ಬ್ರೇಕಿಂಗ್ ನ್ಯೂಸ್
29-03-21 01:41 pm Mangalore Correspondent ಕರಾವಳಿ
ಮಂಗಳೂರು, ಮಾ.29: ರಾಮಸೇನೆಯ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷನೆಂದು ಹೇಳಿಕೊಂಡು ಬಂದಿದ್ದ ಪ್ರಸಾದ್ ಅತ್ತಾವರ ಮಂಗಳೂರು ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುತ್ತೇನೆಂದು ಹೇಳಿ, ಪ್ರೊಫೆಸರ್ ಒಬ್ಬರಿಂದ ಭಾರೀ ಪ್ರಮಾಣದ ಹಣ ಪಡೆದು ಮೋಸಗೈದ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾನೆ.
ಮಂಗಳೂರು ಅಥವಾ ರಾಯಚೂರು ವಿವಿಯಲ್ಲಿ ಕುಲಪತಿ ಸ್ಥಾನ ಕೊಡಿಸುವ ಆಮಿಷವೊಡ್ಡಿ 17.5 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದ ಬಗ್ಗೆ ಪ್ರಸಾದ ಅತ್ತಾವರ ವಿರುದ್ಧ ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಮಂಗಳೂರು ವಿವಿಯಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಜಯಶಂಕರ್ ಎಂಬವರು ಕುಲಪತಿ ಆಗಲು ಎಲ್ಲ ಅರ್ಹತೆಗಳನ್ನು ಹೊಂದಿದ್ದ ಕಾರಣ, ಅದಕ್ಕಾಗಿ ಲಾಬಿ ನಡೆಸಿದ್ದರು. ಈ ವೇಳೆ, ಅವರ ಪರಿಚಯದ ವಿವೇಕ್ ಆಚಾರ್ಯ ಎಂಬಾತ ರಾಮಸೇನೆಯ ಪ್ರಸಾದ್ ಅತ್ತಾವರನನ್ನು ಪರಿಚಯ ಮಾಡಿದ್ದು, ಇವರಿಗೆ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹೈಲೆವೆಲ್ ಟಚ್ ಹೊಂದಿದ್ದಾಗಿ ನಂಬಿಸಿದ್ದಾರೆ. ಗಣ್ಯ ವ್ಯಕ್ತಿಗಳ ಜೊತೆ ಫೋಟೋ ತೆಗೆಸಿಕೊಂಡಿದ್ದನ್ನು ತೋರಿಸಿ ಪ್ರೊಫೆಸರಲ್ಲಿ ನಂಬಿಕೆ ಹುಟ್ಟಿಸಿದ್ದಾರೆ. ಬಳಿಕ ಕುಲಪತಿ ಸ್ಥಾನ ಕೊಡಿಸಲು 30 ಲಕ್ಷ ರೂ. ಆಗುವುದೆಂದು ಹೇಳಿ, ಪ್ರೊಫೆಸರ್ ಬಳಿ ಡೀಲ್ ಕುದುರಿಸಿದ್ದಾರೆ. ಇದಕ್ಕಾಗಿ 17.5 ಲಕ್ಷ ಹಣವನ್ನು ಪಡೆದಿದ್ದು, ಉಳಿದ ಹಣಕ್ಕೆ ಮೂರು ಖಾಲಿ ಚೆಕ್ ಪಡೆದಿದ್ದಾರೆ. ಹಣ ಪಡೆದು ವರ್ಷದ ಮೇಲಾದ್ರೂ ಭರವಸೆ ಈಡೇರದ ಕಾರಣ ಹಣ ಕೇಳಿದಾಗ, ಬೈದು ಜೀವ ಬೆದರಿಕೆ ಹಾಕಿದ್ದಾರೆಂದು ಡಾ.ಜಯಶಂಕರ್ ಕಂಕನಾಡಿ ಠಾಣೆಗೆ ದೂರು ನೀಡಿದ್ದರು. ಕಂಕನಾಡಿ ಠಾಣೆಯಲ್ಲಿ ಕಲಂ 406, 417, 420, 506 ಜೊತೆಗೆ ಏಪಿಸಿ 34 ಪ್ರಕಾರ ಪ್ರಕರಣ ದಾಖಲಾಗಿತ್ತು.
ಈ ಹಿಂದೆ ಹಿಂದು ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಪ್ರಸಾದ್ ಅತ್ತಾವರ ಕೊನೆಯ ಬಾರಿಗೆ ಶ್ರೀರಾಮ ಸೇನೆಯಲ್ಲಿದ್ದ. ಯಾವುದೋ ವಿಚಾರದಲ್ಲಿ ಸಂಘಟನೆಯಿಂದ ಹೊರಬಂದಿದ್ದ ಪ್ರಸಾದ್, ಬಳಿಕ ತನ್ನದೇ ಆದ ರಾಮಸೇನೆ ಎಂಬ ಹೆಸರಲ್ಲಿ ಸಂಘಟನೆ ಕಟ್ಟಿಕೊಂಡಿದ್ದ. ಅದರ ಸಂಸ್ಥಾಪಕ ಮತ್ತು ರಾಜ್ಯಾಧ್ಯಕ್ಷನೂ ತಾನೇ ಎಂದು ಹೇಳಿಕೊಂಡಿದ್ದಲ್ಲದೆ, ಮಂಗಳೂರು ಮತ್ತು ಬೆಂಗಳೂರಿನಲ್ಲಿ ಬಿಜೆಪಿ ಪ್ರಮುಖರ ಸಖ್ಯ ಬೆಳೆಸಿಕೊಂಡಿದ್ದ. ಮಂಗಳೂರಿಗೆ ಸಿಎಂ ಬರುತ್ತಿದ್ದಾಗ ಹತ್ತಿರದ ನಂಟು ಇರುವಂತೆ ಪೋಸು ಕೊಡುತ್ತಿದ್ದ.
ಪ್ರಸಾದ್ ಅತ್ತಾವರ ವಿರುದ್ಧ ಈ ಹಿಂದೆ ಕಂಕನಾಡಿ ನಗರ ಮತ್ತು ಬಂದರು ಠಾಣೆಯಲ್ಲಿ ರೌಡಿಶೀಟ್ ಬುಕ್ ಮಾಡಲಾಗಿತ್ತು. ಬಂದರು, ಕದ್ರಿ ಮತ್ತು ಕಂಕನಾಡಿ ಠಾಣೆಗಳಲ್ಲಿ ಹಲವು ಕೇಸುಗಳನ್ನು ಎದುರಿಸುತ್ತಿದ್ದಾನೆ. ಇದೀಗ ಕುಲಪತಿ ಸ್ಥಾನದ ಆಮಿಷವೊಡ್ಡಿ ಹಣ ಪಡೆದ ಆರೋಪದಲ್ಲಿ ಸಿಕ್ಕಿಬಿದ್ದು ಜೈಲು ಸೇರಿದ್ದಾನೆ. ಇದೇ ರೀತಿ ಹಲವರಿಂದ ಹಣ ಪಡೆದು ಮೋಸಗೈದಿರುವ ವಿಚಾರ ತನಿಖೆಯಲ್ಲಿ ಬೆಳಕಿಗೆ ಬಂದಿದ್ದು ಅದರ ಬಗ್ಗೆ ದೂರು ಬಂದಲ್ಲಿ ತನಿಖೆ ಮಾಡಲಾಗುವುದು ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
Video:
Mangalore Ram Sene President Prasad Attavar has been arrested for duping a Mangalore University professor in lakhs stating he would buy a Vice-Chancellor seat.
17-07-25 07:45 pm
Bangalore Correspondent
Dharmasthala News, SIT: ಧರ್ಮಸ್ಥಳ ಪ್ರಕರಣದಲ್ಲಿ...
17-07-25 04:50 pm
CM Siddaramaiah, Janardhan Reddy; ನವೆಂಬರ್ ಒಳಗ...
16-07-25 09:36 pm
ಕೋವಿಡ್ ಮುಗಿದರೂ, ಅದರ ಪರಿಣಾಮ ನಿಂತಿಲ್ಲ..! ನರಮಂಡಲ...
16-07-25 07:05 pm
BESCOM, Cybercrime, Digital Arrest: ಡಿಜಿಟಲ್ ಅ...
16-07-25 03:58 pm
16-07-25 09:58 pm
HK News Desk
Changur Baba: ಲವ್ ಜಿಹಾದ್, ಹಿಂದು ಯುವತಿಯರ ಮತಾಂತ...
14-07-25 03:24 pm
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
17-07-25 06:30 pm
Mangalore Correspondent
Wild Elephant Attack, Dharmasthala: ಧರ್ಮಸ್ಥಳ...
17-07-25 04:14 pm
Minister Priyank Kharge, Drug Trafficking: ಡ್...
17-07-25 01:51 pm
Mangalore Rain, Landslide, Maryhill: ಭಾರೀ ಮಳೆ...
17-07-25 01:34 pm
Wizdom Education, Guruvandana, Mangalore: ಮಂಗ...
17-07-25 01:26 pm
17-07-25 10:42 pm
Mangalore Correspondent
Uppinangady Murder: ಕೌಟುಂಬಿಕ ಕಲಹ ; ಮಾತಿಗೆ ಮಾತ...
17-07-25 02:30 pm
Cyber Crime Tumkur, Facebook, Mangalore Polic...
16-07-25 11:04 pm
Mangalore Crime, Konaje Murder: ಒಂಟಿ ಮಹಿಳೆಯ ಅ...
16-07-25 09:48 pm
Sexual Harassment Odisha News; ಪ್ರಾಧ್ಯಾಪಕನಿಂದ...
16-07-25 04:37 pm