ಬ್ರೇಕಿಂಗ್ ನ್ಯೂಸ್
19-10-26 07:10 pm HK News Staffer ಕರಾವಳಿ
ಮುಂಬೈ, ಅ.19: ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದ ಸಹಕಾರ ಸಚಿವ ಬಾಬಾಸಾಹೇಬ್ ಪಾಟೀಲ್ ಅವರಿಗೆ ಬಾಂಬೆ ಹೈಕೋರ್ಟ್ ಔರಂಗಾಬಾದ್ ಪೀಠವು 10 ವರ್ಷಗಳ ಬಳಿಕ ನಿರ್ದೇಶಕ ಹುದ್ದೆ ಬಿಟ್ಟುಕೊಡಬೇಕೆಂಬ ನಿಯಮದಲ್ಲಿ ರಿಲೀಫ್ ನೀಡಲು ನಿರಾಕರಿಸಿದೆ.
ಸಹಕಾರಿ ಬ್ಯಾಂಕಿನಲ್ಲಿ ಸತತ 37 ವರ್ಷಗಳಿಂದ ನಿರ್ದೇಶಕರಾಗಿದ್ದ ಪಾಟೀಲ್ ಅವರನ್ನು ಆರ್‌ಬಿಐ ನಿರ್ದೇಶಕ ಸ್ಥಾನದಿಂದ ತೆಗೆದುಹಾಕಿರುವ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರು. ಆರ್‌ಬಿಐ ಜಾರಿಗೊಳಿಸಿರುವ ನಿರ್ದೇಶಕತ್ವದ 10 ವರ್ಷಗಳ ಗರಿಷ್ಠ ಮಿತಿಯ ನಿರ್ಬಂಧ ಅನುಷ್ಠಾನ ವಿಚಾರದಲ್ಲಿ ದೇಶದ ಹಲವಡೆ ಕೋರ್ಟ್ ಮೆಟ್ಟಿಲೇರಿರುವ ಬೆಳವಣಿಗೆ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವ ಪಡೆದಿದೆ.
ದೀರ್ಘ ಕಾಲದಿಂದ ನಿರ್ದೇಶಕ ಸ್ಥಾನದಲ್ಲಿರುವವರ ಅಧಿಕಾರಾವಧಿ, ಬ್ಯಾಂಕ್ ಆಡಳಿತ ಮಂಡಳಿಗಳ ಪುನರ್‌ರಚನೆ ಹಾಗೂ ಆಡಳಿತದಲ್ಲಿ ಹೊಸಬರಿಗೆ ಅವಕಾಶ ಕಲ್ಪಿಸುವ ವಿಚಾರಗಳು ಸಹಕಾರ ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.
ಆರ್‌ಬಿಐ ಆದೇಶ ಪ್ರಶ್ನಿಸಿ ಅರ್ಜಿ;
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, 1949ರ ಸೆಕ್ಷನ್ 10ಎ(2ಎ)(i) ಅಡಿಯಲ್ಲಿ ಆರ್‌ಬಿಐ 2026ರ ಸೆಪ್ಟೆಂಬರ್ 18ರಂದು ಹೊರಡಿಸಿದ್ದ ಆದೇಶ ಪ್ರಕಾರ, ಪಾಟೀಲ್ ಅವರನ್ನು ನಿರ್ದೇಶಕ ಸ್ಥಾನದಿಂದ ತೆರವು ಮಾಡಲಾಗಿತ್ತು. ಈ ಆದೇಶವನ್ನು ಪ್ರಶ್ನಿಸಿ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ತಿದ್ದುಪಡಿ ಮಾಡಲಾದ ನಿರ್ದೇಶಕತ್ವದ ಅವಧಿ ನಿರ್ಬಂಧವನ್ನು ಆರ್‌ಬಿಐ ಹಿಂದಿನ ಅವಧಿಗೂ ಅನ್ವಯಿಸುವಂತೆ ತಪ್ಪಾಗಿ ಜಾರಿಗೊಳಿಸಿದೆ ಎಂದು ಪಾಟೀಲ್ ವಾದಿಸಿದ್ದರು.
ಇದಕ್ಕೆ ಪ್ರತಿಯಾಗಿ ಆರ್‌ಬಿಐ, ಕಾಯ್ದೆಯಲ್ಲಿರುವ ‘ನಿರಂತರವಾಗಿ ಅಧಿಕಾರದಲ್ಲಿರುವುದು’ ಎಂಬ ಪದಪ್ರಯೋಗದ ಆಧಾರದ ಮೇಲೆ ಈ ನಿಯಮ ಅನ್ವಯಿಸುತ್ತದೆ ಎಂದು ವಾದಿಸಿತು. ತಿದ್ದುಪಡಿ ನಿಯಮವು ಹಿಂದಿನ ಅವಧಿಯನ್ನು ಪರಿಗಣಿಸುವುದಕ್ಕಿಂತ, ಪ್ರಸ್ತುತ ಮುಂದುವರಿಯುತ್ತಿರುವ ನಿರ್ದೇಶಕತ್ವದ ಅವಧಿಗೆ ಅನ್ವಯಿಸುತ್ತದೆ ಎಂದು ಆರ್‌ಬಿಐ ಹೇಳಿತ್ತು.
ನ್ಯಾಯಮೂರ್ತಿಗಳಾದ ನಿತಿನ್ ಬಿ. ಸೂರ್ಯವಂಶಿ ಮತ್ತು ಅಬಾಸಾಹೇಬ್ ಡಿ. ಶಿಂಧೆ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪಾಟೀಲ್ ಅವರು 37 ವರ್ಷಗಳ ಕಾಲ ನಿರ್ದೇಶಕರಾಗಿ ಸೇವೆ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆರ್‌ಬಿಐ ವಾದದಲ್ಲಿ ಮೇಲ್ನೋಟಕ್ಕೆ ನ್ಯಾಯಸಮ್ಮತ ಅಂಶಗಳಿವೆ ಎಂದು ಅಭಿಪ್ರಾಯಪಟ್ಟಿತು.
17-10-26 07:30 pm
HK News Staffer
Davanagere Accident: ದಾವಣಗೆರೆ ; ಸಿಎನ್ಜಿ ಲಾರಿ...
16-10-26 09:49 pm
ಸ್ಟಿಂಗ್ ಆಪರೇಷನ್ ಕೇಸ್ ನಲ್ಲಿ ನನ್ನನ್ನು ಸಿಲುಕಿಸ...
15-10-26 02:30 pm
108 ಆಂಬುಲೆನ್ಸ್ ಸ್ಥಗಿತಗೊಳಿಸಿ ಮುಷ್ಕರ ; 108 ಸೇವೆ...
14-10-26 02:02 pm
Siddaramaiah: ಸಿದ್ದರಾಮಯ್ಯ ವಿರುದ್ಧ ನಕಲಿ ಸ್ಟಿಂ...
14-10-26 10:35 am
14-10-26 04:59 pm
HK News Staffer
BMW Car News: ಟೈರ್ ಪಂಕ್ಚರ್ ಆಗಿದ್ದಕ್ಕೆ ರಸ್ತೆ ಬ...
14-10-26 12:54 pm
16 ವರ್ಷದ ಬಾಲಕಿಗೆ ರೋಬೋಟ್ ನಿಂದ ಲೈಂಗಿಕ ಕಿರುಕುಳ!...
14-10-26 10:57 am
ರಾಜಧಾನಿ ದೆಹಲಿಯ ಜಂತರ್ ಮಂತರ್ ನಲ್ಲಿ ಇನ್ನು ಮುಂದೆ...
12-10-26 05:22 pm
ಅಕ್ಟೋಬರ್ 7ರ ದಾಳಿ ಸೂತ್ರಧಾರ ಹಮಾಸ್ ಕಮಾಂಡರ್ ಅಬು ಜ...
11-10-26 10:28 pm
19-10-26 07:10 pm
HK News Staffer
G I Bakery Raid, Mangalore: ಅವಧಿ ಮುಗಿದ ತಿಂಡಿಗ...
17-10-26 11:04 pm
ಎಂಆರ್ ಪಿಎಲ್ ದುರಂತ ; ಮೃತ ರಾಜೇಶ್ ಡಿಸಿಲ್ವ ಕುಟುಂಬ...
17-10-26 07:34 pm
ಸೆ.30ರ ಸ್ಫೋಟ ಘಟನೆಯಲ್ಲಿ 118.76 ಕೋಟಿ ನಷ್ಟ ; ಎಂಆ...
17-10-26 12:25 pm
ಪದ್ಮಶ್ರೀ ಹಾಜಬ್ಬರಿಗೆ ಚುನಾವಣಾ ಆಯೋಗವು ನೋಟೀಸು ನೀಡ...
16-10-26 10:28 pm
19-10-26 04:20 pm
HK News Staffer
Actor Tiger Shroff Shot: ಬಾಲಿವುಡ್ ನಟ ಟೈಗರ್ ಶ್...
19-10-26 12:40 am
Mangalore Crime, Bantwal Stabbing: ಬಂಟ್ವಾಳ ;...
18-10-26 09:45 pm
Kokkada Fight, Mangalore: ಕೊಕ್ಕಡ ; ಹೂವಿನ ವ್ಯಾ...
18-10-26 09:32 pm
Fr Cyprian Pinto Arrest, POCSO: ಬಾಲಕರಿಗೆ ಲೈಂಗ...
18-10-26 10:36 am