ಬ್ರೇಕಿಂಗ್ ನ್ಯೂಸ್
05-04-21 11:50 am Mangalore Correspondent ಕರಾವಳಿ
ಮಂಗಳೂರು, ಎ.5: ಕಾರು ಮಾರಾಟ ಪ್ರಕರಣದಲ್ಲಿ ಪೊಲೀಸರ ಜೊತೆಗೆ ಮಧ್ಯವರ್ತಿಯಾಗಿ ಕೆಲಸ ಮಾಡಿದ್ದ ದಿವ್ಯದರ್ಶನ್ ಎನ್ನುವ ಪೊಲೀಸ್ ಬ್ರೋಕರ್ ಈಗ ಮಂಗಳೂರಿನಲ್ಲಿ ಈ ಹಿಂದೆ ಕಮಿಷನರ್ ಆಗಿ ತೆರಳಿದವರ ಹಿಂದೆ ಬಿದ್ದಿದ್ದಾನೆ. ಮಂಗಳೂರಿಗೆ ಪೊಲೀಸ್ ಕಮಿಷನರ್ ಆಗಿ ಬರುತ್ತಿದ್ದವರ ಜೊತೆ ನಿಕಟ ನಂಟು ಇರಿಸಿಕೊಂಡಿದ್ದ ಡೀಡಿ ಎಂದೇ ಕರೆಸಿಕೊಳ್ಳುತ್ತಿದ್ದ ವ್ಯಕ್ತಿಯೀಗ ಸಿಐಡಿ ದಾಳದಿಂದ ತಪ್ಪಿಸಿಕೊಳ್ಳಲು ಮತ್ತು ಸಿಕ್ಕಿಬಿದ್ದಿರುವ ಪೊಲೀಸರನ್ನು ಬಚಾವ್ ಮಾಡಲು ಕಸರತ್ತು ನಡೆಸುತ್ತಿದ್ದಾನೆ.
ಜಾಗ್ವಾರ್ ಕಾರು ಮಾರಾಟದಲ್ಲಿ ಪ್ರಮುಖ ಕೊಂಡಿಯಾಗಿದ್ದವನೇ ದಿವ್ಯದರ್ಶನ್. ಕಾರನ್ನು ಲೀಗಲ್ ಆಗಿಯೇ ಮಾರಾಟ ಮಾಡಲಾಗಿತ್ತು ಎಂದು ತೋರಿಸಿದ್ದರೂ, ಅದನ್ನು ಆರೋಪಿಗಳು ಬಂಧಿಯಾಗಿರುವಾಗಲೇ ಮಾಡಿಸಿದ್ದು ದಿವ್ಯದರ್ಶನ್ ಎನ್ನುವ ಆರೋಪಗಳಿವೆ. ಹೈ ಎಂಡ್ ಕಾರು ಆಗಿರುವ ಜ್ವಾಗ್ವಾರನ್ನು 14 ಲಕ್ಷಕ್ಕೆ ಡೀಲ್ ಕುದುರಿಸಿದ್ದಲ್ಲದೆ, ಅದನ್ನು ಒಂದೇ ತಿಂಗಳಲ್ಲಿ ಮಾರಾಟ ಮಾಡಿ, ಖರೀದಿಸಿದ್ದ ವ್ಯಕ್ತಿಯ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳಲಾಗಿತ್ತು.
ಜಾಗ್ವಾರ್ ಕಾರು ಮನಿ ಡಬ್ಲಿಂಗ್ ಪ್ರಕರಣದ ಆರೋಪಿಗಳಾಗಿರುವ ಟೋಮಿ ಮ್ಯಾಥ್ಯೂ ಒಡೆತನದ್ದೇ ಆಗಿದ್ದರೂ, ಅದನ್ನು ಆತ ಖರೀದಿಸಿದ ಬಳಿಕ ತನ್ನ ಹೆಸರಿಗೆ ರಿಜಿಸ್ಟರ್ ಮಾಡಿಸಿರಲಿಲ್ಲ. ಮೂಲ ಮಾಲೀಕನಿಗೆ ಹಣ ನೀಡಿ ಕಾರನ್ನು ಖರೀದಿಸಿದ ಬಳಿಕ ಟೋಮಿ ಮ್ಯಾಥ್ಯೂ ಮಗನೇ ಜಾಗ್ವಾರ್ ಕಾರನ್ನು ಉಪಯೋಗಿಸುತ್ತಿದ್ದ. ಕಾರನ್ನು ರಿಜಿಸ್ಟರ್ ಮಾಡಿಕೊಳ್ಳಲು ಆರ್ ಟಿಓಗೆ ಅರ್ಜಿ ಹಾಕಿ, ಆರ್ ಸಿ ಟ್ರಾನ್ಸ್ ಫರ್ ಮಾಡಿಸಿಕೊಳ್ಳಬೇಕಿತ್ತು. ಆದರೆ, ಐದಾರು ತಿಂಗಳು ಕಳೆದರೂ ಆ ಕೆಲಸವನ್ನು ಖದೀಮರು ಮಾಡಿರಲಿಲ್ಲ.
ನೂರಾರು ಮಂದಿಯಿಂದ ಲೂಟಿ ಮಾಡಿದ ಹಣದಲ್ಲಿ ಕಾರು ಖರೀದಿಸಿದ್ದರಿಂದ ಹಣದ ಬೆಲೆ ಅರಿತುಕೊಳ್ಳದೆ ಕಾರನ್ನು ಶೋಕಿ ಮಾಡೋಕಷ್ಟೇ ಬಳಸುತ್ತಿದ್ದರು. ಇಷ್ಟರಲ್ಲೇ ಮನಿ ಡಬ್ಲಿಂಗ್ ಪ್ರಕರಣದ ಬಗ್ಗೆ ಮಹಿಳೆಯೊಬ್ಬರು ದೂರು ನೀಡಿದ್ದರು. ಅದಲ್ಲದೆ, ದೂರಿನಲ್ಲಿ ಆರೋಪಿಗಳು ಐಷಾರಾಮಿ ಕಾರನ್ನು ಕಚೇರಿ ಮುಂದೆ ಇರಿಸಿ ತಾವು ಶ್ರೀಮಂತರೆಂದು ತೋರಿಸಿ ನಂಬಿಕೆ ಹುಟ್ಟಿಸಿದ್ದರು. ಎರಡು- ಮೂರು ಐಷಾರಾಮಿ ಕಾರುಗಳನ್ನು ಆರೋಪಿಗಳು ಬಳಸುತ್ತಿದ್ದರೆಂದು ಹೇಳಿದ್ದರು. ಇದೇ ಸುಳಿವನ್ನು ಆಧರಿಸಿ, ಸಿಸಿಬಿ ಪೊಲೀಸರು ಮೂರು ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದರು. ಆದರೆ, ಕಾರುಗಳನ್ನು ಜಪ್ತಿ ತೋರಿಸದೆ ಅದನ್ನು ಮಾರಾಟ ಮಾಡಿ, ಹಣ ದೋಚಲು ಪ್ಲಾನ್ ಮಾಡಿದ್ದರು.
ನಿಜಕ್ಕಾದರೆ, ಪ್ರಕರಣದಲ್ಲಿ ನೂರಾರು ಮಂದಿಗೆ 30 ಕೋಟಿಯಷ್ಟು ವಂಚನೆ ಆಗಿರುವ ಬಗ್ಗೆ ಉಲ್ಲೇಖ ಆಗಿದ್ದ ಹಿನ್ನೆಲೆಯಲ್ಲಿ ಆರೋಪಿಗಳಿಗೆ ಸಂಬಂಧಪಟ್ಟ ಐಷಾರಾಮಿ ಕಾರು, ಇನ್ನಿತರ ಆಸ್ತಿಗಳನ್ನು ಪೊಲೀಸರು ಜಪ್ತಿ ಮಾಡಬೇಕಿತ್ತು. ಸಾರ್ವಜನಿಕರ ಹಣ ಆಗಿರುವುದರಿಂದ ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಸಿ, ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಬೇಕಿತ್ತು. ಅಷ್ಟೂ ಮಂದಿ ಹಣ ಕಳಕೊಂಡವರ ಹೇಳಿಕೆಯನ್ನು ದಾಖಲು ಮಾಡಬೇಕಿತ್ತು. ಗಂಭೀರ ಪ್ರಕರಣ ಆಗಿದ್ದರೂ, ಇದ್ಯಾವುದನ್ನೂ ತನಿಖಾಧಿಕಾರಿಯಾಗಿದ್ದ ನಾರ್ಕೋಟಿಕ್ ಠಾಣೆಯ ಇನ್ ಸ್ಪೆಕ್ಟರ್ ರಾಮಕೃಷ್ಣ ಮಾಡಿರಲಿಲ್ಲ. ಇದರ ಬದಲಿಗೆ, ಸಿಸಿಬಿ ಎಸ್ಐ ಆಗಿದ್ದ ಕಬ್ಬಾಳರಾಜ್ ಮತ್ತು ತಂಡ ಆರೋಪಿಗಳ ಕಾರನ್ನೇ ಮಾರಾಟ ಮಾಡಿ, ತಾವೇ ಹಣ ನುಂಗಲು ಪ್ಲಾನ್ ಹಾಕಿತ್ತು.
ಸಿಐಡಿ ಪೊಲೀಸರು ಸದ್ಯಕ್ಕೆ ಇಡೀ ಮನೀ ಡಬ್ಲಿಂಗ್ ಪ್ರಕರಣವನ್ನೇ ಕೈಗೆತ್ತಿಕೊಂಡು ತನಿಖೆ ಆರಂಭಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಕಾರು ಮಾರಾಟ ಆಗಿರುವುದು ಕಂಡುಬಂದಿದ್ದರಿಂದ ನಾಲ್ವರನ್ನು ಡಿಜಿ ಆದೇಶದ ಮೇರೆಗೆ ಸಸ್ಪೆಂಡ್ ಮಾಡಿದ್ದಾರೆ. ಕಾರು ಖರೀದಿಸಿದ ವ್ಯಕ್ತಿ , ಬ್ರೋಕರ್ ಆಗಿರುವ ವ್ಯಕ್ತಿ, ಪ್ರಕರಣದಲ್ಲಿ ಭಾಗಿಯಾಗಿರುವ ಪೊಲೀಸ್ ಸಿಬಂದಿ ಮತ್ತು ಅಧಿಕಾರಿಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆಯಲ್ಲಿ ಇವರೆಲ್ಲರ ಶಾಮೀಲಾತಿ ರುಜುವಾದಲ್ಲಿ ಅದೇ ಎಫ್ಐಆರ್ ಅಡಿ ಆರೋಪಿತ ಪೊಲೀಸರನ್ನೂ ಸೇರಿಸುವ ಸಾಧ್ಯತೆಯಿದೆ. ಈಗಾಗ್ಲೇ ಎ1, ಎ2, ಎ3 ಆರೋಪಿಗಳಾಗಿ ಟೋಮಿ ಮ್ಯಾಥ್ಯೂ, ರಾಜನ್ ಮತ್ತೊಬ್ಬನನ್ನು ಗುರುತಿಸಿದ್ದು, ಎ4, ಎ5, ಎ6 ಎಂದು ಕಬ್ಬಾಳರಾಜ್ ಮತ್ತು ತಂಡವನ್ನು ಸೇರ್ಪಡೆ ಮಾಡಲಿದ್ದಾರೆ.
ಆರೋಪ ಸಾಬೀತಾದರೆ ಪೊಲೀಸರ ಕತೆ ಖತಂ !
ಸಿಐಡಿ ಅಧಿಕಾರಿಗಳು ಒಂದ್ವೇಳೆ, ಪೊಲೀಸರನ್ನು ಅದೇ ಎಫ್ಐಆರ್ ಅಡಿ ಆರೋಪಿಗಳನ್ನಾಗಿ ಸೇರಿಸಿ, ಚಾರ್ಜ್ ಶೀಟ್ ಮಾಡಿದಲ್ಲಿ ಈ ನಾಲ್ವರು ಪೊಲೀಸರ ಭವಿಷ್ಯವೂ ಅಲ್ಲಿಗೆ ಖತಂ ಆಗಲಿದೆ. ಎಫ್ಐಆರ್ ಆಗಿ, ಚಾರ್ಜ್ ಶೀಟ್ ಆದಲ್ಲಿ ಪೊಲೀಸ್ ಹುದ್ದೆಯಿಂದ ಸಹಜವಾಗೇ ವಜಾಗೊಳ್ಳಲಿದ್ದಾರೆ. ಯಾರದ್ದೋ ದುಡ್ಡು ಎಲ್ಲಮ್ಮನ ಜಾತ್ರೆ ಎಂದು ಆರೋಪಿಗಳನ್ನು ದೋಚುವ ಪೊಲೀಸರಿಗೆ ಈ ಪ್ರಕರಣ ಪಾಠವೂ ಆಗಲಿದೆ. ಇದೇ ಕಾರಣಕ್ಕೆ ಮಂಗಳೂರಿನಲ್ಲಿ ಕೆಲಸ ಮಾಡಿರುವ ಹಿರಿಯ ಪೊಲೀಸ್ ಅಧಿಕಾರಿಗಳ ಬಗ್ಗೆ ಚೆನ್ನಾಗಿ ಅರಿತಿರುವ ಪೊಲೀಸ್ ಬ್ರೋಕರ್ ದಿವ್ಯದರ್ಶನ್ ಬೆಂಗಳೂರಿನಲ್ಲೀಗ ಭಾರೀ ಕಸರತ್ತು ನಡೆಸುತ್ತಿದ್ದಾನೆ. ಹೇಗಾದ್ರೂ ಮಾಡಿ ಬಚಾವ್ ಮಾಡಬೇಕೆಂದು ಯಾರ್ಯಾರದ್ದೋ ಕಾಲಿಗೆ ಬಿದ್ದು ಅಂಗಲಾಚುತ್ತಿದ್ದಾನೆ ಎನ್ನುವ ಮಾಹಿತಿ ಸಿಕ್ಕಿದೆ.
Luxury car missing in CCB police custody in Mangalore Middle Man Divya Darshan in big time trouble.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm