ಬ್ರೇಕಿಂಗ್ ನ್ಯೂಸ್
31-03-21 05:57 pm Mangalore Correspondent ಕರಾವಳಿ
ಮಂಗಳೂರು, ಮಾ.31: ಮಂಗಳೂರಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿ ಎಷ್ಟು ಪರಿಣಾಮಕಾರಿ ನಡೆದಿದೆ ಎಂದರೆ, ಆಗನಗರದಲ್ಲಿ ಒಂದು ಸುತ್ತು ಹೊಡೆದರಷ್ಟಕ್ಕೇ ಸುಸ್ತುಬೇಕು. ಒಂದೇ ಮಳೆಗೆ ಮೊನ್ನೆ ರಥಬೀದಿಯ ಕಾಂಕ್ರೀಟ್ ರಸ್ತೆಯಲ್ಲಿ ರಾಡಿ ಎದ್ದಿತ್ತು. ಇಂದು ಸ್ಟೇಟ್ ಬ್ಯಾಂಕ್ ಬಳಿಯ ರಾವ್ ಎಂಡ್ ರಾವ್ ಸರ್ಕಲ್ ಬಳಿ ವಿಆರ್ ಎಲ್ ಲಾಜಿಸ್ಟಿಕ್ ಟೆಂಪೋವೊಂದು ರಸ್ತೆ ಮಧ್ಯದಲ್ಲಿ ಉಳಿದುಕೊಂಡಿದ್ದ ಗುಂಡಿಗೆ ಬಿದ್ದು ಒದ್ದಾಡಿದ ಘಟನೆ ನಡೆದಿದೆ.
ರಾವ್ ಎಂಡ್ ರಾವ್ ಸರ್ಕಲ್ ಬಳಿಯ ನಾಲ್ಕೂ ಸುತ್ತದ ರಸ್ತೆಗಳಲ್ಲಿ ಸರಕು ವಾಹನಗಳು, ಬಾಡಿಗೆ ನಡೆಸುವ ಟೆಂಪೋಗಳು, ಸರಕು ಸಾಗಿಸುವ ಆಟೋ ರಿಕ್ಷಾಗಳು ಗಿರಗಿಟ್ಲೆ ತಿರುಗುತ್ತಿರುತ್ತವೆ. ದಿನವಿಡೀ ಅತಿ ಹೆಚ್ಚು ವಾಹನಗಳು ರಾಶಿ ಬೀಳುವ ಇಂಥ ಸರ್ಕಲ್ ಬಳಿಯೇ ರಸ್ತೆ ಮಧ್ಯದಲ್ಲಿ ಗುಂಡಿ ಬಿದ್ದಿತ್ತು. ಅಲ್ಲಿಗೆ ಬಂದಿದ್ದ ವಿಆರ್ ಎಲ್ ಲಾಜಿಸ್ಟಿಕ್ ಸಂಸ್ಥೆಯ ಟೆಂಪೋ ಒಂದರ ಹಿಂಬದಿಯ ಒಂದು ಭಾಗದ ಟೈರ್ ಕಾಂಕ್ರೀಟ್ ರಸ್ತೆಯ ಮಧ್ಯದ ಹೊಂಡದಲ್ಲಿ ಹೂತು ಹೋಗಿದೆ.
ಟೆಂಪೋವನ್ನು ಎಬ್ಬಿಸಲು ಅಲ್ಲಿದ್ದವರು ಹರಸಾಹಸ ಪಟ್ಟಿದ್ದಾರೆ. ಹಿಂದಿನಿಂದ ದೂಡುವ ಪ್ರಯತ್ನ ಮಾಡಿ, ಟೆಂಪೋವನ್ನು ಮುಂದಕ್ಕೆ ಒಯ್ಯುವ ಯತ್ನ ಮಾಡಿದ್ದಾರೆ. ಆದರೆ, ಸರಕು ತುಂಬಿದ್ದ ಟೆಂಪೋವನ್ನು ಹೊಂಡದಿಂದ ಟೈರ್ ಎಬ್ಬಿಸಿ ಮುಂದಕ್ಕೆ ಒಯ್ಯಲು ಸಾಧ್ಯವಾಗಲಿಲ್ಲ. ಬೆಳಗ್ಗಿನಿಂದ ಸಂಜೆಯ ವರೆಗೂ ಟೆಂಪೋ ಅಲ್ಲಿಯೇ ಬ್ಲಾಕ್ ಆಗಿತ್ತು. ಸ್ಮಾರ್ಟ್ ಸಿಟಿ ಕಾಮಗಾರಿಯ ಭಯಾನಕ ಚಿತ್ರಣಕ್ಕೆ ಅಲ್ಲಿನ ಅವಾಂತರವೇ ಸಾಕ್ಷಿಯಾಗಿತ್ತು.
ಟೆಂಪೋ ರಸ್ತೆ ಮಧ್ಯದ ಹೊಂಡದಲ್ಲಿ ಹೊರಳಾಡುವ ವಿಡಿಯೋವನ್ನು ಸಾರ್ವಜನಿಕರು ಜಾಲತಾಣದಲ್ಲಿ ಹರಿಯಬಿಟ್ಟಿದ್ದು, ಸ್ಮಾರ್ಟ್ ಸಿಟಿ ಕಾಮಗಾರಿ ಅವಾಂತರಕ್ಕೆ ಕನ್ನಡಿ ಎನ್ನುವ ರೀತಿ ಟೀಕಿಸಿದ್ದಾರೆ. ಹೊಂಡ ಸಣ್ಣದೇ ಆಗಿದ್ದರೂ, ಮಳೆಯಿಂದಾಗಿ ಗುಂಡಿಯಲ್ಲಿ ಚಕ್ರ ಹೂತು ಹೋಗಿದ್ದರಿಂದ ಟೆಂಪೋ ಎಬ್ಬಿಸಲು ಕಷ್ಟವಾಗಿತ್ತು.
Video:
Poor quality cement road work vrl carrier tempo stuck in a pothole at a state bank in Mangalore. The video of this has gone viral on social media where people mock the city corporations least work.
06-10-25 05:27 pm
HK News Desk
Basavaraj Rayareddy, Mallikarjuna kharge, CM...
05-10-25 09:41 pm
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 04:57 pm
Mangalore Correspondent
ಟ್ರಾಫಿಕ್ ಸಿಬಂದಿ ಕಾರು ನಿಲ್ಲಿಸಲೆತ್ನಿಸಿ ಒಡೆದ ಗಾಜ...
06-10-25 02:58 pm
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm