ಬ್ರೇಕಿಂಗ್ ನ್ಯೂಸ್
07-03-21 12:21 pm Mangalore Correspondent ಕರಾವಳಿ
ಮಂಗಳೂರು, ಮಾ.7; ದೊಡ್ಡಪ್ಪನ ಮಗನಿಗೆ ಬುದ್ಧಿವಾದ ಹೇಳಿದ್ದಕ್ಕೆ ಅಣ್ಣ ತಮ್ಮನನ್ನೇ ಕೊಲೆಗೈದಿದ್ದ ಪ್ರಕರಣದಲ್ಲಿ ಆರೋಪಿಗೆ ಮಂಗಳೂರಿನ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ಬಂಟ್ವಾಳ ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿ ನಿವಾಸಿ ರಾಜೇಶ್(27) ಶಿಕ್ಷೆಗೊಳಗಾದ ಯುವಕ. ಈತ ತನ್ನ ದೊಡ್ಡಪ್ಪನ ಮಗ ರಂಜಿತ್(27) ಎಂಬಾತನನ್ನು 2017ರ ಮೇ 17 ರಂದು ರಾತ್ರಿ ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ್ದಾನೆ. ಇವರು ಬಂಟ್ವಾಳ ತಾಲೂಕು ಬಾಳ್ತಿಲ ಗ್ರಾಮದ ಕೊಡಂಗೆ ಕೋಡಿಯ ನಿವಾಸಿಗಳಾಗಿದ್ದು ಅಣ್ಣ - ತಮ್ಮಂದಿರು. ಆರೋಪಿ ರಾಜನಿಗೆ ವಿಪರೀತ ಮದ್ಯಸೇವನೆ ಚಟವಿತ್ತು. ಆತನಿಗೆ ಹೆತ್ತವರು ಬುದ್ಧಿ ಮಾತು ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ನೊಂದಿದ್ದ ಆತನ ಹೆತ್ತವರು ರಂಜಿತ್ ಮತ್ತು ಆತನ ತಂದೆ ತಾಯಿಗೆ ಬುದ್ಧಿ ಹೇಳುವಂತೆ ಸೂಚಿಸಿದ್ದರು. ಅದರಂತೆ ರಂಜಿತ್ ಹಲವು ಬಾರಿ ರಾಜೇಶನಿಗೆ ಬುದ್ದಿಮಾತು ಹೇಳಿದ್ದು ರಂಜಿತ್ ಮೇಲೆ ರಾಜೇಶನಿಗೆ ವೈಮನಸ್ಸು ಉಂಟಾಗಿತ್ತು.
ಮೇ 17ರಂದು ಬಿ.ಸಿ ರೋಡ್ ನ ಬಾರ್ ನಲ್ಲಿ ರಾಜೇಶ್ ಆತನ ಗೆಳೆಯರೊಂದಿಗೆ ಮದ್ಯ ಸೇವಿಸುತ್ತಿದ್ದು ರಂಜಿತ್ ಬುದ್ಧಿಮಾತು ಹೇಳಿದ್ದಲ್ಲದೆ ರಿಕ್ಷಾದಲ್ಲಿ ಮನೆಗೆ ಹೋಗುತ್ತಿದ್ದಾಗ ಆತನನ್ನು ತಡೆದು ಕೈಯಿಂದ ಹೊಡೆದಿದ್ದ. ಇದರಿಂದ ರಾಜೇಶ್ ಮತ್ತಷ್ಟು ಮುನಿಸಿಕೊಂಡಿದ್ದು ಅದೇ ದಿನ ರಾತ್ರಿ ಹತ್ತು ಗಂಟೆ ವೇಳೆಗೆ ರಂಜಿತ್ ಮನೆಗೆ ತೆರಳಿದ್ದ. ಕೈಯಲ್ಲಿ ಚೂರಿ ಹಿಡಿದುಕೊಂಡು ಹೋಗಿದ್ದ ರಾಜೇಶ್, ಮನೆಯವರನ್ನು ಕರೆದಿದ್ದಾನೆ. ಗಣೇಶ್ ಪೂಜಾರಿ, ಅವರ ಪತ್ನಿ ಲಲಿತಾ ಮತ್ತು ಪುತ್ರ ರಂಜಿತ್ ಹೊರಗೆ ಬಂದಿದ್ದು ಈ ವೇಳೆ ರಾಜೇಶ್ ಚೂರಿಯಿಂದ ರಂಜಿತ್ ನ ಕುತ್ತಿಗೆ ಭಾಗಕ್ಕೆ ತಿವಿದಿದ್ದು ತಡೆಯಲು ಮುಂದಾದ ಗಣೇಶ್ ಪೂಜಾರಿ ಕೈಗೂ ಚೂರಿಯಿಂದ ಗಾಯವಾಗಿತ್ತು. ತೀವ್ರ ಗಾಯಗೊಂಡ ರಂಜಿತ್ ನನ್ನು ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು ಆತ ಮೃತಪಟ್ಟಿದ್ದ. ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆಗ ಪ್ರೊಬೆಷನರಿ ಐಪಿಎಸ್ ಅಧಿಕಾರಿಯಾಗಿದ್ದ ನಾಗೇಶ್ ಡಿ.ಎಲ್ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು.
The Mangalore court has sentenced life imprisonment to an Elderly brother for killing his younger brother in Bantwal, Mangalore.
15-05-25 10:16 pm
HK News Desk
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
15-05-25 09:09 pm
HK News Desk
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
Sofia Qureshi, BJP leader, FIR: ಸೋಫಿಯಾ ಭಯೋತ್ಪ...
14-05-25 11:08 pm
Masood Azhar; ಐಎಂಎಫ್ ಸಾಲದ ಹಣವನ್ನೂ ಉಗ್ರರಿಗೆ ಹಂ...
14-05-25 11:08 pm
ಪಾಕ್ ವಶದಲ್ಲಿದ್ದ ಬಿಎಸ್ಎಫ್ ಯೋಧ ಕೊನೆಗೂ ಬಿಡುಗಡೆ ;...
14-05-25 07:33 pm
15-05-25 08:04 pm
Mangalore Correspondent
Lashkar Terror HQ, Pakistan: ಧ್ವಂಸಗೊಂಡ ಲಷ್ಕರ್...
15-05-25 06:36 pm
Lokayukta raid, Mangalore: ಸರ್ವೆ ಇಲಾಖೆ ಮೇಲ್ವಿ...
15-05-25 03:33 pm
Kundapur Suicide: ಸಾಲಬಾಧೆ, ತಂದೆ- ಮಗ ಬಾವಿಗೆ ಹಾ...
15-05-25 01:34 pm
Manjunath Bhandary, Kukke Temple, Mangalore:...
14-05-25 08:05 pm
15-05-25 11:06 pm
HK News Desk
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm
Bangalore Job Fraud, Crime; ಮೆಕ್ರೋಸಾಪ್ಟ್ , ಬ...
15-05-25 12:14 pm
ಕೊಲ್ಕತ್ತಾದಲ್ಲಿ ಕಾರು ಅಡ್ಡಗಟ್ಟಿ 2.66 ಕೋಟಿ ದರೋಡೆ...
14-05-25 10:22 pm
Suhas Shetty Murder, Arrest, CCB Police: ಸುಹಾ...
14-05-25 09:23 pm