ಬ್ರೇಕಿಂಗ್ ನ್ಯೂಸ್
07-11-26 03:39 pm HK News Desk ಕರಾವಳಿ
ಮಂಗಳೂರು, ನ.7: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದ್ದು, ಆರೋಪಿ ಮಂಗಳೂರಿನ ಪಾದ್ರಿ ಸಿಪ್ರಿಯನ್ ಪಿಂಟೋ ಅವರನ್ನು ರಕ್ಷಣೆ ಮಾಡಲು ಬಿಷಪ್ ಸೇರಿದಂತೆ ಧಾರ್ಮಿಕ ವ್ಯಕ್ತಿಗಳು, ಪೊಲೀಸರು, ಇಡೀ ವ್ಯವಸ್ಥೆ ಶಾಮೀಲಾಗಿದೆ. ಬಿಷಪ್ ವಿಷಯ ತಿಳಿದಿದ್ದರೂ ಅದನ್ನು ಮುಚ್ಚಿಟ್ಟಿರುವುದು, ಪಾದ್ರಿಯನ್ನು ರಕ್ಷಿಸಲು ಯತ್ನಿಸಿರುವುದು ಅಪರಾಧವಾಗಿದ್ದು, ಪಾಂಡೇಶ್ವರ ಪೊಲೀಸರು ಕೃತ್ಯ ತಿಳಿದ ಬಳಿಕವೂ ಎಫ್ಐಆರ್ ದಾಖಲಿಸದೆ ವಿಳಂಬ ನೀತಿ ಅನುಸರಿಸಿದ್ದು ಕಾನೂನು ರೀತ್ಯ ತಪ್ಪು. ಇವೆಲ್ಲವನ್ನೂ ಬಯಲಿಗೆಳೆಯಲು ಪ್ರತ್ಯೇಕ ಎಸ್ಐಟಿ ರಚಿಸಬೇಕು ಎಂದು ಮೈಸೂರಿನ ಒಡನಾಡಿ ಸಂಸ್ಥೆಯ ಸ್ಟ್ಯಾನ್ಲಿ ಮತ್ತು ಪರಶುರಾಮ್ ಆಗ್ರಹಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಇಲ್ಲಿ ಒಂದು ಸಮುದಾಯದ ಪ್ರಶ್ನೆ ಅಲ್ಲ. ಸಿಪ್ರಿಯನ್ ಪಿಂಟೋ ಕಳೆದ 38 ವರ್ಷಗಳಿಂದ ಇಂತಹ ಅದೆಷ್ಟು ನೂರಾರು ಮಕ್ಕಳನ್ನು ಶೋಷಣೆಗೆ ಒಳಪಡಿಸಿದ್ದಾರೆಂದು ತಿಳಿಯಬೇಕು. ಈ ಹಿಂದೆ ಪಾದ್ರಿಯಾಗಿದ್ದ ಚರ್ಚ್ ಗಳಲ್ಲಿ ಅವರ ವಿರುದ್ಧ ದೌರ್ಜನ್ಯದ ಆರೋಪ ಕೇಳಿಬಂದಿದೆ. ಫೇಸ್ಬುಕ್ ಜಾಲತಾಣದಲ್ಲಿ ಅದೆಷ್ಟೋ 30-35 ವರ್ಷದ ಯುವಕರು ತಾನು ಸಿಪ್ರಿಯನ್ ಪಿಂಟೋನಿಂದ ಅನುಭವಿಸಿದ ಕಿರುಕುಳವನ್ನು ದಾಖಲಿಸಿದ್ದಾರೆ. ನಮಗೂ ಮೈಲ್ ಮಾಡಿ ದೌರ್ಜನ್ಯ ವಿಚಾರವನ್ನು ತಿಳಿಸಿದ್ದಾರೆ. ಆಮೂಲಕ ಈ ವ್ಯಕ್ತಿಯ ಪಾಪದ ಕೃತ್ಯದ ಆಳ ತಿಳಿದುಬರುತ್ತದೆ ಎಂದಿದ್ದಾರೆ.
ಎರಡು ತಿಂಗಳ ಹಿಂದೆ ಬಿಷಪ್ ಅವರಿಗೆ ತಿಳಿಸಿದ್ದರೂ, ನಾವು ಅದನ್ನು ಸರಿ ಮಾಡುತ್ತೇವೆಂದು ಹೇಳಿ ಒಟ್ಟು ಪ್ರಕರಣ ಮುಚ್ಚಿ ಹಾಕಲು ಯತ್ನಿಸಿದ್ದಾರೆ. ಇವರು ಧಾರ್ಮಿಕ ವ್ಯಕ್ತಿಯಾಗಿ ಇಂತಹ ಕೃತ್ಯಗಳಿಗೆ ಬೆಂಬಲ ನೀಡಬಾರದು. ಕೂಡಲೇ ಚೈಲ್ಡ್ ಕೇರ್ ಮತ್ತು ಪೊಲೀಸರಿಗೆ ತಿಳಿಸಬೇಕಿತ್ತು. ಅವರೇನೂ ಕಾನೂನು ಮೀರಿದ ವ್ಯಕ್ತಿಯಲ್ಲ. ಸಾರ್ವಜನಿಕ ಆಗ್ರಹದ ಬಳಿಕ ಪೊಲೀಸರು ದೂರು ದಾಖಲಿಸಿದ್ದರೂ ಬಿಷಪ್ ಅವರ ಸಲಹೆಯಂತೆ ಎಂದು ಎಫ್ಐಆರ್ ನಲ್ಲಿ ಉಲ್ಲೇಖಿಸಿದ್ದಾರೆ. ಇಷ್ಟೆಲ್ಲ ಆಗಿದ್ದರೂ ಅಲ್ಲಿನ ರಾಯ್ ಕ್ಯಾಸ್ಟಲಿನೋ ಅಂತಹದ್ದೇನೂ ಆಗಿಲ್ಲ ಎನ್ನುತ್ತಾರಂದ್ರೆ, ಯಾರದೋ ಮಗುವನ್ನು ಹುಲಿ ತಿಂದರೆ ಹೋಗಲಿ, ತನ್ನ ಮಗುವಿಗೆ ಏನೂ ಆಗಿಲ್ಲ ಎನ್ನುವ ಮನಸ್ಥಿತಿಯಾಗುತ್ತದೆ.


ಪೋಕ್ಸೋ ಕಾಯ್ದೆಯಡಿ ಅಪರಾಧ ಮುಚ್ಚಿಡುವುದು, ಆರೋಪಿಗಳ ರಕ್ಷಣೆ ಮಾಡುವುದು ತಪ್ಪಾಗಿದ್ದು ಇವರೆಲ್ಲರ ವಿರುದ್ಧವೂ ಕೇಸು ದಾಖಲಾಗಬೇಕು. ಪ್ರಕರಣ ದಾಖಲಿಸದೆ ವಿಳಂಬ ನೀತಿ ತೋರಿದ, ಒತ್ತಡಕ್ಕೆ ಮಣಿದು ಪ್ರಕರಣ ಸಡಿಲಗೊಳಿಸಿದ ಹಿರಿಯ ಅಧಿಕಾರಿಗಳ ವಿರುದ್ಧವೂ ಕೇಸು ದಾಖಲಿಸಬೇಕು. ಬಡ ಪೋಷಕರಿಗೆ ಒತ್ತಡ ಹಾಕಿದ ಚರ್ಚ್ ಅಧಿಕಾರಿಗಳ ವಿರುದ್ಧವೂ ಕೇಸು ದಾಖಲಾಗಬೇಕು. ಯಾವುದೇ ಧರ್ಮದಲ್ಲಿ ಮಕ್ಕಳ ಹೆಣದ ಮೇಲೆ ಯಾರನ್ನೂ ಸಾಕಬೇಕು ಎಂದು ಹೇಳಿಲ್ಲ. ಏಸು ಕ್ರಿಸ್ತ ಕೂಡ ಇಂತಹ ವ್ಯವಸ್ಥೆಯನ್ನು ವಿರೋಧಿಸಿದ್ದಾನೆ. ಹಾಗಿದ್ದ ಮೇಲೆ ಆರೋಪಿ ಸಿಪ್ರಿಯನ್ ಪಿಂಟೋನನ್ನು ಸಕಲೇಶಪುರದಲ್ಲಿ ಬಿಷಪ್ ಬಚ್ಚಿಟ್ಟಿದ್ದು ಅಪರಾಧ ಅಲ್ಲವೇ? ನ್ಯಾಯಾಂಗ ಬಂಧನ ಆಗಿದ್ದರೂ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿಸಿದ್ದು ತಪ್ಪಲ್ಲವೇ..? ಇದರಲ್ಲಿ ಆಸ್ಪತ್ರೆಯ ಅಧಿಕಾರಿಗಳನ್ನೂ ಸೇರಿಸಬೇಕಾಗಿದೆ. ಇಷ್ಟೆಲ್ಲ ಆಗಿದ್ದರೂ ಬಿಷಪ್ ತುಟಿ ಬಿಚ್ಚಿಲ್ಲ. ಇದು ಗೋವಾದಲ್ಲಿ ನೂರಾರು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಎಸಗಿದಷ್ಟೇ ಗಂಭೀರ ಪ್ರಕರಣವಾಗಿದ್ದು, ರಾಜ್ಯ ಸರ್ಕಾರ ಗಂಭೀರ ಪರಿಗಣಿಸಿ ತನಿಖೆ ಎಸ್ಐಟಿಗೆ ವಹಿಸಬೇಕಾಗಿದೆ ಎಂದು ಸ್ಟಾನ್ಲೀ ಹೇಳಿದರು.
ಪಾದ್ರಿಯೊಬ್ಬರು ಇಂತಹ ಅವಿವೇಕಿ ಕೃತ್ಯ ಮಾಡಿರುವುದು ಇಡೀ ಸಮಾಜಕ್ಕೆ ಅವಮಾನ. ಸಿಡಬ್ಲ್ಯುಸಿ ಮುಖ್ಯಸ್ಥರಾಗಿ ಜಿಲ್ಲಾಧಿಕಾರಿಗಳಿಗೂ ಬಾಧ್ಯತೆಯಿದ್ದು, ತನಗೇನೂ ಗೊತ್ತಿಲ್ಲ ಎಂದು ಕುಳಿತುಕೊಳ್ಳಲು ಸಾಧ್ಯವಿಲ್ಲ. ಇಲ್ಲಿ ಚೈಲ್ಡ್ ಕೇರ್ ನವರು ಕೂಡ ಸರಿಯಾಗಿ ಸ್ಪಂದಿಸಿಲ್ಲ. ಪೊಲೀಸರು ಇದರಲ್ಲಿ ಯಾವ ರೀತಿಯ ಲಾಭ ಪಡೆದಿದ್ದಾರೆ ಎಂಬುದನ್ನು ತಳ್ಳಿಹಾಕಲು ಸಾಧ್ಯವಿಲ್ಲ. 1988ರಿಂದ ಈತ ಧರ್ಮಗುರುವಾಗಿದ್ದು, ಪ್ರಾಯ ಪ್ರಬುದ್ಧರು ಕೂಡ ಪತ್ರ ಬರೆದಿರುವ ಹಿನ್ನೆಲೆಯಲ್ಲಿ 38 ವರ್ಷಗಳಲ್ಲಿ ಈತ ಅದೆಷ್ಟು ಮಕ್ಕಳನ್ನು ಶೋಷಣೆಗೆ ಒಳಪಡಿಸಿರಲಿಕ್ಕಿಲ್ಲ ಎಂದು ಒಡನಾಡಿ ಸಂಸ್ಥೆಯ ಅಧ್ಯಕ್ಷ ಪರಶುರಾಮ್ ಪ್ರಶ್ನಿಸಿದರು.
ನಾವು ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು, ರಾಜ್ಯ ಸರ್ಕಾರ, ಕೇಂದ್ರ ಮಾನವ ಹಕ್ಕು ಆಯೋಗ ಸೇರಿದಂತೆ ಎಲ್ಲ ಕಡೆಗೂ ದೂರು ಸಲ್ಲಿಸಿದ್ದೇವೆ. ಯಾರು ಮುಚ್ಚಿ ಹಾಕಿದರೂ ನಾವು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು. ಎರಡು ತಿಂಗಳ ಹಿಂದೆ ವೆಲೆನ್ಸಿಯಾದಲ್ಲಿ ಎಂಟು ಮಕ್ಕಳು ದೌರ್ಜನ್ಯಕ್ಕೊಳಗಾಗಿ ಮುಂದೆ ಬಂದಿದ್ದರು. ಆನಂತರ, ಐದು ಮಂದಿ ಬಿಷಪ್ ಬಳಿಗೆ ಹೋಗಿದ್ದರು, ಪೊಲೀಸರ ಮುಂದೆ ಒಬ್ಬರು ಮಾತ್ರ ಹೇಳಿಕೆ ನೀಡಿದ್ದಾರೆ. ಉಳಿದವರು ಚರ್ಚ್ ಒತ್ತಡಕ್ಕೆ ಮಣಿದು ಹಿಂದೆ ಸರಿದಿದ್ದಾರೆ. ಚರ್ಚ್ ಹಾಲ್ ನಲ್ಲಿಯೇ ಮಕ್ಕಳನ್ನು ಕೂಡಿ ಹಾಕಿ ವಿಚಾರಣೆ ನಡೆಸಿದ್ದು ಅಕ್ಷಮ್ಯ ಎಂದು ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದ ಆಸ್ಕರ್ ಹೇಳಿದರು.
The alleged sexual abuse of children by Mangaluru priest Cyprian Pinto has brought disgrace to society, said representatives of the Mysuru-based Odನಾಡi organisation, Stanley and Parashuram. They demanded criminal cases against everyone allegedly involved in shielding the accused, including the Bishop, police personnel and Church authorities, along with a separate Special Investigation Team (SIT) to probe the case.
03-11-26 09:48 pm
HK News Desk
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲ...
03-11-26 01:01 pm
ಹಿರಿಯ ಸಂಶೋಧಕಿ ಡಾ.ಇಂದಿರಾ ಹೆಗ್ಗಡೆ, ಹಿರಿಯ ವಕೀಲ ಬ...
30-10-26 08:26 pm
ಸ್ಟಿಂಗ್ ಪ್ರಕರಣಕ್ಕೆ ಟ್ವಿಸ್ಟ್ ; ಕೇಂದ್ರ ಸಚಿವ ಕುಮ...
30-10-26 05:15 pm
ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್ ; ನಂದಿನಿ ಹಾ...
29-10-26 08:21 pm
29-10-26 09:28 pm
HK News Staffer
ಆಡಳಿತ ಬದಲಾವಣೆ ಉದ್ದೇಶದ ಹಿಂಸಾತ್ಮಕ ಪ್ರತಿಭಟನೆಗಳಲ್...
29-10-26 08:23 pm
'ಮೋದಿ ಅಪ್ಪನೂ ಜೈಲಿಗೆ ಹೋಗಬೇಕಾಗುತ್ತೆ!' ; ವಿವಾದಕ್...
25-10-26 09:40 pm
ಹಿಂದೂ ರಾಷ್ಟ್ರ ಎಂದರೆ ಮುಸ್ಲಿಮರನ್ನು ಹೊರಗಿಡುವುದಲ್...
21-10-26 04:21 pm
ಫ್ರಾನ್ಸ್, ಬಾಂಗ್ಲಾ ರೀತಿ ಭಾರತದಲ್ಲಿ ಆಗೋದು ಸಾಧ್ಯವ...
20-10-26 01:18 pm
07-11-26 03:39 pm
HK News Desk
ಪಡೀಲ್ ಕಣ್ಣೂರು ಹೆದ್ದಾರಿಯಲ್ಲಿ ಗ್ಯಾಸ್ ಟ್ಯಾಂಕರ್ ಪ...
06-11-26 11:03 pm
ಕಾಂಗ್ರೆಸ್ ಕಾಲದಲ್ಲಿ 11 ಬಾರಿ ಎಸ್ಐಆರ್ ಲೀಗಲ್, ಈಗ...
06-11-26 09:35 pm
ಮಂಗಳೂರು ಮೂಲದ ಯಾಯಿನ್ ಕಿರಣ್ ರೈ ಯುಎಇ ಅಂಡರ್-19 ಕ್...
06-11-26 09:21 pm
ಪಿಲಿಕುಳ ನಿಸರ್ಗಧಾಮದ 356 ಎಕರೆ ಭೂ ಗುತ್ತಿಗೆ ರದ್ದು...
05-11-26 09:42 pm
07-11-26 10:39 am
HK News Staffer
Mangalorr Police, Arrest: ವಾಕಿಂಗ್ ಮಾಡುತ್ತಿದ್ದ...
06-11-26 08:08 pm
Naresh Bhat, Wife Murder: ಪತ್ನಿ ವಿಷ ಕುಡಿದು ಆತ...
06-11-26 05:01 pm
ಬೆಂಗಳೂರಿನಲ್ಲಿ ಭೀಕರ ಹತ್ಯಾಕಾಂಡ ; ಪತ್ನಿ ಮೇಲಿನ ಸಿ...
06-11-26 10:55 am
Mangalore, Veerendra Shetty: ಜಾಗದ ವಿಚಾರದಲ್ಲಿ...
05-11-26 10:45 pm