ಬ್ರೇಕಿಂಗ್ ನ್ಯೂಸ್
11-10-25 05:52 pm Giridhar Shetty, Mangaluru ಕರಾವಳಿ
ಮಂಗಳೂರು, ಅ.11: ಕಾರ್ಕಳದ ಬೆಳ್ಮಣ್ ಲಾಡ್ಜ್ ನಲ್ಲಿ ನೇಣು ಬಿಗಿದು ಸಾವಿಗೆ ಶರಣಾದ ಅಭಿಷೇಕ್ ಆಚಾರ್ಯ(23) ಎಂಬ ಸ್ಫುರದ್ರೂಪಿ ಯುವಕ ಸಾವಿಗೂ ಮುನ್ನ ಬರೆದಿಟ್ಟಿರುವ ಹೃದಯ ವಿದ್ರಾವಕ ಮರಣ ಪತ್ರ ಹೆಡ್ ಲೈನ್ ಕರ್ನಾಟಕಕ್ಕೆ ಸಿಕ್ಕಿದೆ. ತನ್ನನ್ನು ಪ್ರೀತಿಸುತ್ತೇನೆಂದು ಬಂದಿದ್ದ ಯುವತಿಯೊಬ್ಬಳು ತನ್ನನ್ನು ಯಾವ ರೀತಿ ಹೈರಾಣು ಮಾಡಿದಳು ಮತ್ತು ತನ್ನ ಸಾವಿಗೆ ಆಕೆ ಮತ್ತು ಜೊತೆಗಾರರು ಹೇಗೆ ಕಾರಣವಾಗಿದ್ದಾರೆಂದು ಪಿನ್ ಟು ಪಿನ್ ಎನ್ನುವಂತೆ ಏಳು ಪುಟಗಳ ಡೆತ್ ನೋಟ್ ಬರೆದಿಟ್ಟಿದ್ದಾನೆ.
ಸ್ವಾಮಿ ಕೊರಗಜ್ಜ ಎಂದು ಪತ್ರವನ್ನು ಆರಂಭಿಸಿದ್ದು ನಾನು ಮಂಗಳೂರಿನ ಸರಕಾರಿ ಲೇಡಿಗೋಷನ್ ಆಸ್ಪತ್ರೆಯಲ್ಲಿ ಬಯೋ ಮೆಡಿಕಲ್ ಟೆಕ್ನೀಶಿಯನ್ ಆಗಿ ಕೆಲಸ ಮಾಡುತ್ತಿದ್ದೇನೆ. ನನ್ನ ಸಾವಿಗೆ ಅಲ್ಲಿಯೇ ವಾರ್ಡ್ ನರ್ಸ್ ಆಗಿರುವ ನಿರೀಕ್ಷಾ ಮತ್ತು ಆಕೆಯ ಗೆಳೆಯರಾದ ಗುರುಪುರ ಕೈಕಂಬ ನಿವಾಸಿ ರಾಕೇಶ್, ಕಂಕನಾಡಿ ನಿವಾಸಿ ರಾಹುಲ್, ಗುರುಪುರ ಕೈಕಂಬದ ತಸ್ಲಿಂ ಎಂಬವರು ಕಾರಣ ಎಂದು ಬರೆದಿದ್ದಾನೆ. ಇವರು ನನ್ನ ಅಶ್ಲೀಲ ವಿಡಿಯೋ ಮುಂದಿಟ್ಟು ಭಾರೀ ಕಿರುಕುಳ ನೀಡಿದ್ದಾರೆ. ಕೂಡಿಹಾಕಿ ಹಲ್ಲೆ ನಡೆಸಿದ್ದಾರೆ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ.




ನಿರೀಕ್ಷಾ ನನ್ನನ್ನು ಪ್ರೀತಿಸುವ ನಾಟಕವಾಡಿ ಹತ್ತಿರವಾಗಿದ್ದಳು. ಕಳಸ ಮೂಲದವಳಾಗಿದ್ದು, ಆಕೆಯನ್ನು ಎರಡು ವರ್ಷಗಳ ಹಿಂದೆ ಬಿಕರ್ನಕಟ್ಟೆಯ ನಮ್ಮ ರೂಮಿಗೆ ಕರೆದೊಯ್ದಿದ್ದೆ. ಆ ಸಂದರ್ಭದಲ್ಲಿ ನನ್ನ ಗೆಳಯನಾಗಿದ್ದ ಉಪ್ಪಿನಂಗಡಿ ಮೂಲದ ತೇಜಕುಮಾರ್, ಆತನ ಗೆಳತಿಯನ್ನು ರೂಮಿಗೆ ಕರೆತಂದಿದ್ದ. ಈ ವೇಳೆ, ನಿರೀಕ್ಷಾಳು ತೇಜಕುಮಾರ್ ಇನ್ನೊಂದು ರೂಮಿನಲ್ಲಿದ್ದಾಗ ಗುಪ್ತ ಕ್ಯಾಮರಾದಲ್ಲಿ ಅಶ್ಲೀಲ ವಿಡಿಯೋ ಮಾಡಿದ್ದಳು. ಆ ವಿಡಿಯೋ ಮುಂದಿಟ್ಟು ತೇಜಕುಮಾರ್ ನಲ್ಲಿ 5 ಲಕ್ಷ ಹಣ ಕೇಳಿದ್ದಳು. ಹಣಕ್ಕಾಗಿ ತೀವ್ರ ಪೀಡಿಸಿದ್ದಳು. ಆದರೆ ನಾನು ನಿರೀಕ್ಷಾಳನ್ನು ಪ್ರೀತಿಸುತ್ತಿದ್ದುದರಿಂದ ಏನೂ ಮಾಡುವಂತಿರಲಿಲ್ಲ. ಆಬಳಿಕ 2023ರ ಜೂನ್ ತಿಂಗಳಲ್ಲಿ ತೇಜಕುಮಾರ್ ತನ್ನ ಬೈಕನ್ನು ಬಿಕರ್ನಕಟ್ಟೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದ. ಆತ ಎಲ್ಲಿ ಹೋಗಿದ್ದಾನೆಂದು ಇನ್ನೂ ಪತ್ತೆಯಾಗಿಲ್ಲ. ಆತನ ತಂದೆ- ತಾಯಿಗೆ ಈ ವಿಷಯ ಹೇಳದೇ ಇದ್ದುದಕ್ಕೆ ವಿಷಾದವಿದ್ದು ಕ್ಷಮೆ ಕೇಳುತ್ತಿದ್ದೇನೆ.


ಆನಂತರ, ನಿರೀಕ್ಷಾ ನನ್ನನ್ನೂ ವಿಡಿಯೋ ಮಾಡಿ ಬ್ಲಾಕ್ಮೇಲ್ ಮಾಡಲು ಶುರು ಮಾಡಿದ್ದಳು. ನಾನು ಆಕೆಗೆ ಗೊತ್ತಿಲ್ಲದಂತೆ ಒಂದು ದಿನ ಆಕೆಯ ಮೊಬೈಲ್ ವಾಟ್ಸಪ್ ವೆಬ್ ಚಾನೆಲ್ ನೋಡಿದ್ದೇನೆ. ಅವಳು ನನ್ನ ರೀತಿಯಲ್ಲೇ ಸಾಕಷ್ಟು ಮಂದಿಯ ನಗ್ನ ವಿಡಿಯೋಗಳನ್ನು ಹೊಂದಿದ್ದಳು. ಆಕೆಯ ಗೆಳತಿಯರು ಡ್ರೆಸ್ ಚೇಂಜ್ ಮಾಡುವ ವಿಡಿಯೋ ಕೂಡ ಇತ್ತು. ಅದನ್ನು ತಸ್ಲಿಂ ಎಂಬಾತನ ಮೂಲಕ ವಿದೇಶಕ್ಕೆ ಕಳಿಸಿಕೊಟ್ಟು ಅಲ್ಲಿಂದ ಫೋನ್ ಕರೆ ಮಾಡಿಸಿ ಬ್ಲಾಕ್ಮೇಲ್ ಮಾಡುತ್ತಿದ್ದಳು. ಅದರ ದಾಖಲೆಯನ್ನು ನನ್ನ ಮೊಬೈಲ್ ನಲ್ಲಿ ಸೇವ್ ಮಾಡಿದ್ದು ಚೆಕ್ ಮಾಡುವಂತೆ ವಿನಂತಿಸುತ್ತೇನೆ.
ನನ್ನಲ್ಲಿ ತುಂಬಾ ಸಲ ಹಣ ಕೇಳಿ ಪಡೆದಿದ್ದಾರೆ. ಹಣ ಕೊಟ್ಟು ಸಾಕಾಗಿದೆ, ಪೊಲೀಸ್ ದೂರು ಕೊಡುತ್ತೇನೆ ಎಂದಾಗ, ರಾಕೇಶ್ ಮತ್ತು ಆತನ ಗೆಳೆಯರು, ತಸ್ಲೀಂ ಸೇರಿ ವಾಮಂಜೂರಿನ ಬೈತುರ್ಲಿ ಎಂಬಲ್ಲಿಗೆ ಕರೆದೊಯ್ದು ತೀವ್ರ ಹಲ್ಲೆ ನಡೆಸಿದ್ದಾರೆ. ಮರ್ಮಾಂಗಕ್ಕೆ ತುಳಿದು ಹಣ ಕೊಡುವಂತೆ ಪೀಡಿಸಿದ್ದಾರೆ. ನೀನು ದೂರು ಕೊಟ್ಟರೆ, ನೀನೇ ರೇಪ್ ಮಾಡಿದ್ದಾಗಿ ಮರು ದೂರು ಕೊಟ್ಟು ನಿನ್ನನ್ನೇ ಸಿಲುಕಿಸುತ್ತೇವೆ ಎಂದು ಹೇಳಿ ಬೆದರಿಸುತ್ತಿದ್ದರು. ರಾಹುಲ್ ಮತ್ತೆ ನನ್ನನ್ನು ಕರೆದು ನಮಗೆ ಕಾಂಗ್ರೆಸ್ ಮುಖಂಡರ ಪರಿಚಯ ಇದೆ, ನಮ್ಮ ರೋಮವನ್ನು ತೆಗೆಯಲೂ ಸಾಧ್ಯವಿಲ್ಲ. ನಾವು ಹೇಳಿದಂತೆ ಕೇಳಿಕೊಂಡು ಇರಬೇಕು ಎಂದು ಬೆದರಿಸಿದ್ದಾನೆ.

ನಂತರ ನಿರೀಕ್ಷಾ ತಾನು ಎಸ್ಸಿ- ಎಸ್ಟಿಯಾಗಿದ್ದು ಕಾನೂನು ನಮ್ಮ ಪರವಾಗಿಯೇ ಇದೆ. ಯಾಕಂದ್ರೆ, ಕಾನೂನು ಮಾಡಿದ್ದೇ ನಮ್ಮವರು ಎಂದು ಹೇಳಿ ಬೆದರಿಸಿದ್ದಾಳೆ. ಪ್ರವೀಣ್ ನೆಟ್ಟಾರು ಹತ್ಯೆಯಾದ ಸಂದರ್ಭದಲ್ಲಿ ವಾಟ್ಸಪ್ ಸ್ಟೇಟಸ್ ಹಾಕಿದ್ದಕ್ಕೆ ಮುಂದಿನ ಟಾರ್ಗೆಟ್ ನಿನ್ನದೇ ಎಂದು ಹೇಳಿ ವಿದೇಶದಿಂದ ಫೋನ್ ಮಾಡಿದ್ದರು. ನಿರೀಕ್ಷಾ ಮತ್ತು ಆಕೆಯ ತಂಡ ಫೋನ್ ಮಾಡಿ, ಹಿಂದುಗಳು ಸಾಯಬೇಕು ಎಂದು ಹೇಳಿ ನನಗೆ ಆವಾಜ್ ಹಾಕಿದ್ದರು. ವಾಟ್ಸಪ್ ಸ್ಟೇಟಸ್ ತೆಗೆಯದಿದ್ದರೆ ಮಂಗಳೂರಿನಲ್ಲಿ ಹೆಣ ಬೀಳುತ್ತದೆ ಎಂದು ಬೆದರಿಸಿದ್ದರು. ಹಣ ಕೊಡುವ ಸಂದರ್ಭದಲ್ಲಿಯೂ ಆನ್ಲೈನ್ ಪೇಮೆಂಟ್ ಬೇಡ, ಕ್ಯಾಶ್ ತಂದುಕೊಡು. ಮೊಬೈಲ್ ಟ್ರಾನ್ಸ್ ಫರ್ ಮಾಡಿದರೆ ದಾಖಲೆ ಸಿಗುತ್ತದೆ ಎಂದು ಹೇಳುತ್ತಿದ್ದರು.
ನನ್ನಲ್ಲಿ ಎಲ್ಲೈಸಿ ಪಾಲಿಸಿ ಇರುವುದನ್ನು ತಿಳಿದ ನಿರೀಕ್ಷಾ ಮತ್ತು ತಂಡ, ಅದರಲ್ಲಿ ನಿರೀಕ್ಷಾನದ್ದೇ ಹೆಸರನ್ನು ನಾಮಿನಿ ಹಾಕುವಂತೆ ಒತ್ತಾಯ ಮಾಡಿದ್ದರು. ನಾನು ನಿರೀಕ್ಷಾ ಹೆಸರು ನಾಮಿನಿ ಹಾಕಿದರೆ, ನನ್ನನ್ನು ಕೊಂದು ಹಾಕುವ ಬಗ್ಗೆ ಭಯವಿತ್ತು. ನಾನು ಅದಕ್ಕೆ ಒಪ್ಪದೆ, ಅದರ ಬದಲು 20 ಸಾವಿರ ಹಣವನ್ನುಕೊಟ್ಟಿದ್ದೆ. ಇದುವರೆಗೆ 3ರಿಂದ 4 ಲಕ್ಷವನ್ನು ಅವರಿಗೆ ನೀಡಿದ್ದೇನೆ. ಪ್ರತಿ ಸಲವೂ ಹಣ ಕೊಡುವಾಗ ನನ್ನಿಂದ ಇನ್ನು ಸಾಧ್ಯವಿಲ್ಲ, ನನ್ನನ್ನು ಬಿಟ್ಟುಬಿಡಿ ಎಂದು ಬೇಡುತ್ತಿದ್ದೆ. ಆದರೆ ಎಷ್ಟು ಹಣ ಕೊಟ್ಟರೂ ಅವರು ಕೇಳುತ್ತಿರಲಿಲ್ಲ. ಮತ್ತೆ ಮತ್ತೆ ಹಿಂಸೆ ನೀಡುತ್ತಿದ್ದರು. 20 ಲಕ್ಷ ಕೊಟ್ಟರೆ ಬಿಟ್ಟು ಬಿಡುತ್ತೇವೆ ಎಂದು ಹೇಳಿದ್ದರು.

ಇವರು ಸಾಯುವ ವರೆಗೂ ನನ್ನನ್ನು ಬಿಡುವುದಿಲ್ಲ ಎಂದು ಗೊತ್ತಾಗಿತ್ತು. ಹಲವು ಸಲ ಸಾಯಲು ಯತ್ನಿಸಿದ್ದೇನೆ. ನನಗೆ ಬದುಕಲು ತುಂಬಾ ಆಸೆ ಇದೆ, ಇವರಿಗೆ ಸಾಲ ಮಾಡಿ ತುಂಬಾ ಸಲ ಹಣ ಕೊಟ್ಟಿದ್ದೇನೆ. ಹಣ ಇಲ್ಲ ಎಂದಾಗ ಬೈಕ್ ಮಾರಾಟ ಮಾಡಿ ಹಣ ಕೊಡುವಂತೆ ಪೀಡಿಸಿದ್ದರು. ಇವರಿಗೆ ಕಾನೂನು ರೀತಿ ಯಾವುದೇ ಶಿಕ್ಷೆ ಆಗುವುದಿಲ್ಲ. ಯಾಕಂದ್ರೆ ನಮ್ಮ ಕಾನೂನು ವ್ಯವಸ್ಥೆ ಆ ರೀತಿ ಇದೆ. ನಾನು ಇವರ ಬಗ್ಗೆ ಇರುವ ಎಲ್ಲ ಕ್ರಿಮಿನಲ್ ಕೆಲಸಗಳನ್ನು ನನ್ನ ಫೋನ್ ನಲ್ಲಿ ಸೇವ್ ಮಾಡಿಟ್ಟಿದ್ದೇನೆ.
ಇವರು ಇನ್ನೊಬ್ಬನಿಗೆ ಇದೇ ರೀತಿ ಆಗಬಾರದು ಎಂದು ಹೇಳಿ ಇವರ ಕೃತ್ಯವನ್ನು ಹೇಳುತ್ತಿದ್ದೇನೆ. ನನ್ನ ತಮ್ಮನನ್ನೂ ಕೊಲ್ಲಲು ನೋಡಿದ್ದಾರೆ, ಇವರಿಗೆ ಒಂದು ಗತಿ ಕಾಣಿಸಬೇಕು ಎಂದೇ ಸಾಯುತ್ತಿದ್ದೇನೆ. ನಾನು ಫ್ಯಾಮಿಲಿಯನ್ನು ತುಂಬ ಮಿಸ್ ಮಾಡುತ್ತಿದ್ದೇನೆ. ಬೇರೆ ಆಫ್ಶನ್ ಇಲ್ಲದೆ ಸಾಯುತ್ತಿದ್ದೇನೆ ಎಂದು ಹೇಳಿ ಸುದೀರ್ಘ ಏಳು ಪುಟಗಳ ಡೆತ್ ನೋಟಲ್ಲಿ ಬರೆದಿದ್ದಾನೆ.

ಮೊಬೈಲ್ ವಶಕ್ಕೆ ಪಡೆದು ತನಿಖೆ - ಎಸ್ಪಿ
ಡೆತ್ ನೋಟ್ ನೋಡಿದರೆ ನಿರೀಕ್ಷಾ ಮತ್ತು ತಂಡದವರು ಹನಿಟ್ರ್ಯಾಪ್ ಮಾಡಿರುವಂತೆ ಕಂಡುಬರುತ್ತಿದೆ. ಪೊಲೀಸ್ ದೂರು ಕೊಡುವ ಬದಲು ಸಾವಿಗೀಡಾಗಿದ್ದಾನೆ. ಕಾರ್ಕಳ ಪೊಲೀಸರು ಪತ್ರದಲ್ಲಿರುವ ಮೂವರನ್ನೂ ಕರೆದು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಅವರ ಮೊಬೈಲ್ ಸೀಜ್ ಮಾಡಿ ತನಿಖೆ ನಡೆಸುತ್ತಿದ್ದಾರೆ. ಉಡುಪಿ ಎಸ್ಪಿ ಹರಿರಾಮ್ ಶಂಕರ್ ಪ್ರತಿಕ್ರಿಯಿಸಿ, ಅಭಿಷೇಕ್ ನಿರೀಕ್ಷಾಳನ್ನು ಪ್ರೀತಿಸಿ ಮನನೊಂದು ಈ ರೀತಿ ಮಾಡಿದ್ದಾನೆ ಅನ್ನೋದು ಪ್ರಾಥಮಿಕವಾಗಿ ಕಂಡುಬಂದಿದೆ. ನಾವು ತನಿಖೆ ನಡೆಸುತ್ತಿದ್ದು ಎಲ್ಲ ಆಯಾಮಗಳಿಂದಲೂ ತನಿಖೆ ಮಾಡುತ್ತೇವೆ. ಆರೋಪದ ಬಗ್ಗೆ ಸಾಕ್ಷ್ಯ ಕಂಡುಬಂದರೆ ಬಂಧಿಸುತ್ತೇವೆ ಎಂದಿದ್ದಾರೆ.
A shocking case has emerged from Belman, Karkala, where Abhishek Acharya (23), a biomedical technician working at Lady Goschen Hospital, Mangaluru, ended his life in a lodge. Before dying by suicide, he reportedly left behind a seven-page death note, detailing harassment, blackmail, and betrayal in painful detail. In the emotional death note, which begins with a plea to the deity "Swami Koragajja," Abhishek meticulously details how a girl who professed to love him, along with her accomplices, harassed him, ultimately driving him to take his own life. The deceased, who was working as a Biomedical Technician at the Government Lady Goshen Hospital in Mangaluru, specifically names four individuals responsible for his death:
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 05:24 pm
Mangalore Correspondent
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
Mangalore RTO Bomb: ಮಂಗಳೂರು ಆರ್ಟಿಓ ಕಚೇರಿಗೆ ಬಾ...
15-12-25 05:40 pm
Mangalore Reels, Arrest, Police: ತಲವಾರು ಹಿಡಿದ...
14-12-25 05:48 pm
15-12-25 10:26 pm
Mangalore Correspondent
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am
ಬೆಂಗಳೂರಿನಿಂದ ಎಂಡಿಎಂಎ ಡ್ರಗ್ಸ್ ಪೂರೈಕೆ ; ಸಾಗಣೆ ವ...
14-12-25 11:10 pm