ಬಂಟ್ವಾಳದಲ್ಲಿ ಬಿರುಗಾಳಿ ಆರ್ಭಟ ; ಒಂದೇ ಗ್ರಾಮದ 33 ಮನೆಗಳಿಗೆ ಹಾನಿ !!

31-03-21 11:31 am       Mangalore Correspondent   ಕರಾವಳಿ

ಸಿಡಿಲಿನ ಆರ್ಭಟದ ನಡುವೆ ಸುರಿದ ಗಾಳಿ ಮಳೆ, ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ಆಸ್ತಿ ಪಾಸ್ತಿ ನಷ್ಟ ಉಂಟು‌ ಮಾಡಿದೆ.

ಬಂಟ್ವಾಳ, ಮಾ.31 : ಸಿಡಿಲಿನ ಆರ್ಭಟದ ನಡುವೆ ಸುರಿದ ಗಾಳಿ ಮಳೆ, ಬಂಟ್ವಾಳ ತಾಲೂಕಿನಲ್ಲಿ ಹಲವೆಡೆ ಆಸ್ತಿ ಪಾಸ್ತಿ ನಷ್ಟ ಉಂಟು ‌ಮಾಡಿದೆ. ಒಂದೇ ಗ್ರಾಮದಲ್ಲಿ ಹಲವಾರು ಮನೆಗಳಿಗೆ ಹಾನಿ ಮಾಡಿದೆ. 

ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದಲ್ಲಿ 33 ಮನೆಗಳಿಗೆ ಹಾನಿಯಾಗಿದೆ. ಬಿ.ಮೂಡ ಗ್ರಾಮದ ಕಾಮಾಜೆ, ಮೈರಾನ್ ಪಾದೆ, ದೈಪಲ ಎಂಬಲ್ಲಿ ರಾತ್ರಿ ಸುಮಾರು 10 ಗಂಟೆಗೆ ಬೀಸಿದ ಭಾರಿ ಗಾಳಿಗೆ 33 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ 2 ಮನೆಗಳು ಜಖಂ ಆಗಿದೆ. ಸುಮಾರು 3,53,000 ರೂ ನಷ್ಟವುಂಟಾಗಿದೆ ಎಂದು ಕಂದಾಯ ಇಲಾಖೆ ಅಂದಾಜಿಸಿದೆ.

ತಾಲೂಕಿನಲ್ಲಿ ಸುಮಾರು 60 ಮನೆಗಳಿಗೆ ಮಳೆಯಿಂದ ಹಾನಿಯಾಗಿದೆ. ಇವಲ್ಲದೇ ಅಮ್ಮುಂಜೆ, ಬೆಂಜನಪದವು, ಕಳ್ಳಿಗೆ, ಅಮ್ಟಾಡಿ, ನರಿಕೊಂಬು ಗ್ರಾಮಗಳಲ್ಲಿ ಮನೆಗಳಿಗೆ ಹಾನಿಯಾಗಿದ್ದರೆ, ಕೃಷಿಗೂ ಹಾನಿಯುಂಟಾಗಿದೆ. ಭಾರಿ ಮಳೆಗೆ ಎಚ್. ಟಿ. ಲೈನ್ ಮೇಲೆಯೇ ಮರಗಳು ಉರುಳಿದ್ದು ಹಳ್ಳಿಗಳಲ್ಲಿ ವಿದ್ಯುತ್ ಸಂಪರ್ಕ ಕೈಕೊಟ್ಟಿದೆ.

Heavy rains in Dakshina Kannada has damaged more than 33 houses in Bantwal. Families under great trouble