ನು ಮುಸ್ಲಿಂ ಎಂದು ತಿಳಿದು ನೀನು ಟೆರರಿಸ್ಟ್, ಮುಸ್ಲಿಂ ತೀವ್ರವಾದಿ ಎಂದು ಹೇಳಿ ನಿಂದನೆ ಮಾಡಿದ್ದಾರೆ. ಇದರ ಆಡಿಯೋವನ್ನು ಚಾಲಕ ರೆಕಾರ್ಡ್ ಮಾಡಿದ್ದು, ಉರ್ವಾ ಠಾಣೆಗೆ ನೀಡಿ ದೂರು ದಾಖಲಿಸಿದ್ದಾರೆ.

ದೂರಿನಂತೆ ವಿಮಲ್, ಸಂತೋಷ್ ಮತ್ತು ಇನ್ನೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಚಾಲಕನ ಮಾಹಿತಿ ಪ್ರಕಾರ, ಮಲಯಾಳಂ ಸಿನಿಮಾ ನಟರಾದ ಜಯಕೃಷ್ಣನ್ ಮತ್ತು ವಿಮಲ್ ಈ ರೀತಿ ಮಾಡಿದ್ದಾರೆಂದು ಆರೋಪಗಳಿವೆ. ಎಫ್ಐಆರ್ ಪ್ರತಿಯಲ್ಲಿ ಜಯಕೃಷ್ಣನ್ ಹೆಸರಿಲ್ಲ. ಆಬಳಿಕ ಸ್ನೇಹಿತರ ಮೂಲಕ ಇವರಿದ್ದ ಜಾಗವನ್ನು ಟ್ಯಾಕ್ಸಿಯವರು ಪತ್ತೆ ಮಾಡಿದ್ದಾರೆ.

ಈ ವೇಳೆ, ಬಿಜೈ ನ್ಯೂರೋಡ್ ಬಳಿ ಕೇರಳ ನೋಂದಣಿಯ ಸ್ಕಾರ್ಪಿಯೋ ಕಾರಿನಲ್ಲಿ ಕುಳಿತು ಮದ್ಯದ ನಶೆಯಲ್ಲಿ ಇವರು ಓಲಾ ಬುಕ್ ಮಾಡಿದ್ದು ಪತ್ತೆಯಾಗಿದೆ. ಬೇರೆ ಬೇರೆ ಕಡೆ ಲೊಕೇಶನ್ ಹಾಕಿ ದಾರಿ ತಪ್ಪಿಸುವಂತೆ ವರ್ತಿಸಿದ್ದಾರೆ. ಅಲ್ಲದೆ, ಟೆರರಿಸ್ಟ್ ಎಂದು ಹೇಳಿ ನಿಂದಿಸಿದ್ದಾರೆಂದು ದೂರಿನಲ್ಲಿ ಅಹ್ಮದ್ ಶಫೀಕ್ ತಿಳಿಸಿದ್ದಾರೆ.

A shocking case of religious abuse has been reported from Mangaluru’s Urwa police limits, where a Malayalam film and serial actor and two others allegedly verbally abused an Ola/ Rapido driver, calling him a “Muslim terrorist.