ಕರಾವಳಿಯ ಅಲ್ಲಲ್ಲಿ ಸಿಡಿಲು ಮಿಂಚಿನ ಮಳೆ ; ಕಾದ ಇಳೆಗೆ ಮಳೆಯ ಸಿಂಚನ !

11-04-21 10:56 pm       Mangaluru correspondent   ಕರಾವಳಿ

ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಕಡೆ ಭಾನುವಾರ ರಾತ್ರಿ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ. 

Photo credits : representative pic

ಮಂಗಳೂರು, ಎ.11: ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಹಲವು ಕಡೆ ಭಾನುವಾರ ರಾತ್ರಿ ಗುಡುಗು ಮಿಂಚಿನ ಸಹಿತ ಸಾಧಾರಣ ಮಳೆಯಾಗಿದೆ. 

Orange alert sounded in Dakshina Kannada on June 13 and 14; heavy rains  likely - Daijiworld.com

ಮೂಡುಬಿದಿರೆ, ಬೆಳ್ತಂಗಡಿ, ಕಡಬ ಭಾಗದಲ್ಲಿ ಕೆಲವೆಡೆ ಭಾರೀ ಮಳೆಯಾಗಿದ್ದರೆ, ಮಂಗಳೂರು ಆಸುಪಾಸಿನಲ್ಲಿ ಸಾಧಾರಣ ಮಳೆಯಾಗಿದೆ. ರಾತ್ರಿ ಸುಮಾರು 8 ಗಂಟೆ ವೇಳೆಗೆ ಮಿಂಚು, ಸಿಡಿಲು ಸಹಿತ ಮಳೆ ಸುರಿಯಿತು. ಕೆಲವು ದಿನಗಳ ಹಿಂದೆಯೂ ದ.ಕ. ಜಿಲ್ಲೆಯಾದ್ಯಂತ ಭಾರೀ ಮಳೆ ಸುರಿದಿತ್ತು.

Heavy rain lash Mangaluru city

ಮಂಗಳೂರು ಸಹಿತ ಜಿಲ್ಲೆಯಲ್ಲಿ ತೀವ್ರ ಸೆಕೆಯ ಮಧ್ಯೆ ಸುರಿದ ಮಳೆಯು ತಣ್ಣಗಿನ ವಾತಾವರಣ ಸೃಷ್ಟಿಸಿತು. ಎ.14ರ ವರೆಗೂ ಕರಾವಳಿಯ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Dakshina Kannada and Udupi witness huge rains lightening. On Sunday, after a dry spell of almost a week, it started raining heavily in the Maximum city and suburban areas.