ಬ್ರೇಕಿಂಗ್ ನ್ಯೂಸ್
24-11-26 10:49 am HK News Staffer ಕರಾವಳಿ
ಮಂಗಳೂರು, ನ.24: ಮಹಿಳಾ ಪೊಲೀಸರು ಹಾಗೂ ಘಟ್ಟದ ಭಾಗದ ಪೊಲೀಸ್ ಸಿಬ್ಬಂದಿ ಕುರಿತು ಪೊಲೀಸ್ ಕಮಿಷನರ್ ಕಾರು ಚಾಲಕ ಅರುಣ್ ಆಳ್ವ ಅವಹೇಳನಕಾರಿಯಾಗಿ ಮಾತನಾಡಿರುವ ಆಡಿಯೊ ವೈರಲ್ ಆಗಿದ್ದು ಇದರ ಬೆನ್ನಲ್ಲೇ ಕಾರು ಚಾಲಕನನ್ನು ಇಲಾಖಾ ವಿಚಾರಣೆ ಕಾಯ್ದಿರಿಸಿ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ವೈರಲ್ ಆಗಿರುವ ಆಡಿಯೋದಲ್ಲಿ ಚಾಲಕ ಅರುಣ್ ಮಾತನಾಡಿರುವುದು ದೃಢಪಟ್ಟಿದೆ. ಮೈದಾನದಲ್ಲಿ ವಾಯುವಿಹಾರ ನಡೆಸುತ್ತಿದ್ದ ಅಮಾಯಕರೊಬ್ಬರನ್ನು ಲೂಟಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿದ್ದ ಮೂವರು ಕಾನ್‌ಸ್ಟೇಬಲ್‌ಗಳ ಕುರಿತು ಆತ ಫೋನ್‌ನಲ್ಲಿ ಚರ್ಚಿಸಿದ್ದು ಈ ಸಂದರ್ಭದಲ್ಲಿ ಅವಹೇಳನಕಾರಿ ಮಾತನಾಡಿದ್ದ. ಈ ಕಾರಣಕ್ಕೆ ಅವರನ್ನು ಅಮಾನತು ಮಾಡಲಾಗಿದೆ' ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.
'ವ್ಯಕ್ತಿಯೊಬ್ಬರಿಂದ ಈ ಹಿಂದೆ ಎರಡು ಬಾರಿ ಹಣ ಸುಲಿಗೆ ಮಾಡಿದ್ದ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣದಲ್ಲಿ ಆ ಮೂವರು ಕಾನ್‌ಸ್ಟೆಬಲ್‌ಗಳನ್ನು ಬಂಧಿಸಲಾಗಿತ್ತು. ಈ ವಿಷಯದ ಕುರಿತು ಫೋನ್ ಸಂಭಾಷಣೆ ನಡೆಸುವಾಗ ಚಾಲಕ ಅರುಣ್ ಆಕ್ಷೇಪಾರ್ಹ ಪದಗಳನ್ನು ಬಳಸಿರುವುದು ಕಂಡುಬಂದಿದೆ. ಹೀಗಾಗಿ, ತಕ್ಷಣದಿಂದ ಜಾರಿಗೆ ಬರುವಂತೆ ಆತನನ್ನು ಅಮಾನತುಗೊಳಿಸಿ ಇಲಾಖಾ ವಿಚಾರಣೆಗೆ ಆದೇಶಿಸಲಾಗಿದೆ.
ಇತ್ತೀಚಿಗೆ ನಗರದ ನೆಹರು ಮೈದಾನದಲ್ಲಿ ರಾತ್ರಿ ವೇಳೆ ವಾಕಿಂಗ್ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಮೂವರು ಪೊಲೀಸರು ಹೊಯ್ಸಳ ಬೀಟ್ ನಡೆಸುತ್ತಿದ್ದ ಸಂದರ್ಭ ಹಲ್ಲೆ ನಡೆಸಿ ಹಣ ಪೀಕಿಸಿದ್ದಲ್ಲದೆ, ಆತನ ಎಟಿಎಂ ಕಾರ್ಡ್ಗಳನ್ನು ಪಡೆದು ಹಣ ಲೂಟಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಆ ಮೂವರ ವಿರುದ್ಧ ಪ್ರಕರಣ ದಾಖಲಾಗಿ ಬಂಧನಕ್ಕೊಳಗಾಗಿದ್ದರು. ಅವರು ಘಟ್ಟದ ಮೇಲಿನರವರಾಗಿದ್ದು ಕರಾವಳಿಯ ಪೊಲೀಸರ ಮಾನ ಕಳೆದರು ಎನ್ನುವ ರೀತಿ ಮಾತುಗಳು ಕೇಳಿಬಂದಿದ್ದವು. ಇದೇ ವಿಚಾರದಲ್ಲಿ ಅರುಣ್ ಇತರ ಪೊಲೀಸ್ ಸಿಬಂದಿ ಜೊತೆಗೆ ಫೋನಿನಲ್ಲಿ ಮಾತನಾಡಿ ಸಿಕ್ಕಿಬೀಳುವಂತಾಗಿದೆ.
23-11-26 09:23 pm
HK News Staffer
ಸ್ಟಿಂಗ್ ಹೆಸರಿನಲ್ಲಿ ಬ್ಲ್ಯಾಕ್ ಮೇಲ್, ಜನಪ್ರತಿನಿಧಿ...
23-11-26 12:02 pm
ಬಸವಣ್ಣ ಬಗ್ಗೆ ಅವಹೇಳನ ಆರೋಪ ; 'ಬಸವ ಮಂಟಪ' ಕೃತಿ ಮು...
20-11-26 05:15 pm
2028ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ ; ಮಾಜಿ ಸಿಎಂ...
20-11-26 12:04 pm
ಹಿರಿಯೂರು ಅಭ್ಯರ್ಥಿ ; ನಾವು ಕುಮಾರಸ್ವಾಮಿ ಜೊತೆ ಮಾತ...
19-11-26 12:32 pm
21-11-26 11:44 am
HK News Staffer
ಜಾಗತಿಕ ಜನಸಂಖ್ಯೆಯಲ್ಲಿ ಇಸ್ಲಾಂ ಪಾರಮ್ಯ ; 2035ಕ್ಕೆ...
20-11-26 12:58 pm
ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ; ಮಾಜಿ ಮುಖ್ಯಸ್...
19-11-26 07:30 pm
"ಧರ್ಮ ಯಾವುದೇ ಇರಲಿ, ಪ್ರತಿಯೊಬ್ಬ ಭಾರತೀಯನ ರಕ್ತದಲ್...
19-11-26 01:19 pm
ಸೌದಿಗೆ ನವೆಂಬರ್ 30ರ ವರೆಗೆ ವಿಮಾನ ಸೇವೆ ರದ್ದು ; ಇ...
18-11-26 11:28 pm
24-11-26 10:51 am
HK News Staffer
ವಾಕಿಂಗ್ ಮಾಡ್ತಿದ್ದವರಿಂದ ವಸೂಲಿ ಪ್ರಕರಣ, ಘಟ್ಟದ ಮೇ...
24-11-26 10:49 am
ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶ ಜಾರಿಯಾಗದ ಹಿ...
24-11-26 09:45 am
ಮಂಗಳೂರು ಕಮಿಷನರೇಟ್ ; ರಾತ್ರಿ ವಹಿವಾಟು ನಿರ್ಬಂಧ ಸಡ...
23-11-26 09:25 pm
ಫೇಕ್ ಜನೌಷಧಿ ಕೇಂದ್ರಗಳ ತಪಾಸಣೆ ಸಮರ್ಥಿಸಿದ ಸಚಿವ ಖಾ...
23-11-26 05:15 pm
23-11-26 02:24 pm
HK News Staffer
ತಲೆ ಕಡಿದು ಧ್ವನಿ ಅಡಗಿಸಬಹುದು, ನ್ಯಾಯದ ಧ್ವನಿಯನ್ನಲ...
23-11-26 11:59 am
ಸತ್ತಿದ್ದಾಳೆ ಎಂದ ಮಹಿಳೆ 7 ವರ್ಷಗಳ ಬಳಿಕ ಪ್ರತ್ಯಕ್ಷ...
21-11-26 04:41 pm
ಬೆಳಗಾವಿಯಲ್ಲಿ ಗೃಹಲಕ್ಷ್ಮಿ ಹಣಕ್ಕಾಗಿ ಅಜ್ಜಿಯನ್ನೇ ಕ...
21-11-26 12:41 pm
'ಬಸವ ಮಂಟಪ' ಕೃತಿ ವಿವಾದ ಹಿನ್ನೆಲೆ ; ಲೇಖಕ ರವಿ ಹಂಜ...
21-11-26 12:33 pm