ಬ್ರೇಕಿಂಗ್ ನ್ಯೂಸ್
10-04-21 04:57 pm Mangalore Correspondent ಕರಾವಳಿ
ಮಂಗಳೂರು, ಎ.10: ಕರಾವಳಿಯ ಮಂಗಳೂರು, ಉಡುಪಿಯಲ್ಲಿ ನೈಟ್ ಕರ್ಫ್ಯೂ ವಿಧಿಸಿರುವುದಕ್ಕೆ ಶಾಸಕರಿಂದ ಆಕ್ಷೇಪ ವ್ಯಕ್ತವಾಗಿದೆ. ಎಪ್ರಿಲ್ ತಿಂಗಳಲ್ಲಿ ಹೆಚ್ಚಿನ ಕಡೆ ಕೋಲ, ನೇಮ, ಉತ್ಸವಗಳು ನಡೆಯುತ್ತಿರುವುದರಿಂದ ಕರಾವಳಿಯಲ್ಲಿ ನೈಟ್ ಕರ್ಫ್ಯೂ ಸಂದರ್ಭದಲ್ಲಿ ಧಾರ್ಮಿಕ ಕಾರ್ಯಕ್ರಮಗಳಿಗೆ ವಿನಾಯ್ತಿ ಕೊಡಬೇಕೆಂದು ಶಾಸಕರು ಆಗ್ರಹಿಸುತ್ತಿದ್ದಾರೆ. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಜೊತೆ ಮಾತನಾಡಿದ್ದಲ್ಲದೆ, ಸಿಎಂ ಯಡಿಯೂರಪ್ಪ ಅವರಿಗೆ ಮನವರಿಕೆ ಮಾಡುವುದಾಗಿ ಶಾಸಕರು ಹೇಳುತ್ತಿದ್ದಾರೆ.
ಮಂಗಳೂರು ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಉತ್ತರ ಶಾಸಕ ಭರತ್ ಶೆಟ್ಟಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಧಾರ್ಮಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಬಾರಿಯೂ ಕೊರೊನಾ ಕಾರಣದಿಂದ ನೇಮ, ಕೋಲಗಳಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆದಿರಲಿಲ್ಲ. ಈ ಬಾರಿಯೂ ಅವಕಾಶ ನೀಡದಿದ್ದರೆ ಜನರು ಅಸಹನೆಗೆ ಈಡಾಗುತ್ತಾರೆ. ಕರಾವಳಿ ಭಾಗದಲ್ಲಿ ಕೋಲ, ನೇಮಗಳು ರಾತ್ರಿ ವೇಳೆ ನಡೆಯುವ ಕಾರಣ ಇದಕ್ಕೆ ಅವಕಾಶ ನೀಡಬೇಕು ಎಂದು ಜಿಲ್ಲಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಉಡುಪಿ ಶಾಸಕ ರಘುಪತಿ ಭಟ್ ಕೂಡ ಈ ಬಗ್ಗೆ ಸಿಎಂ ಅವರಿಗೆ ಪತ್ರ ಬರೆದು ಧಾರ್ಮಿಕ ವಿಧಿಗಳಿಗೆ ಅವಕಾಶ ನೀಡುವಂತೆ ಆಗ್ರಹಿಸಿದ್ದಾರೆ.
ಆದರೆ, ಜಿಲ್ಲಾಧಿಕಾರಿ ರಾಜೇಂದ್ರ ಕೆ.ವಿ, ನಾವು ರಾಜ್ಯ ಸರಕಾರದ ಸೂಚನೆಯನ್ನು ಪಾಲಿಸುತ್ತೇವೆ ಎಂದಿದ್ದಾರೆ. ರಾಜ್ಯ ಸರಕಾರದ ಗೈಡ್ ಲೈನ್ಸ್ ಪ್ರಕಾರ ಯಾವುದೇ ಧಾರ್ಮಿಕ ಕಾರ್ಯಗಳಿಗೆ ನೈಟ್ ಕರ್ಫ್ಯೂ ಅವಧಿಯಲ್ಲಿ ಅವಕಾಶ ಇರುವುದಿಲ್ಲ. ಶಾಸಕರು ಸಿಎಂ ಅವರನ್ನು ಮನವರಿಕೆ ಮಾಡಿ, ಹೊಸ ಮಾರ್ಗಸೂಚಿಯನ್ನು ಹೊರಡಿಸಿದರೆ ಅದರಂತೆ ನಡೆದುಕೊಳ್ಳುತ್ತೇವೆ. ನಾವಾಗಿಯೇ ಇದನ್ನು ಬದಲಿಸಲು ಸಾಧ್ಯವಾಗಲ್ಲ ಎಂದು ಹೇಳಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೈಟ್ ಕರ್ಫ್ಯೂ ವಿಧಿಸಲು ಈಗಾಗ್ಲೇ ಆದೇಶ ನೀಡಲಾಗಿದೆ. ಇದರಂತೆ ಯಾವುದೇ ಧಾರ್ಮಿಕ ವಿಧಿಗಳಿಗೆ, ಕಾರ್ಯಕ್ರಮಗಳಿಗೆ ಅವಕಾಶ ಇರುವುದಿಲ್ಲ. ಅಗತ್ಯ ಕೆಲಸದ ಹೊರತಾಗಿ ಎಲ್ಲ ಜನರೂ ರಾತ್ರಿ ಹತ್ತು ಗಂಟೆಯ ನಂತರ ಮನೆ ಸೇರಿಕೊಳ್ಳಬೇಕು. ಇಲ್ಲದಿದ್ದರೆ ಪೊಲೀಸರ ಮೂಲಕ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ರಾಜೇಂದ್ರ ತಿಳಿಸಿದ್ದಾರೆ.
Night curfew Mangalore Mla Vedavyas Kamath urges permission for Bhoota Kola and nema but DC Rajendra Kumar has said a big No for such religious gatherings due to Covid Guidelines.
27-12-24 04:07 pm
HK News Desk
Manmohan Singh, Mangalore beach festival: ಮನಮ...
27-12-24 11:24 am
ಹೊಸ ವರ್ಷಕ್ಕೆ ಮತ್ತೆ ಜನರಿಗೆ ಗ್ಯಾರಂಟಿ ಶಾಕ್ ? ಲೀಟ...
26-12-24 11:39 pm
Bidar Contractor Suicide, Priyank Kharge: ಪ್ರ...
26-12-24 08:03 pm
ಹೆಚ್ಚು ಮೊಬೈಲ್ ನೋಡ್ಬೇಡ ಎಂದು ಬುದ್ಧಿ ಹೇಳಿದ್ದ ತಾಯ...
26-12-24 05:11 pm
27-12-24 10:38 am
Yatish Kumar, Headline Karnataka
Manmohan Singh Death; ಆರ್ಥಿಕ ಕ್ರಾಂತಿಯ ಹರಿಕಾರ...
27-12-24 10:15 am
Dr Manmohan Singh, passes away: ಮಾಜಿ ಪ್ರಧಾನಿ,...
26-12-24 11:15 pm
Ajay Bhalla, Arif Khan: ಗಲಭೆ ಪೀಡಿತ ಮಣಿಪುರಕ್ಕೆ...
25-12-24 04:21 pm
Mohan Bhagwat: ಮೋಹನ್ ಭಾಗವತ್ ಸಂಘವನ್ನು ನಡೆಸುತ್ತ...
24-12-24 09:17 pm
27-12-24 11:02 pm
Mangalore Correspondent
Mangalore, MCC Bank, Anil Lobo arrest, Police...
27-12-24 09:26 pm
Harish Poonja, Mangalore, kabaddi association...
27-12-24 08:41 pm
Mangalore DJ Sajanka party canceled, Beach fe...
27-12-24 06:55 pm
Mangalore Gas cylinder blast, Manjanady: ಮಂಜ...
26-12-24 11:18 pm
26-12-24 07:41 pm
Bangalore Correspondent
Fake Gold Loan, Mangalore Samaja seva sahakar...
25-12-24 02:41 pm
ಸೈಬರ್ ವಂಚಕರ ನಕಲಿ ಷೇರು ಮಾರುಕಟ್ಟೆ ಜಾಲ ; ಕೇರಳದಲ್...
24-12-24 11:05 pm
Bangalore cyber fraud, Crime: ಬೆಂಗಳೂರಿನ ಸಾಫ್ಟ...
22-12-24 07:23 pm
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm