ಬ್ರೇಕಿಂಗ್ ನ್ಯೂಸ್
05-02-21 04:49 pm Mangalore Correspondent ಕರಾವಳಿ
ಮಂಗಳೂರು, ಫೆ.5: ಈ ದೇಶ ಹಾಳಾದರೆ, ಚಿಂತಿಲ್ಲ. ನಾಲ್ಕೈದು ಕಾರ್ಪೊರೇಟ್ ಕಂಪನಿಗಳಷ್ಟೆ ಉದ್ಧಾರವಾದರೆ ಸಾಕೆಂಬ ನೀತಿ ಬಿಜೆಪಿಯದ್ದು. ಮೊದಲೇ ವ್ಯಾಪಾರಿಗಳ ಪಕ್ಷವಾಗಿತ್ತು. ಈಗಂತೂ ಕಾರ್ಪೊರೇಟ್ ಕಂಪನಿಗಳ ಪಕ್ಷವಾಗಿ ಮಾರ್ಪಟ್ಟಿದೆ. ಯುಪಿಎ ಇದ್ದಾಗ 25 ಶೇ. ಎಫ್ ಡಿಐ ಕೊಟ್ಟಿದ್ದಕ್ಕೆ ಸ್ವದೇಶಿ ಜಾಗರಣ್ ಮಂಚ್ ನವರು ಹಾರಾಡಿದ್ದರು. ಈಗ ಮಂಚದ ಕಾಲೇ ಮುರಿದಿದೆ. ಬಿಜೆಪಿ ಸರಕಾರ ನೂರು ಶೇಕಡಾ ಎಫ್ ಡಿಐ ಕೊಟ್ಟಿದೆ.
ಹೀಗಂತಾ ಕೇಂದ್ರ ಮತ್ತು ರಾಜ್ಯದ ಬಿಜೆಪಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು ಮಾಜಿ ಸಚಿವ ರಮಾನಾಥ ರೈ. ನಗರದ ಕದ್ರಿಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ರಮಾನಾಥ ರೈ, ರೈತರ ಪ್ರತಿಭಟನೆ ವಿಚಾರದಲ್ಲಿ ಕೇಂದ್ರ ನಿರ್ಲಕ್ಷ್ಯ ತೋರಿದ್ದನ್ನು ಖಂಡಿಸಿ ಮಾತನಾಡಿದರು. ಪ್ರತಿಭಟನೆ ಹಿಂದೆ ಖಲೀಸ್ತಾನಿಗಳು ಇದ್ದಾರೆ, ಅಂತಾರಾಷ್ಟ್ರೀಯ ಸಂಚು ಇದೆ, ಪ್ರತಿಪಕ್ಷ ಇದೆ ಎನ್ನುತ್ತಿದ್ದಾರೆ. ಹಿಂದೆ ಖಲೀಸ್ತಾನಿಗಳನ್ನು ಮಟ್ಟ ಹಾಕಿ, ಇಂದಿರಾ ಗಾಂಧಿ ಅದಕ್ಕಾಗಿ ಪ್ರಾಣ ತ್ಯಾಗವನ್ನೇ ಮಾಡಿದ್ದರು. ಈಗ ಖಲೀಸ್ತಾನಿಗಳು ಬಂದಿದ್ದಾರೆ ಎನ್ನುವ ಮೋದಿ ಸರಕಾರಕ್ಕೆ ಅವರನ್ನು ಮಟ್ಟ ಹಾಕುವ ತಾಕತ್ತು ಇಲ್ಲವೇ ಎಂದು ಪ್ರಶ್ನೆ ಮಾಡಿದರು.
ಪೆಟ್ರೋಲ್ ದರದ ಬಗ್ಗೆ ಮಾತನಾಡಿದರೆ ದೇಶವಿರೋಧಿ ಪಟ್ಟ ಕಟ್ಟುತ್ತಾರೆ. ಇವರ ಪರವಾಗಿರುವ ಮಂದಿ ದೇಶಭಕ್ತರು, ವಿರೋಧ ಮಾತನಾಡಿದರೆ ದೇಶ ವಿರೋಧಿಗಳು. ಪೆಟ್ರೋಲ್ ರೇಟ್ ವಿಚಾರದಲ್ಲಿ ಪ್ರತಿಭಟನೆ ಮಾಡಿ ಅಧಿಕಾರಕ್ಕೆ ಬಂದಿದ್ದ ಬಿಜೆಪಿಯವರು ಈಗ ಯಾವ ಮುಖ ಇಟ್ಟುಕೊಂಡು ರೇಟು ಏರಿಸುತ್ತಿದ್ದಾರೆ. ಪೆಟ್ರೋಲಿಗೆ ಒಂದು ಸಾವಿರ ಆದರೂ ಮೋದಿಗೆ ಓಟು ಹಾಕುತ್ತೇವೆ ಎನ್ನುವ ಮನೋಭಾವನೆ ದಿವಾಳಿತನದ ಸಂಕೇತ. ಮಾನಸಿಕ ದಿವಾಳಿಯಾಗಿ ಈ ರೀತಿಯ ಮಾತು ಆಡುತ್ತಿದ್ದಾರೆ ಎಂದು ಹೇಳಿದ ರಮಾನಾಥ ರೈ, ರೈತರ ಪರವಾಗಿ ಟಿಕಾಯತ್ ಹಿಂದೆ ಯುಪಿಎ ಸರಕಾರ ಇದ್ದಾಗಲೂ ಪ್ರತಿಭಟನೆ ನಡೆಸಿದ್ದರು. ಈಗ ಅವರನ್ನು ಕಾಂಗ್ರೆಸ್ ಪರ ಎಂದು ಹಣೆಪಟ್ಟಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.
ಸರಕಾರದ ಬಿಎಸ್ಸೆನ್ನೆಲ್ ಇರುವಾಗಲೇ ಅಂಬಾನಿಗೆ ಬೆಂಬಲವಾಗಿ ನಿಂತು ಖಾಸಗಿ ಜಿಯೋವನ್ನು ದೇಶಾದ್ಯಂತ ಹೇರಿಕೆ ಮಾಡಿದರು. ಈಗ ಬ್ಯಾಂಕನ್ನೂ ಖಾಸಗೀಕರಣ ಮಾಡುತ್ತಿದ್ದಾರೆ. ಈ ಸರಕಾರ ಮುಂದುವರಿದರೆ ದೇಶದಲ್ಲಿ ಪ್ರಜಾಪ್ರಭುತ್ವ, ಭಾರತದ ಸ್ಥಿತಿ ಹೀಗೇ ಇರುತ್ತದೆ ಎನ್ನುವ ಭರವಸೆ ಇಲ್ಲ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಇಬ್ರಾಹಿಂ ಕೋಡಿಜಾಲ್, ಶಶಿಧರ್ ಹೆಗ್ಡೆ, ಅಬ್ದುಲ್ ರವೂಫ್, ನವೀನ್ ಡಿಸೋಜ, ಅಪ್ಪಿ, ಯುವ ಕಾಂಗ್ರೆಸ್ ನೂತನ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ ಉಪಸ್ಥಿತರಿದ್ದರು.
Congress leader and former minister B Ramanath Rai on Friday, February 5 said that the BJP-led union government in the centre is looting the poor to fill the pockets of the rich.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 11:07 pm
Mangalore Correspondent
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
Mangalore Job Scam, Police, Lawrence Dsouza,...
19-05-25 05:22 pm
Akanksha Suicide, Dharmasthala, Mangalore: ಏರ...
19-05-25 12:31 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm