ಬ್ರೇಕಿಂಗ್ ನ್ಯೂಸ್
24-11-26 10:51 am HK News Staffer ಕರಾವಳಿ
ಮಂಗಳೂರು, ನ.24: ನಗರದ ಕದ್ರಿ ಪೊಲೀಸ್ ಠಾಣೆ ಮುಂಭಾಗದ ಯುದ್ದ ಸ್ಮಾರಕ ಬಳಿ ಇರಿಸಲಾಗಿರುವ ಅತ್ಯಾಕರ್ಷಕ ಯುದ್ಧ ಟ್ಯಾಂಕ್ ಮೇಲೇರಿ ಇಬ್ಬರು ಯುವಕರು ಅಸಭ್ಯ ವರ್ತನೆ ತೋರಿದ ವಿಡಿಯೋ ಜಾಲತಾಣದಲ್ಲಿ ಕಂಡುಬಂದಿದ್ದು ಕಿಡಿಗೇಡಿ ಕೃತ್ಯದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.
ರಾತ್ರಿ ಹೊತ್ತು ಸ್ಮಾರಕದ ಹೊರಗಡೆ ಇರಿಸಿರುವ T55 ಯುದ್ದ ಟ್ಯಾಂಕ್ ಮೇಲೆ ಯುವಕರಿಬ್ಬರು ಹೋಗಿದ್ದು ಅದನ್ನು ಜೊತೆಗಿದ್ದ ಇನ್ನೊಬ್ಬ ವಿಡಿಯೋ ಮಾಡಿದ್ದಾನೆ. 1971ರಲ್ಲಿ ಪಾಕಿಸ್ತಾನ ವಿರುದ್ದ ಯುದ್ಧದಲ್ಲಿ ಭಾಗವಹಿಸಿ ಸೇನೆಯಿಂದ ನಿವೃತ್ತಿಯಾಗಿದ್ದ T55 ಯುದ್ದ ಟ್ಯಾಂಕ್ ಕರಾವಳಿಯ ಯುವಜನರಿಗೆ ಪ್ರೇರಣೆಯಾಗಲಿ, ಶೌರ್ಯದ ಸಂಕೇತವಾಗಲಿ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಮುತುವರ್ಜಿಯಲ್ಲಿ ಯುದ್ಧ ಸ್ಮಾರಕದ ಬಳಿ ಇರಿಸಲಾಗಿತ್ತು.
ಅದಕ್ಕಾಗಿ ಭವ್ಯ ರೀತಿಯ ಪೀಠವೊಂದನ್ನು ರಚಿಸಿ, ರಾತ್ರಿಗೆ ಲೈಟಿಂಗ್ ವ್ಯವಸ್ಥೆ ಮಾಡಲಾಗಿತ್ತು. ಎರಡು ತಿಂಗಳ ಹಿಂದಷ್ಟೇ ಇದನ್ನು ಲೋಕಾರ್ಪಣೆ ಮಾಡಲಾಗಿತ್ತು. ಇದೀಗ ಕಿಡಿಗೇಡಿ ಯುವಕರು ಟ್ಯಾಂಕ್ ಮೇಲೆ ಹತ್ತಿ ಅಸಭ್ಯ ವರ್ತನೆ ತೋರಿದ್ದು ಯುದ್ಧ ಟ್ಯಾಂಕ್ ಗೆ ಅವಮಾನ ಮಾಡಿದ್ದಾರೆಂಬ ಭಾವನೆ ಜನರಿಂದ ವ್ಯಕ್ತವಾಗಿದೆ. ಯುವಕರ ವರ್ತನೆಗೆ ಸಾರ್ವಜನಿಕ ವಲಯದಿಂದ ಆಕ್ರೋಶ ಕೇಳಿಬಂದಿದೆ. ಯುದ್ಧ ಸ್ಮಾರಕದ ಬಳಿ ಮುಖ್ಯರಸ್ತೆ ಬದಿಯ ಎತ್ತರದ ಸ್ಥಳದಲ್ಲಿ ಅದರಲ್ಲೂ ಕದ್ರಿ ಪೊಲೀಸ್ ಠಾಣೆ ಮುಂಭಾಗದಲ್ಲೇ ಸಾರ್ವಜನಿಕರ ವೀಕ್ಷಣೆಗೆ ಇರಿಸಲಾಗಿದ್ದರೂ ಕಿಡಿಗೇಡಿಗಳು ಟ್ಯಾಂಕ್ ಮೇಲೆ ಹತ್ತಿ ವಿಕೃತಿ ತೋರಿದ್ದಾರೆ.
ಆರೋಪಿಗಳನ್ನು ಪತ್ತೆಹಚ್ಚಿ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ವಲಯದಿಂದ ಆಗ್ರಹ ವ್ಯಕ್ತವಾಗಿದೆ.
23-11-26 09:23 pm
HK News Staffer
ಸ್ಟಿಂಗ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್, ಜನಪ್ರತಿನಿಧಿ...
23-11-26 12:02 pm
ಬಸವಣ್ಣ ಬಗ್ಗೆ ಅವಹೇಳನ ಆರೋಪ ; 'ಬಸವ ಮಂಟಪ' ಕೃತಿ ಮು...
20-11-26 05:15 pm
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
24-11-26 10:51 am
HK News Staffer
ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇ...
24-11-26 10:49 am
ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಜಾರಿಯಾಗದ ಹಿ...
24-11-26 09:45 am
ಮಂಗಳೂರು ಕಮಿಷನರೇಟ್ ; ರಾತ್ರಿ ವಹಿವಾಟು ನಿರ್ಬಂಧ ಸಡ...
23-11-26 09:25 pm
ಫೇಕ್ ಜನೌಷಧಿ ಕೇಂದ್ರಗಳ ತಪಾಸಣೆ ಸಮರ್ಥಿಸಿದ ಸಚಿವ ಖಾ...
23-11-26 05:15 pm
23-11-26 02:24 pm
HK News Staffer
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm