ಬ್ರೇಕಿಂಗ್ ನ್ಯೂಸ್
09-04-21 04:05 pm Mangalore Correspondent ಕರಾವಳಿ
ಮಂಗಳೂರು, ಎ.9: ಕೆಎಸ್ಸಾರ್ಟಿಸಿ ನೌಕರರ ಮುಷ್ಕರ ಮುಂದುವರಿದಿರುವಾಗಲೇ ಮಂಗಳೂರು ವಿಭಾಗದಲ್ಲಿ ನಿಧಾನವಾಗಿ ಬಸ್ಸುಗಳು ರಸ್ತೆಗೆ ಇಳಿಯತೊಡಗಿವೆ. ನಿಗಮದಲ್ಲಿ ನಿವೃತ್ತರಾದ 62 ವರ್ಷದ ಒಳಗಿನ ಸಿಬ್ಬಂದಿಯನ್ನು ಕರೆಸಿಕೊಂಡು ಬಸ್ ಚಾಲನೆ ಮಾಡಲು ಆರಂಭಿಸಿದೆ. ಸಂಸ್ಥೆಯ ತುರ್ತು ಕರೆಗೆ ಓಗೊಟ್ಟು ನಿವೃತ್ತ ನೌಕರರು ಡ್ಯೂಟಿ ಮಾಡಲು ಮುಂದಾಗುತ್ತಿದ್ದಾರೆ.
ಬೇಡಿಕೆ ಈಡೇರಿಸುವ ತನಕ ಮುಷ್ಕರ ಕೈಬಿಡುವುದಿಲ್ಲ ಎಂದು ಸಾರಿಗೆ ನೌಕರರ ಒಕ್ಕೂಟ ಹಠ ಹಿಡಿದು ಕುಳಿತಿದ್ದರೆ, ರಾಜ್ಯ ಸರ್ಕಾರ ಕೂಡ ತನ್ನ ಪಟ್ಟನ್ನು ಸಡಿಲಿಸುತ್ತಿಲ್ಲ. ಈ ನಡುವೆ ಕೆಎಸ್ಸಾರ್ಟಿಸಿಯಿಂದ ಪ್ರತ್ಯೇಕ ವ್ಯವಸ್ಥೆ ಮಾಡಿಕೊಂಡು ಬಸ್ ಗಳನ್ನು ಚಾಲನೆಗೊಳಿಸಲು ಸರಕಾರ ಮುಂದಾಗಿದೆ. ಇದೇ ಕಾರಣಕ್ಕೆ ನಿವೃತ್ತ ನೌಕರರನ್ನು ಕೆಲಸಕ್ಕೆ ಕರೆಯಲಾಗಿದೆ. ಮಂಗಳೂರಿನಿಂದ ಬೆಂಗಳೂರು, ಮೈಸೂರು, ಕೇರಳದ ಕಾಸರಗೋಡು ಸೇರಿದಂತೆ ಕುಕ್ಕೆ ಸುಬ್ರಹ್ಮಣ್ಯ , ಧರ್ಮಸ್ಥಳಕ್ಕೆ ಬಸ್ ಗಳ ಸಂಚಾರ ಆರಂಭವಾಗಿದೆ. ಬೆಳಗ್ಗಿನಿಂದಲೇ ಪ್ರತೀ ರೂಟಿನಲ್ಲಿ ಕೆಲವಷ್ಟು ಬಸ್ ಗಳನ್ನು ರಸ್ತೆಗೆ ಇಳಿಸಲಾಗಿದೆ. ದೂರದ ಪ್ರಯಾಣಕ್ಕೆ ಸಾಗುವ ವೋಲ್ವೋ, ರಾಜಹಂಸ ಸೇರಿದಂತೆ ಒಟ್ಟು ನಾಲ್ಕು ಬಸ್ ಗಳು ಬೆಂಗಳೂರಿಗೆ ತೆರಳಿವೆ. ಮಂಗಳೂರಿನಿಂದ ಬೆಳಗ್ಗೆ 30 ರಷ್ಟು ಬಸ್ ಗಳು ವಿವಿಧ ರೂಟಿನಲ್ಲಿ ಸಂಚಾರ ನಡೆಸಿವೆ.
ನಿಗಮಗಳಲ್ಲಿ ಸೇವೆ ಸಲ್ಲಿಸಿ ಎರಡು ವರ್ಷದೊಳಗೆ ನಿವೃತ್ತಿಯಾಗಿರುವ 62 ವರ್ಷ ಮೀರದ ದೈಹಿಕವಾಗಿ ಶಕ್ತರಾಗಿರುವ ಚಾಲಕ ಹಾಗು ನಿರ್ವಾಹಕರಿಗೆ ಒಪ್ಪಂದದ ಆಧಾರದ ಮೇಲೆ ನೇಮಿಸಿಕೊಳ್ಳಲಾಗಿದೆ. ಇದೇ ರೀತಿ ಪುತ್ತೂರು, ಸುಬ್ರಹ್ಮಣ್ಯ ಡಿಪೋದಿಂದಲೂ ವಿವಿಧ ಕಡೆಗಳಿಗೆ ಬಸ್ ಸಂಚಾರ ಆರಂಭಗೊಂಡಿದೆ. ನಿವೃತ್ತರಾದ ಸಿಬಂದಿಗೆ ಗೌರವ ಧನ ರೂಪದಲ್ಲಿ ಚಾಲಕರಿಗೆ 800 ರೂ. ಮತ್ತು ನಿರ್ವಾಹಕರಿಗೆ 700 ರೂ. ದಿನಕ್ಕೆ ನೀಡುವುದಾಗಿ ಒಪ್ಪಂದ ಮಾಡಲಾಗಿದೆ.
ಈ ನಡುವೆ ನಿಯಮ ಉಲ್ಲಂಘಿಸಿರುವ 9 ಮಂದಿ ಸಾರಿಗೆ ಸಿಬ್ಬಂದಿ ಗಳ ಮೇಲೆ ಮಂಗಳೂರು ವಿಭಾಗದಲ್ಲಿ ಶಿಸ್ತು ಕ್ರಮ ಜರುಗಿಸಲಾಗಿದೆ. ತರಬೇತಿಯಲ್ಲಿದ್ದ ಚಾಲಕರು ಹಾಗು ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿ ಬರ ಹೇಳಿದರೂ ಬಾರದೇ ಇರುವ ಸಿಬಂದಿಯ ವಿರುದ್ಧ ನಿರ್ಲಕ್ಷ್ಯ ತೋರಿದ ಕಾರಣಕ್ಕೆ 9 ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮ ಜರುಗಿಸಲಾಗಿದೆ.
ಕೆ ಎಸ್ ಆರ್ ಟಿ ಸಿ ಯ ಕೆಲವು ಬಸ್ ಗಳು ಓಡಾಟ ಆರಂಭಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗ್ರಾಮೀಣ ಭಾಗದ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದಾರೆ. ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗಬಾರದು ಎಂಬ ಉದ್ದೇಶಕ್ಕೆ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸೂಚನೆ ಮೇರೆಗೆ ಮಂಗಳೂರು ಮತ್ತು ಪುತ್ತೂರು ವಿಭಾಗದಲ್ಲಿ ಹೆಲ್ಪ್ ಡೆಸ್ಕ್ ರಚಿಸಲಾಗಿದೆ. ನಾಳೆ ಮತ್ತಷ್ಟು ಬಸ್ ಗಳು ರಸ್ತೆಗೆ ಇಳಿಯುವ ಸಾಧ್ಯತೆಯಿದೆ.
Retired Ksrtc staffs called to work in Depos as drivers and conductors go on strike in Mangalore.
05-10-25 09:41 pm
HK News Desk
ನಾಯಿ ದಾಳಿಗೆ ಸ್ಥಳೀಯರ ಆಕ್ರೋಶ ; ಬೀದಿ ನಾಯಿಗಳ ಮೇಲೆ...
05-10-25 08:08 pm
ಲಿಂಗಾಯತರನ್ನು ಪ್ರತ್ಯೇಕಿಸುವುದು ಸಮಾಜ ವಿರೋಧಿ ಕೆಲಸ...
05-10-25 07:57 pm
ಬಿಹಾರ ಚುನಾವಣೆ ಬಳಿಕ ರಾಜ್ಯದಲ್ಲಿ ರಾಜಕೀಯ ಕ್ರಾಂತಿ...
05-10-25 07:38 pm
ಜಾತಿ ಗಣತಿ ತೆರಳಿದ್ದ ಶಿಕ್ಷಕಿ ಮತ್ತು ಪತಿಗೆ ಅಟ್ಟಾಡ...
05-10-25 07:18 pm
05-10-25 11:07 pm
HK News Desk
ಡೆಡ್ಲಿ ಸಿರಪ್ 'ಕೋಲ್ಡ್ರಿಫ್ 'ಶಿಫಾರಸು ಮಾಡಿದ್ದ...
05-10-25 10:38 pm
Coldrif syrup: ಸಿರಪ್ ಸೇವಿಸಿ 11 ಮಕ್ಕಳು ಸಾವು ;...
04-10-25 04:45 pm
Rashmika Mandanna, Vijay Deverakonda Marriage...
04-10-25 03:11 pm
ಕಾಂತಾರ ಬ್ಲಾಕ್ ಬಸ್ಟರ್, ನಾವೆಲ್ಲ ಚಿತ್ರೋದ್ಯಮಿಗಳು...
04-10-25 01:11 pm
06-10-25 02:58 pm
Mangalore Correspondent
Ullal, UT Khader, Sharadotsava Clash: ಉಳ್ಳಾಲ...
04-10-25 10:29 pm
103ನೇ ವರ್ಷದ ರಥಬೀದಿ 'ಮಂಗಳೂರು ಶಾರದಾ ಮಹೋತ್ಸವ' ಸಂ...
03-10-25 11:07 pm
Puttur Krishna Rao, Baby, Pratibha Kulai: ಕೃಷ...
03-10-25 05:59 pm
Ullal Dasara Issue, Mangalore 2025: ದಸರಾ ಶೋಭಾ...
03-10-25 02:11 pm
05-10-25 03:22 pm
Mangalore Correspondent
Shivamogga Murder, Mother: ಶಿವಮೊಗ್ಗ ; ಮಗಳನ್ನು...
04-10-25 02:57 pm
Karkala Murder, Crime: ಕಾರ್ಕಳ ; ಪ್ರೀತಿಸಿದ ಯುವ...
03-10-25 11:28 pm
ಸುಧಾಮೂರ್ತಿ, ನಿರ್ಮಲಾ ಸೀತಾರಾಮನ್ ಹೆಸರಲ್ಲಿ ಎಐ ವಿಡ...
01-10-25 02:39 pm
Ullal Gold Robbery, Mangalore, CCB police: ಜು...
29-09-25 01:24 pm