ಬ್ರೇಕಿಂಗ್ ನ್ಯೂಸ್
21-02-21 12:41 pm Mangalore Correspondent ಕರಾವಳಿ
ಉಳ್ಳಾಲ, ಫೆ.21: ವಾರದ ಹಿಂದೆ ನಡೆದ ಕ್ರಿಕೆಟ್ ಪಂದ್ಯಾಟದಲ್ಲಿ ಗೆದ್ದು ಬೀಗಿದ್ದ ಕೊಣಾಜೆ ಪೊಲೀಸರನ್ನ ಮಣಿಸುವುದರ ಮೂಲಕ ಉಳ್ಳಾಲ ಪೊಲೀಸರು ಮತ್ತೆ ರಿವೇಂಜ್ ತೆಗೆದಿದ್ದಾರೆ.
ಮಾಜಿ ಶಾಸಕ ಯು.ಟಿ ಫರೀದ್ ಸ್ವರಣಾರ್ಥವಾಗಿ ಉಳ್ಳಾಲದ ಸೀ ಗ್ರೌಂಡ್ ನಲ್ಲಿ ನಡೆಯುತ್ತಿರುವ ಹೊನಲು ಬೆಳಕಿನ ಟೆನಿಸ್ ಬಾಲ್ ಓವರ್ ಆರ್ಮ್ ಉಳ್ಳಾಲ ಪ್ರೀಮಿಯರ್ ಲೀಗ್ (UPL) ಟೂರ್ನಿಯಲ್ಲಿ ನಿನ್ನೆ ರಾತ್ರಿ ನಡೆದ ಔಪಚಾರಿಕ ಪಂದ್ಯದಲ್ಲಿ ಉಳ್ಳಾಲ ಮತ್ತು ಕೊಣಾಜೆ ಠಾಣೆ ಪೊಲೀಸರು ಪರಸ್ಪರ ಸೆಣಸಿದ್ದಾರೆ.

ಅತೀ ಸೂಕ್ಷ್ಮ ಪ್ರದೇಶವಾದ ಕೊಣಾಜೆ, ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆರಕ್ಷಕರು ಸ್ವಾಭಾವಿಕವಾಗಿಯೇ ದಿನವಿಡೀ ಒತ್ತಡದಲ್ಲೇ ಇರುತ್ತಾರೆ. ಒತ್ತಡ ಭರಿತ ಕರ್ತವ್ಯದಿಂದ ಸ್ವಲ್ಪ ಸಮಯ ಹೊರ ಬಂದ ಪೊಲೀಸರು ನಿನ್ನೆ ರಾತ್ರಿ ಹೊನಲು ಬೆಳಕಿನ ಕ್ರಿಕೆಟಲ್ಲಿ ತೊಡಗಿಸಿ ತುಂಬಾನೆ ಖುಷಿ ಪಟ್ಟರು. ಕಳೆದ ಶನಿವಾರವೂ ದೇರಳಕಟ್ಟೆಯ ಗ್ರೀನ್ ಗ್ರೌಂಡಲ್ಲಿ ದೇರಳಕಟ್ಟೆ ಫ್ರೆಂಡ್ಸ್ ಸರ್ಕಲ್ ನ ವತಿಯಿಂದ ನಡೆದ ಸೌಹಾರ್ದ ಕಪ್ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಿಯ ಔಪಚಾರಿಕ ಪಂದ್ಯದಲ್ಲಿ ಉಳ್ಳಾಲ ಮತ್ತು ಕೊಣಾಜೆ ಪೊಲೀಸರು ಪರಸ್ಪರ ಸೆಣಸಿದ್ದು ಕೊಣಾಜೆ ಠಾಣಾ ಪೊಲೀಸರ ತಂಡ ಗೆದ್ದು ಬೀಗಿತ್ತು.

ಕೊಣಾಜೆ ಪೊಲೀಸರ ವಿರುದ್ಧ ರಿವೇಂಜ್ ತೆಗೆಯಲು ಕಾಯುತ್ತಿದ್ದ ಉಳ್ಳಾಲ ಪೊಲೀಸರು ನಿನ್ನೆ ರಾತ್ರಿ ನಡೆದ 8 ಓವರ್ ಗಳ ಓವರ್ ಆರ್ಮ್ ಪಂದ್ಯದಲ್ಲಿ ಗೆದ್ದು ವಿಜಯದ ಕೇಕೆ ಹಾಕಿದ್ದಾರೆ. ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ನಡೆಸಿದ ಉಳ್ಳಾಲ ಪೊಲೀಸರ ತಂಡವು ಕಪ್ತಾನ ಪಿ.ಎಸ್.ಐ ಶಿವಕುಮಾರ್ ನಾಯಕತ್ವದಲ್ಲಿ ನಿಗದಿತ 8 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 57 ರನ್ ಗಳ ಮೊತ್ತ ಪೇರಿಸಿದೆ. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕೊಣಾಜೆ ಪೊಲೀಸ್ ತಂಡ ಕಪ್ತಾನ ಪಿ.ಎಸ್.ಐ ಮಲ್ಲಿಕಾರ್ಜುನ ಬಿರಾದಾರ್ ನಾಯಕತ್ವದಲ್ಲಿ 8 ಓವರ್ ಗಳಲ್ಲಿ 8 ವಿಕೆಟ್ ಗಳನ್ನು ಕಳಕೊಂಡು 54 ರನ್ ಗಳಿಸಲಷ್ಟೇ ಶಕ್ತವಾಗಿದ್ದು ಕೇವಲ 3 ರನ್ ಗಳ ಅಂತರಲ್ಲಿ ಸೋಲನ್ನು ಕಂಡಿತು.

ಜಿದ್ದಾಜಿದ್ದಿ ಪಂದ್ಯದಲ್ಲಿ ಕೊಣಾಜೆ ಪೊಲೀಸ್ ತಂಡದ ವಿಜಯ್ ಅವರು 26 ಎಸೆತಗಳಲ್ಲಿ 38 ರನ್ ಗಳಿಸಿದ್ದಲ್ಲದೆ ಎದುರಾಳಿಗಳ 2 ವಿಕೆಟ್ ಗಳನ್ನು ಕಿತ್ತು ಗಮನಸೆಳೆದರು. ಉಳ್ಳಾಲ ಪೊಲೀಸ್ ತಂಡದ ಪ್ರಶಾಂತ್ ಅವರು 19 ಎಸೆತಗಳಲ್ಲಿ 18 ರನ್ ಗಳಿಸಿ ಪಂದ್ಯ ಶ್ರೇಷ್ಠರಾದರೆ, ಸಿದ್ಧು ಮತ್ತು ಸಾಗರ್ ತಲಾ ಎರಡು ವಿಕೆಟ್ ಕಿತ್ತು ಮಿಂಚಿದರು. ಕೊಣಾಜೆ ಪೊಲೀಸರು " ಹಿಂದು, ಮುಸ್ಲಿಂ, ಕ್ರಿಶ್ಚಿಯನ್ " ಎಂಬ ಬರಹಗಳಿದ್ದ ಜರ್ಸಿ ಧರಿಸಿ ಜನತೆಗೆ ಶಾಂತಿ, ಸಾಮರಸ್ಯದ ಸಂದೇಶ ಸಾರಿದರು.
Ullal police bags Major victory over konaje police in the Cricket Tournament held by Ullal premier league at Ullal in Mangalore.
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm