ಬ್ರೇಕಿಂಗ್ ನ್ಯೂಸ್
24-11-25 11:16 am Mangalore Correspondent ಕರಾವಳಿ
ಮಂಗಳೂರು, ನ.24 : ಕರಾವಳಿ ಕರ್ನಾಟಕದ ಬೃಹತ್ ಸಹಕಾರಿ ಸಂಸ್ಥೆಯಾದ ಅಡಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೋ)ದ ಆಡಳಿತ ಮಂಡಳಿಯ ಆರು ಸ್ಥಾನಗಳಿಗೆ ನ.23ರ ಭಾನುವಾರ ಚುನಾವಣೆ ನಡೆದಿದ್ದು 45.53 ಶೇ. ಮತದಾನ ಆಗಿದೆ.
ಒಟ್ಟು 19 ನಿರ್ದೇಶಕ ಸ್ಥಾನಗಳಲ್ಲಿ 13 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 6 ಸ್ಥಾನಗಳಿಗೆ 8 ಮಂದಿ ಕಣದಲ್ಲಿದ್ದರು. ಒಟ್ಟು 5,576 ಸದಸ್ಯ ಮತದಾರರಿದ್ದು, 2,573 ಮಂದಿ ಮತ ಚಲಾಯಿಸಿದ್ದಾರೆ. ಕ್ಯಾಂಪ್ಕೋ ಸಂಸ್ಥೆಯಲ್ಲಿ ಲಕ್ಷಕ್ಕು ಹೆಚ್ಚು ಮತದಾರರಿದ್ದರೂ ಮತದಾನಕ್ಕೆ ಅವಕಾಶ 5576 ಮಂದಿಗೆ ಮಾತ್ರ ಇತ್ತು. ಇದರಲ್ಲಿಯೂ ದೂರದ ಊರಿನಲ್ಲಿದ್ದವರು ಮತದಾನಕ್ಕೆ ಬರದೆ ನಿರಾಸಕ್ತಿ ತೋರಿದ್ದಾರೆ. ನ.25ರಂದು ಮಂಗಳೂರಿನ ಕ್ಯಾಂಪ್ಕೋ ಪ್ರಧಾನ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ.
ಕೇರಳದ ಎಲ್ಲ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದೆ. ಕೇರಳದಿಂದ ಸಹಕಾರ ಭಾರತಿ ಬೆಂಬಲಿತ ಪದ್ಮರಾಜ ಪಟ್ಟಾಜೆ, ವೆಂಕಟರಮಣ ಭಟ್, ಸತ್ಯನಾರಾಯಣ ಪ್ರಸಾದ್, ಸತೀಶ್ಚಂದ್ರ ಭಂಡಾರಿ, ಸೌಮ್ಯಾ ಪ್ರಕಾಶ್, ರಾಧಾಕೃಷ್ಣ, ವಿವೇಕಾನಂದ ಗೌಡ, ಗಣೇಶ್ ಕುಮಾರ್, ಸದಾನಂದ ಶೆಟ್ಟಿ ಅವಿರೋಧ ಆಯ್ಕೆಯಾಗಿದ್ದಾರೆ. ಕರ್ನಾಟಕದ ಒಟ್ಟು 10 ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳಿಗೆ ಮಾಲಿನಿ ಪ್ರಸಾದ್, ಗಣೇಶ್, ರಾಘವೇಂದ್ರ ಎಚ್.ಎಂ., ಉತ್ತರ ಕನ್ನಡದ ವಿಶ್ವನಾಥ ಹೆಗಡೆ ಅವಿರೋಧ ಆಯ್ಕೆಯಾಗಿದ್ದಾರೆ.
ಉಳಿದ 6 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಕಣದಲ್ಲಿ ದಯಾನಂದ ಹೆಗ್ಡೆ, ಮಹೇಶ್ ಚೌಟ, ಮುರಳೀಕೃಷ್ಣ ಕೆ.ಎನ್., ಪುರುಷೋತ್ತಮ ಭಟ್, ಸತೀಶ್ಚಂದ್ರ ಎಸ್.ಆರ್., ತೀರ್ಥರಾಮ ಎ.ವಿ., ಎಂ.ಜಿ.ಸತ್ಯನಾರಾಯಣ, ರಾಮ್ ಪ್ರತೀಕ್ ಇದ್ದರು. ಹಿರಿಯ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಸೇರಿದಂತೆ ಚುನಾವಣೆ ಕಣಕ್ಕಿಳಿದಿದ್ದ ಹಲವರನ್ನು ಆರೆಸ್ಸೆಸ್ ನಾಯಕರು ಒತ್ತಡ ಹೇರಿ ನಾಮಪತ್ರ ಹಿಂಪಡೆಯುವಂತೆ ಮಾಡಿದ್ದರು.
ಈಗ ಕಣದಲ್ಲಿರುವವರ ಪೈಕಿ ಎಂ.ಜಿ.ಸತ್ಯನಾರಾಯಣ ಮತ್ತು ರಾಮ್ ಪ್ರತೀಕ್ ಭಾರತೀಯ ಕಿಸಾನ್ ಸಂಘಕ್ಕೆ ಸೇರಿದವರಾಗಿದ್ದು, ಇತರ 6 ಮಂದಿ ಸಹಕಾರ ಭಾರತಿಯಲ್ಲಿ ಗುರುತಿಸಿಕೊಂಡವರು. ಇವೆರಡೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗ ಸಂಸ್ಥೆಗಳೇ ಆಗಿವೆ. ಇವೆರಡು ಸಂಘಟನೆಗಳ ಸದಸ್ಯರ ನಡುವೆಯೇ ನಿರ್ದೇಶಕ ಸ್ಥಾನಕ್ಕೆ ಜಟಾಪಟಿ ನಡೆದಿದೆ.
ನ.25ರಂದು ಮತ ಎಣಿಕೆಯಾದರೂ ನ.28ರಂದು ಅಧಿಕೃತವಾಗಿ ಫಲಿತಾಂಶ ಘೋಷಣೆಯಾಗಲಿದೆ. ಮತ ಎಣಿಕೆ ಬಳಿಕ ವಿಜೇತರ ಹೆಸರನ್ನು ದೆಹಲಿಯ ಸಹಕಾರ ಇಲಾಖೆಗೆ ಕಳುಹಿಸಿ, ಅಲ್ಲಿಂದ ಅನುಮೋದನೆಗೊಂಡು ಪ್ರಕಟಗೊಳ್ಳಬೇಕಾಗಿದೆ. ಕ್ಯಾಂಪ್ಕೋಗೆ 15 ವರ್ಷಗಳ ನಂತರ ಈ ಬಾರಿ ಚುನಾವಣೆ ನಡೆದಿದೆ. 2010ರಲ್ಲಿ ನಿರ್ದೇಶಕರ ಕೆಲವು ಸ್ಥಾನಗಳಿಗೆ ಚುನಾವಣೆ ನಡೆದಿದ್ದು, ನಂತರದ ಎರಡು ಅವಧಿಗೆ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿತ್ತು. ಅಡಿಕೆ ವಹಿವಾಟು ಮತ್ತು ಕೊಕ್ಕೋನಿಂದ ಚಾಕಲೇಟ್ ತಯಾರಿಸುವ ಕ್ಯಾಂಪ್ಕೋ ವಾರ್ಷಿಕ ನೂರಾರು ಕೋಟಿ ವ್ಯವಹಾರ ನಡೆಸುತ್ತದೆ.
The prestigious Central Arecanut and Cocoa Marketing and Processing Cooperative (CAMPCO), one of the largest cooperative institutions of Coastal Karnataka, held elections on Sunday, November 23, after a gap of 15 years. Voting was recorded at 45.53%.
22-11-25 08:03 pm
HK News Desk
DK Shivakumar: ಸಿಎಂ ಅವರೇ ಐದು ವರ್ಷ ಇರೋದಾಗಿ ಹೇಳ...
22-11-25 02:25 pm
ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಹೇಳಿದ್ಯಾ? ಮತ್ಯಾಕೆ...
21-11-25 05:25 pm
ವಾಹನ ಸವಾರರಿಗೆ ಗುಡ್ ನ್ಯೂಸ್ ; ಮತ್ತೆ 50% ದಂಡ ವ...
21-11-25 10:19 am
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
23-11-25 09:21 pm
HK News Desk
ದುಬೈ ಏರ್ ಶೋನಲ್ಲಿ ಭಾರತೀಯ ತೇಜಸ್ ಯುದ್ಧ ವಿಮಾನ ಪತನ...
21-11-25 06:10 pm
ಶಬರಿಮಲೆ ಚಿನ್ನ ಲೂಟಿ ಪ್ರಕರಣ ; ಕೊನ್ನಿ ಕ್ಷೇತ್ರದ ಸ...
21-11-25 02:26 pm
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
24-11-25 11:16 am
Mangalore Correspondent
ಕಾಸರಗೋಡಿನಲ್ಲಿ ಮಲಯಾಳೀಕರಣ ; ಡಿಸೆಂಬರ್ 3ನೇ ವಾರದಲ್...
24-11-25 11:13 am
Mangaluru and Puttur: ನ.28ರಂದು ಪ್ರಧಾನಿ ಮೋದಿ ಉ...
23-11-25 03:25 pm
Mangalore Rain, Puttur: ಮಂಗಳೂರು, ಪುತ್ತೂರಿನಲ್ಲ...
22-11-25 10:44 pm
ಡಿ.3ರಂದು ಸಿದ್ದರಾಮಯ್ಯ ಸಿಎಂ ಆಗಿಯೇ ಕೋಣಾಜೆಗೆ ಬರಲಿ...
22-11-25 05:46 pm
23-11-25 07:17 pm
Bangalore Correspondent
Bangalore Atm Van Robbery, Arrest: ಮೆಗಾ ದರೋಡೆ...
22-11-25 07:55 pm
Bangalore Robbery, Police Arrested: ಮಹಾನ್ ದರೋ...
21-11-25 11:07 pm
ಮಲ್ಪೆ ಶಿಪ್ ಯಾರ್ಡ್ ನಿಂದ ಪಾಕಿಸ್ತಾನಕ್ಕೆ ಮಾಹಿತಿ ಸ...
21-11-25 05:11 pm
ಬೆಂಗಳೂರು ಎಟಿಎಂ ಹಣ ದರೋಡೆ ಪ್ರಕರಣ ; ತಿರುಪತಿಯಲ್ಲಿ...
20-11-25 10:53 pm