ಬ್ರೇಕಿಂಗ್ ನ್ಯೂಸ್
28-02-21 12:17 pm Mangaluru Correspondent ಕರಾವಳಿ
ಉಳ್ಳಾಲ, ಫೆ.28 : ಅಲ್ಲಿ ದೀಪ ಪ್ರಜ್ವಲನೆ ಇರಲಿಲ್ಲ, ರಿಬ್ಬನ್ ಕಟ್ಟಿಂಗೂ ಇರಲಿಲ್ಲ, ಸ್ವಾಗತನೂ ಇರಲಿಲ್ಲ. ಭಾಷಣ ಧನ್ಯವಾದ ಸಮರ್ಪಣೆನೂ ಇರಲಿಲ್ಲ. " ನಮ್ಮ ನೇತ್ರಾವತಿ ನಮ್ಮ ಜವಾಬ್ದಾರಿ " ಎಂಬ ಅಭಿಯಾನದಲ್ಲಿ ನಾಗರಿಕರೆಲ್ಲರೂ ಜಾತಿ, ಮತ ವಯಸ್ಸಿನ ಭೇದವಿಲ್ಲದೆ ಸ್ವಯಂಪ್ರೇರಿತರಾಗಿ ಒಟ್ಟುಗೂಡಿದ್ದರು. ಉಳ್ಳಾಲದ ನೇತ್ರಾವತಿ ಸೇತುವೆ ಪಕ್ಕದಲ್ಲಿ ನದಿಯ ಅಂಚಿನಲ್ಲಿ ರಾಶಿ ಬಿದ್ದ ಟನ್ ಗಟ್ಟಲೆ ಕಸವನ್ನು ಮೇಲಕ್ಕೆತ್ತಿದರು.
ಹಸಿರುದಳದ ಓಷಿಯನ್ ಪ್ಲಾಸ್ಟಿಕ್ ರಿಸೈಕ್ಲಿಂಗ್ ಸಂಯೋಜಕರಾದ ನಾಗರಾಜ್ ಬಜಾಲ್, ನದಿ ಮತ್ತು ಸಮುದ್ರಕ್ಕೆ ಪ್ಲಾಸ್ಟಿಕ್ ಹೇಗೆ ಸೇರುತ್ತವೆ ಎಂಬ ವಿಷಯದಲ್ಲಿ ಪ್ರಾಜೆಕ್ಟ್ ಕೈಗೆತ್ತಿಕೊಂಡಾಗ ಅವರ ಕಣ್ಣಿಗೆ ಕಂಡಿದ್ದೇ ಮಂಗಳೂರು - ಉಳ್ಳಾಲ ಸಂಪರ್ಕದ ನೇತ್ರಾವತಿ ಸೇತುವೆಯ ಬಳಿಯಲ್ಲಿ ಬಿದ್ದಿದ್ದ ಕಸದ ಕೊಂಪೆ. ಅರ್ಧ ಹೆದ್ದಾರಿಯನ್ನೇ ಆವರಿಸಿ ಈ ಪ್ರದೇಶದಲ್ಲಿ ಕಸದ ಕೊಂಪೆಯೇ ನಿರ್ಮಾಣವಾಗಿತ್ತು. ನಾಗರಾಜ್ ಅವರು "ನಮ್ಮ ನೇತ್ರಾವತಿ ನಮ್ಮ ಜವಬ್ದಾರಿ" ಎಂಬ ಅಭಿಯಾನ ಆರಂಭಿಸಿದ್ದು ಕಳೆದ ಎರಡು ತಿಂಗಳಿಂದ ನೇತ್ರಾವತಿ ಸೇತುವೆ ಬಳಿಯ ರಸ್ತೆಯಲ್ಲಿ ಬಿದ್ದಿದ್ದ ಕಸದ ರಾಶಿಯನ್ನು ಸ್ವಚ್ಚಗೊಳಿಸಿದ್ದಲ್ಲದೆ ತನ್ನ ಸಂಗಡಿಗರೊಂದಿಗೆ ಜನಜಾಗೃತಿಗಾಗಿ ಭಿತ್ತಿ ಚಿತ್ರ ಫಲಕಗಳನ್ನು ಹಿಡಿದು ಬೆಳಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಅಲ್ಲೇ ನಿಂತು ಅಭಿಯಾನ ನಡೆಸಿದ್ದರು.
ರಸ್ತೆಯಲ್ಲಿ ಬಿದ್ದ ಕಸಕ್ಕಿಂತಲೂ ನದಿ ಅಂಚಿನಲ್ಲಿ ಆಳದಲ್ಲಿ ಬಿದ್ದಿದ್ದ ಟನ್ ಗಟ್ಟಲೆ ಕಸವನ್ನು ತೆಗೆಯುವುದು ಹೇಗೆಂದು ನಾಗರಾಜ್ ಅವರು ಚಿಂತೆಯಲ್ಲಿದ್ದರು. ಈ ಬಗ್ಗೆ ನಾಗರಾಜ್ ಅವರು ಇಂದು ನೇತ್ರಾವತಿ ಒಡಲನ್ನು ಸ್ವಚ್ಚಗೊಳಿಸುವುದರ ಬಗ್ಗೆ ಜಾಲತಾಣಗಳಲ್ಲಿ ಸಂದೇಶ ಹರಿಬಿಟ್ಟಿದ್ದು ಸಾರ್ವಜನಿಕರ ಸಹಕಾರ ಕೋರಿದ್ದರು. ಜಾಲತಾಣದ ಸಂದೇಶಕ್ಕೆ ಸ್ಪಂದನೆ ದೊರಕಿ ನೂರಾರು ಸಂಖ್ಯೆಯಲ್ಲಿ ನಾಗರಿಕರು ನೇತ್ರಾವತಿ ಸೇತುವೆಯಲ್ಲಿ ಇಂದು ಜಮಾವಣೆಗೊಂಡು ರಸ್ತೆ ಅಂಚಿನ ನದಿ ತೀರದ ಆಳಕ್ಕೆ ಹಗ್ಗದ ಮೂಲಕ ಇಳಿದು ಟನ್ ಗಟ್ಟಲೆ ಕಸವನ್ನು ಮೇಲಕ್ಕೆತ್ತಿದ್ದಾರೆ.
ಅಭಿಯಾನದಲ್ಲಿ NSS ವಿದ್ಯಾರ್ಥಿಗಳು, ಯೆನೆಪೋಯ, ಕಣಚೂರು, ನಿಟ್ಟೆ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಮೆಸ್ಕಾಂ ಸಿಬ್ಬಂದಿಗಳು, ಮಹಾನಗರ ಪಾಲಿಕೆ ಕಾರ್ಪೊರೇಟರ್ ವೀಣಾ ಮಂಗಳ, ಜಮಾ ಅತೆ ಇಸ್ಲಾಮಿ ಹಿಂದ್ ಸಂಘಟನೆ, ಅನೇಕ ಹಿಂದೂ ಸಂಘಟನೆ ಕಾರ್ಯಕರ್ತರು ಸೇರಿ ಕಸವನ್ನು ಎತ್ತುವ ಮಹತ್ಕಾರ್ಯ ನಡೆಸಿದರು.
ಅಭಿಯಾನದ ರೂವಾರಿ ನಾಗರಾಜ್ ಮಾತನಾಡಿ ನಾವಿಂದು ಎಲ್ಲರೂ ಒಟ್ಟು ಸೇರಿ ಕೇವಲ ಹತ್ತು ಶೇಕಡ ಸ್ವಚ್ಚತಾ ಕಾರ್ಯ ನಡೆಸಿದ್ದೇವೆ. ರಸ್ತೆ ಅಂಚಿನ ಆಳ ಪ್ರದೇಶದಲ್ಲಿ ಇನ್ನೂ ಟನ್‌ಗಟ್ಟಲೆ ಕಸ ಬಾಕಿ ಉಳಿದಿದೆ. ಒಂದು ಮಳೆ ಬಂದರೆ ಇದೆಲ್ಲ ನದಿಯ ಒಡಲಿಗೆ ಸೇರುತ್ತದೆ. ಮೊದಲೇ ನೇತ್ರಾವತಿ ನದಿ ನೀರು ವಿಷಪೂರಿತವಾಗಿದ್ದು ಆಕೆಯ ರಕ್ಷಣೆ ನಮ್ಮೆಲ್ಲರ ಜವಬ್ದಾರಿ ಎಂದರು. ರಸ್ತೆಯ ಅಂಚಿನಲ್ಲಿ ಒಂದು ಬ್ಯಾರಿಕೇಡ್ ಅಳವಡಿಸುವ ಯೋಜನೆ ಇದೆ. ಬರೀ ಬ್ಯಾರಿಕೇಡ್ ಅಳವಡಿಸಿದರೆ ಕಸ ಎಸೆಯುವುದನ್ನು ನಿಲ್ಲಿಸಲು ಸಾಧ್ಯವಿಲ್ಲ. ಸರಕಾರವು ಇಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ಕಸ ಎಸೆದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತಾಗಬೇಕು. ಜನರು ತಮ್ಮ ಮನೆಯಲ್ಲಿ ಹಸಿ ಕಸ, ಒಣ ಕಸಗಳನ್ನು ಬೇರ್ಪಡಿಸಿ ವಿಲೇವಾರಿ ವಾಹನಗಳಿಗೆ ಒದಗಿಸಿ ಪರಿಸರವನ್ನು ಸ್ವಚ್ಚವಾಗಿಡುವಂತೆ ಕರೆ ನೀಡಿದರು.
ಎಪಿಡಿ ಫಂಡೇಶನ್ ನ ಸಂಯೋಜಕಿ ವಾಣಿಶ್ರೀ ಅವರು ನಾಗರಾಜ್ ಅವರಿಗೆ ಸಾಥ್ ಕೊಟ್ಟರು.
Step by Ullal residents of Mangalore to Rejuvenate Netravathi river. Tons of garbage were taken out from the river side.
20-05-25 08:22 pm
Bangalore Correspondent
K S Eshwarappa: ಸೇನಾ ಕಾರ್ಯಾಚರಣೆ ಪ್ರಶ್ನಿಸುವ ದೇ...
20-05-25 07:18 pm
Bangalore Rain, Death: ಒಂದೇ ಮಳೆಗೆ ತತ್ತರಿಸಿದ ಬ...
20-05-25 03:30 pm
Shashi Kumar IPS, Corruption, Hubballi, polic...
19-05-25 04:00 pm
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
20-05-25 02:36 pm
HK News Desk
Operation Sindhoor, Rahul Gandhi,.Pakistan: ಆ...
20-05-25 01:42 pm
ಆಡಲು ಹೋಗಿದ್ದಾಗ ಮಳೆ ಬಂತೆಂದು ನಿಲ್ಲಿಸಿದ್ದ ಕಾರಿನ...
19-05-25 02:25 pm
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
20-05-25 06:59 pm
Mangalore Correspondent
Manipal Rain, Udupi: ಕರಾವಳಿಯಲ್ಲಿ ದಿಢೀರ್ ಮಳೆಗಾ...
20-05-25 02:03 pm
Job Scam Mangalore, Police Suspend, Hireglow...
19-05-25 11:07 pm
Jail Attack, Suhas Shetty, Mangalore, Chotte...
19-05-25 10:14 pm
Konaje Suicide, Mangalore, Hair loss: ಕೂದಲು ಉ...
19-05-25 09:41 pm
19-05-25 09:38 pm
Mangalore Correspondent
Belagavi Murder, Mother in law: ಸೊಸೆಗೆ ಮಕ್ಕಳಾ...
19-05-25 03:35 pm
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm