ಬ್ರೇಕಿಂಗ್ ನ್ಯೂಸ್
03-03-21 02:11 pm Mangalore Correspondent ಕರಾವಳಿ
ಮಂಗಳೂರು, ಮಾ.3: ಮಂಗಳೂರಿನಲ್ಲಿ ಕಂಬಳ ಹೊಸತಲ್ಲ. ಆದರೆ, ಮಂಗಳೂರು ನಗರದ ಕಾಂಕ್ರೀಟ್ ಕಾಡಿನ ಮಧ್ಯೆ ಕಂಬಳ ಆಗುವುದು ಮಾತ್ರ ಹೊಸತು. ನಗರದ ಕುಳೂರಿನಲ್ಲಿ ಈ ಬಾರಿ ನಾಲ್ಕನೇ ವರ್ಷದ ಮಂಗಳೂರು ಕಂಬಳ ನಾಡಿದ್ದು ಮಾ.6 ಮತ್ತು 7ರಂದು ನಡೆಯಲಿದ್ದು, ನಗರ ಭಾಗದ ಜನರಿಗೆ ತುಳುವರ ಸಾಂಪ್ರದಾಯಿಕ ಕ್ರೀಡೆ ಉತ್ಸವದ ಝಲಕ್ ನೀಡಲಿದೆ.
ಹಿಂದೆ ಮಂಗಳೂರು ನಗರದ ಮಧ್ಯೆ ಕದ್ರಿಯಲ್ಲಿ ಕಂಬಳ ಇತ್ತು. ಹದಿನೈದು ವರ್ಷಗಳ ಹಿಂದೆ ಕದ್ರಿ ಕಂಬಳ ನಿಂತು ಹೋದ ಮೇಲೆ ಮಂಗಳೂರು ಸಿಟಿಯಲ್ಲಿ ಕಂಬಳ ಇರಲಿಲ್ಲ. ಆರು ವರ್ಷಗಳ ಹಿಂದೆ ಪೇಟಾದವರು ಕೋರ್ಟ್ ಮೆಟ್ಟಿಲೇರಿದ್ದು, ಆನಂತರ ಸುಪ್ರೀಂ ಕೋರ್ಟ್ ತೂಗುಗತ್ತಿಯ ಆದೇಶ ಕಂಬಳ ನಿಂತೇ ಹೋಯ್ತು ಅನ್ನುವಷ್ಟರ ಮಟ್ಟಿಗೆ ಹೋಗಿತ್ತು. ಇಂಥ ಸಂದರ್ಭದಲ್ಲಿ ಕರಾವಳಿಯ ಅಷ್ಟೂ ಮಂದಿ ಜೊತೆಯಾಗಿ ನಿಂತು ಕೋರ್ಟ್ ಕಟ್ಟೆ ಏರಿದ್ದರು. ಹೋರಾಟದ ಕಣಕ್ಕೆ ಧುಮುಕಿದ್ದರು. ಇದರ ಪರಿಣಾಮ ಎನ್ನುವಂತೆ, ರಾಜ್ಯ ಸರಕಾರವೂ ಎಚ್ಚತ್ತು ಕಂಬಳಕ್ಕಾಗಿ ಪ್ರತ್ಯೇಕ ಮಸೂದೆ ಜಾರಿ ಮಾಡಿ, ಕಂಬಳ ಪ್ರಿಯರಿಗೆ ಸಾಥ್ ನೀಡಿತ್ತು.
ಅತ್ತ 2016ರಲ್ಲಿ ಕಂಬಳಕ್ಕೆ ರಾಜ್ಯ ಸರಕಾರದ ಅಂಕಿತ ಬೀಳುತ್ತಿದ್ದಂತೆ, ಖುಷಿಯಾದ ಮಂಗಳೂರಿನ ಯುವಕರು ಸೇನೆಯಲ್ಲಿ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದು ಬಂದಿದ್ದ ಕ್ಯಾ. ಬೃಜೇಶ್ ಚೌಟರ ನೇತೃತ್ವದಲ್ಲಿ ಕಂಬಳ ನಡೆಸಲು ಮುಂದಾಗಿದ್ದರು. ಆದರೆ, ಈಗಿನ ಕಾಲದಲ್ಲಿ ಕಂಬಳ ನಡೆಸುವುದು ಸುಲಭದ ಮಾತಲ್ಲ. ಅದರಲ್ಲೂ ಮಂಗಳೂರು ನಗರದಲ್ಲಿ ಕಂಬಳ ಮಾಡಬೇಕೆಂದು ಯೋಚನೆ ಮಾಡುವುದೇ ಸಾಧ್ಯವಾಗದ ಮಾತಾಗಿತ್ತು. ಈ ಬಗ್ಗೆ ಆಲೋಚಿಸಿ, ಜಾಗವನ್ನು ಫಿಕ್ಸ್ ಮಾಡಿದ್ರು. ಕುಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಸಾಕಷ್ಟು ಜಾಗ ಇದೆ, ಒಂದು ಮೂಲೆಯಲ್ಲಿ ಕಂಬಳ ನಡೆಸಲು ಅನುಮತಿ ಕೋರಿ ಗೋಲ್ಡ್ ಫಿಂಚ್ ಮಾಲಕ, ಉದ್ಯಮಿ ಪ್ರಕಾಶ್ ಶೆಟ್ಟಿಯವರಲ್ಲಿ ಕೇಳಿಕೊಂಡಾಗ ಸಂತಸದಿಂದಲೇ ಸಾಥ್ ನೀಡಿದ್ದರು. ಹೀಗೆ ಜನ್ಮ ತಳೆದಿದ್ದೇ ಮಂಗಳೂರು ಕಂಬಳ.
ಇಂಥ ಕಂಬಳಕ್ಕೆ ನಾಡಿನೆಲ್ಲೆಡೆಯ ಜನ ಸಾಥ್ ನೀಡಿದ್ದಾರೆ. ಕಂಬಳ ಸಮಿತಿಯವರು ಸೇರಿದಂತೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಬಹಳಷ್ಟು ಯುವಕರು ಮತ, ಧರ್ಮದ ಭೇದ ಇಲ್ಲದೆ ಬೃಜೇಶ್ ಚೌಟರಿಗೆ ಸಾರಥ್ಯ ನೀಡಿದ್ದಾರೆ. ಹೀಗಾಗಿ ಸದ್ದು ಗದ್ದಲವಿಲ್ಲದೆ ಕಂಬಳದ ಜನಪದ ಕ್ರೀಡೆಯ ಝಲಕನ್ನು ನಗರ ಭಾಗದ ಜನರಿಗೆ ಉಣ ಬಡಿಸಿದ್ದಾರೆ. ಗೋಲ್ಡ್ ಫಿಂಚ್ ಸಿಟಿಯ ಬೃಹತ್ ಮೈದಾನದಲ್ಲಿ ಹತ್ತೂರಿಂದ ಬರುವ ಕೋಣಗಳು, ಅವುಗಳ ಪಾಲಕರು, ಮಾಲಕರು ಉಳಕೊಳ್ಳುವುದಕ್ಕೆ ಮತ್ತು ಟೆಂಟ್ ಹಾಕಲು, ವಾಹನಗಳ ಪಾರ್ಕಿಂಗ್ ಮಾಡಲು ಪ್ರತ್ಯೇಕ ವ್ಯವಸ್ಥೆಯಿದೆ. ಇಷ್ಟೊಂದು ಅಪ್ಪಟ ಮತ್ತು ಅಚ್ಚುಕಟ್ಟಿನ ಕಂಬಳ ಮತ್ತೆಲ್ಲೂ ಕಾಣಸಿಗಲ್ಲ ಎನ್ನುವಷ್ಟು ಅಲ್ಲಿನ ವ್ಯವಸ್ಥೆ ಇರುತ್ತದೆ. ಅದಕ್ಕಾಗಿ ಮೈದಾನದಲ್ಲಿ ಭರದ ತಯಾರಿ ನಡೆದಿದೆ.
ಕಂಬಳ ಸಮಿತಿಗೆ ಪ್ರಕಾಶ್ ಶೆಟ್ಟಿಯವರನ್ನೇ ಗೌರವಾಧ್ಯಕ್ಷರಾಗಿಸಿದ್ದು, ಬೃಜೇಶ್ ಚೌಟರ ನೇತೃತ್ವದಲ್ಲಿ ಕಂಬಳ ನಡೆಸಲಾಗುತ್ತಿದೆ. ಕಳೆದ ಬಾರಿ ಕಂಬಳಕ್ಕೆ ಬಂದಿದ್ದ ಪ್ರಕಾಶ್ ಶೆಟ್ಟಿ, ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಲ್ಲವನ್ನೂ ಒಳಗೊಂಡ ಮಾಲ್, ಕ್ರೀಡಾ ಸಂಕೀರ್ಣ, ಸ್ಟೇಡಿಯಂ, ವಿಲ್ಲಾ, ಇದರ ಜೊತೆಗೆ ಕಂಬಳಕ್ಕೂ ಪರ್ಮನೆಂಟ್ ಆಗಿರುವ ಕಂಬಳದ ಕರೆ ಒಂದನ್ನು ಉಳಿಸಿಕೊಳ್ಳುವುದಾಗಿ ಹೇಳಿದ್ದರು. ಕಂಬಳಕ್ಕೆ ವಿಶ್ವ ಪ್ರಸಿದ್ಧಿಯನ್ನು ತರುವುದಕ್ಕಾಗಿ ಕಂಬಳ ಓಟಗಾರರನ್ನು ಒಲಿಂಪಿಕ್ ರೀತಿಯಲ್ಲಿ ಜಾಗತಿಕ ಮನ್ನಣೆ ದೊರಕಿಸಲು ಪ್ರಯತ್ನಿಸುವುದಾಗಿ ಹೇಳಿದ್ದರು. ಎಲ್ಲವೂ ಸಾಕಾರಗೊಂಡರೆ, ಮಂಗಳೂರು ಕಂಬಳ ಮುಂದಿನ ದಿನಗಳಲ್ಲಿ ಜಾಗತಿಕ ನೆಲೆಯಲ್ಲಿ ಸ್ಥಾನ ಪಡೆಯುವ ಸಾಧ್ಯತೆಯಿದೆ. ಪ್ರಕಾಶ್ ಶೆಟ್ಟಿ ಮತ್ತು ಬೃಜೇಶ್ ಚೌಟರ ಸಾರಥ್ಯದಲ್ಲಿ ಇವೆಲ್ಲವೂ ಸಾಕಾರ ಆಗಲಿ. ಮಂಗಳೂರು ಕಂಬಳ ತುಳುವರ ಜನಪದ ಉತ್ಸವ ಆಗಿ ಮೂಡಿಬರಲೆಂದು ಹಾರೈಸುವ.
Mangaloreans to witness Mega City Kambala at Gold finch city located in kulur by Captian Brijesh Chowta on March 6th and 7th 2021.
15-05-25 11:59 am
HK News Desk
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 06:02 pm
Bangalore Correspondent
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm
Hubballi Schoolboy Murder, Crime, Minor: ಹುಬ್...
13-05-25 07:55 pm