ಬ್ರೇಕಿಂಗ್ ನ್ಯೂಸ್
07-04-21 05:42 pm Mangalore Correspondent ಕರಾವಳಿ
ಮಂಗಳೂರು, ಎ.7: ಕುಲಪತಿಯಾಗಲು ಲಂಚ ನೀಡಿದ್ದಾರೆ ಎನ್ನಲಾದ ಕೋಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಪ್ರೊಫೆಸರ್ ಜಯಶಂಕರ್ ಅವರನ್ನು ಡಿಮೋಶನ್ ಮಾಡಲಾಗಿದೆ. ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜು ಅಭಿವೃದ್ಧಿ ಸಮಿತಿಯ ನಿರ್ದೇಶಕ ಸ್ಥಾನದಿಂದ ಜಯಶಂಕರ್ ಅವರನ್ನು ಕಿತ್ತು ಹಾಕಲಾಗಿದೆ. ಆ ಸ್ಥಾನಕ್ಕೆ ಫಿಸಿಕ್ಸ್ ವಿಭಾಗದಲ್ಲಿ ಪ್ರೊಫೆಸರ್ ಆಗಿರುವ ರವೀಂದ್ರಾಚಾರಿ ಎಂಬವರನ್ನು ನಿಯೋಜಿಸಲಾಗಿದೆ.
ಮೂಲತಃ ಮಡಿಕೇರಿಯವರಾದ ಪ್ರೊಫೆಸರ್ ಎಂ. ಜಯಶಂಕರ್, ವಿವೇಕ್ ಆಚಾರ್ಯ ಎಂಬಾತನ ಮೂಲಕ ರಾಮಸೇನೆಯ ರಾಜ್ಯಾಧ್ಯಕ್ಷ ಪ್ರಸಾದ್ ಅತ್ತಾವರ ಪರಿಚಯ ಮಾಡಿಕೊಂಡಿದ್ದರು. ಈ ವೇಳೆ, ಮಂಗಳೂರು ಅಥವಾ ರಾಯಚೂರು ವಿವಿಯಲ್ಲಿ ಕುಲಪತಿ ಹುದ್ದೆ ಕೊಡಿಸುವ ಮಾತುಕತೆ ನಡೆದಿತ್ತು. ಇದಕ್ಕಾಗಿ 30 ಲಕ್ಷ ರೂ. ಡೀಲ್ ಆಗಿತ್ತು ಎನ್ನಲಾಗುತ್ತಿದ್ದು, ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ 10 ಲಕ್ಷ ನೀಡಿದ್ದರು ಎನ್ನಲಾಗಿದೆ.
ಬಳಿಕ ಹಣ ಹಿಂತಿರುಗಿಸುವಂತೆ ಜೈಶಂಕರ್ ಕೇಳಿದ್ದಾರೆ ಎನ್ನಲಾಗಿದ್ದು, ಈ ಬಗ್ಗೆ ಪ್ರಸಾದ್ ಅತ್ತಾವರ ಜೊತೆಗೆ ಮಾತುಕತೆ ನಡೆಸಿದ್ದರು. ಆದರೆ, ಬೆಂಗಳೂರಿನ ವ್ಯಕ್ತಿ ಹಣ ಹಿಂತಿರುಗಿಸಲು ನಿರಾಕರಿಸಿದ್ದಾರೆ ಎನ್ನಲಾಗಿದ್ದು, ಪ್ರೊಫೆಸರ್ ಕಂಕನಾಡಿ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಪ್ರಸಾದ್ ಅತ್ತಾವರನನ್ನು ಬಂಧಿಸಿದ್ದರು. ಬೆಂಗಳೂರಿನ ವ್ಯಕ್ತಿಯನ್ನು ಬಂಧಿಸಿಲ್ಲ. ಪ್ರಸಾದ್ ಅತ್ತಾವರ ಸಿಎಂ ಯಡ್ಯೂರಪ್ಪ ಜೊತೆಗೆ ನಿಕಟ ನಂಟು ಇರಿಸಿಕೊಂಡಿದ್ದ ವ್ಯಕ್ತಿ. ಎಫ್ಐಆರ್ ಆದ ಕೂಡಲೇ ಬಂಧಿಸಿರುವುದರ ಹಿಂದೆ ಮಂಗಳೂರಿನ ರಾಜಕೀಯ ಮುಖಂಡರ ದ್ವೇಷದ ರಾಜಕಾರಣ ಇದೆಯೆಂಬ ಆರೋಪಗಳು ಕೇಳಿಬರುತ್ತಿವೆ.
ಪ್ರಸಾದ್ ಅತ್ತಾವರ ಬಂಧನದ ಬಳಿಕ ಲಂಚ ನೀಡಿದ್ದ ಪ್ರೊಫೆಸರ್ ವಿರುದ್ಧ ಕ್ರಮ ತೆಗೆದುಕೊಳ್ತೀರಾ ಎಂದು ಪೊಲೀಸ್ ಕಮಿಷನರ್ ಅವರನ್ನು ಪ್ರಶ್ನೆ ಮಾಡಿದ್ದಕ್ಕೆ, ನಾವು ಏಕ್ಷನ್ ತಗೊಳ್ಳಲು ಬರಲ್ಲ. ವಿವಿಯ ಕುಲಪತಿಗೆ ನಾವು ಎಫ್ಐಆರ್ ಆಗಿರುವ ಪ್ರತಿಯನ್ನು ಫಾರ್ವರ್ಡ್ ಮಾಡುತ್ತೇವೆ. ಕುಲಪತಿಯಷ್ಟೇ ಕ್ರಮ ತೆಗೆದುಕೊಳ್ಳಬಹುದು ಎಂದು ಹೇಳಿದ್ದರು. ಈ ಬೆಳವಣಿಗೆಯ ಬಳಿಕ ಮಂಗಳೂರು ವಿವಿಯ ಸಿಂಡಿಕೇಟ್ ಸಭೆಯಲ್ಲಿ ಪ್ರೊಫೆಸರ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯ ನಡೆದಿತ್ತು. ಪ್ರೊಫೆಸರ್ ಆಗಿರುವ ವ್ಯಕ್ತಿಗೆ ನೋಟೀಸ್ ಕೂಡ ನೀಡಲಾಗಿತ್ತು. ಇದೇ ಎಪ್ರಿಲ್ 9ರಂದು ಸಿಂಡಿಕೇಟ್ ಸಭೆ ನಡೆಯಲಿದ್ದು, ಯಾವ ನಿರ್ಧಾರ ಕೈಗೊಳ್ಳುತ್ತಾರೆಂದು ನೋಡಬೇಕು.
Mangalore Professor Jayashanakr who alleged prasad attavar of cheating suspended from his post at university. The professor had alleged that ram sena chief had cheated him of 16 lakhs.
20-01-25 07:00 pm
HK News Desk
Hassan Suicide, Online Gaming: ಅಮ್ಮಾ ನನ್ನನ್ನು...
20-01-25 04:24 pm
ಕೇಸರಿ ಮನೆಯಲ್ಲಿ ಬಣ ಬಡಿದಾಟ ಜೋರು ; ಯತ್ನಾಳ್ ಬಣದ ಎ...
19-01-25 08:30 pm
ಮುಡಾ ಸೈಟ್ ಹಗರಣ ; 300 ಕೋಟಿ ಮೌಲ್ಯದ 142 ಆಸ್ತಿಗಳನ...
18-01-25 05:05 pm
ಗದಗ ; ಪ್ರೀತಿಸಲು ಪೀಡಿಸುತ್ತಿದ್ದ ಇಬ್ಬರು ಯುವಕರು,...
16-01-25 05:30 pm
19-01-25 08:17 pm
HK News Desk
Israel War: ಕಡೆಗೂ ಕದನ ವಿರಾಮ ಘೋಷಿಸಿದ ಇಸ್ರೇಲ್ ;...
19-01-25 06:35 pm
ಮಂಗಳೂರಿನ ಕುದುರೆಮುಖ ಕಬ್ಬಿಣ ಅದಿರು ಕಂಪನಿ ಎನ್ಎಂಡಿ...
18-01-25 06:20 pm
Vijay Kiran Anand 2025: ಮಹಾ ಕುಂಭ ಮೇಳದ ಮುಖ್ಯ ಉ...
16-01-25 09:01 pm
Actor Saif Ali Khan attack stabbed: ಬಾಲಿವುಡ್...
16-01-25 04:24 pm
20-01-25 11:05 pm
Mangalore Correspondent
Mangalore, Ivan dsouza, CM Siddaramaiah: ಬಹು...
20-01-25 06:00 pm
International Kite Festival 2025, Thannirbhav...
18-01-25 09:27 pm
Mangalore Dinesh Gundu Rao, belthandy: ತಾಲೂಕು...
18-01-25 06:16 pm
CM Siddaramaiah, multicultural fest, Mangalor...
17-01-25 11:10 pm
20-01-25 10:18 pm
HK News Desk
Mangalore Kotekar Bank Robbery, Three Arreste...
20-01-25 07:19 pm
Mangalore Kotekar Robbery, Davanagere: ಮಂಗಳೂರ...
20-01-25 05:20 pm
Mysuru Robbery, Bidar Mangalore, Crime; ಬೀದರ್...
20-01-25 01:25 pm
Bidar Bank Robbery, bihar gang, Update: ಬೀದರ್...
19-01-25 07:52 pm