ಹಿಟ್ ಅಂಡ್ ರನ್ ; ಸ್ಕೂಟರಿಗೆ ಲಾರಿ ಡಿಕ್ಕಿಯಾಗಿ ಮಾಜಿ ಸೈನಿಕ ದುರಂತ ಸಾವು !!

31-03-21 08:23 pm       Mangaluru correspondent   ಕರಾವಳಿ

ಸ್ಕೂಟರಿಗೆ ಲಾರಿ ಡಿಕ್ಕಿಯಾಗಿ ಪರಾರಿಯಾದ ಘಟನೆ ಕೇರಳ ಗಡಿಭಾಗ ಮಂಜೇಶ್ವರದ ಹೆದ್ದಾರಿಯಲ್ಲಿ ನಡೆದಿದ್ದು, ಸ್ಕೂಟರ್ ಸವಾರ ನಿವೃತ್ತ ಯೋಧ, ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದ ನಿವಾಸಿ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾರೆ. 

ಮಂಗಳೂರು, ಮಾ.31 : ಸ್ಕೂಟರಿಗೆ ಲಾರಿ ಡಿಕ್ಕಿಯಾಗಿ ಪರಾರಿಯಾದ ಘಟನೆ ಕೇರಳ ಗಡಿಭಾಗ ಮಂಜೇಶ್ವರದ ಹೆದ್ದಾರಿಯಲ್ಲಿ ನಡೆದಿದ್ದು, ಸ್ಕೂಟರ್ ಸವಾರ ನಿವೃತ್ತ ಯೋಧ, ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರದ ನಿವಾಸಿ ಸ್ಥಳದಲ್ಲೇ ದುರಂತ ಸಾವನ್ನಪ್ಪಿದ್ದಾರೆ. 

ಮೂಲತಃ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದ ಕಾನರ್ಪ ನಿವಾಸಿ, ನಿವೃತ್ತ ಅರಣ್ಯ ರಕ್ಷಕ ದಾಮೋಧರ‌ ಮತ್ತು ಲೀಲಾವತಿ ದಂಪತಿ ಪುತ್ರ ದಿನೇಶ್ ಉಪ್ಪಾರ್ (41) ಮೃತರು. 

ಸೇನೆಯಲ್ಲಿ 18 ವರ್ಷ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ದಿನೇಶ್ ಉಪ್ಪಾರ್ ಕಾಸರಗೋಡು ಜಿಲ್ಲೆಯ ಮಂಜೇಶ್ವರ ಉದ್ಯಾವರ ಗುತ್ತು ಎಂಬಲ್ಲಿ ಜಾಗ ಖರೀದಿಸಿ ಅಲ್ಲೇ ನೆಲೆಸಿದ್ದರು. ಕುಂಬ್ಲೆಯ ಆರಿಕ್ಕಾಡಿಯ ಸುಜಾತಾ ಅವರನ್ನು ವರಿಸಿದ್ದ ದಿನೇಶ್ ದಂಪತಿಗೆ ವೈಷ್ಣವಿ ಮತ್ತು ವೈಶುಭಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ.

An accident victim lay on the road for 12 hours. Why Delhi didn't come to  help him

ಸೇನೆಯಲ್ಲಿ ಹೈದರಾಬಾದ್, ಅಸ್ಸಾಂ, ಜಮ್ಮು, ನಾಸಿಕ್, ಕೊಯಂಬತ್ತೂರು ಮೊದಲಾದೆಡೆ 18 ವರ್ಷ ಕಾಲ ಸೇವೆ ಸಲ್ಲಿಸಿದ್ದ ದಿನೇಶ್ ನಿವೃತ್ತಿಯ ಬಳಿಕ ಮಂಗಳೂರಿನ ಗ್ಯಾಸ್ ಸರಬರಾಜು ಕಂಪೆನಿಯಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಬುಧವಾರ ಬೆಳಗ್ಗೆ ಎಂದಿನಂತೆ ಸ್ಕೂಟರಿನಲ್ಲಿ ಕರ್ತವ್ಯಕ್ಕೆ ತೆರಳಲು ಮನೆಬಿಟ್ಟು 10 ನಿಮಿಷ ಅಂತರದಲ್ಲಿ ಹಿಂದಿನಿಂದ ಬಂದಿದ್ದ ಲಾರಿ ಡಿಕ್ಕಿ ಹೊಡೆದಿತ್ತು. ಅಪಘಾತದ ಬಳಿಕ ಲಾರಿ ನಿಲ್ಲಿಸದೇ ಪರಾರಿಯಾಗಿದ್ದು ಪೊಲೀಸರು ತಲಪಾಡಿ ಟೋಲ್‌ಗೇಟ್‌ನಲ್ಲಿ ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧಿಸಿ ಮಂಜೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮೃತರು ತಂದೆ, ತಾಯಿ, ಪತ್ನಿ ಮಕ್ಕಳಲ್ಲದೆ ಓರ್ವ ಅಣ್ಣ ರಾಜೇಶ್ ಉಪ್ಪಾರ್, ಓರ್ವ ಸಹೋದರ ಗಣೇಶ್ ಉಪ್ಪಾರ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.

In a tragic incident a resident of Belthangady died after he met with a accident in Manjeshwar. The deceased has been identified as Dinesh (41).