ಗುಡ್ಡೆಕೊಪ್ಲ ಬೀಚ್ ; ಡ್ರೆಜ್ಜರ್ ಹಡಗಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ನಿಗೂಢ ಸಾವು

05-04-21 07:40 pm       Mangaluru correspondent   ಕರಾವಳಿ

ಸುರತ್ಕಲ್ ಬಳಿಯ ಗುಡ್ಡೆಕೊಪ್ಲ ಬೀಚ್ ನಲ್ಲಿ ಉಳಿದುಕೊಂಡಿರುವ ಡ್ರೆಜ್ಜರ್ ಹಡಗಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಸಾವು ಕಂಡಿದ್ದಾನೆ.

ಮಂಗಳೂರು, ಎ.5: ಸುರತ್ಕಲ್ ಬಳಿಯ ಗುಡ್ಡೆಕೊಪ್ಲ ಬೀಚ್ ನಲ್ಲಿ ಉಳಿದುಕೊಂಡಿರುವ ಡ್ರೆಜ್ಜರ್ ಹಡಗಿನಲ್ಲಿದ್ದ ಸೆಕ್ಯುರಿಟಿ ಗಾರ್ಡ್ ವ್ಯಕ್ತಿಯೊಬ್ಬ ಸಂಶಯಾಸ್ಪದವಾಗಿ ಸಾವು ಕಂಡಿದ್ದಾನೆ.

ಭಗವತಿ ಪ್ರೇಮ್ ಹೆಸರಿನ ಡ್ರೆಜ್ಜರ್ ಹಡಗು ಎರಡು ವರ್ಷಗಳಿಂದ ಇಲ್ಲಿ ಸಮುದ್ರದ ದಡದಲ್ಲಿ ಹೊಯ್ಗೆಯಲ್ಲಿ ಸಿಕ್ಕಿಕೊಂಡು ಉಳಿದಿದೆ. ಇದನ್ನು ತೆರವು ಮಾಡಬೇಕೆಂದು ಜಿಲ್ಲಾಡಳಿತ ಸೂಚಿಸಿದ್ದರೂ, ತೆರವು ಇನ್ನೂ ಸಾಧ್ಯವಾಗಿಲ್ಲ. ಈ ಮಧ್ಯೆ ಡ್ರೆಜ್ಜರ್ ಹಡಗಿನಲ್ಲಿ ಮೂವರು ಸಿಬಂದಿಯನ್ನು ಸೆಕ್ಯುರಿಟಿ ಗಾರ್ಡ್ ಆಗಿ ಸರದಿಯಂತೆ ನಿಯೋಜನೆ ಮಾಡಲಾಗಿತ್ತು. ಈ ಪೈಕಿ ಶಂಕರ್ ಎಂಬಾತ ಇಂದು ಮಧ್ಯಾಹ್ನ ನಾಪತ್ತೆಯಾಗಿದ್ದು, ಬಳಿಕ ಸಮುದ್ರ ದಡದಲ್ಲಿ ಶವವಾಗಿ ಕಂಡುಬಂದಿದ್ದಾನೆ.

ಇನ್ನಿಬ್ಬರು ಸೆಕ್ಯುರಿಟಿ ಸಿಬಂದಿ ಹಡಗಿನಲ್ಲಿದ್ದು, ಈತ ಹೇಗೆ ಸಾವು ಕಂಡಿದ್ದಾನೆ ಎನ್ನುವುದು ಗೊತ್ತಾಗಿಲ್ಲ. ಖಾಸಗಿ ಸಂಸ್ಥೆಗೆ ಸೇರಿದ ಸೆಕ್ಯುರಿಟಿ ಸಿಬಂದಿಯಾಗಿದ್ದು, ಸ್ಥಳೀಯರನ್ನೇ ಭದ್ರತಾ ಕರ್ತವ್ಯಕ್ಕೆ ನಿಯೋಜನೆ ಮಾಡಲಾಗಿತ್ತು. ಸಾವಿಗೆ ಕಾರಣ ತಿಳಿದುಬಂದಿಲ್ಲ. ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

A security guard was found dead in Stranded Dredging Vessel Bhagavathi Prem in Surathkal, Mangalore.