ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬಕ್ಕೆ 1.20 ಕೋಟಿ ಪರಿಹಾರ ಘೋಷಣೆ

17-10-26 07:34 pm       HK News Desk   ಕರಾವಳಿ

ಎಂಆರ್ ಪಿಎಲ್ ಮೂರನೇ ಹಂತದ ಘಟಕದಲ್ಲಿ ನಡೆದ ಸ್ಫೋಟ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಸುರತ್ಕಲ್ ನಿವಾಸಿ ರಾಜೇಶ್ ಡಿಸಿಲ್ವಾ ಕುಟುಂಬಕ್ಕೆ ಸಂಸ್ಥೆಯಿಂದ 1.20 ಕೋಟಿ ರೂ. ಪರಿಹಾರ ಘೋಷಿಸಲಾಗಿದೆ.

ಮಂಗಳೂರು, ಅ.17: ಎಂಆರ್ ಪಿಎಲ್ ಮೂರನೇ ಹಂತದ ಘಟಕದಲ್ಲಿ ನಡೆದ ಸ್ಫೋಟ ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಫಲಿಸದೆ ಮೃತಪಟ್ಟ ಸುರತ್ಕಲ್ ನಿವಾಸಿ ರಾಜೇಶ್ ಡಿಸಿಲ್ವಾ ಕುಟುಂಬಕ್ಕೆ ಸಂಸ್ಥೆಯಿಂದ 1.20 ಕೋಟಿ ರೂ. ಪರಿಹಾರ ಘೋಷಿಸಲಾಗಿದೆ. 

ಸೆ.30ರಂದು ನಡೆದ ದುರಂತದಲ್ಲಿ ರಾಜೇಶ್ ಡಿಸಿಲ್ವಾ(38) ಅವರು 40 ಪರ್ಸೆಂಟ್ ಸುಟ್ಟ ಗಾಯಗಳಿಂದ ಆಸ್ಪತ್ರೆಗೆ ಸೇರಿದ್ದರು. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗೆ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಎಂಆರ್ ಪಿಎಲ್ ಆಡಳಿತವು ಪರಿಹಾರದ ಪ್ರಕಟಣೆಯನ್ನು ಘೋಷಣೆ ಮಾಡಿದೆ. 

ಘಟನೆಯಲ್ಲಿ ಸ್ಥಳದಲ್ಲೇ ಮೃತಪಟ್ಟಿದ್ದ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ ಕುಟುಂಬಕ್ಕೆ ಎಂಆರ್ ಪಿಎಲ್ ಸಂಸ್ಥೆಯಿಂದ ಈಗಾಗಲೇ 1.20 ಕೋಟಿ ಪರಿಹಾರದ ಘೋಷಣೆಯಾಗಿತ್ತು. ಇನ್ನೂ ಏಳು ಮಂದಿ ಗಾಯಗೊಂಡಿದ್ದು ಚಿಕಿತ್ಸೆ ಪಡೆದು ಚೇತರಿಕೆ ಹೊಂದಿದ್ದಾರೆ. ಅವರಿಗೆ ವೇತನ ಸಹಿತ ಆಸ್ಪತ್ರೆ ಖರ್ಚು ಭರಿಸುವುದಾಗಿ ಸಂಸ್ಥೆಯ ಆಡಳಿತ ಹೇಳಿತ್ತು. ‌