ಬ್ರೇಕಿಂಗ್ ನ್ಯೂಸ್
08-04-21 09:28 pm Mangaluru correspondent ಕರಾವಳಿ
ಮಂಗಳೂರು, ಎ.8: ನಗರದ ಕೊಡಿಯಾಲಬೈಲಿನ ಯೇನಪೋಯ ಸ್ಪೆಷಾಲಿಟಿ ಹಾಸ್ಪಿಟಲ್ ರೇಡಿಯೋಲಜಿ ಸೇವೆಯಲ್ಲಿ ಮೇಲ್ದರ್ಜೆಗೇರಿದ್ದು, ನುರಿತ ವೈದ್ಯರ ಜೊತೆಗೆ 24 ಗಂಟೆಯೂ ರೋಗಿಗಳ ಸೇವೆಗೆ ಸಜ್ಜಾಗಿದೆ. ಹಗಲು, ರಾತ್ರಿ ಯಾವುದೇ ಸಮಯದಲ್ಲಿ ರೋಗಿ ಬಂದರೂ, ರೇಡಿಯೋಲಜಿ ಸೇವೆ ಲಭ್ಯವಾಗಲಿದ್ದು, ಇದರಿಂದ ಕ್ಲಪ್ತ ಸಮಯದಲ್ಲಿ ರೋಗ ನಿರ್ಣಯ ಸಾಧ್ಯವಿದೆ. ಇದಕ್ಕಾಗಿ ಯೇನಪೋಯ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಸೌಲಭ್ಯ ಇರುವಂತಹ ರೇಡಿಯೋಲಜಿ ಯೂನಿಟ್ ಗಳನ್ನು ಅಳವಡಿಸಲಾಗಿದೆ.
ರೇಡಿಯೋಲಜಿ ತಜ್ಞರಾದ ಡಾ.ದೇವದಾಸ ಆಚಾರ್ಯ, ಡಾ. ರವಿಚಂದ್ರ ಜಿ. ಮತ್ತು ಡಾ. ವಿನಾಯಕ ಯು.ಎಸ್ ಎಂಬ ಮೂವರು ವೈದ್ಯರು ಈ ನಿಟ್ಟಿನಲ್ಲಿ ಕೈಜೋಡಿಸಿದ್ದು, ಆಸ್ಪತ್ರೆಯಲ್ಲಿ 24 ಗಂಟೆಯ ರೇಡಿಯೋಲಜಿ ಸೇವೆಗೆ ಅಗತ್ಯ ಸೌಕರ್ಯಗಳನ್ನು ಕಾರ್ಯರೂಪಕ್ಕೆ ತಂದಿದ್ದಾರೆ.
ಏಪ್ರಿಲ್ 7ರ ವಿಶ್ವ ಆರೋಗ್ಯ ದಿನದಂದು ಹೊಸ ಸೌಲಭ್ಯವನ್ನು ಜಾರಿಗೆ ತಂದಿದ್ದು ತುರ್ತು ಚಿಕಿತ್ಸೆಯಲ್ಲಿ ವಿಳಂಬ ಆಗಬಾರದೆಂಬ ಕಾಳಜಿಯಿಂದ ಈ ಸೌಲಭ್ಯವನ್ನು ಯೇನಪೋಯ ಆಸ್ಪತ್ರೆಯಲ್ಲಿ ಜಾರಿಗೆ ತರಲಾಗಿದೆ. ಯಾವುದೇ ಕಾಯಿಲೆ ಅಥವಾ ಎಮರ್ಜೆನ್ಸಿ ಸಂದರ್ಭದಲ್ಲಿ ಚಿಕಿತ್ಸೆ ನೀಡುವ ಮೊದಲು ಸೂಕ್ತವಾದ ಪರೀಕ್ಷೆ ಅಗತ್ಯವಾಗಿರುತ್ತದೆ. ವೈದ್ಯಕೀಯ ತುರ್ತು ಅಗತ್ಯಗಳು ಯಾವುದೇ ಸಂದರ್ಭದಲ್ಲಿಯೂ ಬರಬಹುದು. ಇಂಥ ಸಂದರ್ಭದಲ್ಲಿ 24 ಗಂಟೆಯೂ ಆಸ್ಪತ್ರೆಯಲ್ಲಿ ರೇಡಿಯೋಲಜಿ ಸೇವೆ ಇರುವುದು ಅತ್ಯಂತ ಅಗತ್ಯವಾಗಿದ್ದು, ಯೇನಪೋಡ ಹಾಸ್ಪಿಟಲ್ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇರಿಸಿದೆ. ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಯೇನಪೋಯ ಆಸ್ಪತ್ರೆಯಲ್ಲಿ ಈ ಸೌಲಭ್ಯ ಬಂದಿರುವುದು ಜೀವ ಉಳಿಸುವಲ್ಲಿ ಮಹತ್ತರ ಹೆಜ್ಜೆ ಮತ್ತು ರೋಗಿಗಳಿಗೆ ರೋಗ ಗುಣಪಡಿಸುವಲ್ಲಿ ವೇಗ ನೀಡಲಿದೆ ಎಂದು ಯೇನಪೋಯ ಆಸ್ಪತ್ರೆಯ ಪತ್ರಿಕಾ ಹೇಳಿಕೆ ತಿಳಿಸಿದೆ.
ಯೇನಪೋಯ ಆಸ್ಪತ್ರೆಯಲ್ಲಿ ಅಳವಡಿಸಲಾದ ಹೊಸ ತಂತ್ರಜ್ಞಾನದ ರೇಡಿಯೋಲಜಿ ಉಪಕರಣಗಳು ಹೀಗಿವೆ. ಕ್ಯಾನನ್ ಆಕ್ವಿಲಿಯನ್ ಸ್ಟಾರ್ಟ್ ಸಿಟಿ ಸಿಸ್ಟಮ್ – ಇದು ಕಾರ್ಡಿಯಾಕ್ ಸ್ಕ್ಯಾನ್ ಹೊರತುಪಡಿಸಿ ಉಳಿದೆಲ್ಲಾ ಸ್ಕ್ಯಾನ್, ಇಂಟರ್ ವೆನ್ಶನಲ್ ರೇಡಿಯೋಲಜಿ ಕಾರ್ಯಗಳನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ.
ಫಿಲಿಪ್ಸ್ ಇಂಜೇನಿಯಾ 1.5 ಟಿ ಎಂಆರ್ ಐ ಸಿಸ್ಟಮ್ – ಆಡಿಯೋ ಮತ್ತು ವೀಡಿಯೋ ಸೌಲಭ್ಯಗಳೊಂದಿಗೆ ನಿರ್ಮಿಸಲಾದ ಈ ಉಪಕರಣ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿದೆ. ಇದರಿಂದ ರೋಗಿಗಳು ಸ್ಕ್ಯಾನಿಂಗ್ ಸಂದರ್ಭದಲ್ಲಿ ಭಯಗೊಳ್ಳುವ ಬದಲು ಸಂಗೀತ ಕೇಳುವ ವ್ಯವಸ್ಥೆಯನ್ನು ಮಾಡಲಾಗಿದೆ.
ಸ್ಯಾಮ್ಸಂಗ್ ಎಚ್ ಎಸ್ 70 ಎ ಅಲ್ಟ್ರಾಸೌಂಡ್ ಸಿಸ್ಟಮ್ – 4ಡಿ ಸ್ಕ್ಯಾನ್ ಜೊತೆಗೆ ತೀವ್ರ ಪಿತ್ಥ ಜನಕಾಂಗದ ಕಾಯಿಲೆ ಮತ್ತು ಭ್ರೂಣದ ಚಿತ್ರಣವನ್ನು ಪತ್ತೆಹಚ್ಚಲು ಫೈಬ್ರೋ ಸ್ಕ್ಯಾನ್ ಸೌಲಭ್ಯ ಹೊಂದಿದೆ.
ಡಿಜಿಕ್ಸ್ ಎಕೋ ಡಿಜಿಟಲ್ ಎಕ್ಸ್ ರೇ ಸಿಸ್ಟಮ್ – ವ್ಯಾಪಕ ಶ್ರೇಣಿಯ ವ್ಯಾಪ್ತಿ ಹೊಂದಿರುವ ಅತ್ಯಾಧುನಿಕ ಡಿಜಿಟಲ್ ಎಕ್ಸ್ ರೇ ಉಪಕರಣವಾಗಿದ್ದು, ಇದರಿಂದ ಅತ್ಯಂತ ಕರಾರುವಾಕ್ಕಾಗಿ ಚಿತ್ರಣ ಸಿಗುತ್ತದೆ.
ಮೆಟಲ್ ಟ್ರೋನಿಕಾ ಫ್ಲಾಟ್ ಎಸ್ ಇ ಮ್ಯಾಮೋಗ್ರಾಫರ್ – ಸಸ್ತನಿ ಗ್ರಂಥಿಗಳ ಸ್ಪಷ್ಟ ಚಿತ್ರಗಳನ್ನು ತೆಗೆಯಬಲ್ಲ ಹೆಚ್ಚು ಪರಿಣಾಮಕಾರಿ ಉಪಕರಣ. ಇದರ ಜೊತೆಗೆ ಯೇನಪೋಯ ಆಸ್ಪತ್ರೆಗೆ ಡಾರ್ನಿಯರ್ ಕಾಂಪ್ಯಾಕ್ಟ್ ಡೆಲ್ಟಾ ಲಿಥೋ ಟ್ರಿಪ್ಟರ್ ಎನ್ನುವ ಹೆಸರಿನ ಹೊಸ ಯಂತ್ರವನ್ನು ಸೇರ್ಪಡೆ ಮಾಡಲಾಗಿದೆ. ಮೂತ್ರಪಿಂಡದಲ್ಲಿ ಕಲ್ಲು ಆಗಿದ್ದ ಸಂದರ್ಭದಲ್ಲಿ ಸ್ಪಷ್ಟ ಚಿತ್ರಣ ಕೊಡುವಂತಹ ಈ ಉಪಕರಣ ಮೂತ್ರಶಾಸ್ತ್ರಜ್ಞರಿಗೆ ತುಂಬ ನೆರವಾಗಲಿದೆ. ಇದರಿಂದ ಮೂತ್ರ ಸಂಬಂಧೀ ರೋಗಗಳನ್ನು ಸುಲಭದಲ್ಲಿ ಪತ್ತೆ ಮಾಡಲು ಸಾಧ್ಯವಿದೆ.
ಇದರ ಬಗ್ಗೆ ಯೇನಪೋಯ ಆಸ್ಪತ್ರೆಯಲ್ಲಿ ನುರಿತ ವೈದ್ಯರು ಪ್ರಾತ್ಯಕ್ಷಿಕೆ ನೀಡುವ ಮೂಲಕ ಸಚಿತ್ರ ವಿವರಣೆಗಳನ್ನು ನೀಡಿದರು. ಅಲ್ಲದೆ, ಈ ಹೊಸ ಉಪಕರಣಗಳಿಂದ ರೋಗಿಗಳಿಗೆ ಸಿಗುವಂತಹ ಸೌಲಭ್ಯಗಳನ್ನು ಸುದ್ದಿಗೋಷ್ಠಿ ಕರೆದು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಡಾ.ದೇವದಾಸ ಆಚಾರ್ಯ, ಡಾ.ರವೀಂದ್ರ ಜಿ., ಡಾ. ವಿನಾಯಕ ಯು.ಎಸ್., ಯೇನಪೋಯ ಸ್ಪೆಷಾಲಿಟಿ ಹಾಸ್ಪಿಟಲ್ ಸಿಇಓ ಡಾ. ರಂಜನ್ ಸಿ.ಕೆ., ಯೇನಪೋಯ ಸ್ಪೆಷಾಲಿಟಿ ಹಾಸ್ಪಿಟಲ್ ಡೈರೆಕ್ಟರ್ ಡಾ.ಮಹಮ್ಮದ್ ತಾಹಿರ್, ಆಪರೇಶನ್ ಡೈರೆಕ್ಟರ್ ಯೇನಪೋಯ ಅಬ್ದುಲ್ಲಾ ಜಾವೇದ್ ಉಪಸ್ಥಿತರಿದ್ದರು.
In a unique initiative Yenepoya Specialty Hospital, Kodialbail, is introducing 24x7 Radiology Services with round-the-clock doctor support.
26-11-24 10:46 pm
Bangalore Correspondent
Shivamogga, Monkey fever, Dinesh Gundu Rao: ಮ...
26-11-24 10:23 pm
BJP, Vijayendra: ಉಪ ಚುನಾವಣೆ ಸೋಲು ; ಪಕ್ಷದ ಕಾರ್...
26-11-24 06:56 pm
MLA Gaviyappa, Congress: ಗ್ಯಾರಂಟಿ ಸ್ಕೀಂನಿಂದಾಗ...
26-11-24 06:11 pm
Davanagere News, Heart Attack: ಗಂಡ ಹೃದಯಾಘಾತಕ್...
26-11-24 11:52 am
26-11-24 09:43 pm
HK News Desk
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
26-11-24 11:23 pm
Udupi Correspondent
Mangalore, Suicide, Belthangady: ಬೆಳ್ತಂಗಡಿ ;...
26-11-24 10:58 pm
Mangalore Baby, Lady goschen Hospital: ಲೇಡಿಗೋ...
26-11-24 10:50 pm
Tamil Actor Surya, Jyothika, Udupi temple: ಕೊ...
26-11-24 08:23 pm
Mangalore, Police Anupam Agarwal IPS, DYFI; ಸ...
26-11-24 05:37 pm
26-11-24 03:10 pm
Mangalore Correspondent
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm