ಬ್ರೇಕಿಂಗ್ ನ್ಯೂಸ್
04-03-21 04:43 pm Mangalore Correspondent ಕರಾವಳಿ
ಮಂಗಳೂರು, ಮಾ.4: ಕೆಂಜಾರು ವಿಮಾನ ನಿಲ್ದಾಣ ಬಳಿಯ ಕೆಐಎಡಿಬಿಗೆ ಸೇರಿದ ಜಾಗದಲ್ಲಿ ಖಾಸಗಿ ವ್ಯಕ್ತಿಯೊಬ್ಬರು ಮಾಡಿದ್ದ ಗೋಶಾಲೆಯನ್ನು ಜಿಲ್ಲಾಡಳಿತ ನೆಲಸಮ ಮಾಡಿದೆ.
1993ರಲ್ಲಿ ಕೆಐಎಡಿಬಿಗೆ ಮಾರಾಟ ಮಾಡಿದ್ದ ಸರಕಾರಿ ಜಾಗವನ್ನು ಹಾಗೇ ಬಿಡಲಾಗಿತ್ತು. ಫಲ್ಗುಣಿ ನದಿಗೆ ತಾಗಿಕೊಂಡಿದ್ದ ಸದ್ರಿ ಜಾಗದಲ್ಲಿ ಪ್ರಕಾಶ್ ಶೆಟ್ಟಿ ಎಂಬವರು ಕಳೆದ ಎಂಟು ವರ್ಷಗಳಿಂದ ಗೋಶಾಲೆ ನಿರ್ಮಿಸಿದ್ದರು. ಇಂಟರ್ಲಾಕ್ ಫ್ಯಾಕ್ಟರಿ ಮತ್ತು ಅದರ ಬದಿಯಲ್ಲೇ ಗೋವುಗಳಿಗೆ ಇರಲು ಶೆಲ್ಟರ್ ಮಾಡಿದ್ದರು. ಕಪಿಲಾ ಹೆಸರಿನ ಗೋಶಾಲೆಯಲ್ಲಿ ದೇಸೀ ಮತ್ತು ಅಪರೂಪದ ಗಿರ್ ತಳಿಯ ಗೋವುಗಳನ್ನು ಸಾಕಿದ್ದರು. ಅಲ್ಲದೆ, ಜಗತ್ತಿನಲ್ಲೇ ಅಪರೂಪ ಆಗಿರುವ ಕಪಿಲಾ ಗೋವಿನ ತಳಿಯನ್ನು ಸಾಕಿದ್ದರು. ತಿಳಿ ಹಳದಿ ಬಣ್ಣದ ಕಪಿಲಾ ಗೋವು ಭಾರತದ ದೇಸೀ ಗೋವು ಆಗಿದ್ದು ಕೃಷ್ಣ ಸಾಕಿದ್ದ ಗೋವು ಆಗಿದ್ದರಿಂದ ಕಪಿಲಾ ಎಂದು ಹೆಸರಿಸಲಾಗಿತ್ತು. ಈ ರೀತಿಯ ಗೋವು ದೇಶದಲ್ಲಿ ಐನೂರು ಮಾತ್ರ ಇದ್ದು ಅವುಗಳಲ್ಲಿ ನೂರರಷ್ಟು ಗೋವು ಪ್ರಕಾಶ್ ಶೆಟ್ಟಿಯವರ ಕಪಿಲಾ ಗೋಶಾಲೆಯಲ್ಲಿದ್ದವು. ಒಟ್ಟು 250 ರಷ್ಟು ಗೋವುಗಳಿದ್ದವು.
ಆದರೆ, ಕೆಐಎಡಿಬಿಗೆ ಸೇರಿದ ಕೆಂಜಾರಿನ ಜಾಗದಲ್ಲಿ ಇತ್ತೀಚೆಗೆ ಕೋಸ್ಟ್ ಗಾರ್ಡ್ ತರಬೇತಿ ಅಕಾಡೆಮಿ ಮಂಜೂರಾಗಿತ್ತು. ಆದರೆ, ಸದರಿ ಭೂಮಿಯಲ್ಲಿ ಗೋಶಾಲೆ ಮಾಡಿದ್ದಲ್ಲದೆ, ಗೋವುಗಳನ್ನು ಮೇಯಲು ಬಿಡಲು ಬಳಸುತ್ತಿದ್ದರು. ಭೂಮಿ ತೆರವು ಮಾಡಿಕೊಡಬೇಕಾದ ದ.ಕ ಜಿಲ್ಲಾಡಳಿತ ಇಂದು ಪೊಲೀಸರು ಹಾಗು ಸಹಾಯಕ ಕಮಿಷನರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಗೋಶಾಲೆ ಕಟ್ಟಡವನ್ನು ನೆಲಸಮ ಮಾಡಿದೆ.
ಗೋವುಗಳನ್ನು ಮೇಯಲು ಬಿಟ್ಟಿರುವ ವೇಳೆ ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗಿದೆ. ಸದರಿ ಜಾಗದ ಮಾಲೀಕರಿಗೆ 1993ರಲ್ಲೇ ಪರಿಹಾರ ಕೊಟ್ಟು ಸ್ವಾಧೀನ ಪಡಿಸಿತ್ತು ಕೆಐಎಡಿಬಿ. ಸದ್ಯ ಹಳೆಯ ಮಾಲೀಕರು ಮೃತರಾಗಿದ್ದರು. ಈ ನಡುವೆ, ಪ್ರಕಾಶ್ ಶೆಟ್ಟಿ ಕೂಡ ಹತ್ತು ವರ್ಷಗಳ ಹಿಂದೆ ಜಾಗವನ್ನು ಮೂಲ ಮಾಲೀಕರಿಂದ ಖರೀದಿ ಮಾಡಿದ್ದರು ಎನ್ನಲಾಗುತ್ತಿದೆ.
ಇದೀಗ ಗೋಶಾಲೆ ಇಲ್ಲದೇ ನೂರಾರು ಗೋವುಗಳು ಬೀದಿಗೆ ಬಿದ್ದಿವೆ. ಗೋಶಾಲೆ ಕಟ್ಟಡದ ಜೊತೆಗೆ ಪ್ರಕಾಶ್ ಶೆಟ್ಟಿಗೆ ಸೇರಿದ ಇಂಟರ್ ಲಾಕ್ ಫ್ಯಾಕ್ಟರಿ ಕೂಡ ನೆಲಸಮವಾಗಿದೆ. ಏಕಾಏಕಿ ಗೋಶಾಲೆ ಇದ್ದ ಕಟ್ಟಡವನ್ನು ತೆರವುಗೊಳಿಸಿದ ಕ್ರಮವನ್ನು ಪ್ರಕಾಶ್ ಶೆಟ್ಟಿ ಆಕ್ಷೇಪಿಸಿದ್ದಾರೆ. ಬಿಜೆಪಿ ಸರಕಾರ ಗೋಶಾಲೆ, ಗೋವುಗಳ ರಕ್ಷಣೆಗೆ ಬೆಂಬಲ ನೀಡುವುದಾಗಿ ಹೇಳುತ್ತದೆ. ಆದರೆ, ಇಲ್ಲಿ ದೇಸೀ ತಳಿಗಳನ್ನೇ ಸಾಕಿದ್ದ ಗೋಶಾಲೆಯ ಕಟ್ಟಡವನ್ನೇ ನೆಲಸಮ ಮಾಡಿದ್ದಾರೆ ಎಂದಿದ್ದಾರೆ. ಇದರ ಬದಲಿಗೆ ಬೇರೆ ಸರಕಾರಿ ಜಾಗ ನೀಡುವ ಪ್ರಸ್ತಾಪ ಮುಂದಿಟ್ಟರೂ, ಪ್ರಕಾಶ್ ಶೆಟ್ಟಿ ಅದಕ್ಕೆ ಒಪ್ಪಿಲ್ಲ. ಈಗ ಇರುವ ಜಾಗದಲ್ಲಿ ಒಳ್ಳೆಯ ಹಸಿರು ಬಯಲು ಇದ್ದುದರಿಂದ ಗೋವುಗಳು ತಮ್ಮಷ್ಟಕ್ಕೆ ಮೇಯ್ದು ಬರುತ್ತಿದ್ದವು. ಬೋಳು ಜಾಗ ಒಂದಿಷ್ಟು ಕೊಟ್ಟರೆ ಮೇವಿಗೆ ಏನು ಮಾಡಬೇಕು ಎಂದು ಪ್ರಶ್ನೆ ಮಾಡಿದ್ದಾರೆ.
The district administration cleared an illegal goshala on government land at Kenjar, on the outskirts of the city with help of the police force.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
19-04-25 06:19 pm
Mangaluru Correspondent
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
Mangalore Waqf protest, Adyar, Police: ವಕ್ಫ್...
18-04-25 10:17 pm
Mangalore Waqf Protest, Adyar, Police, Live:...
18-04-25 12:54 pm
19-04-25 10:46 pm
Mangalore Correspondent
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am
ರಾಣಾ ಬಳಿಕ ಮತ್ತೊಬ್ಬ ಮೋಸ್ಟ್ ವಾಂಟೆಡ್ ಖಲೀಸ್ತಾನಿ ಉ...
19-04-25 10:55 am
Mangalore Kuthar, Ullal Gang Rape, Arrest: ಕು...
18-04-25 10:59 pm