ಮಂಗಳೂರಿನಲ್ಲಿ ಭಾರೀ ಸಿಡಿಲು ಗಾಳಿ, ಮಳೆ ; ಹಲವೆಡೆ ವಾಹನ ಜಖಂ, ಮರ ಬಿದ್ದು ಹಾನಿ, ಕೈಕೊಟ್ಟ ಕರೆಂಟ್ !

29-03-21 11:08 pm       Mangaluru correspondent   ಕರಾವಳಿ

ಮಂಗಳೂರು ನಗರದಲ್ಲಿ ದಿಢೀರ್ ಸಿಡಿಲು, ಮಿಂಚಿನ ಅಬ್ಬರದ ಜೊತೆಗೆ ಭಾರೀ ಮಳೆಯಾಗಿದೆ. ದಿಢೀರ್ ಆಗಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮಳೆಯಾಗಿದ್ದು ನಗರ ಭಾಗದಲ್ಲಿ ಹಲವು ಕಡೆ ನಾಶ ನಷ್ಟವಾಗಿದೆ. 

ಮಂಗಳೂರು, ಮಾ.29: ಮಂಗಳೂರು ನಗರದಲ್ಲಿ ದಿಢೀರ್ ಸಿಡಿಲು, ಮಿಂಚಿನ ಅಬ್ಬರದ ಜೊತೆಗೆ ಭಾರೀ ಮಳೆಯಾಗಿದೆ. ದಿಢೀರ್ ಆಗಿ ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ಮಳೆಯಾಗಿದ್ದು ನಗರ ಭಾಗದಲ್ಲಿ ಹಲವು ಕಡೆ ನಾಶ ನಷ್ಟವಾಗಿದೆ. 

ಕೋಡಿಕಲ್ ಭಾಗದ ಬೋಳೂರಿನಲ್ಲಿ ರಸ್ತೆ ಬದಿಯ ವಿದ್ಯುತ್ ಕಂಬ ಉರುಳಿ ಬಿದ್ದಿದ್ದು ನಿಲ್ಲಿಸಿದ್ದ ಕಾರು ಜಖಂ ಆಗಿದೆ. ಭಾರೀ ಗಾಳಿ ಮಳೆಯಾಗಿದ್ದು ಒಮ್ಮೆಲೇ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಇದೇ ವೇಳೆ, ಮುಳಿಹಿತ್ಲು ಬಳಿಯೂ ಕಂಬ ಬಿದ್ದು ವಾಹನ ಜಖಂ ಆಗಿರುವ ಘಟನೆ ನಡೆದಿದೆ. 



ಬೊಂಡಂತಿಲ ಗ್ರಾಮದಲ್ಲಿ ಹಟ್ಟಿಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಮಂಗಳೂರು ನಗರದ ಫಳ್ನೀರಿನ ಇಂದಿರಾ ಆಸ್ಪತ್ರೆಯ ಆವರಣದಲ್ಲಿ ಕಂಪೌಂಡ್ ಗೋಡೆ ಕುಸಿದಿದ್ದು ಪಾರ್ಕಿಂಗ್ ಸಮಸ್ಯೆ ಉಂಟಾಗಿದೆ. 

ಲೇಡಿಹಿಲ್ ಬಳಿಯ ಹ್ಯಾಟ್ ಹಿಲ್ ಪ್ರದೇಶದಲ್ಲಿ ಬೃಹತ್ ಮರ ಉರುಳಿ ಬಿದ್ದು ರಸ್ತೆ ಬ್ಲಾಕ್ ಆಗಿದ್ದು ಅರಣ್ಯ ಇಲಾಖೆಯ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. 

ಮಂಗಳೂರು ನಗರ ಭಾಗದಲ್ಲಿ ಪೂರ್ತಿಯಾಗಿ ವಿದ್ಯುತ್ ಕೈಕೊಟ್ಟಿದ್ದು ಜನರು ಸೊಳ್ಳೆ ಕಾಟದಲ್ಲಿ ನರಳುವಂತಾಗಿದೆ. ಸಿಡಿಲು ಮಳೆ ಒಂದು ಗಂಟೆ ಕಾಲ ಸುರಿದು ಮತ್ತೆ ಶಾಂತವಾಗಿದೆ. ಮಂಗಳೂರು, ಬಂಟ್ವಾಳ ಪರಿಸರದಲ್ಲಿ ಭಾರೀ ಮಳೆಯಾಗಿದೆ.

2021 Heavy rains thunder and lightening causes havoc in Mangalore. It is reported that some cars, homes have been damahed and also  compound wall of a Indira hospital collapsed due to heavy rains.