ಬ್ರೇಕಿಂಗ್ ನ್ಯೂಸ್
26-11-25 07:21 pm Mangalore Correspondent ಕರಾವಳಿ
ಮಂಗಳೂರು, ನ.26 : ನಗರದ ಪೊಲೀಸ್ ಮೈದಾನದಲ್ಲಿ ನಡೆದ ಪೊಲೀಸರ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾಕೂಟದಲ್ಲಿ ಪುರುಷರ ವೈಯಕ್ತಿಕ ವಿಭಾಗದಲ್ಲಿ ಸಿಎಆರ್ ಮಂಗಳೂರು ವಿಭಾಗದ ನಾಗರಾಜ ಗೌಡ ವೈಯಕ್ತಿಕ ವಿಭಾಗದಲ್ಲಿ ಚಾಂಪ್ಯನ್ ಆಗಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಕದ್ರಿ ಠಾಣೆಯ ಮುನ್ಶಿದಾ ಬಾನು ವೈಯಕ್ತಿಕ ವಿಭಾಗದ ಚಾಂಪ್ಯನ್ ಆಗಿದ್ದರೆ, ತಂಡ ವಿಭಾಗದಲ್ಲಿ ಡಿಎಆರ್ ದಕ್ಷಿಣ ಕನ್ನಡ ಜಿಲ್ಲಾ ವಿಭಾಗವು ಸಮಗ್ರ ಪ್ರಶಸ್ತಿ ಪಡೆದಿದೆ.
ನಾಗರಾಜ ಗೌಡ ಅವರು 100 ಮೀಟರ್, 200 ಮೀಟರ್ ಮತ್ತು 400 ಮೀಟರ್ ವಿಭಾಗದಲ್ಲಿ ಮೊದಲ ಸ್ಥಾನಿಯಾಗಿದ್ದರೆ ಲಾಂಗ್ ಜಂಪ್ ನಲ್ಲಿ ತೃತೀಯ ಸ್ಥಾನಿಯಾಗಿದ್ದು ಒಟ್ಟು 16 ಅಂಕಗಳನ್ನು ಪಡೆದಿದ್ದಾರೆ.








ಪಿಎಸ್ಐ ವಿಭಾಗದಲ್ಲಿ 100 ಮೀಟರ್ ಓಟದಲ್ಲಿ ಉಳ್ಳಾಲ ಠಾಣೆಯ ಸಂತೋಷ್ ಕುಮಾರ್ ಪ್ರಥಮ, ಬಂದರು ಠಾಣೆಯ ವಿನಾಯಕ ತೋರಗಲ್ ದ್ವಿತೀಯ, ಆರ್ ಎಸ್ಐ ಮಹಮ್ಮದ್ ಆರಿಸ್ ತೃತೀಯ ಸ್ಥಾನಿಯಾಗಿದ್ದಾರೆ. ಇನ್ಸ್ ಪೆಕ್ಟರ್ ವಿಭಾಗದಲ್ಲಿ ಮುಲ್ಕಿ ಠಾಣೆಯ ಮಂಜುನಾಥ್ ಬಿ.ಎಸ್ ಪ್ರಥಮ, ಡಿಎಆರ್ ವಿಭಾಗದ ಬಾಗಣ್ಣ ವಾಲೀಕಾರ್ ದ್ವಿತೀಯ, ಬಜ್ಪೆ ಪಿಐ ಸಂದೀಪ್ ತೃತೀಯ ಸ್ಥಾನಿಯಾಗಿದ್ದಾರೆ.
100 ಮೀಟರ್ ಮಹಿಳಾ ಪಿಎಸ್ಐ ವಿಭಾಗದಲ್ಲಿ ಪುತ್ತೂರು ಠಾಣೆಯ ಸುಷ್ಮಾ ಜಿ, ಕದ್ರಿ ಠಾಣೆಯ ರೋಸಮ್ಮ, ಬಂದರು ಠಾಣೆಯ ಫೈಜುನ್ನೀಸಾ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಪಿಎಸ್ಐ ಶಾಟ್ ಪುಟ್ ವಿಭಾಗದಲ್ಲಿ ಪುನೀತ್ ಗಾಂವ್ಕರ್, ಅವಿನಾಶ್, ಉದಯ ರವಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಪಿಐ ಶಾಟ್ ಪುಟ್ ವಿಭಾಗದಲ್ಲಿ ಆರ್ ಪಿಐ ಪೈಗಂಬರ್, ಬಾಗಣ್ಣ ವಾಲಿಕರ್, ರವಿ ಪವಾರ್ ಕ್ರಮವಾಗಿ ಮೊದಲ ಸ್ಥಾನ ಪಡೆದಿದ್ದಾರೆ.
ಎಸಿಪಿ ಶಾಟ್ ಪುಟ್ ವಿಭಾಗದಲ್ಲಿ ಮನೋಜ್ ಕುಮಾರ್ ನಾಯ್ಕ್, ಶ್ರೀಕಾಂತ್ ಕೆ., ರವೀಶ್ ನಾಯಕ್ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಪಿಎಸ್ಐ ಮಹಿಳೆಯರ ಶಾಟ್ ಪುಟ್ ನಲ್ಲಿ ಸುಷ್ಮಾ, ಜ್ಯೋತಿ, ಫೈಜುನ್ನೀಸಾ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಪಿಎಸ್ಐ ಜಾವಲಿನ್ ತ್ರೋ ವಿಭಾಗದಲ್ಲಿ ಪುನೀತ್ ಗಾಂವ್ಕರ್, ರಾಮಕೃಷ್ಣ, ಮಾರುತಿ ಮೊದಲಿಗರಾಗಿದ್ದಾರೆ. ಪಿಐ ಜಾವಲಿನ್ ತ್ರೋ ವಿಭಾಗದಲ್ಲಿ ರವಿ ಪವಾರ್, ಪ್ರಮೋದ್ ಕುಮಾರ್, ಜಾನ್ಸನ್ ಡಿಸೋಜ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಎಸಿಪಿ –ಜಾವಲಿನ್ ವಿಭಾಗದಲ್ಲಿ ಮನೋಜ್ ಕುಮಾರ್ ನಾಯ್ಕ್, ರವೀಶ್ ನಾಯ್ಕ್, ಶ್ರೀಕಾಂತ್ ಸಾಧನೆ ಮಾಡಿದ್ದಾರೆ. ಪಿಎಸ್ಐ ಮಹಿಳಾ ವಿಭಾಗದಲ್ಲಿ ಸುಷ್ಮಾ ಜಿ, ಜ್ಯೋತಿ, ಸರಸ್ವತಿ ಜಿ.ಟಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಡಿಸ್ಕಸ್ ಪಿಎಸ್ಐ ವಿಭಾಗದಲ್ಲಿ ಸಂತೋಷ್ ಕುಮಾರ್, ಪುನೀತ್ ಗಾಂವ್ಕರ್, ಅರುಣ್ ಕುಮಾರ್ ಡಿ. ಮೊದಲ ಮೂರು ಸ್ಥಾನ ಪಡೆದಿದ್ದಾರೆ. ಡಿಸ್ಕಸ್ ಪಿಐ ವಿಭಾಗದಲ್ಲಿ ಪೈಗಂಬರ್, ಜಾನ್ಸನ್ ಡಿಸೋಜ, ಮಂಜುನಾಥ್ ಬಿ.ಎಸ್ ಮೊದಲ ಮೂರು ಸ್ಥಾನ ಗಳಿಸಿದ್ದಾರೆ. ಎಸಿಪಿ ವಿಭಾಗದಲ್ಲಿ ಡಿಸ್ಕಸ್ ಎಸೆದ ಶ್ರೀಕಾಂತ್ ಕೆ, ಮನೋಜ್ ಕುಮಾರ್ ನಾಯ್ಕ್, ಉಮೇಶ್ ಪಿ. ಅವರು ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಪುರುಷರ 200 ಮೀಟರ್ ವಿಭಾಗದಲ್ಲಿ ನಾಗರಾಜ ಗೌಡ, ಪುನೀತ್ ಕುಮಾರ್, ಚಂದನ್ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ. 400 ಮೀಟರ್ ನಲ್ಲಿ ನಾಗರಾಜ ಗೌಡ, ಪುನೀತ್ ಕುಮಾರ್, ವಿಘ್ನೇಶ್ವರ ಎಸ್.ಎನ್ ಮೊದಲಿಗರಾಗಿದ್ದಾರೆ. ಮಹಿಳೆಯರ 400 ಮೀಟರ್ ಓಟದಲ್ಲಿ ಮುನ್ಶಿದಾ ಬಾನು, ಶೋಭಾ, ಜ್ಯೋತಿ ಕಾಳೆ ಮೊದಲ ಮೂರು ಸ್ಥಾನ ಗಳಿಸಿದ್ದಾರೆ. 400 ಮೀಟರ್ ರಿಲೇಯಲ್ಲಿ ಡಿಎಆರ್ ಯೂನಿಟ್, ಸಿಎಆರ್ ಮಂಗಳೂರು, ಎಸ್ಎಎಫ್ ಮಂಗಳೂರು ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿದ್ದಾರೆ.
ಶೂಟಿಂಗ್ (9ಎಂಎಂ ಪಿಸ್ತೂಲ್) - ಎಸ್ಪಿ ಶ್ರೇಣಿಯಲ್ಲಿ ಸುಧೀರ್ ಕುಮಾರ್ ರೆಡ್ಡಿ ಪ್ರಥಮ, ಮಿಥುನ್ ಎಚ್.ಎನ್ ದ್ವಿತೀಯ, ಅನಿಲ್ ಕುಮಾರ್ ಭೂಮರೆಡ್ಡಿ ತೃತೀಯ ಸ್ಥಾನಿಯಾಗಿದ್ದಾರೆ. ಎಸಿಪಿ ವಿಭಾಗದಲ್ಲಿ ಗೀತಾ ಕುಲಕರ್ಣಿ, ಶ್ರೀಕಾಂತ್ ಕೆ., ರವೀಶ್ ನಾಯ್ಕ್ ಕ್ರಮವಾಗಿ ಮೊದಲ ಮೂರು ಸ್ಥಾನ ಗಳಿಸಿದ್ದಾರೆ. ಸಿಪಿಐ ವಿಭಾಗದಲ್ಲಿ ರಾಘವೇಂದ್ರ ಬೈಂದೂರು, ಮಂಜುನಾಥ ಬಿ.ಎಸ್, ಶಿವಕುಮಾರ್ ಸ್ಥಾನ ಪಡೆದಿದ್ದಾರೆ. ಪಿಎಸ್ಐ ವಿಭಾಗದಲ್ಲಿ ಎಸ್ಎಎಫ್ ಆರ್ ಎಸ್ಐ ನಿಂಗಣ್ಣ, ರಾಘವೇಂದ್ರ ನಾಯ್ಕ್, ಗುರಪ್ಪ ಕಾಂತಿ ಸ್ಥಾನ ಪಡೆದಿದ್ದಾರೆ.
ಬ್ಯಾಡ್ಮಿಂಟನ್ ಸಿಂಗಲ್ಸ್- ಎಸಿಪಿ-ಡಿಸಿಪಿ ಶ್ರೇಣಿಯಲ್ಲಿ ಮಿಥುನ್ ಎಚ್.ಎನ್,, ಶ್ರೀಕಾಂತ್ ಕೆ, ಮಹಿಳಾ ವಿಭಾಗದಲ್ಲಿ ಭಾರತಿ, ಗಾನ ಪಿ. ಕುಮಾರಿ ಮೊದಲೆರಡು ಸ್ಥಾನ ಪಡೆದಿದ್ದಾರೆ. ಪಿಐ ವಿಭಾಗದಲ್ಲಿ ಸಂದೀಪ್, ಪೈಗಂಬರ್, ಪಿಎಸ್ಐ ವಿಭಾಗದಲ್ಲಿ ಮಧು, ಮೊಹಮ್ಮದ್ ಆರಿಸ್ ಸ್ಥಾನ ಪಡೆದಿದ್ದಾರೆ. ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ಎಸಿಪಿ –ಮನೋಜ್ ಕುಮಾರ್ ನಾಯ್ಕ್, ವಿಜಯಕ್ರಾಂತಿ ತಂಡ ಪ್ರಥಮ, ಶ್ರೀಕಾಂತ್- ಗೀತಾ ಕುಲಕರ್ಣಿ ಜೋಡಿ ದ್ವಿತೀಯ ಸ್ಥಾನ ಪಡೆದಿದೆ. ಮಹಿಳಾ ವಿಭಾಗದಲ್ಲಿ ವಿಜಯಕ್ರಾಂತಿ- ಗೀತಾ ಕುಲಕರ್ಣಿ ಜೋಡಿ ಪ್ರಥಮ, ಗಾನ ಪಿ. ಕುಮಾರಿ- ಭಾರತಿ ಜೋಡಿ ದ್ವಿತೀಯ ಸ್ಥಾನಿಯಾಗಿದೆ.
ಬ್ಯಾಡ್ಮಿಂಟನ್ ಡಬಲ್ಸ್ – ಪಿಐ ವಿಭಾಗದಲ್ಲಿ ಮಂಜುನಾಥ್ ಬಿ.- ಪೈಗಂಬರ್ ಜೋಡಿ ಪ್ರಥ, ಸುನಿಲ್ –ಶಿವಕುಮಾರ್ ತಂಡ ದ್ವಿತೀಯ ಸ್ಥಾನ ಗಳಿಸಿದೆ. ಪಿಎಸ್ಐ ವಿಭಾಗದಲ್ಲಿ ಮೊಹಮ್ಮದ್ ಆರಿಸ್- ಮಾರುತಿ ಜೋಡಿ ಪ್ರಥಮ, ಮಧು – ಗುರಪ್ಪ ಕಾಂತಿ ಜೋಡಿ ದ್ವಿತೀಯ ಸ್ಥಾನಿಯಾಗಿದೆ.
ಸ್ವಿಮ್ಮಿಂಗ್ ; ಎಸ್ಪಿ-ಎಸಿಪಿ ವಿಭಾಗದಲ್ಲಿ ಮಿಥುನ್ ಎಚ್.ಎನ್ ಪ್ರಥಮ, ಪೈಗಂಬರ್ ದ್ವಿತೀಯ, ಮನೋಜ್ ಕುಮಾರ್ ನಾಯ್ಕ್ ತೃತೀಯ ಸ್ಥಾನಿಯಾಗಿದ್ದಾರೆ. ಕಬಡ್ಡಿಯಲ್ಲಿ ಬೆಳ್ತಂಗಡಿ ಸಬ್ ಡಿವಿಶನ್ ಪ್ರಥಮ, ಸಿಎಆರ್ ಮಂಗಳೂರು ಯೂನಿಟ್ ದ್ವಿತೀಯ ಸ್ಥಾನ ಪಡೆದಿದೆ. ವಾಲಿಬಾಲ್ ನಲ್ಲಿ ಡಿಎಆರ್ ದ.ಕ. ಜಿಲ್ಲೆ ಪ್ರಥಮ, ಎಸ್ಎಎಫ್ ಯೂನಿಟ್ ಮಂಗಳೂರು ದ್ವಿತೀಯ ಸ್ಥಾನ ಗಳಿಸಿದೆ. ಭಾರೀ ಜಿದ್ದಾಜಿದ್ದಿನಲ್ಲಿ ನಡೆದ ಹಗ್ಗ ಜಗ್ಗಾಟ ಫೈನಲ್ ನಲ್ಲಿ ಬಂಟ್ವಾಳ ಉಪ ವಿಭಾಗ ಪ್ರಥಮ ಹಾಗೂ ಎಸ್ಎಎಫ್ ಯೂನಿಟ್ ದ್ವಿತೀಯ ಸ್ಥಾನಿಯಾಗಿದೆ. ನ.22, 23, 24ರಂದು ಮೂರು ದಿನ ಮಂಗಳೂರು ಪೊಲೀಸ್ ಪರೇಡ್ ಮೈದಾನದಲ್ಲಿ ಕ್ರೀಡಾಕೂಟ ನಡೆಯಿತು. ಸಮಾರೋಪದಲ್ಲಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮತ್ತು ಎಸ್ಪಿ ಅರುಣ್ ವಿಜೇತರಿಗೆ ಟ್ರೋಫಿ, ಪ್ರಶಸ್ತಿ ಪತ್ರ ವಿತರಿಸಿದರು.
At the district-level Police Annual Sports Meet held at the Mangaluru Police Grounds, Nagaraj Gowda of CAR Mangaluru emerged as the overall men’s individual champion, winning the 100m, 200m, and 400m races along with a third place in long jump, securing 16 points. In the women’s category, Munshida Banu of Kadri Police Station clinched the individual championship.
26-11-25 05:53 pm
HK News Desk
ಭೀಕರ ಕಾರು ಅಪಘಾತ ; ಹಿರಿಯ ಐಎಎಸ್ ಅಧಿಕಾರಿ, ಬೆಸ್ಕಾ...
25-11-25 09:49 pm
DK Shivakumar: ಮುಖ್ಯಮಂತ್ರಿ ಬದಲಾವಣೆ ನಾಲ್ಕು ಜನರ...
25-11-25 07:58 pm
ವಿಂಜೋ ಗೇಮಿಂಗ್ ಸಂಸ್ಥೆ ಮೇಲೆ ಇಡಿ ದಾಳಿ ; 527 ಕೋಟಿ...
25-11-25 06:58 pm
ಮಂಗಳೂರಿನ ಧನಲಕ್ಷ್ಮಿ ಪೂಜಾರಿ ಪ್ರತಿನಿಧಿಸಿದ ಮಹಿಳಾ...
25-11-25 02:18 pm
26-11-25 07:16 pm
HK News Desk
ಅಯೋಧ್ಯೆಯಲ್ಲಿ ಹತ್ತಡಿ ಎತ್ತರದ ಬೃಹತ್ ಭಗವಾಧ್ವಜ ಅನಾ...
25-11-25 04:30 pm
ಚೆನ್ನೈ ; ಎರಡು ಖಾಸಗಿ ಬಸ್ಗಳ ನಡುವೆ ಅಪಘಾತ, 6 ಮಂದ...
24-11-25 10:04 pm
ಬಾಲಿವುಡ್ ಚಿತ್ರರಂಗದ ದಂತಕಥೆ, 'ಹೀ ಮ್ಯಾನ್' ಖ್ಯಾತ...
24-11-25 03:37 pm
Explosives Gelatin Sticks, High Alert in Utta...
23-11-25 09:21 pm
26-11-25 07:21 pm
Mangalore Correspondent
ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್ ವರೆಗೆ ಮೋದಿ ರೋಡ್ ಶ...
26-11-25 03:34 pm
ಪ್ರಧಾನಿ ಮೋದಿ ಆಗಮನದಿಂದ ಸಂಚಾರ ತೊಡಕು ; ನ.28ರಂದು...
25-11-25 10:51 pm
ಪುಸ್ತಕ ಮೇಳದಲ್ಲಿ ಸಾಹಿತಿಗಳ ಗೌರವಕ್ಕಾಗಿ 25 ಸಾವಿರದ...
25-11-25 10:07 pm
ಕ್ಯಾಂಪ್ಕೋ ಆಡಳಿತ ಮಂಡಳಿಗೆ ಚುನಾವಣೆ ; ಸಹಕಾರ ಭಾರತಿ...
25-11-25 09:53 pm
26-11-25 06:26 pm
Mangalore Correspondent
ಲಂಡನ್ ಲೇಡಿಯೆಂದು ಹೇಳಿ ವಂಚನೆ ; 30 ಲಕ್ಷದ ಪೌಂಡ್ಸ್...
26-11-25 02:39 pm
ಎಡಪದವು ; ಯುವಕನಿಗೆ ತಲವಾರು ದಾಳಿ ನಡೆಸಿದ ನಾಲ್ವರು...
26-11-25 12:10 pm
Hubballi Gold Robbery: ಬೆಂಗಳೂರು ದರೋಡೆ ಬೆನ್ನಲ್...
25-11-25 05:03 pm
ಆನ್ಲೈನ್ನಲ್ಲಿ ಅಧಿಕ ಲಾಭದ ಆಸೆಗೆ ಬಿದ್ದ ಹೊನ್ನಾವರ...
24-11-25 08:37 pm