ಕೋಡಿಹಳ್ಳಿಯವರು ಕೆಎಸ್ಸಾರ್ಟಿಸಿ ನೌಕರರನ್ನು ದಾರಿ ತಪ್ಪಿಸುತ್ತಿದ್ದಾರೆ, ಏನು ಮಾಡಬೇಕೋ ಮಾಡುತ್ತೇವೆ !

07-04-21 11:14 pm       Mangaluru correspondent   ಕರಾವಳಿ

ಕೆಎಸ್ಸಾರ್ಟಿಸಿ ನೌಕರರನ್ನು ನಾಯಕತ್ವ ಹೆಸರಲ್ಲಿ ಕೋಡಿಹಳ್ಳಿ ದಾರಿ ತಪ್ಪಿಸುತ್ತಿದ್ದಾರೆ. ಅವರ ಎಂಟು ಬೇಡಿಕೆಗಳನ್ನು ಪರಿಗಣಿಸಿದ್ದೇವೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ.

ಮಂಗಳೂರು, ಎ.7:  ಕೆಎಸ್ಸಾರ್ಟಿಸಿ ನೌಕರರನ್ನು ನಾಯಕತ್ವ ಹೆಸರಲ್ಲಿ ಕೋಡಿಹಳ್ಳಿ ದಾರಿ ತಪ್ಪಿಸುತ್ತಿದ್ದಾರೆ. ಅವರ ಎಂಟು ಬೇಡಿಕೆಗಳನ್ನು ಪರಿಗಣಿಸಿದ್ದೇವೆ. ಇನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಏನು ಮಾಡಬೇಕೋ ಮಾಡುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. 

ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸಾರಿಗೆ ವ್ಯವಸ್ಥೆ ಅನ್ನೋದು ಕಾರ್ಪೋರೇಷನ್ ವ್ಯವಸ್ಥೆ.‌ ಸಾರಿಗೆ ಇಲಾಖೆಯವರನ್ನು ಸರ್ಕಾರಿ ನೌಕರರನ್ನಾಗಿ ಮಾಡಿದ್ರೆ ಎಲ್ಲಾ ನಿಗಮದವರೂ ಬೇಡಿಕೆ ಇಡ್ತಾರೆ. ಅದು ಕೇಳೋ ಬೇಡಿಕೆನೇ ಅಲ್ಲ. ಯಾರಾದ್ರು ಒಬ್ರು ಒಪ್ತಾರಾ ಇದನ್ನ? ಸಾರಿಗೆ ನೌಕರರ ಬೇಡಿಕೆಯನ್ನು ಯಾರೂ ಒಪ್ಪೋದಿಲ್ಲ. ರೈತರ ನಾಯಕರಾಗಿ ಹೋರಾಟ ಮಾಡುತಿದ್ದವರು ಈಗ ಸಾರಿಗೆ ನೌಕರರ ಹೋರಾಟದ ನೇತೃತ್ವ ವಹಿಸಿದ್ದಾರೆ. ಏನು ಅಭ್ಯಂತರ ಇಲ್ಲ.

Kodihalli Chandrashekar Wiki - Lifestyle, Bio, Birth Place, House, Property  Details

ಬೇಡಿಕೆ ಒಂದು ಪರ್ಸೆಂಟ್ ಆದರೂ ನ್ಯಾಯಬದ್ಧ ಆಗಿರಬೇಕು.‌ ಕೋಡಿಹಳ್ಳಿ ಚಂದ್ರಶೇಖರ್ ಅವರು ನಾವು ಹೇಳ್ತೇವೆ, ನೀವು ಕೇಳ ಬೇಕು ಅನೋ ಮನೋಭಾವ ದಲ್ಲಿದ್ದಾರೆ. ಸರ್ವಾಧಿಕಾರಿ ವ್ಯವಸ್ಥೆ ಪ್ರಜಾಪ್ರಭುತ್ವ ದಲ್ಲಿ ನಡೆಯೋದಿಲ್ಲ. ಕೋಡಿಹಳ್ಳಿ ಕಡೆಗೆ ಸಾರಿಗೆ ನೌಕರರು ಹೊದರೆ ನೌಕರರಿಗೇ ಅನ್ಯಾಯವಾಗುತ್ತದೆ.ಕೋಡಿಹಳ್ಳಿ ಚಂದ್ರ ಶೇಖರ್ ಕಾರ್ಮಿಕರ ದಾರಿ ತಪ್ಪಿಸುತ್ತಿದ್ದಾರೆ, ರಾಜ್ಯದ ಅಭಿವೃದ್ಧಿ  ಮತ್ತು ಆರ್ಥಿಕತೆ ಕುಂಠಿತಗೊಳಿಸೋದು 
ಕೋಡಿಹಳ್ಳಿ ಚಂದ್ರಶೇಖರ್ ಉದ್ದೇಶ. ಈ ರೀತಿಯ ಕಾನೂನು ವಿರೋಧಿ ಹೋರಾಟ ಗಳನ್ನ ಹೇಗೆ ಬಗ್ಗು ಬಡೀಬೇಕು ಅನ್ನೋದು ಸರ್ಕಾರಕ್ಕೆ ಗೊತ್ತಿದೆ. ಮುಷ್ಕರವನ್ನು ಒಂದು ವಾರ ಅಥವಾ 15 ದಿನ ಎಳ್ಕೊಂಡ್ ಹೋದ್ರೆ ರಾಜ್ಯದ ಜನ ಒಪ್ಪುವುದಿಲ್ಲ. ರಾಜ್ಯದ ಜನರೇ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ತಿರುಗಿಬೀಳುತ್ತಾರೆ.‌ ಜನರಿಗೆ ಅನ್ಯಾಯವಾದರೆ ಸರ್ಕಾರವೂ ಸುಮ್ಮನೆ ಕೂರಕಾಗಲ್ಲ ಎಂದು ಸೂಚ್ಯವಾಗಿ ಹೇಳಿದ್ದಾರೆ. ‌

Bus strike in Karnataka from today, government rules out pay revision talks  | Bengaluru News - Times of India

ಸಾರಿಗೆ ನೌಕರರಿಗೆ ಮತ್ತೊಮ್ಮೆ ಮನವಿ ಮಾಡುತ್ತೇನೆ. ಕೋಡಿಹಳ್ಳಿ ನಾಯಕತ್ವ ಹಿಂದೆ ಹೋಗಬೇಡಿ, ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸೋಕೆ ಆಗೋದಿಲ್ಲ. ಕೋಡಿಹಳ್ಳಿಯ ನಾಯಕತ್ವವನ್ನು ಬಿಟ್ಟು ಬನ್ನಿ ಮಾತನಾಡೋಣ ಎಂದರು ಸಚಿವ ಕೆ ಎಸ್ ಈಶ್ವರಪ್ಪ.

ನರೇಗೂ ಕೂಲಿ ಹೆಚ್ಚಳ 

ಇದೇ ವೇಳೆ, ನರೇಗಾ ಕೂಲಿ ದರವನ್ನು ರೂ. 275 ರಿಂದ  289 ರೂ.ಗೆ ಏರಿಸಲು ರಾಜ್ಯ ಸರಕಾರ ನಿರ್ಧರಿಸಿದೆ ಎಂದು ಸಚಿವ ಈಶ್ವರಪ್ಪ ತಿಳಿಸಿದ್ದಾರೆ. ಅಲ್ಲದೆ, ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದು ಮಾಡುವ ತೀರ್ಮಾನ ರಾಜ್ಯ ಸರಕಾರ ತೆಗೆದುಕೊಂಡಿಲ್ಲ. ಈ ಬಾರಿ ತಾಲೂಕು ಪಂಚಾಯತ್ ಗಳಿಗೂ ಚುನಾವಣೆ ನಡೆಯಲಿದೆ. ಆದರೆ ತಾಲೂಕು ಪಂಚಾಯತ್ ವ್ಯವಸ್ಥೆಯನ್ನು ರದ್ದು ಪಡಿಸಬೇಕೆಂಬ ಆಗ್ರಹ ಬಂದಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಈಶ್ವರಪ್ಪ ತಿಳಿಸಿದ್ದಾರೆ.

RDPR offices to be housed at Suvarna Soudha: KSE | Deccan Herald

ಎಲ್ಲಾ ಜಿಲ್ಲೆಯಲ್ಲಿಯೂ ಜಲ ಶಕ್ತಿ ಅಭಿಯಾನ ಆರಂಭವಾಗಲಿದೆ. ಮಾರ್ಚ್ 22ರಂದು ರಾಜ್ಯದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಾಗುವುದು. ಈ ಯೋಜನೆಯ ಮೂಲಕ ಮಳೆ ನೀರಿಂಗಿಸುವುದು. ಜಲಮರುಪೂರಣ ಸೇರಿದಂತೆ ಜಲ ಸಂವರ್ಧನೆಯ ಕಾರ್ಯಕ್ರಮ ನಡೆಯಲಿದೆ ಎಂದು ಈಶ್ವರಪ್ಪ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಚಿವ ಅಂಗಾರ, ಶಾಸಕ ರಾಜೇಶ್ ನಾಯ್ಕ್ ಉಳೆಪಾಡಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಮೊದಲಾದ ವರು ಉಪಸ್ಥಿತರಿದ್ದರು.

Ksrtc bus strike kodihalli chandrashekar is misleading ksrtc staffs slams eshwarappa during a press meet held in Mangalore.