ಬ್ರೇಕಿಂಗ್ ನ್ಯೂಸ್
06-03-21 11:24 pm Mangaluru correspondent ಕರಾವಳಿ
ಮಂಗಳೂರು, ಮಾ.6: ಕಂಬಳದಲ್ಲಿ ಹಿಂಸೆ ಆಗತ್ತೆ ಎಂದು ಕೋರ್ಟಿಗೆ ಹೋಗಿದ್ದನ್ನು ಕೇಳಿದ್ದೆ. ಆದರೆ, ನನಗೆ ಕಂಬಳದಲ್ಲಿ ಹಿಂಸೆ ಕಂಡಿಲ್ಲ. ಹಿಂಸೆ ಆಗ್ತಾ ಇರುವುದು ಕಾಣ್ತಾ ಇಲ್ಲ ಎಂದು ಅವಧೂತ, ವಿನಯ ಗುರೂಜಿ ಹೇಳಿದ್ದಾರೆ.
ನಗರದ ಕುಳೂರಿನಲ್ಲಿ ನಡೆದ ರಾಮ ಲಕ್ಷ್ಮಣ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ವಿನಯ ಗುರೂಜಿ ಮಾತನಾಡಿದರು.
ಕಂಬಳ ನಮ್ಮ ಜನಪದ ಕ್ರೀಡೆ. ನಮ್ಮ ಹೆಮ್ಮೆ. ಆದರೆ, ಕಂಬಳ ನಮ್ಮ ಕರಾವಳಿ ಅಥವಾ ಕರ್ನಾಟಕ ರಾಜ್ಯಕ್ಕೆ ಸೀಮಿತ ಆಗಬಾರದು. ಕಂಬಳ, ಯಕ್ಷಗಾನ ಯಾಕೆ ಇಲ್ಲಿಗೆ ಸೀಮಿತ ಆಗಬೇಕು. ಯಕ್ಷಗಾನ ಹೊರ ದೇಶಕ್ಕೆ ಹೋಗಿದೆ. ಕಂಬಳವೂ ಹೋಗಬೇಕು. ವಿದೇಶದಲ್ಲೂ ಮಿಂಚಬೇಕು, ನಮ್ಮ ಕಂಬಳದಲ್ಲಿ ಉದ್ಯೋಗ ಕಂಡವರು ವಿದೇಶಕ್ಕೆ ಹೋಗಿ ತಮ್ಮ ಸಾಧನೆ ಮೆರೆಯಬೇಕು. ರಾಜಕಾರಣಿಗಳು, ಉದ್ಯಮ ಕ್ಷೇತ್ರದ ಸಾಧಕರು ಮನಸ್ಸು ಮಾಡಿದರೆ ಇದು ಕಷ್ಟದ ಕೆಲಸ ಅಲ್ಲ ಎಂದು ಹೇಳಿದರು.
ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ, ಕಂಬಳ ಸಮಿತಿ ಗೌರವಾಧ್ಯಕ್ಷ ಪ್ರಕಾಶ್ ಶೆಟ್ಟಿ , ಸದ್ಯದಲ್ಲೇ ಗೋಲ್ಡ್ ಫಿಂಚ್ ಮೈದಾನ ಒಂದು ಸಿಟಿಯಾಗಿ ಬೆಳೆಯಲಿದೆ. ಇದರ ಕಾಮಗಾರಿ ನಡೆಯುತ್ತಿದ್ದು ಸಿಟಿಯಲ್ಲಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಕೂಡ ಬರಲಿದೆ. ಅದರಲ್ಲಿ ಜೋಡುಕರೆ ಕಂಬಳದ ಕರೆಯನ್ನೂ ಮಾಡುವಂತೆ ಆರ್ಕಿಟೆಕ್ಚರ್ ಬಳಿ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಸಮಾರಂಭದಲ್ಲಿ ಮಧ್ಯಪ್ರದೇಶದ ಸ್ವಾಮಿ ಕಾಳಿಚರಣ್ ಸ್ವಾಮೀಜಿ, ಕಾಂಗ್ರೆಸ್ ಮುಖಂಡ ಮಿಥುನ್ ರೈ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು. ಕಂಬಳ ಸಮಿತಿ ಅಧ್ಯಕ್ಷ ಬೃಜೇಶ್ ಚೌಟ ಗಣ್ಯರನ್ನು ಸ್ವಾಗತಿಸಿದರು.
ಮಂಗಳೂರು ನಗರದ ಜನರಿಗೆ ಕಂಬಳದ ಅದ್ದೂರಿತನ, ಜನಪದ ಕ್ರೀಡೆಯ ಔನ್ನತ್ಯವನ್ನು ತೋರಿಸಬೇಕೆನ್ನುವ ಚಿಂತನೆಯಲ್ಲಿ ಆರಂಭಗೊಂಡ ಮಂಗಳೂರು ಕಂಬಳ ಈ ಬಾರಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿದೆ. ಈ ಸಲವೂ ಭಾರೀ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು ಕಂಬಳವನ್ನು ಸವಿದಿದ್ದಾರೆ. ಕಂಬಳದಲ್ಲಿ 157 ಜೊತೆ ಕೋಣಗಳು ಭಾಗವಹಿಸಿದ್ದು ನಾಳೆ ಮಧ್ಯಾಹ್ನ ವರೆಗೂ ಕಂಬಳ ನಡೆಯಲಿದೆ.
The fourth edition of Rama-Lakshmana Jodukere Kambala was held on 6 March at the Goldfinch City, Bangra Kulur in Mangalore.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm