ಪುತ್ತೂರಿನಲ್ಲಿ ಜವಾಬ್ದಾರಿ ನೀಡಿದರೆ ಅಭ್ಯರ್ಥಿ ಯಾರಾದ್ರೂ ಪಕ್ಷವನ್ನು ಗೆಲ್ಲಿಸುತ್ತೇವೆ ; ಅರುಣ್ ಪುತ್ತಿಲ ಹೊಸ ಭರವಸೆ ! 

24-11-25 08:41 pm       Mangalore Correspondent   ಕರಾವಳಿ

ಪುತ್ತಿಲ ಪರಿವಾರ ಮತ್ತು ಬಿಜೆಪಿ ಮಧ್ಯೆ ಮತ್ತೆ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಕೊಡಬೇಕೆಂದು ರಾಜ್ಯ ಮುಖಂಡರು ಸೂಚಿಸಿದ್ದರು. ಆದರೆ ಯಾಕೆ ಕೊಟ್ಟಿಲ್ಲ ಅನ್ನೋದನ್ನು ಬಿಜೆಪಿ ಜಿಲ್ಲಾಧ್ಯಕ್ಷರೇ ಸ್ಪಷ್ಟಪಡಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. 

ಪುತ್ತೂರು, ನ.24 : ಪುತ್ತಿಲ ಪರಿವಾರ ಮತ್ತು ಬಿಜೆಪಿ ಮಧ್ಯೆ ಮತ್ತೆ ಅಸಮಾಧಾನ ಸ್ಪೋಟಗೊಂಡಿದೆ. ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ಕೊಡಬೇಕೆಂದು ರಾಜ್ಯ ಮುಖಂಡರು ಸೂಚಿಸಿದ್ದರು. ಆದರೆ ಯಾಕೆ ಕೊಟ್ಟಿಲ್ಲ ಅನ್ನೋದನ್ನು ಬಿಜೆಪಿ ಜಿಲ್ಲಾಧ್ಯಕ್ಷರೇ ಸ್ಪಷ್ಟಪಡಿಸಬೇಕು ಎಂದು ಅರುಣ್ ಕುಮಾರ್ ಪುತ್ತಿಲ ಹೇಳಿದ್ದಾರೆ. 

ಪುತ್ತೂರಿನಲ್ಲಿ ಸುದ್ದಿಗೋಷ್ಟಿ ವೇಳೆ ಮಾತನಾಡಿದ ಅವರು, ನನಗೆ ಪಕ್ಷದ ಜವಾಬ್ದಾರಿ ಕೊಡಬೇಕೆಂದು ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಸೂಚಿಸಲಾಗಿತ್ತು. ದ.ಕ. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮತ್ತು ನಾನು ಇರುವಾಗಲೇ ಪಕ್ಷದ ಹಿರಿಯರು ಸೂಚಿಸಿದ್ದರು. ಯಾವ ಜವಾಬ್ದಾರಿ ಮತ್ತು ಯಾಕೆ ಕೊಟ್ಟಿಲ್ಲ ಅನ್ನೋದನ್ನ ಬಿಜೆಪಿ ಜಿಲ್ಲಾಧ್ಯಕ್ಷರು ಸ್ಪಷ್ಟಪಡಿಸಬೇಕು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಹೇಳಿದರು. ಪಕ್ಷದಲ್ಲಿ ತನಗೆ ಜವಾಬ್ದಾರಿ ನೀಡಬೇಕೆಂದು ನಾನು ಕೇಳಿಲ್ಲ‌. ಕಾರ್ಯಕರ್ತರ ಭಾವನೆ ಆ ರೀತಿ ಇರಬಹುದು. ‌ಅಸಮಾಧಾನವೂ ಇರಬಹುದು. ಹಾಗಂತ, ನಾನು ಈ ಬಗ್ಗೆ ಪಕ್ಷದಲ್ಲಿ ಪ್ರಶ್ನೆ ಮಾಡಿಲ್ಲ ಎಂದರು. 

ಈಗಲೂ ಪುತ್ತೂರಿನಲ್ಲಿ ನಗರ ಮತ್ತು ಗ್ರಾಮಾಂತರ ಮಂಡಲಗಳನ್ನು ಜೋಡಿಸಿ ಜವಾಬ್ದಾರಿ ಕೊಟ್ಟಲ್ಲಿ ನಾಳೆಯೇ ಜವಾಬ್ದಾರಿ ತೆಗೆದುಕೊಳ್ಳುವೆ ಮತ್ತು ಪಕ್ಷವನ್ನು ಗೆಲ್ಲಿಸುವ ಕೆಲಸ ಮಾಡುತ್ತೇನೆ. ಯಾರು ಅಭ್ಯರ್ಥಿ ಎನ್ನುವ ವಿಚಾರ ಬದಿಗಿಟ್ಟು ಪಕ್ಷವನ್ನು ಗೆಲ್ಲಿಸುತ್ತೇನೆ ಎಂದು ಅರುಣ್ ಪುತ್ತಿಲ ಹೇಳಿದ್ದಾರೆ. 

ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ನನಗೆ ಅಮಿತ್ ಶಾ ಕರೆ ಮಾಡಿದ್ದರು ಎಂದು ಸುದ್ದಿ ಹಬ್ಬಿಸಿದ್ದರು. ಆದರೆ ನನಗೆ ಅಮಿತ್ ಶಾ ಕರೆ ಮಾಡಿಲ್ಲ. ಪಕ್ಷದ ಕಾರ್ಯಕರ್ತರ ಭಾವನೆಗೆ ಬೆಲೆ ಕೊಟ್ಟು ಸ್ಪರ್ಧಿಸಿದ್ದೆ ಎಂದು ಹೇಳಿದ ಅವರು, ಆನಂತರ ಪುತ್ತಿಲ ಪರಿವಾರದಲ್ಲಿ ಗುರುತಿಸಿಕೊಂಡಿದ್ದವರಿಗೆ ಪಕ್ಷ ಜವಾಬ್ದಾರಿ ನೀಡಿದೆ. ಆ ಸಂದರ್ಭದಲ್ಲಿ ನನಗೆ ಜವಾಬ್ದಾರಿ ಬೇಡ, ಕಾರ್ಯಕರ್ತರಿಗೆ ನೀಡುವಂತೆ ನಾನೇ ಹೇಳಿದ್ದೆ. ಆದರೆ ಕಾರ್ಯಕರ್ತರಿಗೆ ನನಗೆ ಜವಾಬ್ದಾರಿ ನೀಡದಿರುವುದು ಬೇಸರ ತಂದಿದೆ. 

ಈಗಲೂ ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲ ಒಟ್ಟು ಮಾಡಿ ಜವಾಬ್ದಾರಿ ನೀಡಿದರೆ ಪಕ್ಷ ಸಂಘಟನೆ ಮಾಡಲು ಬದ್ಧ. ಪುತ್ತೂರಿನಲ್ಲಿ ಮತ್ತೆ ಬಿಜೆಪಿಯನ್ನು ಗೆಲ್ಲಿಸುತ್ತೇವೆ, ಚುನಾವಣೆಗೆ ಯಾರು ನಿಂತರೂ ಅವರನ್ನು ಗೆಲ್ಲಿಸುವ ಪ್ರಯತ್ನ ಮಾಡುತ್ತೇನೆ. ಆದರೆ ಕಾರ್ಯಕರ್ತರ ಒಲವು ಯಾರ ಮೇಲಿದೆಯೋ ಅಂತಹ ಅಭ್ಯರ್ಥಿ ಪುತ್ತೂರಿಗೆ ಬೇಕು ಎಂದರು. ಕಾರ್ಯಕರ್ತರ ನಿಲುವಿಗೆ ನಾನು ಎಂದಿಗೂ ಬದ್ದ ಎಂದು ಅರುಣ್ ಪುತ್ತಿಲ ಹೇಳಿದ್ದಾರೆ.

Tensions have resurfaced between the Puthila family and the BJP once again. Arun Kumar Puthila has stated that senior leaders had instructed that he be given a key responsibility within the party, but the district president must clarify why it was not given.