ಬ್ರೇಕಿಂಗ್ ನ್ಯೂಸ್
22-03-21 08:55 pm Mangaluru correspondent ಕರಾವಳಿ
ಮಂಗಳೂರು, ಮಾ.22: ಸೌದಿ ಅರೇಬಿಯಾದ ಜಿಝಾನ್ ನಲ್ಲಿ ತೊಕ್ಕೊಟ್ಟು ಮೂಲದ ರೊನಾಲ್ಡ್ ಡಿ ಸೋಜಾ ಎಂಬವರು ನಿಗೂಢವಾಗಿ ಮೃತಪಟ್ಟಿದ್ದು ಮೃತದೇಹವನ್ನು ಊರಿಗೆ ತರಲು ಪತ್ನಿ ಮತ್ತು ಮನೆಮಂದಿ ಮೂರು ದಿವಸಗಳಿಂದ ಹರಸಾಹಸ ಪಡುತ್ತಿದ್ದಾರೆ.
ಎರಡು ವರ್ಷದ ಹಿಂದಷ್ಟೆ ಸೌದಿ ಅರೇಬಿಯಾಕ್ಕೆ ಇಲೆಕ್ಟ್ರೀಷಿಯನ್ ವೃತ್ತಿಗೆ ತೆರಳಿದ್ದ ತೊಕ್ಕೊಟ್ಟಿನ ಪಂಡಿತ್ ಹೌಸ್ ನಿವಾಸಿ ರೊನಾಲ್ಡ್ ಡಿ ಸೋಜಾ(53) ಶುಕ್ರವಾರ ಸಂಜೆ ತಾವು ತಂಗಿದ್ದ ಕೋಣೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶುಕ್ರವಾರ ಸಂಜೆ ಪತ್ನಿ ಸರಿತಾ ಡಿಸೋಜಾರಲ್ಲಿ ವೀಡಿಯೋ ಕಾಲ್ ಸಂಭಾಷಣೆ ನಡೆಸಿದ್ದ ಮತ್ತೆ ಎಂಟು ಗಂಟೆಗೆ ಮಾಡುತ್ತೇನೆ ಎಂದಿದ್ದರು. ಅಲ್ಲದೆ, ಇನ್ನೆರಡು ದಿನದಲ್ಲಿ ಊರಿಗೆ ಬರುತ್ತೇನೆ, ಮಕ್ಕಳಿಗೆ ಹೇಳೋದು ಬೇಡ. ಸರ್ಪ್ರೈಸ್ ಕೊಡುತ್ತೇನೆ ಎಂದು ಹೇಳಿದ್ದರು. ದಿನವೂ ಎಂಟು ಗಂಟೆಗೆ ವಿಡಿಯೋ ಕಾಲ್ ಮಾಡಿ, ಮನೆಯವರ ಜೊತೆ ಪ್ರಾರ್ಥನೆ ನಡೆಸುತ್ತಿದ್ದ ರೊನಾಲ್ಡ್ ಅಂದು ರಾತ್ರಿ ಫೋನ್ ಮಾಡಿರಲಿಲ್ಲ. ಅತ್ತ ಫೋನ್ ಮಾಡಿದ್ರೂ ರಿಸೀವ್ ಮಾಡಿರಲಿಲ್ಲ.
ಸೌದಿ ಅರೇಬಿಯಾದ ಅಸೀರ್ ಪ್ರಾಂತ್ಯದ ಜಿಝಾನ್ ನಲ್ಲಿ ಓಸೋಲ್ ಅಲ್ ಬನ್ನಾ ಎಂಬ ಕಂಪೆನಿಯಲ್ಲಿ ರೊನಾಲ್ಡ್ ಎಲೆಕ್ಟ್ರಿಶಿಯನ್ ಆಗಿ ದುಡಿಯುತ್ತಿದ್ದರು. ಕಂಪನಿ ಒದಗಿಸಿದ್ದ ಕೊಠಡಿಯಲ್ಲಿ ರೊನಾಲ್ಡ್ ಒಬ್ಬಂಟಿಯಾಗೇ ಇದ್ದರು. ಪಕ್ಕದ ಕೊಠಡಿಯಲ್ಲಿ ಬಿಹಾರ ಮತ್ತು ಉತ್ತರ ಪ್ರದೇಶ ಮೂಲದವರು ಇರುತ್ತಿದ್ದರು. ಅಂದು, ರಾತ್ರಿ ಮನೆಯ ಸ್ನಾನದ ಕೊಠಡಿಯಲ್ಲಿ ಬಿದ್ದಿದ್ದ ಪಕ್ಕದ ಮನೆಯವರು ವಿಷಯವನ್ನು ಕಂಪನಿ ಸಿಬಂದಿಗೆ ಮತ್ತು ಪೊಲೀಸರಿಗೆ ತಿಳಿಸಿದ್ದಾರೆ. ಪೊಲೀಸರು ಬಂದು ಆಸ್ಪತ್ರೆಗೆ ದಾಖಲಿಸಿದ್ದು ಮೃತಪಟ್ಟಿದ್ದರು ಎನ್ನಲಾಗಿದೆ. ಆದರೆ, ಕಂಪನಿ ಕಡೆಯವರಿಗೆ ರೊನಾಲ್ಡ್ ಸಾವಿನ ಬಗ್ಗೆ ಮನೆಯವರಿಗೆ ಸುದ್ದಿ ಮುಟ್ಟಿಸಲು ಸಾಧ್ಯವಾಗಲಿಲ್ಲ.
ಕೊನೆಗೆ, ಇವರನ್ನು ಸೌದಿ ಅರೇಬಿಯಾಗೆ ಕಳುಹಿಸಿದ ಮುಂಬೈನ ಏಜೆಂಟರಿಗೆ ವಿಷಯ ಮುಟ್ಟಿಸಿದ್ದಾರೆ. ಅವರು ತಮ್ಮ ಬಳಿ ಲಭ್ಯವಿರುವ ಮಂಗಳೂರಿನ ವಾಟ್ಸಾಪ್ ಗ್ರೂಪ್ ಗಳಲ್ಲಿ ಮೃತರ ಬಗ್ಗೆ ಮಾಹಿತಿ ಹರಿಯಬಿಟ್ಚಿದ್ದರು. ರೊನಾಲ್ಡ್ ಮೂಲತಃ ಮಂಗಳೂರಿನ ಕುಳೂರಿನವರಾಗಿದ್ದು ತೊಕ್ಕೊಟ್ಟಿನಲ್ಲಿ ಮನೆ ಮಾಡಿಕೊಂಡಿದ್ದರು. ಕುಳೂರಿನ ಕೆಲವರಿಗೆ ವಿಷಯ ತಿಳಿದು ರೊನಾಲ್ಡ್ ಮನೆಯವರಿ ಮಾಹಿತಿ ನೀಡಿದ್ದರು.
ರೊನಾಲ್ಡ್ ಸಾವು ಮನೆಮಂದಿಗೆ ಆಘಾತ ತಂದಿದೆ. ರಾತ್ರಿ ಫೋನ್ ಮಾಡುತ್ತೇನೆ ಎಂದಿದ್ದವರು ಎರಡು ದಿನಾವದ್ರೂ ಸುದ್ದಿಯಿಲ್ಲದೆ ಇದ್ದುದರಿಂದ ಮೊದಲೇ ಕಂಗಾಲಾಗಿದ್ದರು. ವಿಷಯ ತಿಳಿದ ಬಳಿಕ ಶಾಸಕ ಯು.ಟಿ.ಖಾದರ್ ಬಳಿ ಮಾತನಾಡಿ, ಶವ ತರುವ ಬಗ್ಗೆ ಮಾಹಿತಿ ಕೇಳಿದ್ದಾರೆ. ಖಾದರ್ ಸೂಚನೆಯಂತೆ, ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆ ಶವ ತರಿಸಲು ಬೇಕಾದ ಪ್ರಕ್ರಿಯೆ ನಡೆಸಿದೆ. ಆದರೆ, ಖಾದರ್ ವಿಷಯ ತಿಳಿಸಿದರೂ, ಅಲ್ಲಿ ಶವ ಪತ್ತೆ ಮಾಡುವುದೇ ಕಷ್ಟದ ಕೆಲಸವಾಗಿತ್ತು.
ಜಿಝಾನ್ ನ ದರ್ಬ್ ನಲ್ಲಿರುವ ಸಿದ್ದೀಕ್ ಉಳ್ಳಾಲ ಮತ್ತು ಇಂಡಿಯನ್ ಸೋಷಿಯಲ್ ಫೋರಂ ಸಂಘಟನೆಯ ಜಿ.ಕೆ. ಸಲೀಂ ಗುರುವಾಯನಕೆರೆ ಮೃತರ ಮನೆಯವರನ್ನು ಸಂಪರ್ಕಿಸಿ ಮೃತರ ಮಾಹಿತಿಗಳನ್ನು ಪಡೆದು, ಜಿಝಾನ್ ಪ್ರಾಂತ್ಯದ ಹಲವು ಆಸ್ಪತ್ರೆಗಳಲ್ಲಿ ವಿಚಾರಿಸಿದ್ದಾರೆ. ಕೊನೆಗೆ ಅಬು ಅರೀಸ್ ನ ಕಿಂಗ್ ಫಹಾದ್ ಅಸ್ಪತ್ರೆಯಲ್ಲಿ ಮೃತದೇಹ ಇರುವುದು ಪತ್ತೆಯಾಗಿದ್ದು ಆಸ್ಪತ್ರೆ ಹಾಗೂ ಅಲ್ ಬನ್ನಾನ್ ಕಂಪೆನಿಯ ಮುಖ್ಯಸ್ಥರೊಂದಿಗೆ ಭೇಟಿ ಮಾಡಿದ ತಂಡ, ಮೃತದೇಹವನ್ನು ತಾಯ್ನಾಡಿಗೆ ಕಳುಹಿಸಲು ವ್ಯವಸ್ಥೆ ಮಾಡಿದ್ದಾರೆ. ಇದಕ್ಕಾಗಿ ಹಲವು ದಾಖಲಾತಿಗಳ ಅಗತ್ಯವಿದ್ದು ಅದನ್ನು ಪೂರೈಸುವ ಕೆಲಸವನ್ನು ಫೋರಂ ಸದಸ್ಯರು ಮಾಡುತ್ತಿದ್ದಾರೆ.
ಸೌದಿ ಅರೇಬಿಯಾದ ಕಾನೂನು ಪ್ರಕ್ರಿಯೆಗಳನ್ನು ಪೂರ್ತಿಗೊಳಿಸಲು ಇಂಡಿಯನ್ ಸೋಷಿಯಲ್ ಫಾರಂ (ISF) ಅಸೀರ್ ಸಮಿತಿ ಉಪಾಧ್ಯಕ್ಷ ಹನೀಫ್ ಮಂಜೇಶ್ವರ ಸಹಕರಿಸುತ್ತಿದ್ದಾರೆ. ರೊನಾಲ್ಡ್ ಸಾವು ಹೇಗೆ ಆಗಿದೆ ಎನ್ನುವುದರ ಬಗ್ಗೆ ಪೋಸ್ಟ್ ಮಾರ್ಟಂ ವರದಿ ಬಂದ ಮೇಲಷ್ಟೆ ನಿರ್ಧರಿಸಬೇಕು ಎಂದು ವೈದ್ಯರು ತಿಳಿಸಿದ್ದಾರೆ.
ಒಟ್ಟಿನಲ್ಲಿ ಆರೋಗ್ಯದಿಂದಿದ್ದ ರೊನಾಲ್ಡ್ ಸಾವು ಮನೆಯವರನ್ನು ಆಘಾತಕ್ಕೀಡು ಮಾಡಿದೆ. ಮೃತ ರೊನಾಲ್ಡ್ ಡಿ ಸೋಜಾ ಅವರು ಪತ್ನಿ ಸರಿತಾ ಡಿ ಸೋಜಾ ಮಕ್ಕಳಾದ ರಿಯೋನ್ (16) ಮತ್ತು ರೋವಿನ್ (14) ಅವರನ್ನ ಅಗಲಿದ್ದಾರೆ.
In a tragic incident Ronald Dsouza (53) from Thokottu, Mangalore was found dead in his room at Saudi Arabia. The ISF foundation is now trying hard to send the body to India.
09-08-25 08:00 pm
HK Staff
ಎರಡು ವಂದೇ ಭಾರತ್, ಮೆಟ್ರೋ ಯಲ್ಲೋ ಲೈನ್ ಅನಾವರಣಕ್ಕೆ...
09-08-25 07:28 pm
Siddaramaiah,Ibrahim: ಸಿದ್ದರಾಮಯ್ಯ ಎರಡು ಬಾರಿ ಮ...
09-08-25 03:32 pm
Fraud Case, Dhruva Sarja, Mumbai: ಆಕ್ಷನ್ ಪ್ರಿ...
09-08-25 01:40 pm
ನೂರಾರು ಕೊಲೆ ಮಾಡಿಸಲು ಧರ್ಮಸ್ಥಳದ ಧರ್ಮಾಧಿಕಾರಿ ದಾವ...
08-08-25 06:23 pm
09-08-25 07:38 pm
HK Staff
ಭದ್ರತಾ ಸಲಹೆಗಾರ ಅಜಿತ್ ದೋವಲ್ - ರಷ್ಯಾ ಉಪ ಪ್ರಧಾನಿ...
09-08-25 02:49 pm
ಮಧ್ಯಪ್ರದೇಶದ ಈ ಜಾಗದಲ್ಲಿದ್ಯಂತೆ ಅಪಾರ ಪ್ರಮಾಣದ ಚಿನ...
07-08-25 10:02 pm
ಸಂಘರ್ಷ ನಿರತ ಜಗತ್ತಿಗೆ ಹಿಂದು ಧರ್ಮದಲ್ಲಿ ಮದ್ದು ಇದ...
07-08-25 09:42 pm
ಕೇರಳ ಚರ್ಚ್ ಪ್ರತಿಭಟನೆಯಲ್ಲಿ ಇಸ್ಲಾಮಿಕ್ ಮೂಲಭೂತವಾದ...
06-08-25 12:15 pm
09-08-25 04:22 pm
Mangaluru Correspondent
Dharmasthala,16th Spot at Bahubali Hill: ಧರ್ಮ...
09-08-25 02:16 pm
Udupi, Talaq; ವರದಕ್ಷಿಣೆ ಕಿರುಕುಳ ; ವಿದೇಶದಿಂದ ಮ...
09-08-25 11:36 am
Roshan Saldanha, ED Raid, Mangalore, Fraud: ರ...
08-08-25 11:10 pm
SIT, Kalleri, Buried Schoolgirl, Dharmasthala...
08-08-25 09:25 pm
08-08-25 10:07 pm
Bangalore Correspondent
ಮಸಾಜ್ ಹೆಸರಲ್ಲಿ ಪುರುಷರಿಗೆ ದೇಹ ಸುಖಕ್ಕೆ ಒತ್ತಾಯ,...
08-08-25 09:44 pm
ಹೆಚ್ಚು ಲೈಕ್ಸ್, ಫಾಲೋವರ್ಸ್ ಸಿಗ್ತಾರೆ ಅಂತ ಕುಖ್ಯಾತ...
08-08-25 12:30 pm
ಕುಖ್ಯಾತ ಕಳ್ಳನಿಗೆ ತನ್ನ ಮನೆಯಲ್ಲೇ ಆಶ್ರಯ ಕೊಟ್ಟಿದ್...
08-08-25 12:27 pm
2014 Kulai Sumathi Prabhu Murder Case: 2014 ರ...
08-08-25 12:21 pm