ಮಾಸ್ಕ್ ಇಲ್ಲದಿದ್ದರೆ 250, ನಾನ್ ಎಸಿ ಹಾಲ್, ಜೀನಸು ಅಂಗಡಿಗಳಿಗೆ 5 ಸಾವಿರ, ಮಾಲ್ಗಳಿಗೆ 10 ಸಾವಿರ ದಂಡ ! ಆಯಾ ಭಾಗದ ಅಧಿಕಾರಿಗಳಿಗೆ ನಿರ್ವಹಣೆ ಹೊಣೆ !!

02-04-21 01:56 pm       Mangalore Correspondent   ಕರಾವಳಿ

ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮತ್ತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ.

ಮಂಗಳೂರು, ಎ.2 : ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಮತ್ತೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ. ಮಾಸ್ಕ್ ಧರಿಸದೇ ಇರುವ ಮಂದಿಗೆ ದಂಡ ವಿಧಿಸಲು ಆಯಾ ಸ್ಥಳೀಯಾಡಳಿತ ಮತ್ತು ಪೊಲೀಸರಿಗೆ ಅಧಿಕಾರ ನೀಡಿದ್ದಾರೆ. 

ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಮುನ್ಸಿಪಲ್ ಕಾರ್ಪೋರೇಷನ್‍ಗಳ ವ್ಯಾಪ್ತಿಯಲ್ಲಿ ರೂ. 250 ದಂಡ ವಿಧಿಸಲು ಹೆಡ್ ಕಾನ್ಸ್ ಟೇಬಲ್ ಮತ್ತು ಅದಕ್ಕಿಂತ ಮೇಲಿನ ಪೊಲೀಸ್ ಅಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ. ಅಲ್ಲದೆ, ಮುನ್ಸಿಪಲ್ ಕಾರ್ಪೋರೇಷನ್‍ಗಳ ಹೆಲ್ತ್ ಇನ್ಸ್ ಪೆಕ್ಟರ್‍ ಮತ್ತು ಇತರೇ ವಿಭಾಗದ ಬಿಲ್ ಕಲೆಕ್ಟರ್‍ಗಳನ್ನು ಕಾರ್ಯಾಚರಣೆಗೆ ನಿಯೋಜಿಸಲಾಗಿದೆ.

ಮುನ್ಸಿಪಲ್ ಕಾರ್ಪೋರೇಷನ್‍ ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ರೂ. 100 ದಂಡ ವಿಧಿಸಲು ಹೆಡ್ ಕಾನ್ಸ್ ಟೇಬಲ್ ಗಿಂದ ಮೇಲಿನ ಪೊಲೀಸ್ ಸಿಬ್ಬಂದಿ, ನಗರ ಸ್ಥಳೀಯ ಸಂಸ್ಥೆಗಳ ಹೆಲ್ತ್ ಇನ್ಸ್ ಪೆಕ್ಟರ್ , ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಗ್ರಾಮ ಪಂಚಾಯತ್‍ ಕಾರ್ಯದರ್ಶಿಗಳು, ನಗರ ಸ್ಥಳೀಯ ಸಂಸ್ಥೆಗಳ ಬಿಲ್ ಕಲೆಕ್ಟರ್‍ಗಳಿಗೆ ಅಧಿಕಾರ ನೀಡಲಾಗಿದೆ. 

ಅಲ್ಲದೆ, ಸಾರ್ವಜನಿಕ ಪಾರ್ಟಿ ನಡೆಯುವ ಹಾಲ್, ವ್ಯಾಪಾರ ಸಂಕೀರ್ಣಗಳಿಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಇಂತಿಷ್ಟು ದಂಡ ಎಂದು ವಿಭಜಿಸಲಾಗಿದೆ. ಹವಾನಿಯಂತ್ರಿ ರಹಿತ ಪಾರ್ಟಿ ಹಾಲ್‍ಗಳು, ಡಿಪಾರ್ಟ್‍ಮೆಂಟಲ್ ಸ್ಟೋರ್‍ಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಆಗದಿದ್ದಲ್ಲಿ ರೂ. 5,000 ದಂಡ, ಹವಾನಿಯಂತ್ರಿತ ಪಾರ್ಟಿ ಹಾಲ್‍ಗಳು, ಡಿಪಾರ್ಟ್‍ಮೆಂಟಲ್ ಸ್ಟೋರ್‍ಗಳು, ಬ್ರಾಂಡೆಡ್ ಶಾಪ್‍ಗಳು, ಶಾಪಿಂಗ್ ಮಾಲ್‍ಗಳಲ್ಲಿ ರೂ. 10,000 ದಂಡವನ್ನು ವಿಧಿಸಲು ಅವಕಾಶ ನೀಡಲಾಗಿದೆ. 

ಮದುವೆ ಸಮಾರಂಭಗಳಿಗೆ ತೆರೆದ ಸ್ಥಳಗಳಲ್ಲಿ 500 ಜನ ಹಾಗೂ ಒಳಾಂಗಣದಲ್ಲಿ 200 ಜನ, ಜನ್ಮದಿನ ಹಾಗೂ ಇತರೆ ಆಚರಣೆಗಳು ತೆರೆದ ಸ್ಥಳಗಳಲ್ಲಿ 100 ಜನ ಹಾಗೂ ಮುಚ್ಚಿದ ಸ್ಥಳಗಳಲ್ಲಿ 50 ಜನ, ಮರಣ ಅಥವಾ ಅಂತ್ಯಕ್ರಿಯೆ ತೆರೆದ ಸ್ಥಳಗಳಲ್ಲಿ 100 ಜನ ಹಾಗೂ ಮುಚ್ಚಿದ ಸ್ಥಳಗಳಲ್ಲಿ 50 ಜನ, ಶವ ಸಂಸ್ಕಾರ ಅಥವಾ ಸಮಾಧಿ ಕ್ರಿಯೆ(ಹೂಳುವುದು), 50 ಜನರು, ಇತರೆ ಆಚರಣೆ 100 ಜನರು, ಧಾರ್ಮಿಕ ಆಚರಣೆ ಹಾಗೂ ಕಾರ್ಯಗಳು, ತೆರೆದ ಸ್ಥಳಗಳಲ್ಲಿ 500 ಜನರು, ರಾಜಕೀಯ ಸಮಾವೇಶಗಳಿಗೆ ತೆರೆದ ಸ್ಥಳಗಳಲ್ಲಿ 500 ಜನರಿಗೆ ಸೀಮಿತಗೊಳಿಸಲಾಗಿದೆ. ಸಮಾರಂಭಗಳು ನಡೆಯುವ ಸ್ಥಳಗಳಲ್ಲಿ ಆವರಣಗಳ ಮಾಲಿಕರು, ಸಮಾರಂಭಗಳ ಆಯೋಜಕರು ಮಾರ್ಗಸೂಚಿ ಉಲ್ಲಂಘನೆಯಾದಲ್ಲಿ ಸ್ವತಃ ಜವಾಬ್ದಾರರಾಗಿರುತ್ತಾರೆ.

ತಾರಾ ಶ್ರೇಣಿಯ ಹೋಟೆಲ್‍ಗಳು, ಕನಿಷ್ಠ 500 ಜನರು ಸೇರುವ ಸಾಮರ್ಥ್ಯ ಹೊಂದಿರುವ ಮದುವೆ ಕನ್ವೆನ್ಶನ್ ಹಾಲ್‍ಗಳಲ್ಲಿ ನಿಯಮ ಉಲ್ಲಂಘನೆಯಾದಲ್ಲಿ ರೂ. 10,000 ಹಾಗೂ ತೆರೆದ ಪ್ರದೇಶದಲ್ಲಿ ನಡೆಯುವ ಸಮಾರಂಭಗಳು ಅಥವಾ ರಾಜಕೀಯ ಸಭೆಗಳಲ್ಲಿ ಅಥವಾ ಆಚರಣೆಗಳ ಆಯೋಜಕರಿಗೆ ರೂ. 10,000 ದಂಡ ವಿಧಿಸಲಾಗುವುದು. ಅಲ್ಲದೆ, ಈ ಬಗ್ಗೆ ಆಯಾ ಪ್ರದೇಶದ ನಿಗದಿ ಪಡಿಸಿದ ಸ್ಥಳೀಯಾಡಳಿತದ ಅಧಿಕಾರಿಗಳು ಹೊಣೆಯಾಗಿದ್ದು ನಿಯಮ ಪಾಲನೆಯಲ್ಲಿ ತಪ್ಪಿದಲ್ಲಿ ಅವರ ವಿರುದ್ಧ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

In tune with the government instructions under heightened concern over coronavirus pandemic, Dakshina Kannada district deputy commissioner, Dr Rajendra K V, has issued an order restraining people from holding public functions and meetings on the occasion of Ugadi, Good Friday and such other occasions in public places, grounds, parks, markets, religious places etc.